ಕಲಬುರಗಿ | ಪದವಿ ಪೂರ್ವ ಇಲಾಖೆಯ ನಿಯಂತ್ರಣ ವರ್ಗಾವಣೆ ವಿರೋಧ: ಆದೇಶ ಹಿಂಪಡೆಯುವಂತೆ ಉಪನ್ಯಾಸಕರ ಪ್ರತಿಭಟನೆ

Date:

ಪದವಿ ಪೂರ್ವ ಇಲಾಖೆಯ ಆಡಳಿತ ನಿಯಂತ್ರಣವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರ್ಗಾಯಿಸುವ ಪ್ರಸ್ತಾಪಕ್ಕೆ ವಿರೋಧಿಸಿ, ಸರ್ಕಾರದ ಪ್ರಸ್ತಾಪಿತ ಕಡತ ಸಂಖ್ಯೆ ಇಪಿ 10 ಡಿಜಿಡಿ 2026 ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.

- Advertisement -

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ (ಬೆಂಗಳೂರು), ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಬೋಧಕೇತರ ಸಿಬ್ಬಂದಿಗಳ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಬ್ಬು ಬೆಳೆಗಾರರ ಬದುಕಿಗೆ ಸಿಹಿಯಾಗದ ಕಬ್ಬಿನ ಬೆಲೆ!

ಕರ್ನಾಟಕದ ಕೃಷಿ ಆರ್ಥಿಕತೆಯಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಸಾವಿರಾರು ರೈತ ಕುಟುಂಬಗಳ ಬದುಕು, ಗ್ರಾಮೀಣ ಉದ್ಯೋಗ, ಸಕ್ಕರೆ ಕಾರ್ಖಾನೆಗಳ ಕಾರ್ಯನಿರ್ವಹಣೆ ಮತ್ತು ಅದಕ್ಕೆ ಸಂಬಂಧಿಸಿದ ಕೈಗಾರಿಕೆಗಳ ಆರ್ಥಿಕ ಚಟುವಟಿಕೆ ಕಬ್ಬಿನ ಉತ್ಪಾದನೆಯೊಂದಿಗೆ...

ಹಾಲು, ಮೊಸರು, ದಿನಸಿ ದರ ಏರಿಕೆ ಬೆನ್ನಲ್ಲೇ ಬಸ್...

ಹಾಲು, ಮೊಸರು, ದಿನಸಿ ವಸ್ತುಗಳ ದರ ಹೆಚ್ಚಳದ ಹೊರೆಯ ನಡುವೆ, ಬಸ್ ಪ್ರಯಾಣವೂ ದುಬಾರಿಯಾದರೆ ಬದುಕು ಮತ್ತಷ್ಟು ದುಸ್ತರವಾಗಲಿದೆ. ಕರ್ನಾಟಕದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಸಾರ್ವಜನಿಕರಲ್ಲಿ ಅಸಮಾಧಾನದ ಹೊಗೆಯಾಡಿದ್ದು,...

ರಾಮನಿಗೆ ₹150 ಕೋಟಿ, ಸೀತೆಗೆ ₹12 ಕೋಟಿ! ಬಿಗ್...

₹4,000 ಕೋಟಿಯ ಬೃಹತ್ ಬಜೆಟ್‌ನ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರರಂಗದ ಅದೇ ಹಳೆ ಹಣೆಬರಹವೊಂದು ಚರ್ಚೆಗೆ ಸಿಕ್ಕಿದೆ. ರಾಮನ ಪಾತ್ರಕ್ಕೆ ₹150 ಕೋಟಿ, ರಾವಣನಿಗೆ ₹100 ಕೋಟಿ ಸಂಭಾವನೆ!...

ಮನವಿ ಸಲ್ಲಿಸಿ ಬಳಿಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಬಳುಂಡಗಿ ಮಾತನಾಡಿ, ‘ಶಾಲಾ ಶಿಕ್ಷಣ ಇಲಾಖೆಯ ಪ್ರಸ್ತಾಪಿತ ಆದೇಶದಂತೆ ಪದವಿ ಪೂರ್ವ ಉಪನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರ್ಗಾಯಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸ್ವಾಯತ್ತತೆ, ಸಂಸ್ಥಾತ್ಮಕ ಅಸ್ತಿತ್ವ ಹಾಗೂ ಈಗಿರುವ ಆಡಳಿತಾತ್ಮಕ ವ್ಯವಸ್ಥೆಗೆ ಗಂಭೀರ ಧಕ್ಕೆಯಾಗುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

1585717

‘ಪದವಿ ಪೂರ್ವ ಶಿಕ್ಷಣವು ಸ್ವತಂತ್ರ ಆಡಳಿತ ವ್ಯವಸ್ಥೆಯಡಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಜಿಲ್ಲಾ ಪಂಚಾಯತ್ ಆಡಳಿತದ ಅಧೀನಕ್ಕೆ ತರುವ ಪ್ರಯತ್ನವು ಶಿಕ್ಷಣ ವ್ಯವಸ್ಥೆಯ ಸುಗಮ ಕಾರ್ಯಾಚರಣೆಗೆ ಅಡಚಣೆ ಉಂಟುಮಾಡಬಹುದು. ಇದರಿಂದ ಪದವಿ ಪೂರ್ವ ಕಾಲೇಜುಗಳ ಆಡಳಿತ ವ್ಯವಸ್ಥೆ ದುರ್ಬಲವಾಗುವ ಭೀತಿ ಎದುರಾಗಿದೆ. ಆದ್ದರಿಂದ ಸರ್ಕಾರ ಈ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು’ ಎಂದು ಅವರು ಒತ್ತಾಯಿಸಿದರು.

‘ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಹೋರಾಟಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ ಅವರು, ಸರ್ಕಾರ ಆದೇಶವನ್ನು ಹಿಂಪಡೆಯದಿದ್ದರೆ ಮುಂದಿನ ದ್ವಿತೀಯ ಪಿಯುಸಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸುವಂತಹ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಾಗಿ ಸರ್ಕಾರದ ಪ್ರಸ್ತಾಪಿತ ಕಡತ ಸಂಖ್ಯೆ ಇಪಿ 10 ಡಿಜಿಡಿ 2026 (EP 10 DGD 2026) ಅನ್ನು ತಕ್ಷಣ ಹಿಂಪಡೆಯಬೇಕು. ಜೊತೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿದ್ದ ಪರೀಕ್ಷಾ ವಿಭಾಗವನ್ನು ಹಿಂದಿನಂತೆ ನಿರ್ದೇಶನಾಲಯಕ್ಕೆ ಮರಳಿ ವರ್ಗಾಯಿಸುಬೇಕು’ ಎಂಬ ಒತ್ತಾಯಿಸಿದರು.

1585714

‘ಇದಲ್ಲದೆ, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಪ್ರಸ್ತುತ ಇರುವ 320:1 ವಿದ್ಯಾರ್ಥಿ, ಉಪನ್ಯಾಸಕರ ಅನುಪಾತವನ್ನು ಎನ್‌ಸಿಇಆರ್‌ಟಿ ಮಾರ್ಗಸೂಚಿಗಳನ್ವಯ ಮರುನಿಗದಿಪಡಿಸಬೇಕು’ ಎಂದು ಸಂಘಟನೆಗಳು ಒತ್ತಾಯಿಸಿವೆ.

‘ಕಳೆದ ಮೂರು ವರ್ಷಗಳಿಂದ ಪರಿಷ್ಕರಿಸದಿರುವ ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಭತ್ಯೆ ಹಾಗೂ ಪರೀಕ್ಷಾ ಸಂಭಾವನೆಯನ್ನು ತಕ್ಷಣ ಪರಿಷ್ಕರಿಸಿ, ಬಾಕಿ ಇರುವ ಸಂಭಾವನೆಗಳನ್ನು ಕೂಡಲೇ ಪಾವತಿಸಬೇಕು. ಖಾಸಗಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರಿಗೆ ಪ್ರಥಮ ಆದ್ಯತೆಯಾಗಿ ಈ ಸಂಭಾವನೆಗಳನ್ನು ವಿತರಿಸಬೇಕು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

‘ಕಾರ್ಯಭಾರ ಕೊರತೆ ಇರುವ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಸೇವೆಯಿಂದ ವಿಮುಕ್ತಿಗೊಳಿಸುವ ಆದೇಶವನ್ನು ಹಿಂಪಡೆದು, ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯಭಾರ ನೀಡಲು ಸರ್ಕಾರ ಅನುಮೋದನೆ ನೀಡಬೇಕು’ ಎಂದು ಸಂಘಟಕರು ಆಗ್ರಹಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಹಾಗೂ ಪದೋನ್ನತಿ ಹೊಂದಿದ ಪ್ರಾಂಶುಪಾಲರ ಸ್ಥಳ ನಿಯುಕ್ತಿಯ ಸಂದರ್ಭದಲ್ಲಿ ಎಲ್ಲಾ ಖಾಲಿ ಹುದ್ದೆಗಳನ್ನು ಯಾವುದೇ ನಿರ್ಬಂಧವಿಲ್ಲದೆ ಆಯ್ಕೆ ಮಾಡಲು ಅವಕಾಶ ನೀಡಬೇಕು ಎಂದು ಕೂಡ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇದನ್ನು ಓದಿದ್ದೀರಾ ಕಲಬುರಗಿ | ಆಂಬುಲೆನ್ಸ್ ಅಪಘಾತ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಸ್ಥಳದಲ್ಲೇ ಸಾವು

ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ನರಸಪ್ಪ ರಂಗೋಲಿ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಶಿವಾನಂದ ಖಜೂರಿ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಬೋನಾಳ, ಬೋಧಕೇತರ ಸಿಬ್ಬಂದಿಗಳ ಸಂಘದ ಅಧ್ಯಕ್ಷ ನೆಸರ ಬೆಳಗಿ, ರಾಜ್ಯ ಪರಿಷತ್ ಸದಸ್ಯ ಧರ್ಮರಾಯ ಜವಳಿ, ನಿವೃತ್ತ ಜಂಟಿ ನಿರ್ದೇಶಕರಾದ ಶಿವಶರಣಪ್ಪ ಮುಳೆಗಾಂವ, ಸುಜಾತ ಬಿರಾದಾರ, ಭಾರತಿ ಕೊಭಾ, ಪ್ರಭಾತಿ ಪಾಟೀಲ, ದಶರಥ ರಾಠೋಡ, ಬಸವರಾಜ ಅಂಗಡಿ, ಶರಣಗೌಡ ಪಾಟೀಲ, ನಾಮದೇವ ಕಡಕೊಳ, ಭೀಮರಾಯ ಅರಕೇರಿ, ಬಿ.ಹೆಚ್‌. ನಿರಗುಡಿ, ಸಿ.ಚಿ. ಲಿಂಗಣ್ಯ, ಡಾ. ಪ್ರಹ್ಲಾದ ಬುರ್ಲಿ, ಉಮೇಶ ಅಷ್ಟಗಿ, ಮಹಾದೇವ ನಲಕಂಠ, ಜಯಶ್ರೀ ಪಾಟೀಲ, ಸವಿತಾ ನಾಸಿ, ಮಂಜುಳಾ, ಲಿಲಾವತಿ ನಾಗಶೆಟ್ಟಿ, ಸುವರ್ಣ ಬಿರಾದಾರ, ಜಮುನಾ ಟಿಳೆ, ನೀಲಮ್ಮ ಪಾಟೀಲ, ಶಾಂತಾ ಮಾಲಿ ಪಾಟೀಲ, ಸವಿತಾ ನಾಟೀಕಾರ, ಬಲರಾಮ ಚವ್ಹಾಣ, ಶಿವಶರಣಪ್ಪ ತಮ್ಮಾಗೊಳ, ತುಳಜಾ ರಾಮ್ಪರ, ನಾಗರತ್ನ ಇಂಡಿ, ರೇವಮ್ಮ ಸನ್ನತಿ, ಸಂತೋಷ್ ಪಾಂಚಳ್, ಹಮೀದಲಿ, ಜಟ್ಟಿಂಗ್ ರಾಯ್ ಶಾಕಾಪುರ್, ಅಂಬಾದಾಸ್ ಜಾಧವ್, ದೀಕ್ಷಿತ್, ಮಲ್ಲಿನಾಥ್,ವಿಠಲರಾವ್ ಬಾವಿಮನಿ, ಸುರಚಂದ ಗಾಂಧಿ, ಸುನಿಲ್ ರಾಥೋಡ್, ರಂಗಸ್ವಾಮಿ, ಕಾಶಿನಾಥ್ ಮುಖರ್ಜಿ, ಸುಮಂಗಲ ನಾಟಿಕರ್ ಸೇರಿದಂತೆ ಅನೇಕ ಉಪನ್ಯಾಸಕರು, ಪ್ರಾಂಶುಪಾಲರು ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರ ದುಸ್ತರ: ದುರಸ್ತಿಗೆ ದಲಿತ ಸೇನೆ ಆಗ್ರಹ

ಮಳಖೇಡದಿಂದ ಚಿತ್ತಾಪುರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ...

ಕಲಬುರಗಿ ಜಿಲ್ಲೆಯ 4.77 ಲಕ್ಷ ಮತದಾರರು ಎಲ್ಲಿ ಹೋದರು? ಎಸ್‌ಐಆರ್ ವಿರುದ್ಧ ಸಿಪಿಐ ತೀವ್ರ ಆಕ್ರೋಶ

ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಬಳಿಕ ಲಕ್ಷಾಂತರ ಮತದಾರರ ಹೆಸರುಗಳು...

ಕಲಬುರಗಿ | ಸಾರ್ವಜನಿಕ ಶಿಕ್ಷಣ ಬಲವರ್ಧನೆಗೆ ಎಸ್‌ಎಫ್‌ಐ ಆಗ್ರಹ: 17ನೇ ರಾಜ್ಯ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಸರ್ಕಾರಕ್ಕೆ ಎಚ್ಚರಿಕೆ

ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸುವುದು, ಕೋಮು...

SIR | ಕಲ್ಯಾಣ ಕರ್ನಾಟಕದಲ್ಲಿ 16.23 ಲಕ್ಷ ಮತದಾರರು ಔಟ್!

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು,...