ಕಟ್ಟಡ ಕಾಮಗಾರಿ ವೇಳೆ ಬರೆ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿಯ ರೆಡ್ ಕ್ರಾಸ್ ಆಫೀಸ್ ಸಮೀಪ ಎಂ ಸಿ ನಾಣಯ್ಯರವರ ಮನೆ ಬಳಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯ ಬರೆ ಕುಸಿತದಿಂದ ಒಟ್ಟು ಐವರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದು, ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಮೃತರು ಬಸವ, ಲಿಂಗಪ್ಪ, ಆನಂದ ಮಣ್ಣಿನಡಿ ಸಿಲುಕಿ ಮೃತಪಟ್ಟವರು. ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯವರಾಗಿದ್ದು, ಒಟ್ಟು 9 ಮಂದಿ ಕಾರ್ಮಿಕರು ಮಡಿಕೇರಿಗೆ ಕೆಲಸ ಅರಸಿ ಬಂದಿದ್ದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಮೀನು, ನಿವೇಶನಗಳ ವ್ಯಾಪಾರ; ಅವೈಜ್ಞಾನಿಕ ಸರ್ಕಾರಿ ಶುಲ್ಕ ಹಿಂಪಡೆಗೆ ಆಗ್ರಹ
ಕಟ್ಟಡ ತಳಪಾಯ ಕೆಲಸ ಮಾಡುತ್ತಿದ್ದವರ ಪೈಕಿ ರಾಜು ಎಂಬಾತನನ್ನು ರಕ್ಷಿಸಿದ್ದು, ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.