AI ಮಹಾವಿಪ್ಲವ | ಹೈಬ್ರಿಡ್ ಉದ್ಯೋಗಿಗಳಿಗಷ್ಟೇ ಮನ್ನಣೆ; ತಂತ್ರಜ್ಞಾನದೊಂದಿಗೆ ಓಡದಿದ್ದರೆ ಉಳಿಗಾಲವಿಲ್ಲ!

Date:

ಜಾಗತಿಕ ಮಟ್ಟದ ಶೇ. 40ರಷ್ಟು ಪ್ರಮುಖ ಕಂಪನಿಗಳು ಇನ್ನು ಮುಂದೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವಾಗ ಅವರ ಕಾಲೇಜು ಅಥವಾ ಯೂನಿವರ್ಸಿಟಿಗಳಿಗಿಂತ AI Skills ಮತ್ತು ಪ್ರಾಂಪ್ಟ್ ಇಂಜಿನಿಯರಿಂಗ್ ಸಾಮರ್ಥ್ಯಕ್ಕೆ ಮೊದಲ ಆದ್ಯತೆ ನೀಡಲಿವೆ. ಈಗ ಮಾನವನ ಸೃಜನಶೀಲತೆ ಮತ್ತು AI ತಂತ್ರಜ್ಞಾನ ಎರಡನ್ನೂ ಒಟ್ಟಿಗೆ ಸೇರಿಸಿ ಕೆಲಸ ಮಾಡುವ ‘ಹೈಬ್ರಿಡ್ ಉದ್ಯೋಗಿಗಳಿಗೆ’ ಮಾತ್ರ ಮಾರುಕಟ್ಟೆಯಲ್ಲಿ ಮನ್ನಣೆ!

- Advertisement -

ಕಾರ್ಖಾನೆಗಳಂತೆ ವಿಶ್ವ ವಿದ್ಯಾಲಯಗಳೂ ಪದವಿ ಪ್ರಮಾಣಪತ್ರಗಳನ್ನು ಮುದ್ರಿಸಿ ಹಂಚುವ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗೆ ಕೃತಕ ಬುದ್ಧಿಮತ್ತೆ (AI) ಅಂತ್ಯ ಬರೆಯಲು ಶುರುವಿಟ್ಟುಕೊಂಡಿದೆ. ಚೀನಾ, ಬೇಡಿಕೆ ಕಳೆದುಕೊಂಡಿರುವ 12,000ಕ್ಕೂ ಹೆಚ್ಚು ಯುನಿವರ್ಸಿಟಿ ಕೋರ್ಸ್‌ಗಳನ್ನು ರಾತ್ರೋರಾತ್ರಿ ರದ್ದುಗೊಳಿಸಿ, ಅವುಗಳ ಜಾಗದಲ್ಲಿ ಅತ್ಯಾಧುನಿಕ AI ಪಠ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಇದು ಜಾಗತಿಕ ಶೈಕ್ಷಣಿಕ ವಲಯದಲ್ಲಿ ಮಹಾವಿಪ್ಲವವನ್ನೇ ಸೃಷ್ಟಿಸಿದೆ. ಈ ಬೆನ್ನಲ್ಲೇ, 2030ರ ಹೊತ್ತಿಗೆ ಶೇ. 22ರಷ್ಟು ಸಾಂಪ್ರದಾಯಿಕ ಉದ್ಯೋಗಗಳು ಸಂಪೂರ್ಣವಾಗಿ ಮರುರೂಪಗೊಳ್ಳಲಿವೆ ಮತ್ತು ಶೇ. 40ರಷ್ಟು ಕಂಪನಿಗಳು ಕೇವಲ ‘AI ನೈಪುಣ್ಯತೆ’ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಮನ್ನಣೆ ನೀಡಲಿವೆ ಎನ್ನುತ್ತದೆ ‘ನ್ಯಾಸ್ಕಾಮ್’ (National Association of Software and Services Companies)‌ ವರದಿ. ಭಾರತದಂತಹ ಸೇವಾ ವಲಯ ಹಾಗೂ ಯುವ ಜನಸಂಖ್ಯೆಯನ್ನು ನೆಚ್ಚಿಕೊಂಡಿರುವ ದೇಶಗಳಿಗೆ ಈ ವರದಿ ತೀವ್ರ ಎಚ್ಚರಿಕೆ ನೀಡುತ್ತಿದೆ. ಡಿಗ್ರಿ ಸರ್ಟಿಫಿಕೇಟುಗಳ ಹಿಡಿದು ಉದ್ಯೋಗ ಅರಸುವ ಹಳೆಯ ಮಾದರಿ ಇನ್ನೇನು ಕೆಲವೇ ವರ್ಷಗಳಲ್ಲಿ ಶಾಶ್ವತವಾಗಿ ಕೊನೆಗೊಳ್ಳಲಿದ್ದು, ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ಕೌಶಲ್ಯಗಳನ್ನು ನವೀಕರಿಸಿಕೊಳ್ಳದಿದ್ದರೆ ಇಡೀ ಯುವ ಪೀಳಿಗೆಯೇ ಮಾರುಕಟ್ಟೆಯಲ್ಲಿ ಅಪ್ರಸ್ತುತವಾಗುವ ಆತಂಕ ಎದುರಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

AI ಇಂದು ಜಾಗತಿಕವಾಗಿ ಆರ್ಥಿಕತೆ, ಭೌಗೋಳಿಕ ರಾಜಕೀಯ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಮರುರೂಪಿಸುತ್ತಿರುವ ಹೊಸ ಯುಗದ ಟೆಕ್ ಮಾಸ್ಟರ್. ವರ್ಲ್ಡ್ ಎಕನಾಮಿಕ್ ಫೋರಂ (WEF) ತನ್ನ ‘ಫ್ಯೂಚರ್ ಆಫ್ ಜಾಬ್ಸ್’ ವರದಿಯಲ್ಲಿ ಉಲ್ಲೇಖಿಸಿರುವಂತೆ, ಜಾಗತಿಕವಾಗಿ ಕೃತಕ ಬುದ್ಧಿಮತ್ತೆಯು ಮುಂದಿನ ಕೆಲವು ವರ್ಷಗಳಲ್ಲಿ ಕೋಟ್ಯಂತರ ಸಾಂಪ್ರದಾಯಿಕ ಉದ್ಯೋಗಗಳನ್ನು ಮರುರೂಪಿಸಲಿದೆ. ಒಂದು ನಿರ್ದಿಷ್ಟ ವಿಷಯವನ್ನು ಓದಿ, ಅದಕ್ಕೆ ತಕ್ಕ ಉದ್ಯೋಗ ಹುಡುಕಿ, ಜೀವನ ಪರ್ಯಂತ ಒಂದೇ ಸೀಟಿನಲ್ಲಿ ಕುಳಿತು ನಿವೃತ್ತಿಯಾಗುವ ಹಳೆಯ ಮಾದರಿ ಸಂಪೂರ್ಣ ಬದಲಾಗುತ್ತಿದೆ. ಇಂದಿನ ಮಾರುಕಟ್ಟೆಯ ವೇಗಕ್ಕೆ ತಕ್ಕಂತೆ ಮಾನವ ಸಂಪನ್ಮೂಲವನ್ನು ಅಪ್‌ಗ್ರೇಡ್ ಮಾಡದಿದ್ದರೆ ಇಡೀ ರಾಷ್ಟ್ರವೇ ಆರ್ಥಿಕ ಹಿಂಜರಿತಕ್ಕೆ ಸಿಲುಕಬಹುದು ಎಂಬ ಗಂಭೀರ ಮುನ್ನೆಚ್ಚರಿಕೆಯನ್ನೂ ಈ ಜಾಗತಿಕ ವಿದ್ಯಮಾನಗಳು ನೀಡುತ್ತಿವೆ. ಈ ಕ್ರಾಂತಿಯು ಜಗತ್ತಿನ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ಭಾರತದಂತಹ ದೇಶಗಳ ಮೇಲೆ ಪರಿಣಾಮ ಬೀರಲಿದೆ.

image 35 1

ಜಾಗತಿಕ ತಂತ್ರಜ್ಞಾನದ ರೇಸ್‌ನಲ್ಲಿ ಮುಂಚೂಣಿ ಸಾಧಿಸಲು ಮತ್ತು ಭವಿಷ್ಯದ ತಾಂತ್ರಿಕ ಆಧಿಪತ್ಯವನ್ನು ತನ್ನದಾಗಿಸಿಕೊಳ್ಳಲು ಹೊರಟಿರುವ ಚೀನಾ, ತನ್ನ ಉನ್ನತ ಶಿಕ್ಷಣ ವ್ಯವಸ್ಥೆಗೆ ದೊಡ್ಡ ಸರ್ಜರಿಯನ್ನೇ ಮಾಡಿದೆ. ತನ್ನ ವಿಶ್ವವಿದ್ಯಾಲಯಗಳಲ್ಲಿದ್ದ ಒಟ್ಟು ಕೋರ್ಸ್‌ಗಳ ಪೈಕಿ ಶೇ. 30 ಕ್ಕಿಂತಲೂ ಹೆಚ್ಚು ಕೋರ್ಸ್‌ಗಳನ್ನು ರದ್ದುಗೊಳಿಸಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಸುಮಾರು 12,200 ಪದವಿ ಕೋರ್ಸ್‌ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಚೀನಾದಲ್ಲಿ ಶೇ. 16 ಕ್ಕಿಂತ ಹೆಚ್ಚು ಯುವಜನರು ನಿರುದ್ಯೋಗದ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವುದರಿಂದ, ಕಲೆ, ಮಾನವಿಕ ಮತ್ತು ಸಾಂಪ್ರದಾಯಿಕ ಮ್ಯಾನೇಜ್‌ಮೆಂಟ್ ಪದವಿಗಳನ್ನು ಬದಿಗಿಟ್ಟು, ಅವುಗಳ ಜಾಗದಲ್ಲಿ ಭವಿಷ್ಯದ ಹೈಟೆಕ್ ಕೈಗಾರಿಕೆಗಳಿಗೆ ನೇರ ನೆರವಾಗುವ ‘ಎಂಬೆಡೆಡ್ ಇಂಟೆಲಿಜೆನ್ಸ್’ (Embodied Intelligence), ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಸೆಮಿಕಂಡಕ್ಟರ್ ತಂತ್ರಜ್ಞಾನ ಒಳಗೊಂಡ 10,200 ಹೊಸ ಕೋರ್ಸ್‌ಗಳನ್ನು ಜಾರಿಗೆ ತರಲಾಗಿದೆ.

ಈ AI ಕ್ರಾಂತಿಗೆ ದಿನನಿತ್ಯದ ಮಾರುಕಟ್ಟೆಯಲ್ಲಿ AI ಉಂಟುಮಾಡುತ್ತಿರುವ ತಲ್ಲಣಗಳು ಮತ್ತು ಸಾಂಪ್ರದಾಯಿಕ ಉದ್ಯೋಗಗಳು ನೇಪಥ್ಯಕ್ಕೆ ಸರಿಯುತ್ತಿರುವುದೇ ಕಾರಣವಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ, ಶಾಂಘೈ ಯೂನಿವರ್ಸಿಟಿ ಫಾರ್ S&T ತನ್ನ ‘ಪ್ರಾಡಕ್ಟ್ ಡಿಸೈನ್’ ಕೋರ್ಸ್ ಅನ್ನು ಸಂಪೂರ್ಣವಾಗಿ ಮುಚ್ಚಿರುವುದು. ಮಾರುಕಟ್ಟೆ ಸಂಶೋಧನೆಗಳ ಪ್ರಕಾರ, ಈ ಮುಂಚೆ ನುರಿತ ವಿನ್ಯಾಸಕರು ದಿನಗಟ್ಟಲೆ ಸಮಯ ತಗೆದುಕೊಂಡು ಮಾಡುತ್ತಿದ್ದ 3D ಮಾಡೆಲಿಂಗ್ ಮತ್ತು ರೆಂಡರಿಂಗ್‌ನಂತಹ ಪ್ರಮುಖ ಕೆಲಸಗಳನ್ನು ಈಗ ಜನರೇಟಿವ್ AI ಪರಿಕರಗಳು ಕೇವಲ ಶೇ. 10 ರಷ್ಟು ವೆಚ್ಚ ಮತ್ತು ಅತ್ಯಲ್ಪ ಸಮಯದಲ್ಲಿ ನಿಖರವಾಗಿ ಮಾಡುತ್ತಿವೆ. ಪರಿಣಾಮ, ಈ ಕೋರ್ಸ್ ಮಾಡಿದ ಪದವೀಧರರು ಮಾರುಕಟ್ಟೆಯಲ್ಲಿ ಸಂಪೂರ್ಣ ಅಪ್ರಸ್ತುತರಾಗುತ್ತಿದ್ದಾರೆ. ಅದೇ ರೀತಿ, ಬೀಜಿಂಗ್‌ನ ಪ್ರತಿಷ್ಠಿತ ‘ಕಮ್ಯುನಿಕೇಷನ್ ಯೂನಿವರ್ಸಿಟಿ ಆಫ್ ಚೀನಾ’ ತನ್ನ ಸಿನಿಮಾಟೋಗ್ರಫಿ ಕೋರ್ಸ್ ಅನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ತಕ್ಕಂತೆ ಮರುರೂಪಿಸಿದೆ. ಇಂದಿನ ಶಾರ್ಟ್ ವೀಡಿಯೋಗಳು ಮತ್ತು ಲೈವ್ ಸ್ಟ್ರೀಮಿಂಗ್‌ ಯುಗಕ್ಕೆ ಹಳೆಯ ಟೆಲಿವಿಷನ್ ಶೂಟಿಂಗ್ ಪಠ್ಯಕ್ರಮಗಳು ಸರಿಹೊಂದುವುದಿಲ್ಲ ಎಂಬ ವಾಸ್ತವವನ್ನು ಶಿಕ್ಷಣ ಸಂಸ್ಥೆಗಳು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಮತ್ತೊಂದೆಡೆ, ನ್ಯಾಸ್ಕಾಮ್ ಮತ್ತು ಇಂಡೀಡ್ ಸಂಸ್ಥೆಯ ಜಂಟಿ ವರದಿ ಜಾಗತಿಕ ಉದ್ಯೋಗ ಮಾರುಕಟ್ಟೆಯ ಆತಂಕ ಹಾಗೂ ಹೊಸ ಆಯಾಮಗಳನ್ನು ಬಿಚ್ಚಿಟ್ಟಿದೆ. ಈ ವರದಿಯ ಪ್ರಕಾರ, 2030ರ ಹೊತ್ತಿಗೆ ಜಗತ್ತಿನಾದ್ಯಂತ ಸುಮಾರು ಶೇ. 22ರಷ್ಟು ಸಾಂಪ್ರದಾಯಿಕ ಉದ್ಯೋಗಗಳಿಗೆ ನೇರ ಸಂಚಕಾರ ಬರಲಿದೆ ಅಥವಾ ಅವುಗಳ ಸ್ವರೂಪ ಸಂಪೂರ್ಣ ಬದಲಾಗಲಿದೆ. ಈ ಕ್ರಾಂತಿಯ ತೀವ್ರತೆ ಎಷ್ಟಿದೆ ಎಂದರೆ, ಜಾಗತಿಕ ಮಟ್ಟದ ಶೇ. 40ರಷ್ಟು ಪ್ರಮುಖ ಕಂಪನಿಗಳು ಇನ್ನು ಮುಂದೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವಾಗ ಅವರ ಕಾಲೇಜು ಅಥವಾ ಯೂನಿವರ್ಸಿಟಿ ಬ್ರ್ಯಾಂಡ್‌ಗಳಿಗಿಂತ “AI ನೈಪುಣ್ಯತೆ” (AI Skills) ಮತ್ತು ಪ್ರಾಂಪ್ಟ್ ಇಂಜಿನಿಯರಿಂಗ್ ಸಾಮರ್ಥ್ಯಕ್ಕೆ ಮೊದಲ ಆದ್ಯತೆ ನೀಡಲಿವೆ. ಇದುವರೆಗೂ ಕೇವಲ ಸಾಫ್ಟ್‌ವೇರ್ ಕೋಡಿಂಗ್ ಅಥವಾ ಭಾಷಾ ಅನುವಾದ ನಂಬಿಕೊಂಡಿದ್ದ IT ಉದ್ಯೋಗಿಗಳಿಗೂ ಇದು ಆತಂಕ ತಂದೊಡ್ಡಿದ್ದು, ಇನ್ನು ಮುಂದೆ ಮಾನವನ ಸೃಜನಶೀಲತೆ ಮತ್ತು AI ತಂತ್ರಜ್ಞಾನ ಎರಡನ್ನೂ ಒಟ್ಟಿಗೆ ಸೇರಿಸಿ ಕೆಲಸ ಮಾಡುವ ‘ಹೈಬ್ರಿಡ್ ಉದ್ಯೋಗಿಗಳಿಗೆ’ ಮಾತ್ರ ಮಾರುಕಟ್ಟೆಯಲ್ಲಿ ಮನ್ನಣೆ ಸಿಗಲಿದೆ.

ಭಾರತದ ಜಿಡಿಪಿಗೆ (GDP) ಶೇ. 50 ಕ್ಕಿಂತ ಹೆಚ್ಚು ಕೊಡುಗೆ ನೀಡುವ ಮತ್ತು ದೇಶಕ್ಕೆ ಅತಿ ಹೆಚ್ಚು ವಿದೇಶಿ ವಿನಿಮಯ ತಂದುಕೊಡುವ ಶಕ್ತಿಯಾಗಿ ನಿಂತಿರುವುದು ದೇಶದ ಐಟಿ ಮತ್ತು ಬಿಪಿಒ ವಲಯ. ಲಕ್ಷಾಂತರ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಭದ್ರತೆಗೆ ಕಾರಣವಾಗಿರುವ ಈ ರಂಗದ ಮೇಲೆಯೇ AI ಈಗ ನೇರ ದಾಳಿ ಮಾಡುತ್ತಿದೆ. ಬಿಪಿಒಗಳಲ್ಲಿ ನಡೆಯುತ್ತಿದ್ದ ಗ್ರಾಹಕ ಸೇವೆ, ತಾಂತ್ರಿಕ ಸಹಾಯ, ಬ್ಯಾಕ್-ಆಫೀಸ್ ಡೇಟಾ ಎಂಟ್ರಿ ಮತ್ತು ಸಾಫ್ಟ್‌ವೇರ್ ಕಂಪನಿಗಳಲ್ಲಿ ನಡೆಯುತ್ತಿದ್ದ ಆರಂಭಿಕ ಹಂತದ ಕೋಡಿಂಗ್ ಹಾಗೂ ಸಾಫ್ಟ್‌ವೇರ್ ಟೆಸ್ಟಿಂಗ್ ಕೆಲಸಗಳನ್ನು ಇಂದು AI ಚಾಟ್‌ಬಾಟ್‌ಗಳು ಮತ್ತು ಆಟೊಮೇಷನ್ ಪರಿಕರಗಳು ಮನುಷ್ಯರಿಗಿಂತ ನೂರು ಪಟ್ಟು ವೇಗವಾಗಿ ಹಾಗೂ ಮುಖ್ಯವಾಗಿ ತೀರಾ ಕಡಿಮೆ ವೆಚ್ಚದಲ್ಲಿ ಮಾಡುತ್ತಿವೆ.

AI 12

ವಿವಿಧ ಜಾಗತಿಕ ಸಂಶೋಧನಾ ವರದಿಗಳ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ವಿಶ್ವವಿದ್ಯಾಲಯಗಳಿಂದ ಹೊರಬರುವ ಬೃಹತ್ ಪ್ರಮಾಣದ ಪದವೀಧರರಲ್ಲಿ ಶೇ. 80 ಕ್ಕಿಂತ ಹೆಚ್ಚು ಜನ ಉದ್ಯಮಕ್ಕೆ ಬಳಕೆಯಾಗುವ ಕೌಶಲ್ಯ ಹೊಂದಿಲ್ಲ . ಈಗಲೂ ಭಾರತದಂತಹ ದೇಶಗಳೂ ತಮ್ಮ ವಿಶ್ವವಿದ್ಯಾಲಯಗಳ ಪಠ್ಯಕ್ರಮವನ್ನು ಬದಲಾಯಿಸದಿದ್ದರೆ, ಈ ದೇಶಗಳಲ್ಲಿ ‘ಡಿಗ್ರಿ ಇದ್ದೂ ಉದ್ಯೋಗಕ್ಕೆ ಲಾಯಕ್ಕಿಲ್ಲದ’ ನಿರುದ್ಯೋಗಿಗಳ ಸಂಖ್ಯೆ ಅಪಾಯಕಾರಿ ಮಟ್ಟಕ್ಕೆ ತಲುಪಬಹುದು ಎನ್ನುತ್ತಿವೆ ವಿಶ್ಲೇಷಣೆಗಳು. ಭಾರತದ ಒಟ್ಟು ಜನಸಂಖ್ಯೆಯ ಶೇ. 65 ಕ್ಕಿಂತ ಹೆಚ್ಚು ಭಾಗ ಇರುವ 35 ವರ್ಷದೊಳಗಿನ ಯುವಶಕ್ತಿ ಮುಂದಿನ ಕೆಲವೇ ದಿನಗಳಲ್ಲಿ ದುಪ್ಪಟ್ಟಾಗುವ ಹಾಗೂ ಆ ವರ್ಗ ಆರ್ಥಿಕ ಅಸಮಾನತೆ, ನಿರುದ್ಯೋಗದ ಬಿಕ್ಕಟ್ಟು ಮತ್ತು ಸಾಮಾಜಿಕ ಅಶಾಂತಿಗೆ ಕಾರಣವಾಗುವ ಭೀತಿ ಇದೆ.

ಭಾರತಕ್ಕೆ ದೊಡ್ಡ ಸವಾಲುಗಳಿರುವಂತೆಯೇ ಅತ್ಯುನ್ನತ ಜಾಗತಿಕ ಅವಕಾಶಗಳೂ ಇವೆ. ಮ್ಯಾಕಿನ್ಸೆ ಗ್ಲೋಬಲ್ ಇನ್‌ಸ್ಟಿಟ್ಯೂಟ್‌ನ ವರದಿಯ ಪ್ರಕಾರ, AI ತಂತ್ರಜ್ಞಾನದ ಸರಿಯಾದ ಅಳವಡಿಕೆಯಿಂದ ಭಾರತದ ಆರ್ಥಿಕತೆಗೆ ಮುಂದಿನ ದಿನಗಳಲ್ಲಿ ನೂರಾರು ಬಿಲಿಯನ್ ಡಾಲರ್ ಮೌಲ್ಯ ಸೇರ್ಪಡೆಯಾಗುವ ಸಾಮರ್ಥ್ಯವಿದೆ. ಜಗತ್ತಿನಾದ್ಯಂತ AI ತಂತ್ರಜ್ಞಾನದ ಸಾಮ್ರಾಜ್ಯ ಬೆಳೆಯುತ್ತಿದ್ದಂತೆ, ಅದನ್ನು ನಿರ್ವಹಿಸಲು, ಪ್ರಾಂಪ್ಟ್ ಬರೆಯಲು, ಡೇಟಾ ಶುದ್ಧೀಕರಿಸಲು ಮತ್ತು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಕೋಟ್ಯಂತರ ನುರಿತ ಮಾನವ ಸಂಪನ್ಮೂಲದ ಅಗತ್ಯವಿದೆ. ಚೀನಾ ಕೋರ್ಸ್‌ಗಳನ್ನು ಬದಲಾಯಿಸುತ್ತಿರಬಹುದು, ಆದರೆ ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ, ಗಣಿತ, ತರ್ಕ ಮತ್ತು ಗಣಕ ವಿಜ್ಞಾನದಲ್ಲಿ ಭಾರತೀಯ ಯುವಕರಿಗಿರುವ ಸ್ವಾಭಾವಿಕ ಪ್ರತಿಭೆ ಜಾಗತಿಕವಾಗಿ ನಮಗೆ ದೊಡ್ಡ ಪ್ಲಸ್ ಪಾಯಿಂಟ್. ಭಾರತದ ಐಟಿ ದೈತ್ಯರಾದ ಇನ್ಫೋಸಿಸ್, ಟಿಸಿಎಸ್ ಮತ್ತು ವಿಪ್ರೋಗಳು ಈಗಾಗಲೇ ತಮ್ಮ ಲಕ್ಷಾಂತರ ಉದ್ಯೋಗಿಗಳಿಗೆ AI ಮರು-ತರಬೇತಿ ನೀಡಲು ಭಾರಿ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿವೆ. ಭಾರತದ ಯುವಕರು ಸ್ವಯಂ ಪ್ರೇರಿತರಾಗಿ ಈ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ, ಜಗತ್ತಿನಾದ್ಯಂತ ಸೃಷ್ಟಿಯಾಗಲಿರುವ ಹೊಸ ತಲೆಮಾರಿನ ಹೈಟೆಕ್ ಉದ್ಯೋಗಗಳಿಗೆ ಭಾರತವೇ ‘ಗ್ಲೋಬಲ್ ಟ್ಯಾಲೆಂಟ್ ಹಬ್’ ಆಗಬಹುದು. ಇದು ಈ ತಾಂತ್ರಿಕ ಮಹಾವಿಪ್ಲವದ ಅತಿ ದೊಡ್ಡ ಸಾಧಕ.

ಆದರೆ, ಭಾರತದ ನಗರ ಪ್ರದೇಶಗಳ ಮುಂದುವರೆದ ಕಾಲೇಜುಗಳ ವಿದ್ಯಾರ್ಥಿಗಳಿಗೆ AI ತಂತ್ರಜ್ಞಾನದ ಪ್ರವೇಶ ಸುಲಭವಾಗಿ ಸಿಗಬಹುದು. ಆದರೆ, ಗ್ರಾಮೀಣ ಮತ್ತು ಅರೆ-ನಗರ ಭಾಗದ ಸರ್ಕಾರಿ ಹಾಗೂ ಸಾಮಾನ್ಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಂತಹ ಅತ್ಯಾಧುನಿಕ ಮೂಲಸೌಕರ್ಯ ಸಿಗದೆ, ಅವರು ಉದ್ಯೋಗ ಮಾರುಕಟ್ಟೆಯಲ್ಲಿ ಇನ್ನಷ್ಟು ಹಿಂದುಳಿಯುವ ಸಾಧ್ಯತೆ ಇದೆ. ಜತೆಗೆ ಭಾರತದಲ್ಲಿ ಕೋಟ್ಯಂತರ ಜನರಿಗೆ ಉದ್ಯೋಗ ನೀಡಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು (MSME) ತಂತ್ರಜ್ಞಾನ ಅಳವಡಿಸಿಕೊಳ್ಳಲು ಮುಖ್ಯವಾಗಿ ಹಣಕಾಸಿನ ಕೊರತೆ ಎದುರಿಸುತ್ತಿವೆ. ನಮ್ಮ ದೇಶದ ಸಣ್ಣ ಕೈಗಾರಿಕೆಗಳಿಗೆ AI ನ ಸೌಲಭ್ಯಗಳನ್ನು ನೇರವಾಗಿ ತಲುಪಿಸದಿದ್ದರೆ, ಅವು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದೆ ಮುಚ್ಚಿಹೋಗುವ ಅಪಾಯವಿದೆ. ಇದು ಕೇವಲ ಉದ್ಯೋಗ ನಷ್ಟ ಮಾತ್ರವಲ್ಲ, ಗ್ರಾಮೀಣ ಆರ್ಥಿಕತೆಯ ಕುಸಿತಕ್ಕೂ ಕಾರಣವಾಗಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸುತ್ತಿದ್ದಾರೆ.

ಇದನ್ನೂ ಓದಿ: ಭವಿಷ್ಯದ ʼಸೂಪರ್‌ ಆಂಟಿಜೆನ್‌ʼ; ಇದು AI ರೂಪಿಸಿದ ವಿಶ್ವದ ಮೊದಲ ಲಸಿಕೆ!

ಹಳೆಯ ಕೋರ್ಸ್‌ಗಳನ್ನು ತೆಗೆದು ಹೊಸ ತಾಂತ್ರಿಕ ಕೋರ್ಸ್‌ಗಳನ್ನು ತರುವುದು ಈ ಜಾಗತಿಕ ಬಿಕ್ಕಟ್ಟಿಗೆ ಶಾಶ್ವತ ಪರಿಹಾರವಲ್ಲ . ಇಂದು ಹೊಸದಾಗಿ ಪರಿಚಯಿಸುವ ಕೋರ್ಸ್ ಕೂಡ ಇನ್ನು ಕೆಲವು ವರ್ಷಗಳಲ್ಲಿ AI ನ ಮುಂದಿನ ಅತ್ಯಾಧುನಿಕ ಆವೃತ್ತಿಯಿಂದಾಗಿ ಹಳತಾಗಬಹುದು. ಹೀಗಾಗಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ತಮಗೆ ಬೇಕಾದ ವಿಷಯಗಳನ್ನು ವಿಭಿನ್ನ ವಿಭಾಗಗಳಿಂದ ಆಯ್ದುಕೊಂಡು ಓದುವ ಮುಕ್ತ ಸ್ವಾತಂತ್ರ್ಯ ನೀಡಬೇಕು. ಉದಾಹರಣೆಗೆ, ಕಲೆ ಓದುವ ವಿದ್ಯಾರ್ಥಿ ಡೇಟಾ ಗವರ್ನೆನ್ಸ್ ಕಲಿಯುವಂತಿರಬೇಕು, ಕಾಮರ್ಸ್ ವಿದ್ಯಾರ್ಥಿ ಸ್ಟ್ಯಾಟಿಸ್ಟಿಕ್ಸ್ ಮತ್ತು AI ಮಾದರಿಗಳನ್ನು ನಿರ್ವಹಿಸುವ ಕೌಶಲ್ಯ ಹೊಂದಿರಬೇಕು. ಆಗ ಮಾತ್ರ ಮಾರುಕಟ್ಟೆಯ ಏರಿಳಿತಗಳಿಗೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಪ್ರೊಫೈಲ್ ಅನ್ನು ತಾವೇ ಮರುರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.

AI ತಂತ್ರಜ್ಞಾನ ಮನುಷ್ಯನ ಕೈಲಿದ್ದ ಉದ್ಯೋಗವನ್ನು ಕಿತ್ತುಕೊಳ್ಳುತ್ತಿಲ್ಲ, ಬದಲಿಗೆ AI ಅನ್ನು ಸಮರ್ಥವಾಗಿ ಬಳಸುವ ಮತ್ತೊಬ್ಬ ಮನುಷ್ಯ ಬಂದು ಹಳೆಯ ಮನುಷ್ಯನ ಉದ್ಯೋಗವನ್ನು ಕಸಿದುಕೊಳ್ಳುತ್ತಿದ್ದಾನೆ. ಈ ಜಾಗತಿಕ ಯುದ್ಧದಲ್ಲಿ ಯುವಶಕ್ತಿ ಗೆದ್ದು ಬರಬೇಕಾದರೆ, ಶೈಕ್ಷಣಿಕ ಪಠ್ಯಕ್ರಮಗಳು ಉದ್ಯಮಕ್ಕೆ ತಕ್ಷಣ ಬಳಕೆಯಾಗುವ ಪ್ರಾಯೋಗಿಕ ಜ್ಞಾನ ಮತ್ತು ನಿರಂತರ ಅಡಾಪ್ಟೆಬಿಲಿಟಿಯನ್ನು (ಹೊಂದಿಕೊಳ್ಳುವಿಕೆ) ಕಲಿಸಿಕೊಡಬೇಕಾಗಿದೆ. ತಂತ್ರಜ್ಞಾನದ ಈ ಮಹಾ ಅಲೆಗೆ ಹೆದರಿ ಓಡುವುದಕ್ಕಿಂತ, ಅದರ ಮೇಲೆ ಸವಾರಿ ಮಾಡುವುದನ್ನು ಯುವ ಪೀಳಿಗೆ ಕಲಿತರೆ, ಭಾರತಕ್ಕೆ ಭವಿಷ್ಯದ ದಿನಗಳು ಅತ್ಯಂತ ಆಶಾದಾಯಕವಾಗಿರಲಿವೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಅಮೆರಿಕದ ಶೇ.100ರಷ್ಟು ಸುಂಕದ ಬೆದರಿಕೆ

ರಷ್ಯಾ ವಿರುದ್ಧದ ನಿರ್ಬಂಧಗಳ ಮಸೂದೆಗೆ ತಿದ್ದುಪಡಿ ತಂದು, ಭಾರತ ಸೇರಿದಂತೆ ಹಲವು...

ಸಂಜೆ ಮಳೆಗೆ ಬೆಂಗಳೂರು ತತ್ತರ: ಟ್ರಾಫಿಕ್‌ನಲ್ಲಿ ಸಿಲುಕಿದ ಜನರು, 11 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ದಿಢೀರನೆ ಶುರುವಾದ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಜನಜೀವನ...

ಪತಂಜಲಿ ಪ್ರಕರಣ: ಕಣ್ಣುಮುಚ್ಚಿಕೊಂಡು ಆದೇಶ ಹೊರಡಿಸಿದ ‘ಐಟಿಎಟಿ’ಗೆ ದೆಹಲಿ ಹೈಕೋರ್ಟ್ ತರಾಟೆ, 7 ಆದೇಶಗಳು ರದ್ದು

ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ಸಂಬಂಧಿಸಿದಂತೆ 'ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ' (ITAT)...

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ ವಿಮಾನಗಳ ವಿಳಂಬ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ನ ಎರಡು ವಿಮಾನಗಳು ಪದೇಪದೇ ವಿಳಂಬಗೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ...