ಲಕ್ಷ ಲಕ್ಷ ಸಂಬಳದ ಆಸೆಗೆ ವಿದೇಶಕ್ಕೆ ಹೋದ ಯುವಕರು ಜೈಲಿನಲ್ಲಿ ಬಂಧಿ! ಕಾಂಬೋಡಿಯಾದಲ್ಲಿ ಭಾರತೀಯರ ಪರದಾಟ

Date:

ಉತ್ತಮ ಉದ್ಯೋಗ ಹಾಗೂ ಹೆಚ್ಚಿನ ಸಂಬಳದ ನಿರೀಕ್ಷೆಯಲ್ಲಿ ವಿದೇಶಕ್ಕೆ ತೆರಳಿದ ಹಲವು ಭಾರತೀಯರು ಕಾಂಬೋಡಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಿದೇಶಕ್ಕೆ ಕರೆದೊಯ್ದ ಏಜೆಂಟರು, ಯುವಕರನ್ನು ಕಂಪನಿಗಳಿಗೆ ಒಪ್ಪಿಸುತ್ತಿದ್ದು, ಇದೀಗ ಹಲವರು ಜೈಲು ಸೇರಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

- Advertisement -

ರಾಜಸ್ಥಾನದ ಅಲ್ವಾರ್ ಮೂಲದ ಪ್ರದೀಪ್ ಕುಮಾರ್ ಎಂಬ ಯುವಕನ ಪ್ರಕರಣ ಈ ಜಾಲದ ಕರಾಳ ಮುಖವನ್ನು ತೆರೆದಿಟ್ಟಿದೆ. ಉದ್ಯೋಗ ಅರಸಿ ಮಲೇಷ್ಯಾಕ್ಕೆ ತೆರಳಿದ್ದ ಪ್ರದೀಪ್ ಇದೀಗ ಕಾಂಬೋಡಿಯಾದ ಜೈಲಿನಲ್ಲಿ ಬಂಧಿಯಾಗಿದ್ದಾರೆ ಎನ್ನಲಾಗಿದೆ. ಆತನ ಆರೋಗ್ಯ ಸರಿಯಿಲ್ಲ ಮತ್ತು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಪರಿಚಿತ ವ್ಯಕ್ತಿಯೊಬ್ಬರು ತಂದೆ ವಿಜಯ್ ಕುಮಾರ್ ವರ್ಮಾ ಅವರಿಗೆ ಕರೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ‘ದೈನಿಕ್ ಭಾಸ್ಕರ್’ ವರದಿ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಾಲು, ಮೊಸರು, ದಿನಸಿ ದರ ಏರಿಕೆ ಬೆನ್ನಲ್ಲೇ ಬಸ್...

ಹಾಲು, ಮೊಸರು, ದಿನಸಿ ವಸ್ತುಗಳ ದರ ಹೆಚ್ಚಳದ ಹೊರೆಯ ನಡುವೆ, ಬಸ್ ಪ್ರಯಾಣವೂ ದುಬಾರಿಯಾದರೆ ಬದುಕು ಮತ್ತಷ್ಟು ದುಸ್ತರವಾಗಲಿದೆ. ಕರ್ನಾಟಕದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಸಾರ್ವಜನಿಕರಲ್ಲಿ ಅಸಮಾಧಾನದ ಹೊಗೆಯಾಡಿದ್ದು,...

ರಾಮನಿಗೆ ₹150 ಕೋಟಿ, ಸೀತೆಗೆ ₹12 ಕೋಟಿ! ಬಿಗ್...

₹4,000 ಕೋಟಿಯ ಬೃಹತ್ ಬಜೆಟ್‌ನ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರರಂಗದ ಅದೇ ಹಳೆ ಹಣೆಬರಹವೊಂದು ಚರ್ಚೆಗೆ ಸಿಕ್ಕಿದೆ. ರಾಮನ ಪಾತ್ರಕ್ಕೆ ₹150 ಕೋಟಿ, ರಾವಣನಿಗೆ ₹100 ಕೋಟಿ ಸಂಭಾವನೆ!...

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

ಕಂಪ್ಯೂಟರ್ ಸಂಬಂಧಿತ ಉದ್ಯೋಗದ ಭರವಸೆ ಮೇರೆಗೆ 2025ರ ಜೂನ್ 30ರಂದು ಪ್ರದೀಪ್ ಮಲೇಷ್ಯಾಕ್ಕೆ ತೆರಳಿದ್ದರು. ರೋನಿ ಎಂಬ ಏಜೆಂಟ್ ಆತನಿಗೆ ಸಂದರ್ಶನ ಹಾಗೂ ವಿಮಾನದ ವ್ಯವಸ್ಥೆ ಮಾಡಿದ್ದ ಎನ್ನಲಾಗಿದೆ. ಆದರೆ ಮಲೇಷ್ಯಾ ತಲುಪಿದ ಬಳಿಕ ಆತನ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಪಡೆದುಕೊಳ್ಳಲಾಗಿದೆ ಎಂದು ಕುಟುಂಬ ಆರೋಪಿಸಿದೆ.

2026ರ ಮೇ 25ರಂದು ಪ್ರದೀಪ್ ತನ್ನ ಕುಟುಂಬಕ್ಕೆ ಕರೆ ಮಾಡಿ, ಕಾಂಬೋಡಿಯಾದ ಸಿಹಾನೌಕ್ವಿಲ್ಲೆಯಲ್ಲಿರುವ ಸ್ಟಾರ್ ಲೈನ್ ಹೋಟೆಲ್‌ನಲ್ಲಿ ಬಾಣಸಿಗನ ಕೆಲಸ ನೀಡುವುದಾಗಿ ಹೇಳಿ ಅಲ್ಲಿಗೆ ಕಳುಹಿಸುತ್ತಿರುವುದಾಗಿ ತಿಳಿಸಿದ್ದ. ಮರುದಿನ ಪತ್ನಿಗೆ ಕರೆ ಮಾಡಿ ತೊಂದರೆಯಾಗುತ್ತಿರುವುದಾಗಿ ಹೇಳಿದ್ದ.

ಜೂನ್ 2ರಂದು ಅಪರಿಚಿತ ವ್ಯಕ್ತಿಯೊಬ್ಬರು ಕುಟುಂಬಕ್ಕೆ ಕರೆ ಮಾಡಿ ಪ್ರದೀಪ್ ಪೊಲೀಸರ ವಶದಲ್ಲಿದ್ದಾನೆ ಎಂದು ತಿಳಿಸಿ, ಆತನ ಬಿಡುಗಡೆಗಾಗಿ 40 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ಪ್ರದೀಪ್ ಕುಟುಂಬಕ್ಕೆ ಮಾಹಿತಿ ನೀಡಿ, ವಿವೇಕ್ ತಿವಾರಿ ಎಂಬ ಏಜೆಂಟ್ ಮಲೇಷ್ಯಾದಿಂದ 15 ಭಾರತೀಯರನ್ನು ಕಾಂಬೋಡಿಯಾಕ್ಕೆ ಕರೆದೊಯ್ದು ಕಂಪನಿಯೊಂದಕ್ಕೆ ಒಪ್ಪಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಜೂನ್ ಮೊದಲ ವಾರದಲ್ಲಿ ಪೊಲೀಸರು ಈ ಗುಂಪನ್ನು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ. ಕರೆ ಮಾಡಿದ ವ್ಯಕ್ತಿ ಕೆಲ ದಿನಗಳ ಬಳಿಕ ಬಿಡುಗಡೆಯಾಗಿದ್ದರೂ ಪ್ರದೀಪ್ ಸೇರಿದಂತೆ ಇತರರು ಜೈಲಿನಲ್ಲೇ ಉಳಿದಿದ್ದಾರೆ ಎಂದು ವರದಿಯಾಗಿದೆ.

ಮಗನ ಸ್ಥಿತಿ ತಿಳಿಯಲು ತಂದೆ ವಿಜಯ್ ಕುಮಾರ್ ಜುಲೈ 12ರಂದು ಕಾಂಬೋಡಿಯಾಕ್ಕೆ ತೆರಳಿದ್ದರು. ಎರಡು ದಿನಗಳ ಬಳಿಕ ಸಿಹಾನೌಕ್ವಿಲ್ಲೆ ಜೈಲಿನಲ್ಲಿ ಮಗನನ್ನು ಭೇಟಿಯಾಗಿದ್ದರು.

ವರದಿಯ ಪ್ರಕಾರ, ಪ್ರದೀಪ್‌ಗೆ ದಿನಕ್ಕೆ ಎರಡು ಬಾರಿ ಕೇವಲ ಒಂದು ಕಪ್ ಅನ್ನ ಮತ್ತು ಕುಂಬಳಕಾಯಿ ರಸ ನೀಡಲಾಗುತ್ತಿತ್ತು. ಅಲ್ಲದೆ, ಆತನಿಗೆ 18 ಬಾರಿ ಇಂಜೆಕ್ಷನ್ ನೀಡಲಾಗಿತ್ತು ಎನ್ನಲಾಗಿದೆ. ಮಗನನ್ನು ಭೇಟಿಯಾದ ಬಳಿಕ ತಂದೆಗೆ ಆತನೊಂದಿಗೆ ಮತ್ತೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ.

ಕುಟುಂಬದವರು ಭಾರತೀಯ ರಾಯಭಾರ ಕಚೇರಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೆರವು ಕೋರಿದ್ದಾರೆ. ಪ್ರದೀಪ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣ ಇತ್ಯರ್ಥವಾದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ರಾಯಭಾರ ಕಚೇರಿ ತಿಳಿಸಿದೆ ಎನ್ನಲಾಗಿದೆ.

ಪ್ರದೀಪ್ ಜೊತೆ ಕೆಲಸ ಮಾಡಿದ್ದ ಗೋರಖ್‌ಪುರದ ಸಾರ್ಥಕ್ ಎಂಬಾತ, ಸಿಹಾನೌಕ್ವಿಲ್ಲೆಯಲ್ಲಿ ಸುಮಾರು ಆರು ವಾರಗಳ ಕಾಲ ಇಬ್ಬರೂ ಕೆಲಸ ಮಾಡಿದ್ದಾಗಿ ತಿಳಿಸಿದ್ದಾರೆ. ಬಳಿಕ ಅವರನ್ನು ಬೇರೆ ಬೇರೆ ಕಂಪನಿಗಳಿಗೆ ವರ್ಗಾಯಿಸಲಾಗಿತ್ತು. ಪ್ರದೀಪ್‌ಗೆ ಎರಡು ತಿಂಗಳ ಸಂಬಳವನ್ನೂ ಉದ್ಯೋಗದಾತರು ನೀಡಿರಲಿಲ್ಲ. ಈ ಬಗ್ಗೆ ಕಾರ್ಮಿಕರು ಪ್ರಶ್ನಿಸಿದಾಗ ಹೋಟೆಲ್‌ನಲ್ಲಿ ಕೂಡಿಹಾಕಲಾಗಿತ್ತು ಎಂದು ಆರೋಪಿಸಲಾಗಿದೆ.

ಇದೇ ರೀತಿ ಕೇರಳದ ತಿರುವನಂತಪುರಂ ಜಿಲ್ಲೆಯ ಅಂಜುತೇಂಗು ಮೂಲದ ಐವರು ಕೂಡ ಕಾಂಬೋಡಿಯಾ ಜೈಲಿನಲ್ಲಿದ್ದಾರೆ ಎನ್ನಲಾಗಿದೆ. ಇವರಲ್ಲಿ ದಂಪತಿಯೂ ಸೇರಿದ್ದಾರೆ. ಕೆಲವರು ಉದ್ಯೋಗದ ನಿರೀಕ್ಷೆಯಲ್ಲಿ ಬ್ಯಾಂಕಾಕ್ ಅಥವಾ ವಿಯೆಟ್ನಾಂಗೆ ತೆರಳಿದ್ದರೆ, ಏಜೆಂಟರು ಅವರನ್ನು ಕಾಂಬೋಡಿಯಾಕ್ಕೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

ಕೇರಳ, ತಮಿಳುನಾಡು, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಹಲವು ಭಾರತೀಯರು ಈ ಜಾಲಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಆದರೆ ಪ್ರಸ್ತುತ ಕಾಂಬೋಡಿಯಾ ಜೈಲಿನಲ್ಲಿ ಎಷ್ಟು ಭಾರತೀಯರಿದ್ದಾರೆ ಎಂಬ ಬಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಕಾಂಬೋಡಿಯಾ ಗೃಹ ಸಚಿವಾಲಯದ ಮಾಹಿತಿಯ ಪ್ರಕಾರ, 2023ರ ಸೆಪ್ಟೆಂಬರ್‌ನಿಂದ 2026ರ ಸೆಪ್ಟೆಂಬರ್ 13ರವರೆಗೆ 1,921 ಭಾರತೀಯರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ. ಇವರಲ್ಲಿ 575 ಮಂದಿ ಕಾಂಬೋಡಿಯಾ, ಅಮೆರಿಕ ಮತ್ತು ಭಾರತದಲ್ಲಿನ ಜನರನ್ನು ಗುರಿಯಾಗಿಸಿಕೊಂಡು ವಂಚನೆ ನಡೆಸುತ್ತಿದ್ದ ಕಂಪನಿಗಳೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ಕೆಲವು ವಂಚಕ ಕಂಪನಿಗಳು ಪುರುಷರಿಗೆ ತಿಂಗಳಿಗೆ ಸುಮಾರು 1,000 ಡಾಲರ್ (ಅಂದಾಜು 95 ಸಾವಿರ ರೂ.) ಹಾಗೂ ಮಹಿಳೆಯರಿಗೆ 2,500ರಿಂದ 4,000 ಡಾಲರ್ (ಅಂದಾಜು 2.37 ಲಕ್ಷದಿಂದ 3.8 ಲಕ್ಷ ರೂ.) ಸಂಬಳದ ಆಮಿಷವೊಡ್ಡುತ್ತವೆ. ದೊಡ್ಡ ಪ್ರಮಾಣದ ಆನ್‌ಲೈನ್ ವಂಚನೆ ನಡೆಸಿದರೆ ಹೆಚ್ಚುವರಿ ಹಣ ನೀಡುವುದಾಗಿಯೂ ಭರವಸೆ ನೀಡುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಕಡಲು ದಾಟಿದ ಅಸ್ಪೃಶ್ಯತೆ: ವಿದೇಶಿ ವಿವಿಗಳಲ್ಲಿಯೂ ದಲಿತ ವಿದ್ಯಾರ್ಥಿಗಳಿಗೆ ಬಿಡದ ಜಾತಿ ತಾರತಮ್ಯ

2022ರಿಂದ 2025ರವರೆಗೆ ಕಾಂಬೋಡಿಯಾ, ಲಾವೋಸ್ ಮತ್ತು ಮ್ಯಾನ್ಮಾರ್‌ನಿಂದ ಒಟ್ಟು 6,998 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ ಎಂದು ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ರಾಜ್ಯಸಭೆಗೆ ಮಾಹಿತಿ ನೀಡಿತ್ತು. ಈ ಪೈಕಿ ಕಾಂಬೋಡಿಯಾದಿಂದ 2,533, ಲಾವೋಸ್‌ನಿಂದ 2,297 ಹಾಗೂ ಮ್ಯಾನ್ಮಾರ್‌ನಿಂದ 2,168 ಭಾರತೀಯರನ್ನು ವಾಪಸ್ ಕರೆತರಲಾಗಿದೆ.

ಉತ್ತಮ ಉದ್ಯೋಗ ಮತ್ತು ಹೆಚ್ಚಿನ ಸಂಬಳದ ಕನಸು ಹೊತ್ತು ವಿದೇಶಕ್ಕೆ ತೆರಳುವ ಯುವಕರು ವಂಚಕ ಉದ್ಯೋಗ ಏಜೆಂಟರ ಜಾಲಕ್ಕೆ ಸಿಲುಕುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ SIR | ಅಂತಿಮ ಮತಪಟ್ಟಿಯಲ್ಲಿ ಭಾರೀ ಎಡವಟ್ಟು; ‘Husband Husband’, ‘XXX’, ‘????’ಗಳೇ ಮತದಾರರ ಹೆಸರುಗಳು!

ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸುತ್ತೇವೆಂದು ಚುನಾವಣಾ ಆಯೋಗ/ಗ್ಯಾನೇಶ್‌ ಕುಮಾರ್ ಏಕಪಕ್ಷೀಯವಾಗಿ ದೇಶದ ಮೇಲೆ...

ಸ್ಥಳೀಯ ಸಂಸ್ಥೆ ಚುನಾವಣೆಗೆ ಹಳೆಯ ಮತದಾರರ ಪಟ್ಟಿ ಪರಿಗಣನೆ ಸಾಧ್ಯತೆ: ಈಶ್ವರ್ ಖಂಡ್ರೆ

ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ ಚುನಾವಣೆಗಳನ್ನು ಹೊಸ ಎಸ್‌ಐಆರ್‌ (SIR)...

ಕುತ್ತಿಗೆಗೆ ಚಾಕು ಹಿಡಿದು ರಸ್ತೆಯಲ್ಲಿ ಎಳೆದಾಡಿದ; ಚಿನ್ನದ ಸರಕ್ಕಾಗಿ ಫೆವಿಕ್ವಿಕ್‌ನಿಂದ ಕೈ ಅಂಟಿಸಿದ ಕಿರಾತಕ!

ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ಚಿನ್ನದ ಸರ ಕಳವು ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬ...