ಕಲಬುರಗಿ | ಆರ್‌ಎಸ್‌ಎಸ್ ನಿಷೇಧಿಸುವಂತೆ ಆಗ್ರಹಿಸಿ ಕರಾದಸಂಸ ವತಿಯಿಂದ ಬೃಹತ್‌ ಪ್ರತಿಭಟನೆ

Date:

‘ರಾಷ್ಟ್ರೀಯ ಸ್ವಯಂಸೇವಕ ಸಂಘ ನಿಷೇಧಿಸಿ, ಪ್ರಜಾಪ್ರಭುತ್ವ ಉಳಿಸಿ’ ಎಂಬ ಘೋಷಣೆಯೊಂದಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಜಿಲ್ಲಾ ಘಟಕದ ನೇತೃತ್ವದಲ್ಲಿ ಕಲಬುರಗಿ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

- Advertisement -

ಜಗತ್ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ವರೆಗೆ ಸಾಗಿತು. ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ‘ಆರ್‌ಎಸ್‌ಎಸ್ ಬಂದ್ ಮಾಡಿ-ಬ್ಯಾನ್ ಮಾಡಿ”, ‘ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ನಾವಿದ್ದೇವೆ” ಎಂಬ ಘೋಷಣೆಗಳನ್ನು ಕೂಗಿದರು. ‘ಜಗತ್ತಿನ ಅತ್ಯಂತ ಅಪಾಯಕಾರಿ ವೈರಸ್ ರಾಷ್ಟ್ರೀಯ ಸ್ವಯಂಸೇವಕ ಸಂಘ’ ಎಂಬ ಬ್ಯಾನರ್‌ನ್ನು ದಹಿಸುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಅವರ ಶೈಕ್ಷಣಿಕ...

ಭಾರತದ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಶಿಕ್ಷಣ, ಯುವಜನರ ಚಳವಳಿಗಳು, ಪ್ರಜಾಪ್ರಭುತ್ವ ಮತ್ತು ಜಾಗತಿಕ ರಾಜಕೀಯದ ಕುರಿತು ಮಹತ್ವದ ವಿಚಾರ ವಿನಿಮಯ ಭಾರತದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನವೆಂಬರ್ 17,...

ಸೋನಿಯಾ ಗಾಂಧಿಯವರ ಪುಸ್ತಕಕ್ಕೆ ನಿಷೇಧದ ಬೇಡಿಕೆ: ಇತಿಹಾಸವನ್ನು ಅಳಿಸಿಹಾಕಲು...

ಸಾವರ್ಕರ್ ಮತ್ತು ಆರ್‌ಎಸ್‌ಎಸ್ ಕುರಿತ ಐತಿಹಾಸಿಕ ಉಲ್ಲೇಖಗಳನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಣ ಸೋನಿಯಾ ಗಾಂಧಿಯವರ ಆತ್ಮಕಥನಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸುತ್ತಿದೆ. ಗಾಂಧೀಜಿಯವರ ಹಂತಕ ಗೋಡ್ಸೆಯನ್ನು ಸಮರ್ಥಿಸುವ...

ಇತಿಹಾಸದ ಕಮಾನು: ಸಮಾನತೆಯಿಂದ ಅಸಮಾನತೆಗೆ, ಮತ್ತೆ ಸಮಾನತೆಯತ್ತವೇ ಮನುಷ್ಯನ...

ಒಂದು ಕಾಲದಲ್ಲಿ ಮನುಷ್ಯನ ಕೈಕೆಲಸವನ್ನು ಯಂತ್ರಗಳು ಬದಲಾಯಿಸಿದವು. ಈಗ ಮನುಷ್ಯನ ಬುದ್ಧಿಶಕ್ತಿಯ ಕೆಲವು ಕೆಲಸಗಳನ್ನೂ ಯಂತ್ರಗಳು ಮಾಡತೊಡಗಿವೆ. ಭಾಷಾಂತರ, ಲೆಕ್ಕಾಚಾರ, ವಿನ್ಯಾಸ, ಮಾಹಿತಿ ವಿಶ್ಲೇಷಣೆ, ವೈದ್ಯಕೀಯ ಪರೀಕ್ಷೆಗಳಿಗೆ ನೆರವು, ಆಡಳಿತದ ನಿರ್ಧಾರಗಳಿಗೆ ಸಹಾಯ...

ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಮಾತನಾಡಿ, ‘ಜನತೆಯ ಮಧ್ಯ ವಿಷ ಬೀಜ ಬಿತ್ತುತ್ತಿರುವ ಆರ್‌ಎಸ್‌ಎಸ್‌ನ್ನು ಸರಕಾರ ನಿಷೇಧಗೊಳಿಸದೆ ಕುಳಿತಿದೆ. ದೇಶಕ್ಕೆ ಕಂಟಕವಾಗಿರುವ ಈ ಸಂಘಟನೆಯನ್ನು ಜನರೇ ನಿಷೇಧಗೊಳಿಸಬೇಕಾಗಿದೆ’ ಎಂದರು.

401925

ಅವರು ಮುಂದುವರೆದು, ‘ಆರ್‌ಎಸ್‌ಎಸ್ ಕೋಮುವಾದದ ವಿಷ ನಾಗರಹಾವಿನಂತೆ ರೂಪಾಂತರಗೊಂಡಿದೆ. ಇಟಲಿಯ ಪ್ಯಾಸಿಸ್ಟ್ ನಾಯಕ ಮುಸೋಲಿನಿ ಮತ್ತು ಜರ್ಮನಿಯ ಹಿಟ್ಲರ್‌ನಿಂದ ಪ್ರೇರಣೆ ಪಡೆದ ಈ ಸಂಘಟನೆ ಭಾರತದಲ್ಲಿ ಪ್ಯಾಸಿಸಂ ಮಾದರಿಯ ಹಿಂಸಾತ್ಮಕ ಚಟುವಟಿಕೆ ನಡೆಸುತ್ತಿದೆ. ಈ ಸಂಘಟನೆಗೆ ಸಂವಿಧಾನವಿಲ್ಲ, ಹಣಕಾಸು ವ್ಯವಹಾರಗಳ ದಾಖಲೆಗಳಿಲ್ಲ, ಸಂಪೂರ್ಣ ರಹಸ್ಯಪರ ಸಂಘಟನೆಯಾಗಿದೆ’ ಎಂದು ಆರೋಪಿಸಿದರು.

ಅವರು ನೆಹರು, ಪಟೇಲ್, ಇಂಧಿರಾ ಗಾಂಧಿ ಹಾಗೂ ನರಸಿಂಹರಾವ್ ಕಾಲಘಟ್ಟಗಳಲ್ಲಿ ನಡೆದ ನಿಷೇಧ ಕ್ರಮಗಳ ಇತಿಹಾಸವನ್ನು ಉಲ್ಲೇಖಿಸಿ, ‘ಆರ್‌ಎಸ್‌ಎಸ್‌ನ ವಿರುದ್ಧ ಕಾಂಗ್ರೆಸ್ ಪಕ್ಷವು ತೋರಿದ ಮೃದು ಧೋರಣೆಗಳೇ ಇಂದು ಅದನ್ನು ಬಲಿಷ್ಠಗೊಳಿಸಿವೆ’ ಎಂದು ಹೇಳಿದರು.

401870 1

ಅವರು ಮುಂದುವರೆದು, ‘ಆರ್‌ಎಸ್‌ಎಸ್ ಹಿಂದೂ ಧಾರ್ಮಿಕ ಸಂಘಟನೆಯಲ್ಲ, ಅದು ಕೋಮುವಾದ ಬಿತ್ತುವ ಸಂಘಟನೆ. ಇದರ ಪಥಸಂಚಲನಗಳು ಧಾರ್ಮಿಕ ಶೋಭಾಯಾತ್ರೆಗಳಲ್ಲ, ಅಸಹಿಷ್ಣುತೆಯ ಮೆರವಣಿಗೆಗಳಾಗಿವೆ. ಈ ಸಂಘಟನೆಯ ಉದ್ದೇಶ ಭಾರತವನ್ನು ‘ಹಿಂದೂರಾಷ್ಟ್ರ’ವನ್ನಾಗಿ ರೂಪಿಸುವುದು ಮತ್ತು ಪೆಶ್ವಾ ಆಧಿಪತ್ಯವನ್ನು ಪುನಃ ಸ್ಥಾಪಿಸುವುದು” ಎಂದು ಆರೋಪಿಸಿದರು.

ಇದನ್ನು ಓದಿದ್ದೀರಾ? ಕಲಬುರಗಿ | ಸಮೀಕ್ಷೆ ಕರ್ತವ್ಯದಲ್ಲಿ ಲೋಪ : ಶಿಕ್ಷಕ ಅಮಾನತು

ನಂತರ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಅವರ ಕುಟುಂಬಕ್ಕೆ ಝಡ್‌ ಶ್ರೇಣಿಯ ಭದ್ರತೆ ಒದಗಿಸಬೇಕು, ಮಾಧ್ಯಮ ಮತ್ತು ಯೂಟ್ಯೂಬ್‌ನಲ್ಲಿ ನಿಂದನೆ ಅಥವಾ ಅಶ್ಲೀಲ ಭಾಷೆ ಬಳಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಖಾಯಂವಾಗಿ ನಿಷೇಧಗೊಳಿಸಬೇಕು ಆಗ್ರಹಿಸಿ ಮನವಿ ಸಲ್ಲಿಸಿದರು.

ಈ ಪ್ರತಿಭಟನೆಯಲ್ಲಿ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಪ್ರೊ. ಆರ್‌ ಕೆ ಹುಡಗಿ, ದಸಂಸ ಹಿರಿಯ ಮುಖಂಡ ಮಾನು ಗುರಿಕಾರ್, ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಖಾನಾ, ಸೂರ್ಯಕಾಂತ ಅಜಾದಪುರ, ಮಹೇಶ್ ಕೋಕೀಲ್, ರಾಜಕುಮಾರ ನಿಂಬಾಳ, ಪರಶುರಾಮ ರಾಜಾಪೂರ, ಸಾಯಬಣ್ಣ ಕೋಟನೂರ, ಕುಮಾರ್ ಕೋಳಿಗೇರಿ ಸೇರಿದಂತೆ ಹಲವು ಸಂಘಟನಾ ನಾಯಕರು ಭಾಗವಹಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬನವಾಸಿ | ಗೃಹಪ್ರವೇಶದ ಬೆನ್ನಲ್ಲೇ ಹೊಸ ಮನೆಗೆ ಕನ್ನ: ಸ್ವಿಫ್ಟ್ ಕಾರು ಸೇರಿ ₹9.30 ಲಕ್ಷ ಮೌಲ್ಯದ ಸ್ವತ್ತು ಕಳವು

ಬನವಾಸಿ: ಶಿರಸಿ ತಾಲೂಕಿನ ದಾಸನಕೊಪ್ಪ ರಸ್ತೆಯ ನಿವಾಸಿ ಪ್ರಕಾಶ ಚನ್ನಪ್ಪ ಜಕಲಣ್ಣನವರ...

ರಾಯಚೂರು | ವಿದ್ಯುತ್ ತಂತಿ ತಗುಲಿ ಭತ್ತದ ಹುಲ್ಲು ಭಸ್ಮ

ತಾಲೂಕಿನ ತುಂಗಭದ್ರಾ ಗ್ರಾಮದ ಹೊರವಲಯದಲ್ಲಿ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸಾಗಿಸುತ್ತಿದ್ದ ಭತ್ತದ ಹುಲ್ಲಿಗೆ...

ರಾಯಚೂರು | ಪೋತ್ನಾಳ ಗ್ರಂಥಾಲಯಕ್ಕೆ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ಸ್ಪರ್ಧಾರ್ಥಿಗಳ ಪ್ರತಿಭಟನೆ

ಮಾನ್ವಿ ತಾಲ್ಲೂಕಿನ ಪೋತ್ನಾಳ ಗ್ರಾಮದ ಅರಿವು ಕೇಂದ್ರದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ...

ರಾಯಚೂರು | ನೀರಿಗಾಗಿ ಸಿಂಧನೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ: ಡಿ. 31ರವರೆಗೆ ನೀರು ಹರಿಸಲು ರೈತರ ಪಟ್ಟು

ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಡಿಸೆಂಬರ್ 31ರವರೆಗೆ ನಿರಂತರವಾಗಿ ನೀರು ಹರಿಸಬೇಕು....