ಕೋಲಾರ | ಆದಿಮದಲ್ಲಿ ಜಿಲ್ಲಾ ಮಟ್ಟದ ನಾಟಕೋತ್ಸವ ಸಂಭ್ರಮ, ಕಿಕ್ಕಿರಿದ ಪ್ರೇಕ್ಷಕರು.

Date:

ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕೋಲಾರ ಆದಿಮ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಜಿಲ್ಲಾ ನಾಟಕೋತ್ಸವ ಮತ್ತು 235ನೇ ಹುಣ್ಣಿಮೆ ಹಾಡು ನಡೆಯಿತು. ಕಾರ್ಯಕ್ರಮದಲ್ಲಿ ರಂಗ ಗೌರವ, ಗದ್ದುಗೆ ಗೌರವ, ವಿದ್ಯಾರ್ಥಿ ಗೌರವ ಸಲ್ಲಿಸಲಾಯಿತು.

- Advertisement -

ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಜಾವಾಣಿ, ಬೆಂಗಳೂರು ದಿನಪತ್ರಿಕೆ ಹಿರಿ ಉಪಸಂಪಾದಕ ಸುಬ್ರಮಣ್ಯ ಹೆಚ್ಎಂ .ಆದಿಮ ಆರಂಭದ ದಿನಗಳಲ್ಲಿ ತಂಗಿದ, ಹಾಗೂ ತನ್ನ ಕುಟುಂಬ ಸಮೇತರಾಗಿ ಬಂದಿದ್ದ ದಿನಗಳನ್ನು ಮೆಲುಕು ಹಾಕಿಕೊಂಡರು. ಆದಿಮಸಂಸ್ಥೆ ಈಗಾಗಲೇ ಗುರುತಿಸಿ ಕೊಂಡುಬಿಟ್ಟಿದೆ. ಶೋಷಿತರ ಸಾಂಸ್ಕೃತಿಕ ಅಂತರ್ಶಕ್ತಿಯನ್ನು ಜನಮುಖಿಗೊಳಿಸುವ ನಿಟ್ಟಿನಲ್ಲಿಆರಂಭವಾಗಿ. ಅದು ಯಶಸ್ವಿಯಾಗಿದೆ. ಆದಿಮ ಕಟ್ಟುವಲ್ಲಿ ಕೆ.ರಾಮಯ್ಯ ಹಾಗೂ ಅನೇಕರ ಶ್ರಮವಿದೆ ಎಂದರು.

ಎರಡು ದಶಕಗಳು ಮೀರಿ ನಡೆಸುವುದು ಅತ್ಯಂತ ಶ್ರಮದ ಕೆಲಸ ಎಂದರು ಆದಿಮ ಎಲ್ಲರನ್ನೂ ಒಳಗೊಂಡು ನಡೆಯುತ್ತಿದೆ. ಆದಿಮ ನಾಟಕ ಕ್ಷೇತ್ರಕ್ಕಷ್ಟೆ ಸೀಮಿತವಾಗದೆ ಇವತ್ತಿನ ಸಾಂಸ್ಕೃತಿಕ ಪ್ರತಿರೋಧಗಳಿಗೆ ಮುಖಾಮುಖಿ ಯಾಗಬೇಕಿದೆ. ಅಂಬೇಡ್ಕರ್, ಬಸವಣ್ಣ, ಕುವೆಂಪು ಚಿಂತನೆಯ ವಿಚಾರ ಧಾರೆಗಳು ಹರಿಸುವ ಅಗತ್ಯವಿದೆ. ಇವತ್ತಿನ ಯುವ ಪೀಳಿಗೆಗೆ ಅವು ತಲುಪುವ ರೀತಿಯಲ್ಲಿ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು. ನಂತರ ಆದಿಮ ಕಾರ್ಯದರ್ಶಿ ರಾಮಚಂದ್ರಪ್ಪ ನವರ ಪರಿಚಯ, ಅವರ ಚಳವಳಿಯ ದಿನಗಳನ್ನು ಸ್ಮರಿಸಿಕೊಂಡರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯಕೆ.ವಿ.ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಆದಿಮನನ್ನ ತಾಯಿ ಮಡಿಲು. ಇಲ್ಲಿ ನಾಟಕೋತ್ಸವ ನಡೆಯಲು ಸಹಕರಿಸಿದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಆದಿಮದಲ್ಲಿ ನಾಟಕೋತ್ಸವನಡೆಸಲು ಒಪ್ಪಿಕೊಂಡ ಅಕಾಡೆಮಿ ಅಧ್ಯಕ್ಷರಿಗೆ ನನ್ನ ಅಭಿನಂದನೆಗಳು. ಸದರಿ ಕಾರ್ಯಕ್ರಮದಲ್ಲಿ ನಟ, ನಾಟಕಕಾರ ಹಾಗೂ ನಿರ್ದೇಶಕ ನಾವೆಂಕಿ ರಂಗ ಗೌರವಕ್ಕೆಒಪ್ಪಿ, ಸ್ವೀಕರಿಸಿದ್ದಕ್ಕಾಗಿ ಅಭಿನಂದನೆಗಳು.

ಆದಿಮ ಗದ್ದುಗೆ ಗೌರವ ಸ್ವೀಕರಿಸಿದ ಎನ್.ಎಂ.ಲಕ್ಷ್ಮಯ್ಯಕಳೆದ 2026 ರ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಪ್ರಶಸ್ತಿಗೆ ಹೆಸರನ್ನು ಸೂಚಿಸಿದಾಗ ಅವರ ಸೇವೆಗ ಮನಿಸಿ ಸೂಕ್ತವಾದ ಪ್ರತಿಭೆಯನ್ನು ಆಯ್ಕೆ ಮಾಡಿದ್ದೀರಿ ಎಂದು ಅಧ್ಯಕ್ಷರಾದ ಕೆ.ವಿ.ನಾಗರಾಜ ಮೂರ್ತಿ ಹೇಳಿದರು.

ಕಾನೂನು ಪದವಿಯಲ್ಲಿ ಚಿನ್ನದಪದಕ ವಿಜೇತ ಸೌರವ್. ಎಂ ವಿದ್ಯಾರ್ಥಿ ಗೌರವ ಸ್ವೀಕರಿಸಿದರು.

ರಂಗಗೀತೆಗಳ ಪ್ರಸ್ತುತಿ ಎನ್ಎಂ ಲಕ್ಷ್ಮಯ್ಯ ನಡೆಸಿ ಕೊಟ್ಟರು. ಆದಿಮ ರಂಗ ತಂಡ ಪ್ರಸ್ತುತಿಪಡಿಸಿದ‘ಬೆಪ್ಪುತಕ್ಕಡಿ ಬೋಳೆಶಂಕರ’ ನಾಟಕ ಈಗಾಗಲೇ ಕನ್ನಡ ರಂಗಭೂಮಿಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿಕೊಂಡಿದೆ. ಇದನ್ನು ಡಾ.ಚಂದ್ರಶೇಖರ ಕಂಬಾರರು ರಚಿಸಿದ್ದಾರೆ. ಈ ನಾಟಕ ಜನಪದದ ಮೂಲಕ ಶಿವಪುರಿಯ ಒಂದು ಕಥಾ ಪ್ರಸಂಗವನ್ನು ಹೇಳುತ್ತದೆ. ಅದು ಸಾಮಾಜಿಕ ವಾಗಿ ಮುವ್ವರು ಅಣ್ಣತಮ್ಮಂದಿರ ನಡುವಿನ ಕಥೆ. ದುರಾಸೆ, ವಂಚನೆ ಮತ್ತು ಮೋಸಕ್ಕೆ ಒಳಗಾದರೆ ಎಂತಹ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಶ್ರಮವನ್ನು ನಂಬಿದವನಿಗೆ ಹೇಗೆ ಒಳ್ಳೆಯ ದಾಗುತ್ತದೆ ಎನ್ನುವುದು ಈ ನಾಟಕದಲ್ಲಿ ನೋಡುತ್ತೇವೆ. ಕಲಾವಿದರು ಅವರವರ ಪಾತ್ರಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದರು.

ಇದನ್ನು ಓದಿದ್ದೀರಾ..?ಕೋಲಾರ | ವಾಲ್ಮೀಕಿ, ಅಂಬೇಡ್ಕರ್ ನಮ್ಮ ನಿಜವಾದ ಹೀರೋಗಳು: ಶಾಸಕ ಕೊತ್ತೂರು ಮಂಜುನಾಥ್

ಕಾರ್ಯಕ್ರಮದಲ್ಲಿ ಆದಿಮ ಕಾರ್ಯದರ್ಶಿ ಹ.ಮಾ. ರಾಮಚಂದ್ರ, ಆದಿಮ ಟ್ರಸ್ಟಿಗಳಾದ ಗಂಗನ ಬೀಡು ವೆಂಕಟಸ್ವಾಮಿ, ಸುಬ್ರಮಣಿ. ಟಿ, ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್. ಗುಂಡಪ್ಪದೇವಿಕೇರಿ, ಡಾ.ಮುರಳಿ, ಶಿವಕುಮಾರ್ಕೆ.ವಿ.ವಿದ್ವಾನ್ನಟರಾಜ್, ಹಾರೋಹಳ್ಳಿ ನಾರಾಯಣಪ್ಪ, ನಾರಾಯಣಸ್ವಾಮಿ, ಕಡತೂರು ಮಂಜುನಾಥ್, ಶಿಕ್ಷಣಕೇಂದ್ರದ ಆಡಳಿತಾಧಿಕಾರಿ ರಮೇಶ್ಅಗ್ರಹಾರ, ಸ್ವಾಗತತುರಾಂಡಹಳ್ಳಿ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಕಾಣೆಯಾದ ಮಕ್ಕಳ ಪತ್ತೆಗೆ ವಿಶೇಷ ಕಾರ್ಯಪಡೆ ಸಮಿತಿ ಸಭೆ

ನಗರ ಪೊಲೀಸ್ ಆಯುಕ್ತಾಲಯದ ಪೊಲೀಸ್ ಆಯುಕ್ತರ ಕಾರ್ಯಾಲಯದ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ,...

ಕಲಬುರಗಿ | ಕುಡಿಯುವ ನೀರಿಗಾಗಿ ಖಾಲಿ ಕೊಡ ಹಿಡಿದು ಪಾಲಿಕೆ ಎದುರುಗಡೆ ಪ್ರತಿಭಟನೆ

ನಗರದ ವಾರ್ಡ್‌ ನಂ. 2ರ ಕೆ.ಕೆ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ...

ಯಾದಗಿರಿ | ಪಂಚಾಯಿತಿ ಚುನಾವಣೆಗಳಲ್ಲೂ ಪರಿಶಿಷ್ಟ ಜಾತಿಗಳಿಗೆ ರಾಜಕೀಯ ಒಳಮೀಸಲಾತಿ ಕಲ್ಪಿಸಲು ಆಗ್ರಹ

ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ-ಎ, ಪ್ರವರ್ಗ-ಬಿ...

ಕಲಬುರಗಿ | ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಕ್ಕೆ ಆಗ್ರಹ

ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವುದು ಹಾಗೂ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ...