ತಹಶೀಲ್ದಾರ್‌ ಕಚೇರಿಗೆ ಶಾಸಕ ಕೊತ್ತೂರು ಮಂಜುನಾಥ್‌ ದಿಢೀರ್‌ ಭೇಟಿ

Date:

ಕೋಲಾರ: ಶಾಸಕ ಕೊತ್ತೂರು ಮಂಜುನಾಥ್‌ ಮಂಗಳವಾರ ಬೆಳಿಗ್ಗೆ ತಹಶೀಲ್ದಾರ್‌ ಕಚೇರಿಗೆ ದಿಢೀರನೇ ಭೇಟಿ ನೀಡಿ ಕಡತ ಪರಿಶೀಲಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

- Advertisement -

ತಿಂಗಳುಗಟ್ಟಲೆ ವರ್ಷಗಟ್ಟಲೆ ಕಡತ ಇಟ್ಟುಕೊಂಡು ಏಕೆ‌ ಜನಸಾಮಾನ್ಯರನ್ನು, ರೈತರನ್ನು ಸತಾಯಿಸುತ್ತೀರಿ ಎಂದು ಪ್ರಶ್ನಿಸಿದರು. ಕಾನೂನು ಪ್ರಕಾರವೇ ಕಡತ ವಿಲೇವಾರಿ ಮಾಡಿ. ಆದರೆ, ವರ್ಷಗಟ್ಟಲೇ ತಮ್ಮ ಬಳಿ ಕಡತಗಳನ್ನು ಇಟ್ಟುಕೊಳ್ಳುವ ಉದ್ದೇಶವಾದರೂ ಏನು? ಎಷ್ಟು ಕಡತಗಳು ತಮ್ಮ ಬಳಿ ವಿಲೇವಾರಿ ಆಗಲು ಬಾಕಿ ಇವೆ ಎಂದು ಕೇಳಿದ ಅವರು, ಮುಂದಿನ ಬುಧವಾರ ಮತ್ತೆ ಇಲ್ಲಿಗೆ ಭೇಟಿ ನೀಡುತ್ತೇನೆ. ಅಷ್ಟರಲ್ಲಿ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡಿರಬೇಕು ಇದು ಮನವಿ ಅಲ್ಲ ಗಡುವು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ತಮಗೆ ಎಷ್ಟು ಹಣ ಬೇಕು ಹೇಳಿ, ನಾನೇ ಕೊಡುತ್ತೇನೆ?‌ ಆದರೆ, ಬಡಜನರ‌ನ್ನು ಪದೇಪದೇ ‌ ಕಚೇರಿಗೆ ಅಲೆಸದೆ ಕೆಲಸ ಮಾಡಿಕೊಡಿ. ನನ್ನ ಸ್ವಂತ ಕೆಲಸಕ್ಕೆಂದು ನಾನು ಯಾವತ್ತೂ ತಹಶೀಲ್ದಾರ್ ಕಚೇರಿಗೆ ‌ಬಂದಿಲ್ಲ ಪೋನು ಸಹ ಮಾಡಿಲ್ಲ ಆದರೆ ಸಾರ್ವಜನಿಕರ ಕೆಲಸ ವಿಳಂಬ ಮಾಡುತ್ತಿರುವ ಬಗ್ಗೆ ನನಗೆ ವಿಪರೀತ ದೂರುಗಳು ಬರುತ್ತಿವೆ. ರೈತರನ್ನು ಏಕೆ ಪದೇಪದೇ ಕಚೇರಿಗೆ ಅಲೆಸುತ್ತೀರಿ? ತಮ್ಮ ಟೇಬಲ್‌ಗೆ ಬರುವ ‌ಕಡತ‌ ಅಲ್ಲಿಂದ ಮುಂದೆ ಸಾಕಲು ಏಕೆ ವಿಳಂಬ ಮಾಡುತ್ತೀರಿ ಎಂದು ರೈತರು ಸಾಯಬೇಕು ಅವತ್ತು ಮಾಡಿಕೊಡತ್ತೀರ ಹೇಳಿ ಎಂದು ಅಧಿಕಾರಿಗಳ ವಿರುದ್ದ ಗರಂ ಆದರು.

ದ್ವಿತೀಯ ದರ್ಜೆ ಸಹಾಯಕಿಯರಾದ ಸುಜಾತಾ ಮತ್ತು ಚಾಮುಂಡೇಶ್ವರಿದೇವಿ ಬಳಿ ತೆರಳಿ ಹಳೆ ದಾಖಲೆಗಳನ್ನು ಜಾಲಾಡಿದರು. ಟೇಬಲ್‌ ಮೇಲೆ ರಾಶಿ ಕಡತ ಇಟ್ಟುಕೊಂಡು ಏನು ಮಾಡುತ್ತೀರಿ ಎಂದು ಕೇಳಿದರು. ಕೆಲವೊಂದು ದಾಖಲೆಗಳನ್ನು ಹುಡುಕಿ ಕೊಡಲು ಸಿಬ್ಬಂದಿ ಪರದಾಡಿದರು.

ಸರ್ವೆ ವಿಭಾಗ, ಟಪಾಲು ವಿಭಾಗ, ಡಿಜಿಟಲ್‌ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದ ಶಾಸಕರು ನಂತರ ಸಭಾಂಗಣದಲ್ಲಿ ತಹಶೀಲ್ದಾರ್‌ ಡಾ.ನಯನಾ ಹಾಗೂ ಇತರ ಅಧಿಕಾರಿಗಳ ಸಭೆ ನಡೆಸಿದರು.

ಪ್ರಮುಖವಾಗಿ ಸುಜಾತಾ ಹಾಗೂ ಸುಲೋಚನಾ ಅವರ ಮೇಲೆ ಹೆಚ್ಚು ದೂರುಗಳು ಬರುತ್ತಿವೆ. ಅವರನ್ನು ಮುಳಬಾಗಿಲಿಗೂ, ಶ್ರೀನಿವಾಸಪುರಕ್ಕೋ ವರ್ಗಾಯಿಸಲು ಜಿಲ್ಲಾಧಿಕಾರಿಗೆ ಹೇಳುತ್ತೇನೆ. ಸರ್ವೆ ವಿಭಾಗದ ಮೇಲೆ ಇರುವಷ್ಟು ದೂರು ಬೇರೆ ಎಲ್ಲೂ. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಇಲ್ಲಿಂದ ಹೊರಟುಬಿಡಿ. ಕೆಲಸ ಮಾಡದವರ ಹೆಸರು ಕೊಡಿ ಎಂದರು.

ಆಗ ತಹಶೀಲ್ದಾರ್‌ ನಯನಾ ಮಾತನಾಡಿ, ಸುಜಾತಾ ಅವರ ಕೆಲಸ ನಿಧಾನ. ಸುಲೋಚನಾ ಅವರ ಸಂಬಂಧ ಯಾವುದೇ ಭ್ರಷ್ಟಾಚಾರದ ದೂರುಗಳು ಇಲ್ಲ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು ಹಾಗಾದರೆ ಯಾಕೆ ದೂರುಗಳು ಜಾಸ್ತಿ ಬರತ್ತೇವೆ ಹೇಳಿ ಎಂದು ಮರು ಪ್ರಶ್ನೆ ಹಾಕಿದರು.

‌ಸರ್ವೆ ಸಿಬ್ಬಂದಿ‌ ಕೊರತೆ ಇದ್ದು, ಕನಿಷ್ಠ ಇಬ್ಬರು ಸಿಬ್ಬಂದಿ ಬೇಕು ಎಂದು ಸರ್ವೆ ವಿಭಾಗದವರ ಆಗ್ರಹಿಸಿದರು. ಡಾ.ನಯನಾ ವಿರುದ್ಧವೂ ದೂರುಗಳು ಬರುತ್ತಿರುವುದನ್ನು ಕೊತ್ತೂರು ಮಂಜುನಾಥ್‌ ಪ್ರಸ್ತಾಪಿಸಿದರು.

ಬೆಳಿಗ್ಗೆ ತಹಶೀಲ್ದಾರ್ ಬರುವುದೇ ಇಲ್ಲ,‌ ದೂರದ ಹಳ್ಳಿಗರ ಜನರಿಗೆ ತೊಂದರೆ ಆಗುತ್ತಿದೆ. ಸಂಜೆ‌ ಆರು ಗಂಟೆ ಮೇಲೆ ಬರುತ್ತಾರೆ ಎಂಬ ದೂರುಗಳು ಇವೆ. ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಆಗ ಡಾ.ನಯನಾ, ನಿತ್ಯ ಒಂದಿಲ್ಲೊಂದು ಸಭೆಗಳು ಇರುತ್ತವೆ. ಮುಖ್ಯಕಚೇರಿಯಲ್ಲಿ ಸಭೆ ಇರುತ್ತವೆ. ನ್ಯಾಯಾಲಯ ಪ್ರಕರಣಗಳಿರುತ್ತವೆ. ಅದಕ್ಕೆ ಹೋಗಬೇಕಾಗುತ್ತದೆ ಎಂದು ಸಮರ್ಥಿಸಿಕೊಳ್ಳಲು ಮುಂದಾದರು. ತಹಶೀಲ್ದಾರ್ ಕಚೇರಿಯಲ್ಲಿ ವಾಸ್ತು ಸಮಸ್ಯೆ ಇದೆ. ಶೌಚಾಲಯ ಬದಲಾಯಿಸಿ. ಸಮಸ್ಯೆ ಸರಿ ಹೋಗಬಹುದು ಎಂದು ಶಾಸಕರು ಸಲಹೆ ನೀಡಿದರು.

ಇದನ್ನು ಓದಿದ್ದೀರಾ..? ಕೆಐಎಡಿಬಿ ಅಧಿಸೂಚನೆ ಕೈ ಬಿಡುವಂತೆ ಆಗ್ರಹಿಸಿ ರಸ್ತೆ ತಡೆ ನಡೆಸಿದ 13 ಹಳ್ಳಿಗಳ ರೈತರು

ಸಭೆಯಲ್ಲಿ ಕಂದಾಯ ನಿರೀಕ್ಷಕ ರಾಜೇಂದ್ರ ಕುಮಾರ್, ವಿವಿಧ ವಿಭಾಗಗಳ ಸಿಬ್ಬಂದಿ ಹಾಗೂ ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ಶಿವಕುಮಾರ್,ಖಾದ್ರಿಪುರ ಬಾಬು,ಕಾಂಗ್ರೆಸ್ ಮುಖಂಡರಾದ ಸೈಫ್, ನವೀನ್, ಸಾಧೀಕ್, ಮುಂತಾದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಚನ್ನಕೇಶವ ದೇಗುಲದ ಸುತ್ತ ತಳ್ಳುಗಾಡಿ ತೆರವಿಗೆ ಸಾರ್ವಜನಿಕರ ಒತ್ತಾಯ 

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬೇಲೂರಿನ ವಿಶ್ವವಿಖ್ಯಾತ ಚನ್ನಕೇಶವ ಸ್ವಾಮಿ ದೇಗುಲದ...

ಚಿಕ್ಕಮಗಳೂರು | ಏಷ್ಯನ್ ಗೇಮ್ಸ್: ಕಂಚಿನ ಪದಕ ಗೆದ್ದ ಸ್ನೇಹ ಎಸ್. ಎಸ್ ಗೆ ಟಿ.ಡಿ ರಾಜೇಗೌಡ ಅಭಿನಂದಿಸಿದ್ದಾರೆ 

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 2026ರ ಏಷ್ಯನ್ ಗೇಮ್ಸ್‌ನ ಮಿಶ್ರ 4x100...

ಬಾಗಲಕೋಟೆ | ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ.2 ಮೀಸಲಾತಿ ಸ್ವಾಗತಾರ್ಹ: ಮುತ್ತಣ್ಣ ಮೇತ್ರಿ

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಗಳ ನೇಮಕಾತಿಯಲ್ಲಿ ಶೇ.2ರಷ್ಟು...

ವಿಜಯಪುರ | ಉದ್ಯೋಗ ಖಾತ್ರಿ ಪೂರ್ಣ ಕೂಲಿ ಪಾವತಿಗೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿರುವ ಕೂಲಿಕಾರರಿಗೆ ಅವರ ಶ್ರಮಕ್ಕೆ ತಕ್ಕಂತೆ...