ಕೋಲಾರ | ಭೀಮ ಕೋರೆಗಾಂವ್ ಚಿತ್ರ ಬಿಡುಗಡೆ ಮಾಡಿದ ಎಂಎಲ್‌ಸಿ ಅನಿಲ್‌ ಕುಮಾರ್‌

Date:

ಮಹಾರ್‌ ಸೈನಿಕರ ಶೌರ್ಯ ಪ್ರಸ್ತುತಪಡಿಸುವ ‘ಭೀಮ ಕೋರೆಗಾಂವ್’ ಎಐ ಚಿತ್ರವನ್ನು ಬುಧವಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಬಿಡುಗಡೆ ಮಾಡಿದರು.

- Advertisement -

ಭೀಮಾ ನದಿ ತೀರದಲ್ಲಿ ನಡೆದಂಥ ಯುದ್ಧದ ಹಿನ್ನೆಲೆಯ ಮೇಲೆ ನಿರ್ಮಿತವಾದ ಎಐ ಆಧಾರಿತ ಚಿತ್ರ ಇದಾಗಿದೆ. ರುಜಾಕಿ ಸ್ಟುಡಿಯೋಸ್ ಆಶ್ರಯದಲ್ಲಿ ಶೋಭನ್ ಬಾಬು ನಿರ್ದೇಶನ, ಚಿತ್ರಕತೆ,‌ ಸಂಕಲನ ಮಾಡಿದ್ದಾರೆ. ದಲಿತ ಮಹಾ ಸೇನೆಯ ರಾಜ್ಯಾಧ್ಯಕ್ಷ ಖಾದ್ರಿಪುರ ಬಾಬು ನಿರ್ಮಿಸಿದ್ದಾರೆ. ‌ಸುಮಾರು 37 ನಿಮಿಷಗಳ ಈ ಸಿನಿಮಾವನ್ನು ಜನಪ್ರತಿನಿಧಿಗಳು ಹಾಗೂ ದಲಿತ ಮುಖಂಡರು ವೀಕ್ಷಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರು ಹಳೆಯ ದಾಖಲೆ‌ ಪತ್ರವೊಂದನ್ನು ವೀಕ್ಷಣೆ ಮಾಡುವುದರೊಂದಿಗೆ ಸಿನಿಮಾ ಆರಂಭವಾಗುತ್ತದೆ. ಮಹಾರ್‌ ಸೈನಿಕರ ಸಾಹಸ ಮೆಚ್ಚಿ ಬ್ರಿಟನ್‌ನ ಫ್ರಾನ್ಸಿಸ್ ಸ್ಟಂಟೌನ್ ಬರೆದಿದ್ದ ಪತ್ರವೊಂದನ್ನು ಅವರು ನೋಡುತ್ತಾರೆ. ಕೊನೆಯಲ್ಲಿ ಅಂಬೇಡ್ಕರ್‌ ಅವರ ಪ್ರೇರಣಾದಾಯಕ ಮಾತಿನೊಂದಿಗೆ ಸಿನಿಮಾ ಮುಗಿಯುತ್ತದೆ. ಮಹಾರ್‌ ಸೈನಿಕರ ಸ್ಮರಣಾರ್ಥ ನಿರ್ಮಿಸಿರುವ ವಿಜಯ ಸ್ತಂಭ ‘ಬರೀ ಕಲ್ಲಲ್ಲ; ಮಾನವ ಗೌರವದ ಸಂಕೇತ’ ಎಂದು ಅಂಬೇಡ್ಕರ್‌ ಹೇಳುತ್ತಾರೆ. ಸ್ಮಾರಕದ ಮುಂದೆ ಬಾಲಕಿಗೆ ಪೆನ್‌ ನೀಡುತ್ತಾರೆ.

ಸಿನಿಮಾ ವೀಕ್ಷಣೆ ಬಳಿಕ ಮಾತನಾಡಿದ ಎಂಎಲ್‌ಸಿ ಎಂ.ಎಲ್‌.ಅನಿಲ್ ‌ಕುಮಾರ್, ಮೈನವಿರೇಳಿಸುವ ಸಿನಿಮಾ‌ವಿದು. 37 ನಿಮಿಷಗಳಲ್ಲಿ ‌ಇಡೀ ಭೀಮ ಕೋರೆಗಾಂವ್‌ ಇತಿಹಾಸ ತೋರಿಸಿದ್ದಾರೆ. ಅಂಬೇಡ್ಕರ್ ಅವರನ್ನು‌ ಅದ್ಭುತವಾಗಿ‌ ಚಿತ್ರಿಕರಿಸಿದ್ದಾರೆ. ಸಿದ್ಧನಾಯಕ ಪಾತ್ರವೂ ಚೆನ್ನಾಗಿ ‌ಮೂಡಿಬಂದಿದೆ. ಅದ್ಭುತವಾಗಿ ಕಲ್ಪನೆಯಿಂದ ಕೂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೊಡ್ಡ ದೊಡ್ಡ ನಿರ್ದೇಶಕರು ಮಾಡದ ಕೆಲಸವನ್ನು ಶೋಭನ್ ಬಾಬು ಮಾಡಿದ್ದಾರೆ.‌ ಯಾವುದೇ ‌ದೊಡ್ಡ ನಿರ್ದೇಶಕರು, ನಿರ್ಮಾಪಕರಿಗೆ ‌ಕಡಿಮೆ ಇಲ್ಲ. ಮುಂದೆ ಒಳ್ಳೆಯ ಅವಕಾಶಗಳು ಸಿಗಲಿವೆ. ಇದು ಪ್ರೀ ರಿಲೀಸ್ ಇವೆಂಟ್. ಈ ಚಿತ್ರವನ್ನು ಎಲ್ಲರಿಗೂ ತೋರಿಸಬೇಕು ಎಂದರು.

ಪರ್ತಕರ್ತ ಕೆ.ಎಸ್.ಗಣೇಶ್ ಮಾತನಾಡಿ, ಅಂಬೇಡ್ಕರ್ ಅವರ ಆತ್ಮ‌ ಖಂಡಿತ ಸಂತೃಪ್ತಿಗೊಂಡಿರುತ್ತದೆ. ಅದಕ್ಕೆ ಕಾರಣ ನಿರ್ದೇಶಕ ಶೋಭನ್‌ ಬಾಬು ಕಥೆ ಕಟ್ಟಿಕೊಟ್ಟಿರುವ ರೀತಿ. ಇತಿಹಾಸದಲ್ಲಿ ಹೇಳಲಾಗದ ಹಲವಾರು ಕಥೆಗಳಿವೆ. ಅಂಬೇಡ್ಕರ್ ದಾಖಲೆ ಪರಿಶೀಲಿಸುವಾಗ ಅದರಲ್ಲಿ ‌ಈ ಭೀಮ ‌ಕೋರೆಗಾಂವ್‌ ವಿಚಾರ ಗೊತ್ತಾಗುತ್ತದೆ. ಇಂಥ ಸಿನಿಮಾ ‌ಮಾಡಲು ಬಂದವರು ಕಡಿಮೆ. ಈಗ ಅದ್ಭುತವಾಗಿ ಎಐ ಸಿನಿಮಾ ಕಟ್ಟಿ ಕೊಟ್ಟಿದ್ದಾರೆ. ರೋಮಾಂಚನ ಉಂಟು ಮಾಡುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೆ ಈ ಸಿನಿಮಾ ತೋರಿಸಬೇಕು ಎಂದು ಹೇಳಿದರು.

ನಿರ್ಮಾಪಕ ಖಾದ್ರಿಪುರ ಬಾಬು ಮಾತನಾಡಿ, ಈಗ ಗಣ್ಯರಿಗೆ ಮಾತ್ರ ಈ ಚಿತ್ರ ತೋರಿಸಲಾಗಿದೆ. ಮುಂದೆ ಎಲ್ಲರಿಗೂ ತೋರಿಸುತ್ತೇವೆ, ಪ್ರಚಾರ ಕೂಡ ಮಾಡುತ್ತೇವೆ. ನಿಜವಾಗಿಯೂ ಇಂಥ ಸಿನಿಮಾ ಮಾಡಲು ₹ 300 ಕೋಟಿ‌ ಬೇಕಾಗುತ್ತದೆ. ಆದರೆ, ಎಐ ಮೂಲಕ ಕೇವಲ 37 ನಿಮಿಷಗಳಲ್ಲಿ ಕಥೆ ಕಟ್ಟಿಕೊಡಲಾಗಿದೆ ಎಂದರು.

ನಿರ್ದೇಶಕ ಶೋಭನ್ ಬಾಬು ಮಾತನಾಡಿ, ಅಂಬೇಡ್ಕರ್ ಕುರಿತು ಸಿನಿಮಾ ಮಾಡಬೇಕೆಂದು ತಂದೆ ಹೇಳಿದ್ದರು. ಈ ಸಂಬಂಧ ನಾನು ಆಲೋಚನೆಯಲ್ಲಿ ತೊಡಗಿದ್ದೆ. ಅಂಬೇಡ್ಕರ್‌ ಅವರನ್ನು ಒಳಗೊಂಡ ಭೀಮ ಕೋರೆಗಾಂವ್ ಸಿನಿಮಾ ಮಾಡಿದೆ ಎಂದು ತಿಳಿಸಿದರು.

ಪೇಶ್ವೆಗಳು ಜಾತಿ ವ್ಯವಸ್ಥೆಯಡಿ ಆಡಳಿತ ನಡೆಸುತ್ತಿದ್ದರು. ಒಡೆದು ಆಳುವ ನೀತಿಯ ಭಾಗವಾಗಿ ಪೇಶ್ವೆ ಬಾಜಿರಾಯನನ್ನು ಸೋಲಿಸಲು ಬ್ರಿಟಿಷರು ಮಹಾರ್ ಸೈನಿಕರ ನೆರವು ಕೋರುತ್ತಾರೆ. ಆಗ ಮಹಾರ್‌ ಯೋಧರು ಪೇಶ್ವೆಗೆ ಷರತ್ತಿನ ಬೆಂಬಲ ನೀಡಲು ಬಾಜಿರಾಯನ ಬಳಿಗೆ ತಮ್ಮ ದಂಡನಾಯಕ ಸಿದ್ಧನಾಯಕನ್ನು ಕಳಿಸುತ್ತಾರೆ. ಆದರೆ, ತಾವು ಅಸ್ಪೃಶ್ಯರು, ಈ ಜಾಗದಲ್ಲಿ ತಮ್ಮ ಪಾದ ಸ್ಪರ್ಶವೂ ಆಗಬಾರದೆಂದು ಬಾಜಿರಾಯನ ಸಿದ್ಧನಾಯಕನನ್ನು ಅವಮಾನ ಮಾಡಿ ಕಳಿಸುತ್ತಾನೆ. ಇದರಿಂದ ಆಕ್ರೋಶಗೊಂಡ ಮಹಾರ್‌ ಸೈನಿಕರು ಬಾಜಿರಾಯನ ಬೆನ್ನುಮೂಳೆ ಮುರಿಯಲು ಬ್ರಿಟಿಷರ ಪರ ಯುದ್ಧ ಮಾಡಲು ಒಪ್ಪಿಕೊಳ್ಳುತ್ತಾರೆ. 1818ರ ಜನವರಿ 1ರಂದು ಪುಣೆ ಹತ್ತಿರದ ಭೀಮ ನದಿ ತೀರದಲ್ಲಿ 28 ಸಾವಿರ ಸೈನಿಕರಿದ್ದ ಪೇಶ್ವೆ ಹಾಗೂ 800 ಮಹಾರ್‌ ಸೈನಿಕರ ನಡುವೆ ಯುದ್ಧ ನಡೆಯುತ್ತದೆ. ಬ್ರಿಟಿಷರು ಗೆಲ್ಲುತ್ತಾರೆ, ಪೇಶ್ವೆ ಸೈನಿಕರು ಸೋಲುತ್ತಾರೆ. ಆದರೆ, ಸಿದ್ಧನಾಯಕ ಸೇರಿದಂತೆ ಹಲವಾರು ಮಹಾರ್‌ ಸೈನಿಕರು ವೀರಮರಣ ಅಪ್ಪುತ್ತಾರೆ. ಅವರ ಸ್ಮರಣಾರ್ಥ ಬ್ರಿಟಿಷ್‌ ಸರ್ಕಾರ ವಿಜಯ ಸ್ತಂಭ ಸ್ಥಾಪಿಸುತ್ತದೆ. 100 ವರ್ಷದ ಬಳಿಕ ಈ ವಿಚಾರ ಅಂಬೇಡ್ಕರ್‌ ಅವರಿಗೆ ದಾಖಲೆಗಳಿಂದ ಗೊತ್ತಾಗುತ್ತದೆ. ಈ ಜಾಗಕ್ಕೆ ಅವರು ಭೇಟಿ ಕೂಡ ನೀಡುತ್ತಾರೆ. ಈ ವಿಚಾರ ಇಟ್ಟುಕೊಂಡು ಎಐ ಆಧಾರಿತ ಸಿನಿಮಾ ನಿರ್ಮಿಸಲಾಗಿದೆ.

ಇದನ್ನು ಓದಿದ್ದೀರಾ..? ಕೋಲಾರ | ಸಮಾಜ ಕಲ್ಯಾಣ ಇಲಾಖೆ ಜೆಡಿ ಶ್ರೀನಿವಾಸನ್ ನಿಯೋಜನೆ ರದ್ದುಗೊಳಿಸಲು ದಲಿತ ಸಂಘಟನೆಗಳಿಂದ ಎಂಎಲ್ಸಿಗೆ ಮನವಿ

ಕಾಂಗ್ರೆಸ್‌ ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಮೈಲಾಂಡಹಳ್ಳಿ‌ ಮುರಳಿ, ನಗರ ಬ್ಲಾಕ್‌ ಅಧ್ಯಕ್ಷ ಸೈಯದ್‌ ಅಫ್ಸರ್, ಕೋಮುಲ್‌ ನಿರ್ದೇಶಕ ರಮೇಶ್‌ ಚಂಜಿಮಲೆ, ಸಿಂಡಿಕೇಟ್‌ ಸದಸ್ಯ ಸೀಸಂದ್ರ ಗೋಪಾಲಗೌಡ,‌ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶನ ಎಂ.ಶ್ರೀನಿವಾಸನ್‌,, ಮುಖಂಡರಾದ ಸಂಪಂಗೆರೆ ಮುನಿರಾಜು, ರಾಜಕುಮಾರ್, ಮಾರ್ಜೇನಹಳ್ಳಿ ಬಾಬು, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಡಿಪಿಎಸ್ ಮುನಿರಾಜು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ತೆರಿಗೆ ವಸೂಲಾತಿಯಲ್ಲಿ ಲೋಪ: ಇಬ್ಬರು ಪಿಡಿಓ ಅಮಾನತು, ಮೂವರು ಕರವಸೂಲಿಗಾರರ ವಜಾಕ್ಕೆ ವಿಚಾರಣೆ

ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ...

ಹಾವೇರಿ | ಪುಸ್ತಕ ಓದಿನ ಪರಂಪರೆಯನ್ನು ಮರು ಕಟ್ಟಬೇಕಾಗಿದೆ: ಶೋಭಾ ಜಾಗಟಗೇರಿ

"ಮುಷ್ಠಿಯಲ್ಲಿ ಇರುವ ಮೊಬೈಲ್ ಜೀವನ ಪಾಠವನ್ನ್ನು ಕಲಿಸುವುದಕ್ಕಿಂತ ದಾರಿ ತಪ್ಪಿಸುವ ಕೆಲಸ...

ಉತ್ತರ ಕನ್ನಡ | 3.24 ಲಕ್ಷ ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಬಾಕಿ; ಅಕ್ಟೋಬರ್ 20ರೊಳಗೆ ಪೂರ್ಣಗೊಳಿಸಲು ಮನವಿ

ಉತ್ತರ ಕನ್ನಡ ಜಿಲ್ಲೆಯ ಪಡಿತರ ಚೀಟಿಗಳಲ್ಲಿರುವ 5,69,044 ಸದಸ್ಯರು ಐದು ವರ್ಷಗಳ...

ಉಡುಪಿ | ಇಂದ್ರಾಳಿ ಮಂಚಿ ನೂರಾನಿ ಮಸೀದಿಗೆ ನೂತನ ಆಡಳಿತ ಸಮಿತಿ ರಚನೆ

ಉಡುಪಿ ತಾಲೂಕಿನ ಇಂದ್ರಾಳಿ ಮಂಚಿ ನೂರಾನಿ ಮಸೀದಿಯ ಆಡಳಿತ ಸಮಿತಿಗೆ ನೂತನ...