ತುಳುನಾಡಿನ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ “ಕರಾವಳಿಯ ರಕ್ತ ಕಣ್ಣೀರು”

Date:

ಕೋಮುದ್ವೇಷದಿಂದ ನಲುಗಿದ ಕರಾವಳಿಯಲ್ಲಿ ಜೀವ ಕಳೆದುಕೊಂಡ ಅಮಾಯಕ ಯುವಕರ ಕುಟುಂಬಗಳ ಆಕ್ರಂದನವನ್ನು ಅಕ್ಷರ ರೂಪಕ್ಕಿಳಿಸಿದ ಯುವ ಪತ್ರಕರ್ತರಾದ ಇರ್ಷಾದ್ ಉಪ್ಪಿನಂಗಡಿಯವರ ಕಾರ್ಯವನ್ನು ಖಂಡಿತಕ್ಕೂ ಮೆಚ್ಚಲೇಬೇಕು

- Advertisement -

ಸ್ವಾತಂತ್ರ್ಯ ಪೂರ್ವದಿಂದಲೇ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸೌಹಾರ್ದತೆಗೆ ಕೊಳ್ಳಿ ಇಟ್ಟಿದ್ದೇ ಇಲ್ಲಿನ‌ ಸಂಘಪರಿವಾರ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ 3 – 4 ದಶಕಗಳಿಂದ ತನ್ನ ರಾಜಕೀಯ ಬೇಳೆ ಬೇಯಿಸಲು ಕೋಮುವಾದದ ಅಸ್ತ್ರವನ್ನು ಉಪಯೋಗಿಸಿ ಅಮಾಯಕ ಯುವಕರ ಜೀವವನ್ನು ಬಲಿ ತೆಗೆದುಕೊಂಡು ತಾನು ಮಾತ್ರ ರಾಜಕೀಯದ ಮೆಟ್ಟಿಲನ್ನು ಹಂತ ಹಂತವಾಗಿ ಮೇಲೇರಿ ಕೋಟ್ಯಾಂತರ ರೂಪಾಯಿ ಹಣವನ್ನು ದೋಚಿದ ಬಿಜೆಪಿ ಸಂಘಪರಿವಾರದ ನಾಯಕರ ಕಥೆ ಯಾರಿಗೇನು ಗೊತ್ತಿಲ್ಲ. ದೀರ್ಘಕಾಲ ಇಂತಹ ವಿಷಜಂತುಗಳು ಹಬ್ಬಿಸಿದ ಕೋಮು ದ್ವೇಷದಿಂದ ಕರಾವಳಿ ಜನತೆಯ ಬದುಕನ್ನೇ ನಾಶ ಮಾಡಿದ್ದಾರೆ. ಇಲ್ಲಿ ಅಭಿವೃದ್ಧಿಯಂತೂ ಕನಸಿನ ಮಾತಾಗಿದೆ. ಒಂದು ಕಾಲದಲ್ಲಿ ಮಂಗಳೂರಿನ ಜನತೆಯನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದ ಹೊರಗಿನ ಜನರು ಇಂದು ಮಂಗಳೂರಿಗರು ಅಂದರೆ ಮಾರುದ್ದ ಓಡುವ ಪ್ರಸಂಗ ಬಂದಿದೆ. ಅಷ್ಟರ ಮಟ್ಟಿಗೆ ಕರಾವಳಿಯ ಅಭಿವೃದ್ಧಿ ಹಾಗೂ ಸೌಹಾರ್ದತೆಯನ್ನು ನಾಶಪಡಿಸಿ, ಇಂದು ಹಿಂದುತ್ವದ ಭದ್ರಕೋಟೆ ಎಂದು ಜಪ ಮಾಡಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಶಾಸ್ತ್ರೀಯ ಪರಂಪರೆಗೆ ಸಮಕಾಲೀನ...

ಈ ಬಾರಿಯ ಸಾಹಿತ್ಯದ ನೊಬೆಲ್‌ ಪುರಸ್ಕಾರ ಕೆನಡಾದ ಆನ್‌ ಕಾರ್ಸನ್‌ ಅವರ ಮುಡಿಗೇರಿದೆ. ಇವರು ಕವಯತ್ರಿ, ಪ್ರಬಂಧಗಾರ್ತಿ ಹಾಗೂ ಅನುವಾದಕಿ. ಕ್ಲಾಸಿಕಲ್‌ ಗ್ರೀಕ್‌ ಸಾಹಿತ್ಯದ ಪ್ರೇಮಿಯಾದ ಕಾರ್‌ಸನ್‌ ಶಾಸ್ತ್ರೀಯ ಮಾದರಿಯನ್ನು ಸಮಕಾಲೀನ ಸಂದರ್ಭಗಳಲ್ಲಿ...

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...
1009713091

ಕೋಮುದ್ವೇಷಕ್ಕೆ ವಿನಾಃ ಕಾರಣ ಬಲಿಯಾದ ಜೀವಗಳೆಷ್ಟು?ಎಲ್ಲೋ ಒಂದು ಕಡೆ ಅಮಾಯಕ ಯುವಕನ ಕೊಲೆ ನಡೆದರೆ, ಅದಕ್ಕೆ ಪ್ರತಿಯಾಗಿ ಮುಯ್ಯಿಗೆ ಮುಯ್ಯಿ, ತಲೆಗೊಂದು ತಲೆ ಎನ್ನುವ ಎರಡೂ ಕಡೆಯ ಕೋಮುವಾದಿಗಳು ಸೃಷ್ಟಿಸಿರುವ ಫಾರ್ಮುಲಾಕ್ಕೆ ಮತ್ತೊಂದು ಕಡೆ ತನಗೆ ಸಂಬಂಧವೇ ಇಲ್ಲದ ಜನಗಳು ಬಂದು ಮತ್ತೊಬ್ಬ ಅಮಾಯಕ ಯುವಕನನ್ನು ಕೊಲೆ ಮಾಡುವುದೆಂದರೆ ಎಂತಹ ವಿಕೃತ ಮನೋಸ್ಥಿತಿಯಿದು ? ಮೊದಲು ಜೀವ ಕಳೆದುಕೊಂಡ ಯುವಕನಿಗೂ ನಂತರದ ಜೀವವನ್ನು ಬಲಿ ತೆಗೆದುಕೊಳ್ಳಲು ಹೋಗುವ ಯುವಕರಿಗೂ ಸಂಬಂಧವೇ ಇಲ್ಲ ಅದೇ ರೀತಿ ಮೊದಲ ಯುವಕನನ್ನು ಕೊಲೆ ನಡೆಸಲು ಹೋಗುವ ಯುವಕರಿಗೂ ನಂತರ ಜೀವ ಕಳೆದುಕೊಳ್ಳುವ ಯುವಕನಿಗೂ ಸಂಬಂಧವೇ ಇಲ್ಲ. ಜೀವ ಕಳೆದುಕೊಂಡ ಯುವಕನ ಮನೆಯಲ್ಲಿ ದುಖಃ ಮಡುಗಟ್ಟಿದರೆ, ಇತ್ತ ಅದೇ ಯುವಕನ ಶವವನ್ನು ಮೆರವಣಿಗೆ ನಡೆಸಿ ಅದರಲ್ಲೂ ರಾಜಕೀಯ ದುರ್ಲಾಭ ನಡೆಸುವ ನೀಚರು ರಾಜಕೀಯದಲ್ಲಿ ಮೆರೆಯುತ್ತಿರುವುದು ಕರಾವಳಿ ಜಿಲ್ಲೆಯ ದುರಂತ.

ಅತ್ಯಲ್ಪ ಕಾಲದಲ್ಲಿ ಅದೆಷ್ಟೋ ಜೀವಗಳನ್ನು ಕಳೆದುಕೊಂಡ ಕರಾವಳಿಯಲ್ಲಿ ದಿನಾ ಸಾಯುವವರಿಗೆ ಅಳುವವರು ಯಾರು ಎಂಬಂತಾಗಿದೆ. ಪುಸ್ತಕದಲ್ಲಿರುವ ಎಲ್ಲಾ ಘಟನೆಗಳು ಆ ಸಂದರ್ಭದಲ್ಲಿ ಮಾಧ್ಯಮದಲ್ಲಿ ಸುದ್ದಿಯಾಗಿದ್ದು ಬಿಟ್ಟರೆ ನಂತರದಲ್ಲಿ ಯಾರೂ ಅವರ ಬಗ್ಗೆ ಚಿಂತಿಸಿಲ್ಲ. ಆದರೆ ಇರ್ಷಾದ್ ರವರು ಈ ರೀತಿ ಜೀವ ಕಳೆದುಕೊಂಡ ಪ್ರತಿಯೊಂದು ಕುಟುಂಬ ಸದಸ್ಯರನ್ನು ಭೇಟಿಯಾಗಿ ಅವರ ಮನದಾಳದ ದುಖಃ ದುಮ್ಮಾನಗಳನ್ನು ನೋವುಗಳನ್ನು ದಾಖಲಿಸಿ ಕರಾವಳಿಯ ಲಕ್ಷಾಂತರ ಜನತೆಯ ಮುಂದಿಟ್ಟಿದ್ದಾರೆ. ಪ್ರತಿಯೊಂದು ಘಟನೆಗಳನ್ನು ಕಣ್ಷಿಗೆ ಕಟ್ಟುವಂತೆ ವಿವರಿಸಿದ್ದಾರೆ. ಓದಿ ಮುಗಿಸುವಷ್ಟರಲ್ಲಿ ಕಣ್ಣಂಚಿನಲ್ಲಿ ಕಣ್ಣೀರು ಹರಿಯಿತು.

ಅಂದ ಹಾಗೆ ಈ ಪುಸ್ತಕವನ್ನು ಪ್ರತಿಯೊಬ್ಬರೂ ಓದಲೇಬೇಕು. ಕರಾವಳಿಯ ಲಕ್ಷಾಂತರ ಜನತೆಯ ಹೃದಯ ತಟ್ಟುವಲ್ಲಿ ಈ ಪುಸ್ತಕ ನಾಂದಿ ಹಾಡಬೇಕು.ಕೆಳವರ್ಗದ ಶೂದ್ರ ಯುವಕರ ತಲೆಯಲ್ಲಿ ಕೊಮುದ್ವೇಷದ ಅಮಲು ಇಳಿದು, ಪ್ರೀತಿಯ ಗಾಳಿ ಬೀಸುವಂತಾಗಬೇಕು. ಅಮಾಯಕ ಯುವಕರ ಬಲಿ ನಿಲ್ಲುವಂತಾಗಬೇಕು.

ಸುನಿಲ್ ಕುಮಾರ್ ಬಜಾಲ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮೇವಿನ ಬಿತ್ತನೆ ಬೀಜ ಉಚಿತ ಪೂರೈಕೆ; ರೈತರಿಂದ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ...

ಉಡುಪಿ | ಅ.11ರಿಂದ 21ರವರೆಗೆ ಉಚ್ಚಿಲ ದಸರಾ: ಅ.12ರಂದು ಮಹಿಳಾ ದಸರಾ ಉದ್ಘಾಟಿಸಲಿರುವ ಸಿಎಂ

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವ್ಯವಸ್ಥಾಪನೆಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ...

ಹಾವೇರಿ | ಅಂಚೆ ಇಲಾಖೆಯಲ್ಲಿ ನೇರ ಸಂದರ್ಶನ

ಭಾರತೀಯ ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಲೈಫ್ ಇನ್ಸೂರೆನ್ಸ್ (ಪಿಎಲ್‌ಐ-ಅಂಚೆ ಜೀವವಿಮೆ) ಮತ್ತು...

ಬಸವನ ಬಾಗೇವಾಡಿ | ತಾಲೂಕು ಆಸ್ಪತ್ರೆಯಲ್ಲಿ ಔಷಧ ಕೊರತೆ: ಡಿಎಚ್‌ಒ ಸ್ಪಷ್ಟನೆಗೆ ರೈತ ಸಂಘ ಆಗ್ರಹ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಅಗತ್ಯ...