ಕೋಲಾರ: ತಾಲ್ಲೂಕಿನ ಮುದುವತ್ತಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕೋಮುಲ್ ನಿರ್ದೇಶಕ ಚೆಲುವನಹಳ್ಳಿ ಡಿ.ನಾಗರಾಜಪ್ಪ ನೇತೃತ್ವದಲ್ಲಿ ನೂತನ ಅಧ್ಯಕ್ಷರಾಗಿ ಶಂಕರಪ್ಪ ಮತ್ತು ಉಪಾಧ್ಯಕ್ಷರಾಗಿ ವೆಂಕಟೇಶ್ ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ನಾಲ್ಕು ಮಂದಿ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆದು ಐದು ಮತಗಳ ಅಂತರದಿಂದ ಎರಡು ಸ್ಥಾನಗಳನ್ನು ಗೆದ್ದುಕೊಂಡರು ಚುನಾವಣಾಧಿಕಾರಿಯಾಗಿ ವೆಂಕಟೇಶ್ ಬಾಬು ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದನೆ ಸಲ್ಲಿಸಿ ಮಾತನಾಡಿದ ಚೆಲುವನಹಳ್ಳಿ ನಾಗರಾಜಪ್ಪ ಎಲ್ಲಿ ಸಹಕಾರವಿತ್ತದೆಯೋ ಅಲ್ಲಿ ಮಾತ್ರ ಸಂಘ ಮತ್ತು ಹಾಲು ಉತ್ಪಾದಕರು ಆರ್ಥಿಕವಾಗಿ ಪ್ರಗತಿ ಕಾಣಲು ಸಾಧ್ಯ. ರೈತರ ಸ್ವಾವಲಂಬನೆಗಾಗಿ ಹೈನುಗಾರಿಕೆ ಸಹಕಾರಿಯಾಗಿದೆ. ಅವರಿಗೆ ಮತ್ತಷ್ಟು ಸಾಲ ಸೌಲಭ್ಯ ಕಲ್ಪಿಸಿ ಅವರ ಆರ್ಥಿಕ ಅಭಿವೃದ್ಧಿಗೆ ನೆರವಾಗಿ ನಿಲ್ಲುವೆ ರಾಸುಗಳಿಗೆ ವಿಮೆ, ಹಾಲು ಉತ್ಪಾದಕರಿಗೆ ಆರೋಗ್ಯ ವಿಮೆ, ಸಕಾಲದಲ್ಲಿ ಬೋನಸ್ ವಿತರಣೆ ಸೇರಿದಂತೆ ಸಂಘ ಮತ್ತು ಹೈನುಗಾರರ ಪ್ರಗತಿಗಾಗಿ ಕೋಮುಲ್ ಕಡೆಯಿಂದ ಕೊಡಿಸುವ ಕೆಲಸವನ್ನು ಮಾಡುವುದಾಗಿ ತಿಳಿಸಿದರು.
ಇದನ್ನು ಓದಿದ್ದೀರಾ..? ತಹಶೀಲ್ದಾರ್ ಕಚೇರಿಗೆ ಶಾಸಕ ಕೊತ್ತೂರು ಮಂಜುನಾಥ್ ದಿಢೀರ್ ಭೇಟಿ
ಈ ಸಂದರ್ಭದಲ್ಲಿ ವಕ್ಕಲೇರಿ ಸೊಸೈಟಿ ಅಧ್ಯಕ್ಷ ಪಾಲಾಕ್ಷಗೌಡ, ಮಾಜಿ ನಿರ್ದೇಶಕ ಮೈಲಾಂಡಹಳ್ಳಿ ರಮೇಶ್, ಗ್ರಾಪಂ ಮಾಜಿ ಸದಸ್ಯ ಪಾಶ್ವಗಾನಹಳ್ಳಿ ಅಶ್ವಥ್ ರಾಮ್, ಮುದುವತ್ತಿ ಗ್ರಾಮದ ಮುಖಂಡರಾದ ಸೀನಪ್ಪ, ಚಿನ್ನಪ್ಪ, ರಾಮಣ್ಣ, ವೆಂಕಟೇಶಪ್ಪ, ಈರಗೇಗೌಡ, ಎಂಬಿಎಂ ಮಂಜುನಾಥ್, ಮುನೇಂದ್ರ ಸೇರಿದಂತೆ ನೂತನ ನಿರ್ದೇಶಕರು ಇದ್ದರು.




