ಈ ದಿನ ಸಂಪಾದಕೀಯ | ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ಬಗೆಹರಿಸಲಿ; ಆಗದಿದ್ದರೆ, ಅಧಿಕಾರ ಬಿಟ್ಟು ತೊಲಗಲಿ

Date:

ರೈತರನ್ನು ಎದುರು ಹಾಕಿಕೊಂಡ ಸರ್ಕಾರಗಳು ಉಳಿದ ಉದಾಹರಣೆಗಳಿಲ್ಲ. 1980ರಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿದ ಗುಂಡೂರಾಯರ ಸರ್ಕಾರ ಪತನವಾಗಿತ್ತು. 2020-21ರಲ್ಲಿ ಮೂರು ಕರಾಳ ಕಾಯ್ದೆಗಳನ್ನು ಜಾರಿಗೆ ತಂದಿದ್ದ ಮೋದಿಯವರ ಸರ್ಕಾರ, ರೈತರ ಪ್ರತಿಭಟನೆಯ ನಂತರ ಕಾಯ್ದೆಗಳನ್ನು ವಾಪಸ್ ಪಡೆದಿತ್ತು. ಅಧಿಕಾರಸ್ಥರಿಗೆ ಇತಿಹಾಸದ ಅರಿವಿದ್ದರೆ, ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ಬಗೆಹರಿಸಲಿ. ಆಗದಿದ್ದರೆ, ಅಧಿಕಾರ ಬಿಟ್ಟು ತೊಲಗಲಿ.

‘ಕಬ್ಬು ಬೆಳೆ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸಬೇಕು. ಅದನ್ನು ಬಿಟ್ಟು ಕೇಂದ್ರ ಸರ್ಕಾರದ ಕಡೆ ಬೆರಳು ತೋರುವುದನ್ನು ನಿಲ್ಲಿಸಬೇಕು’ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ ಮೊನ್ನೆ ಬೆಂಗಳೂರಿನಲ್ಲಿ ಹೇಳಿದ್ದಾರೆ.

- Advertisement -

ಅಸಲಿಗೆ ಕಬ್ಬಿನ ಕನಿಷ್ಠ ನ್ಯಾಯಸಮ್ಮತ ಬೆಲೆ(FRP) ನಿಗದಿಪಡಿಸುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ಅಷ್ಟೇ ಅಲ್ಲ, ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆ(MSP) ನಿಗದಿ ಮಾಡುವುದು ಕೂಡ ಕೇಂದ್ರ ಸರ್ಕಾರವೇ. ಕಬ್ಬು ಬೆಳೆಗಾರರು ಕೇಳುತ್ತಿರುವುದು ಎಫ್ಆರ್‍‌ಪಿ ಮತ್ತು ಎಂಎಸ್‌ಪಿ ನಿಗದಿ ಮಾಡಿ ಎಂದು. ಕೇಂದ್ರ ಸರ್ಕಾರ ಇವೆರಡನ್ನು ಹೆಚ್ಚಿಸಿದರೆ, ಆಗ ರೈತರು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ರಾಜ್ಯದ ಸಲಹಾ ಬೆಲೆ(SAP) ಕೇಳುತ್ತಾರೆ, ಪಡೆಯುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಾಲು, ಮೊಸರು, ದಿನಸಿ ದರ ಏರಿಕೆ ಬೆನ್ನಲ್ಲೇ ಬಸ್...

ಹಾಲು, ಮೊಸರು, ದಿನಸಿ ವಸ್ತುಗಳ ದರ ಹೆಚ್ಚಳದ ಹೊರೆಯ ನಡುವೆ, ಬಸ್ ಪ್ರಯಾಣವೂ ದುಬಾರಿಯಾದರೆ ಬದುಕು ಮತ್ತಷ್ಟು ದುಸ್ತರವಾಗಲಿದೆ. ಕರ್ನಾಟಕದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಸಾರ್ವಜನಿಕರಲ್ಲಿ ಅಸಮಾಧಾನದ ಹೊಗೆಯಾಡಿದ್ದು,...

ರಾಮನಿಗೆ ₹150 ಕೋಟಿ, ಸೀತೆಗೆ ₹12 ಕೋಟಿ! ಬಿಗ್...

₹4,000 ಕೋಟಿಯ ಬೃಹತ್ ಬಜೆಟ್‌ನ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರರಂಗದ ಅದೇ ಹಳೆ ಹಣೆಬರಹವೊಂದು ಚರ್ಚೆಗೆ ಸಿಕ್ಕಿದೆ. ರಾಮನ ಪಾತ್ರಕ್ಕೆ ₹150 ಕೋಟಿ, ರಾವಣನಿಗೆ ₹100 ಕೋಟಿ ಸಂಭಾವನೆ!...

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

ಕೇಂದ್ರ ಸರ್ಕಾರ ನಿಗದಿ ಮಾಡಿರುವ ಸಕ್ಕರೆ ಕನಿಷ್ಠ ಮಾರಾಟ ಬೆಲೆ- ಕೆಜಿಗೆ ರೂ. 31 ಇದ್ದರೂ, ಕಾರ್ಖಾನೆ ಮಾಲೀಕರು ಕೆಜಿಗೆ 51ರಿಂದ 61ರವರೆಗೂ ಮಾರಿಕೊಳ್ಳುತ್ತಾರೆ. ಜೊತೆಗೆ ಕಬ್ಬಿನ ಉಪಉತ್ಪನ್ನಗಳಾದ ಮೊಲಾಸಿಸ್, ಎಥೆನಾಲ್, ಬೆಗಾಸ್‌ನಿಂದ ಉತ್ಪಾದಿಸುವ ವಿದ್ಯುತ್ ಮತ್ತು ಸಾವಯವ ಗೊಬ್ಬರದಿಂದಲೂ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಲಾಭವಿದೆ. ಸಕ್ಕರೆ ಮತ್ತು ಉಪಉತ್ಪನ್ನಗಳಿಂದ ಕೇಂದ್ರ – ರಾಜ್ಯ ಸರ್ಕಾರಗಳಿಗೆ ಸರಕು ಮತ್ತು ಸೇವಾ ತೆರಿಗೆ(GST) ರೂಪದಲ್ಲಿ ವರ್ಷಕ್ಕೆ ಸಾವಿರಾರು ಕೋಟಿ ರೂ.ಗಳ ಆದಾಯವಿದೆ.  

ಇದು ಅನಕ್ಷರಸ್ಥ ರೈತನಿಗೂ ಗೊತ್ತಿರುವ ಕಬ್ಬಿನ ಲೆಕ್ಕಾಚಾರ ಮತ್ತು ಸತ್ಯ. ಇದು ಜವಾಬ್ದಾರಿಯುತ ಕೇಂದ್ರ ಸಚಿವರಿಗೆ ಗೊತ್ತಿಲ್ಲವೇ? ಗೊತ್ತಿದ್ದೂ ಇದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಎಷ್ಟು ಸಲ ಸುಳ್ಳು ಹೇಳಬಹುದು? ಮಡಿಲ ಮಾಧ್ಯಮಗಳು ಸಚಿವರನ್ನು ಎಷ್ಟು ಬಾರಿ ಬಚಾವು ಮಾಡಬಹುದು? ಇದನ್ನು ರೈತರು ಪ್ರತಿವರ್ಷ ಕೇಳುತ್ತಲೇ ಇರಬೇಕಾ?

ಇದನ್ನು ಓದಿದ್ದೀರಾ?: ಕಬ್ಬು ಬೆಳೆಗಾರರ ಬೇಡಿಕೆ ಬಗೆಹರಿಸಲಾಗದ ಬಿಕ್ಕಟ್ಟೇ?

ಪ್ರಲ್ಹಾದ್ ಜೋಶಿಯವರು ಮೂಲತಃ ಪೇಶ್ವೆ ವಂಶಸ್ಥರು. ಅವರು ಪ್ರತಿನಿಧಿಸುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ- ಅಂದರೆ ಶೇ. 40ರಷ್ಟು ಲಿಂಗಾಯತರಿದ್ದಾರೆ, ಶೇ. 34ರಷ್ಟು ಹಿಂದುಳಿದ ವರ್ಗದವರಿದ್ದಾರೆ, ಶೇ. 17ರಷ್ಟು ಮುಸ್ಲಿಮರಿದ್ದಾರೆ. ಜೋಶಿಯವರು ಪ್ರತಿನಿಧಿಸುವ ಬ್ರಾಹ್ಮಣರ ಸಂಖ್ಯೆ ಇಲ್ಲಿ ಬೆರಳೆಣಿಕೆಯಷ್ಟು- ಕೇವಲ ಶೇ. 2.5ರಷ್ಟು. ಪರಿಸ್ಥಿತಿ ಹೀಗಿದ್ದರೂ, ಇಲ್ಲಿಯ ಜನ ‘ಇವ ನಮ್ಮವ’ನೆಂದು ಪ್ರಲ್ಹಾದ್ ಜೋಶಿಯವರನ್ನು 2004ರಿಂದ 2024ರವರೆಗೆ- ಸತತವಾಗಿ 5 ಬಾರಿ ಗೆಲ್ಲಿಸಿದ್ದಾರೆ. 5 ಬಾರಿ ಗೆಲ್ಲಿಸಿ ‘ಹಿರಿಯ ಸಂಸದ’ನ ಸ್ಥಾನಕ್ಕೇರುವಂತೆ ನೋಡಿಕೊಂಡಿದ್ದಾರೆ. ಆ ಹಿರಿತನದ ಬಲದಿಂದ ಅವರು ಕೇಂದ್ರದಲ್ಲಿ ಮಹತ್ವದ ಮೂರು ಖಾತೆಗಳಿಗೆ ಮಂತ್ರಿಗಳಾಗಿದ್ದಾರೆ.

ಇಂದು ಕೇಂದ್ರದಲ್ಲಿ ಮಹತ್ವದ ಖಾತೆಗಳನ್ನು ಹೊಂದುವ, ಪ್ರಧಾನಿ ಮೋದಿಯವರೊಂದಿಗೆ ಸರಿಸಮನಾಗಿ ಕೂರುವ ಅಪೂರ್ವ ಅವಕಾಶ ಕಲ್ಪಿಸಿಕೊಟ್ಟಿರುವ ಉತ್ತರ ಕರ್ನಾಟಕದ ಜನರಿಗಾಗಿ- ಅನ್ನದಾತರಿಗಾಗಿ- ಅಧಿಕಾರವನ್ನು ಪಣಕ್ಕಿಟ್ಟು ಹೋರಾಡಬೇಕಾದ ಪ್ರಲ್ಹಾದ್ ಜೋಶಿಯವರು, ರಾಜ್ಯ ಸರ್ಕಾರವನ್ನು ದೂರುತ್ತ, ಕೇಂದ್ರ ಸರ್ಕಾರ ಸಮಿತಿ ರಚಿಸಿದೆ ಎಂಬ ಸಬೂಬು ಹೇಳುತ್ತ ಕಾಲದೂಡುತ್ತಿದ್ದಾರೆ.

ಅಷ್ಟಕ್ಕೂ ಅವರಾಗಿಯೇ ಮುಂದೆ ಬಂದು ಸಮಿತಿ ರಚಿಸಿದ್ದಲ್ಲ. ಕಳೆದ ಅಕ್ಟೋಬರ್ 10ರಂದು ಕಬ್ಬು ಬೆಳೆಗಾರರು ಪ್ರತಿಭಟನೆಗೆ ಮುಂದಾದಾಗ, 12ರಂದು ರೈತ ಪ್ರತಿನಿಧಿಗಳನ್ನು ನವದೆಹಲಿಗೆ ಕರೆಸಿಕೊಂಡು, ಕಾಟಾಚಾರಕ್ಕೆ ಸಭೆ ನಡೆಸಿ, ಒಂದು ತಿಂಗಳು ಸಮಯ ಕೇಳಿದ್ದರು. ನಾವು ಆರಿಸಿ ಕಳುಹಿಸಿದ ಮಂತ್ರಿಯೇ ನಮಗೆ ಮೋಸ ಮಾಡಿದರು ಎಂದು ಸಿಟ್ಟಾದ ಕಬ್ಬು ಬೆಳೆಗಾರರು ಅಕ್ಟೋಬರ್ 13ರಿಂದ ಪ್ರತಿಭಟನೆಗಿಳಿದರು. ರಸ್ತೆ, ರೈಲು ತಡೆಗೆ ಮುಂದಾಗಿ, ಮಂತ್ರಿಗಳ ಮನೆಗೂ ಮುತ್ತಿಗೆ ಹಾಕಿದರು.

ಆಗ ಎಚ್ಚೆತ್ತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಉನ್ನತ ಮಟ್ಟದ ಸಮಿತಿ- ಕೇಂದ್ರ ಮತ್ತು ರಾಜ್ಯಗಳ ಪ್ರತಿನಿಧಿಗಳು, ರೈತ ಸಂಘಟನೆಗಳು, ಸಕ್ಕರೆ ಕಾರ್ಖಾನೆಗಳು ಹಾಗೂ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಜಂಟಿ ಸಮಿತಿ ರಚಿಸುವುದಾಗಿ ಘೋಷಿಸಿದರು. ಉನ್ನತ ಮಟ್ಟದ ಜಂಟಿ ಸಮಿತಿ ರಚನೆ ಘೋಷಣೆ ಬೆಲೆ ಹೆಚ್ಚಳಕ್ಕೆ ಪರಿಹಾರವಲ್ಲ. ಕೃಷಿಕರ ಕಷ್ಟಗಳು ನೀಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಸಮಿತಿಯು ಯಾವಾಗ ವರದಿ ನೀಡುತ್ತದೆ, ಅದರ ಶಿಫಾರಸುಗಳನ್ನು ಸರ್ಕಾರ ಯಾವಾಗ ಒಪ್ಪಿಕೊಳ್ಳುತ್ತದೆ ಮತ್ತು ರೈತರಿಗೆ ಯಾವಾಗ ಬೆಂಬಲ ಬೆಲೆ ಸಿಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ.

ಸರ್ಕಾರಗಳು ಕಾಲಕಾಲಕ್ಕೆ ರೈತರ ಹೋರಾಟವನ್ನು ಹತ್ತಿಕ್ಕಲು, ಆಕ್ರೋಶವನ್ನು ತಣಿಸಲು ಸಮಿತಿ ರಚನೆಯಂತಹ ವಂಚನೆಯ ಮಾರ್ಗಗಳನ್ನು ಅಸ್ತ್ರಗಳನ್ನಾಗಿಸಿಕೊಳ್ಳುತ್ತವೆ. ಸಮಿತಿ ಸಭೆ, ಮಾತುಕತೆಗಳ ಮರೆಯಲ್ಲಿ ದಿನದೂಡುವುದು, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದು ಕಾಲದಿಂದ ನಡೆದೇ ಇದೆ. ಇಂತಹ ಮರೆಮೋಸಗಳಿಗೆ ರೈತರು ಬಲಿಯಾಗುತ್ತಿರುವುದೂ ಇದೆ. ಇದಲ್ಲದೆ, ಸಕ್ಕರೆ ಆಮದು ಮತ್ತು ರಫ್ತು ನೀತಿಯಲ್ಲಿಯೂ ಕೇಂದ್ರ ಸರ್ಕಾರ, ವ್ಯಾಪಾರಸ್ಥರ ಮತ್ತು ಕಾರ್ಖಾನೆ ಮಾಲೀಕರ ಪರವಾಗಿದೆ. ರೈತರ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿದೆ.

ಇದೆಲ್ಲ ಗೊತ್ತಿದ್ದರೂ ಕಬ್ಬು ಬೆಳೆಗಾರರು, ಹೆಚ್ಚಿನ ಬೆಲೆಗೆ ಸಕ್ಕರೆ ಮಾರಾಟ ಮತ್ತು ಉಪಉತ್ಪನ್ನಗಳಿಂದ ಬರುವ ಲಾಭಾಂಶವನ್ನೇನೂ ಅವರು ಕೇಳುತ್ತಿಲ್ಲ. ಟನ್ ಕಬ್ಬಿಗೆ 3,300ರಿಂದ 3,500ವರೆಗಿರುವ ಈಗಿನ ಬೆಲೆಯನ್ನು 5,500 ರೂ.ಗೆ ಏರಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರತಿನಿಧಿಗಳೊಂದಿಗೆ ಕೃಷಿ ಕಷ್ಟಗಳನ್ನು ಬಿಡಿಸಿಟ್ಟು ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರದ ಸ್ಥಾನದಲ್ಲಿ ಕೂತವರು, ಕಾಯ್ದೆ-ಕಾನೂನು ಮಾಡುವವರು ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ಬದಲು, ಪರಸ್ಪರ ದೂರುವುದರಲ್ಲಿ ನಿರತರಾಗಿದ್ದಾರೆ, ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಕಟಾವಿಗೆ ಬಂದ ನೂರಾರು ಎಕರೆಯ ಕಬ್ಬು ಗದ್ದೆಯಲ್ಲಿ ಒಣಗುತ್ತಿದೆ. ಕಬ್ಬು ಒಣಗಿದರೆ ಇಳುವರಿ ಕಡಿಮೆಯಾಗುತ್ತದೆ. ಇಳುವರಿ ಕಡಿಮೆಯಾದರೆ ಕಾರ್ಖಾನೆ ತಿರಸ್ಕರಿಸುತ್ತದೆ, ಇಲ್ಲವೇ ಕಿಲುಬು ಕಾಸಿಗೆ ಕೇಳುತ್ತದೆ. ಕೆಲವು ಕಡೆ ಬೆಂಕಿಗೆ ಆಹುತಿಯಾಗಿ ಕಣ್ಣೆದುರೇ ಬೆಳೆ ಬೂದಿಯಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಾಗಿದೆ. ಸಾಲದ ಕುಣಿಕೆಗೆ ಕೊರಳೊಡ್ಡುವಂತಾಗಿದೆ.

ಇದನ್ನು ಓದಿದ್ದೀರಾ?: ರಾಮಲೀಲಾ ಪ್ರತಿಭಟನೆ ಐತಿಹಾಸಿಕ; ಪ್ರಚಂಡ ಜನಶಕ್ತಿಯಿಂದ ಮಾತ್ರವೇ ಸರ್ವಾಧಿಕಾರಿ ಶಕ್ತಿಗಳ ಧೂಳೀಪಟ ಸಾಧ್ಯ

ಇದು ಸಹಜವಾಗಿಯೇ ಕಬ್ಬು ಬೆಳೆಗಾರರ ಸಹನೆಯ ಕಟ್ಟೆಯೊಡೆಯಲು ಕಾರಣವಾಗಿದೆ. ಮಾತುಕತೆ ಮುರಿದುಬಿದ್ದದ್ದರಿಂದ ರೈತ ನಾಯಕರು ಮತ್ತೆ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಹೆಂಗಸರು, ಮಕ್ಕಳು ಆದಿಯಾಗಿ ಎಲ್ಲರೂ ಮನೆ-ಮಠ ಬಿಟ್ಟು ಗುರ್ಲಾಪೂರ ಕ್ರಾಸ್ ಬಳಿ ಬೀಡುಬಿಟ್ಟಿದ್ದಾರೆ. ಹಿಂದಿನ ವರ್ಷವೂ ರೈತರು ಇದೇ ರೀತಿ ಗುರ್ಲಾಪೂರ ಕ್ರಾಸ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವರ್ಷವೂ ನ್ಯಾಯಯುತ ಬೆಲೆಗಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಪ್ರತಿ ಟನ್‌ ಕಬ್ಬಿಗೆ 5,500 ದರ ನೀಡಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಇದೀಗ ಹೊಸ ರೂಪ ಪಡೆದುಕೊಂಡಿದೆ. ಖೈದಿ ನಂಬರ್ 5500 ಬಟ್ಟೆ ಧರಿಸಿ, ರೈತರು ಜೈಲ್ ಭರೋ ಪಾದಯಾತ್ರೆಗೂ ಮುಂದಾಗಿದ್ದಾರೆ.

ರೈತರನ್ನು ಎದುರು ಹಾಕಿಕೊಂಡ ಸರ್ಕಾರಗಳು ಉಳಿದ ಉದಾಹರಣೆಗಳಿಲ್ಲ. 1980ರಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿದ ಗುಂಡೂರಾಯರ ಸರ್ಕಾರ ಪತನವಾಗಿತ್ತು. 2020-21ರಲ್ಲಿ ಮೂರು ಕರಾಳ ಕಾಯ್ದೆಗಳನ್ನು ಜಾರಿಗೆ ತಂದಿದ್ದ ಮೋದಿಯವರ ಸರ್ಕಾರ, ರೈತರ ಪ್ರತಿಭಟನೆಯ ನಂತರ ಕಾಯ್ದೆಗಳನ್ನು ವಾಪಸ್ ಪಡೆದಿತ್ತು. ಅಧಿಕಾರಸ್ಥರಿಗೆ ಇತಿಹಾಸದ ಅರಿವಿದ್ದರೆ, ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ಬಗೆಹರಿಸಲಿ. ಆಗದಿದ್ದರೆ, ಅಧಿಕಾರ ಬಿಟ್ಟು ತೊಲಗಲಿ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದ ಮೊದಲ ಮುಸ್ಲಿಂ ಸೆನೇಟರ್ ಆಗಲಿದ್ದಾರೆಯೇ ಡಾ ಅಬ್ದುಲ್ ಎಲ್-ಸಯದ್?

ಅಮೆರಿಕದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಕುತೂಹಲ ಮೂಡಿಸಿರುವ ಮಿಷಿಗನ್ ರಾಜ್ಯದ ಸೆನೇಟ್...

ಬಾಗಲಕೋಟೆ | ಕಬ್ಬು ಬೆಲೆಗಾಗಿ ರೈತರ ಹೋರಾಟ; ಕಟಾವಿಗೆ ಹೊರರಾಜ್ಯದ 70 ಸಾವಿರ ಕಾರ್ಮಿಕರ ಆಗಮನ!

ಒಂದೆಡೆ ಕಬ್ಬಿಗೆ ನ್ಯಾಯಯುತ ಬೆಲೆ ದೊರಕಬೇಕೆಂದು ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ,...

ಕರ್ನಾಟಕ SIR | ಅಂತಿಮ ಮತಪಟ್ಟಿಯಲ್ಲಿ ಭಾರೀ ಎಡವಟ್ಟು; ‘Husband Husband’, ‘XXX’, ‘????’ಗಳೇ ಮತದಾರರ ಹೆಸರುಗಳು!

ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸುತ್ತೇವೆಂದು ಚುನಾವಣಾ ಆಯೋಗ/ಗ್ಯಾನೇಶ್‌ ಕುಮಾರ್ ಏಕಪಕ್ಷೀಯವಾಗಿ ದೇಶದ ಮೇಲೆ...