ಕೋಲಾರ | ಜಂಟಿ ಸರ್ವೆ ನಕ್ಷೆಗೆ ಸಹಿ ಮಾಡುವಂತೆ ತಹಶಿಲ್ದಾರ್ ಕೊಠಡಿ ಮುಂದೆ ಭೂ ಸಂತ್ರಸ್ತರಿಂದ ಧರಣಿ

Date:

ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ರೈತರ ಜಮೀನುಗಳಿಗೆ ಸಂಬಂಧಿಸಿದ ಜಂಟಿ ಸರ್ವೆ ನಕ್ಷೆಗೆ ತಹಶಿಲ್ದಾರ್ ನಯನಾ ಅವರು ಸಹಿ ಮಾಡುವಂತೆ ಒತ್ತಾಯಿಸಿ ನಗರದ ತಹಸಿಲ್ದಾರ್ ಕೊಠಡಿ ಮುಂದೆ ಶುಕ್ರವಾರ ಭೂಸಂತ್ರಸ್ಥ ಹೋರಾಟ ಸಮಿತಿಯ ಪದಾಧಿಕಾರಿಗಳು ರೈತರೊಂದಿಗೆ ಧರಣಿ ನಡೆಸಿದರು.

- Advertisement -

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಆರ್ ಶ್ರೀನಿವಾಸನ್ ಮಾತನಾಡಿ ಕಂದಾಯ ಇಲಾಖೆಯ ದಾಖಲೆಗಳು ಸರಿಯಾಗಿದ್ದರೂ ನಕಲಿ ದಾಖಲೆಗಳನ್ನು ಹೊಂದಿರುವ ಅರಣ್ಯ ಇಲಾಖೆ ನಿರಂತರವಾಗಿ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಸರ್ಕಾರಿ ದಾಖಲೆಗಳಂತೆ ೧೯೪೧ ಸೆಟಲ್ಮೆಂಟ್ ಪ್ರಕಾರ 409 ಎಕರೆ ಜಮೀನು ಈಗಾಗಲೇ ಕಂದಾಯ ಇಲಾಖೆಯ ಹೆಸರಿನಲ್ಲಿ ಇದ್ದು ಅರಣ್ಯ ಇಲಾಖೆ ನಕಲಿ ದಾಖಲೆಗಳನ್ನು ಇಟ್ಟುಕೊಂಡು ರೈತರ ಜಮೀನನ್ನು ದೌರ್ಜನ್ಯದಿಂದ ನಾಶ ಮಾಡಲಾಗಿದೆ ಇದಕ್ಕೆ ಸಂಬಂಧಿಸಿದಂತೆ ಜಂಟಿ ಸರ್ವೆಯ ನಕ್ಷೆಗೆ ಸಹಿ ಮಾಡುವಂತೆ ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದರು ಸಹಿ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಅರಣ್ಯ ಇಲಾಖೆಯ ದೌರ್ಜನ್ಯ ವಿರುದ್ದ ರೈತರು ನ್ಯಾಯಾಲಯಕ್ಕೆ ಹೋಗಿದ್ದು ಅದರಂತೆ ಜಂಟಿ ಸರ್ವೆ ಮಾಡಲು ಆದೇಶಿಸಿದ್ದಾರೆ, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವ, ಜನಪ್ರತಿನಿಧಿಗಳು ಜಂಟಿ ಸರ್ವೆ ಮಾಡಿ ರೈತರ ಹಿಡುವಳಿ ಜಮೀನುಗಳು ಯಾವುದು ಅರಣ್ಯ ಭೂಮಿ ಯಾವುದು ಎಂಬುದನ್ನು ಸ್ಪಷ್ಟವಾಗಿ ನಕ್ಷೆ ತಯಾರಿಸಿ ಎಂದು ತಹಶಿಲ್ದಾರ್ ಸೂಚನೆ ನೀಡಲಾಗಿದೆ ಆದರೆ ಸರ್ವೆ ಕಾರ್ಯ ನಡೆದಿದೆ ಅದಕ್ಕೆ ತಹಶೀಲ್ದಾರ್ ಸಹಿ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಅರಣ್ಯ ಇಲಾಖೆ ಸುಮಾರು 1931ರ ನೋಟಿಫಿಕೇಶನ್ ಮಾತ್ರ ಹೇಳುತ್ತಿದ್ದಾರೆ ಈ ನೋಟಿಫಿಕೇಶನ್ ಅಂತಿಮ ನೋಟಿಫಿಕೇಶನ್ ರಾಜ್ಯ ಅರಣ್ಯವಾಗಿ ಮಾರ್ಪಟ್ಟಿದೆ ಇದನ್ನೇ ನೆಪ ಇಟ್ಟುಕೊಂಡು ಜಿಲ್ಲೆಯಲ್ಲಿರುವ ಎಲ್ಲಾ ನೋಟಿಫಿಕೇಶನ್ ಹೆಸರಿನಲ್ಲಿ ಸರ್ಕಾರಿ ಗೋಮಾಳದ ಕಂದಾಯ ಇಲಾಖೆಯಿಂದ ಕೊಟ್ಟಿರುವ ಕಂದಾಯ ಭೂಮಿಗಳನ್ನು ನಾಶ ಮಾಡಿದ್ದಾರೆ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ವರ್ಕಿಂಗ್ ಪ್ಲಾನ್ ಹೆಸರಿನಲ್ಲಿ ಸುಮಾರು ನೂರು ವರ್ಷಗಳ ಹಿಂದಿನ ದಾಖಲೆಗಳನ್ನು ಮರೆಮಾಚಿ ಅರಣ್ಯ ಇಲಾಖೆಯವರು ಕಂದಾಯ ಇಲಾಖೆಯವರನ್ನು ಯಾಮಾರಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನು ಓದಿದ್ದೀರಾ..? ಕೋಲಾರ | ಭೀಮ ಕೋರೆಗಾಂವ್ ಚಿತ್ರ ಬಿಡುಗಡೆ ಮಾಡಿದ ಎಂಎಲ್‌ಸಿ ಅನಿಲ್‌ ಕುಮಾರ್‌

ಈ ಸಂದರ್ಭದಲ್ಲಿ ಭೂ ಸಂತ್ರಸ್ತರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ಸಿಪಿಎಂ ಗೋಪಾಲ್, ಹರಟಿ ಪ್ರಕಾಶ್, ಮುಖಂಡರಾದ ಮುಳಬಾಗಿಲು ಅಂಬರೀಶ್, ವೆಂಕಟರವಣಪ್ಪ, ಭಟ್ರಹಳ್ಳಿ ಮಂಜುನಾಥ್, ಅರವಿಂದ್, ನಾರಾಯಣಪ್ಪ, ಸುನಂದಾ, ನಾರಾಯಣಪ್ಪ, ಶಂಕಪ್ಪ, ವೆಂಕಟೇಶ್ ಮುಂತಾದವರು ಇದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಲೂನ್ ಮಾರುವ 9 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧಿ ಕಾರ್ತಿಕ್‌ಗೆ ಗಲ್ಲು ಶಿಕ್ಷೆ

ಕಳೆದ ವರ್ಷದ ದಸರಾ ಮಹೋತ್ಸವದ ಸಂದರ್ಭದಲ್ಲಿ ಕುಟುಂಬದೊಂದಿಗೆ ಟೆಂಟ್‌ನಲ್ಲಿ ಮಲಗಿದ್ದ 9...

ಬಾಗೇಪಲ್ಲಿ | ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅಂತರ ಕಾಲೇಜು ವಿದ್ಯಾರ್ಥಿಗಳ ಗುಡ್ಡಗಾಡು ಓಟ ಸ್ಪರ್ಧೆ

ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಾರೀರಿಕ...

ರಾಯಚೂರು | ಮಾನ್ವಿ ಬಳಿ ಈರುಳ್ಳಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ಚಾಲಕ, ಕ್ಲೀನರ್‌ಗೆ ಗಾಯ

ಮಾನ್ವಿ ತಾಲೂಕಿನ ಗ್ರಾಮದ ಸಮೀಪದ ಹೊರವಲಯದಲ್ಲಿ ಮಾನ್ವಿ ರಸ್ತೆಯಲ್ಲಿ ಈರುಳ್ಳಿ ಸಾಗಿಸುತ್ತಿದ್ದ...