ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ರನ್‌ವೇ-24 ರಲ್ಲಿ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಅನುಮೋದನೆಯೊಂದಿಗೆ ಅತ್ಯಾಧುನಿಕ ಪ್ರಿಸಿಷನ್ ಅಪ್ರೋಚ್ ಲೈಟಿಂಗ್ (PAL) ಕ್ಯಾಟಗರಿ-I (CAT-1) ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಈ ವ್ಯವಸ್ಥೆಯು ಲ್ಯಾಂಡಿಂಗ್‌ನ ಅಂತಿಮ ಹಂತಗಳಲ್ಲಿ, ವಿಶೇಷವಾಗಿ ಟೇಬಲ್‌ಟಾಪ್ ಸೌಲಭ್ಯದಲ್ಲಿ ಕಡಿಮೆ ಗೋಚರತೆಯಿರುವಾಗ ಪೈಲಟ್‌ಗಳಿಗೆ ನಿಖರ ದೃಶ್ಯ ಮಾರ್ಗದರ್ಶನವನ್ನು ಒದಗಿಸುತ್ತದೆ. ಏಷ್ಯಾದಲ್ಲೇ ಈ ತಂತ್ರಜ್ಞಾನವನ್ನು ಬಳಸುತ್ತಿರುವ ಎರಡನೇ ವಿಮಾನ ನಿಲ್ದಾಣ ಇದಾಗಿದೆ. ಮಳೆ, ಮಂಜು ಅಥವಾ ದಟ್ಟ ಹೊಗೆಯಂತಹ ಕಡಿಮೆ ಗೋಚರತೆಯ ಸಂದರ್ಭಗಳಲ್ಲಿ ಪೈಲಟ್‌ಗಳಿಗೆ ರನ್‌ವೇಯ ಸ್ಪಷ್ಟ ದೃಶ್ಯ ಮಾರ್ಗದರ್ಶನವನ್ನು ಈ ಬೆಳಕು ಗೋಪುರಗಳು ಒದಗಿಸುತ್ತದೆ.
ಈ ಅಪರೂಪದ ಲೈಟ್ ಟವರ್ 17 ಲ್ಯಾಟಿಸ್ ರಚನೆಗಳನ್ನು ಹೊಂದಿದ್ದು, ಪ್ರತಿಯೊಂದೂ 4 ದೀಪಗಳು ಮತ್ತು ಮಧ್ಯದಲ್ಲಿ ಸೀಕ್ವೆನ್ಶಿಯಲ್ ಫ್ಲ್ಯಾಶ್ ಲೈಟ್ ಅನ್ನು ಒಳಗೊಂಡಿದೆ. ಕೆಲವು ಟವರ್‌ಗಳು ಕುತುಬ್ ಮಿನಾರ್‌ಗಿಂತಲೂ ಎತ್ತರದಲ್ಲಿದ್ದು, ಗೋಪುರಗಳ ಮೇಲೆ ಅಳವಡಿಸಲಾದ ಏರ್ ಫೀಲ್ಡ್ ಲೈಟಿಂಗ್ ಇಂಟೆಲಿಜೆಂಟ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್ (ಎಎಲ್ ಐಎಂಎಸ್) ಅನ್ನು ಹೊಂದಿದೆ, ಇದು ರನ್ ವೇ ಇಂದ 900 ಮೀ ಹೊರಕ್ಕೆ ವಿಸ್ತರಿಸಿದ್ದು, ನಿರ್ವಹಣೆಯ ಸಂದರ್ಭದಲ್ಲಿ ಬ್ಯಾರೆಟ್ ಕೆಳಗೆ ಇಳಿಸುವ ಸೌಲಭ್ಯವನ್ನು ಒಳಗೊಂಡಿರುವುದು ಈ ಯೋಜನೆಯ ವಿಶೇಷ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ‘ಕ್ಯಾಟಗರಿ-1’ ಲೈಟಿಂಗ್ ವ್ಯವಸ್ಥೆ ಅಳವಡಿಕೆ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




