ಜಿಲ್ಲೆಯಲ್ಲಿ ಮಾದಕ ವ್ಯಸನದಿಂದ ಕೊಲೆಗಳು, ದೌರ್ಜನ್ಯ, ಹಲ್ಲೆಗಳು ಹೆಚ್ಚಳವಾಗುತ್ತಿದ್ದು ಜಿಲ್ಲಾಡಳಿತ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಜಿಲ್ಲೆಯ ಚುನಾಯಿತ ಜನಪ್ರತಿನಧಿಗಳು ಅಪರಾಧಿಗಳನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಕ್ಷಿ ಆರೋಪಿಸಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಎಲ್‌ಬಿಎಸ್ ನಗರದಲ್ಲಿ ಹೋಟೆಲ್ ನಡೆಸಿಕೊಂಡು ಜೀವನ ಮಾಡುತ್ತಿದ್ದು ನರಸಿಂಹ ಬಾಪುರು ಎಂಬಾತ ಕೊಲೆ ನಡೆದಿದೆ. ಉದ್ರಿ ಕೊಡದೇ ಇರುವ ಕಾರಣದಿಂದ ಮಚ್ಚಿನಿಂದ ಯುವಕ ನೋರ್ವ ಕೊಲೆ ಹಾಡುಹಗಲೆ ನಡೆದಿದೆ. ಗಾಂಜಾ ಸೇವನೆ, ಮಾರಾಟ ಯಥೇಚ್ಚವಾಗಿ ನಡೆಯುತ್ತಿದ್ದು ಪೊಲೀಸರಿಗೆ ಮಾಹಿತಿಯಿದ್ದರು ನಿಯಂತ್ರಿಸುತ್ತಿಲ್ಲ. ಆಯಾ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುವರಿಂದ ಹಣವಸೂಲಿ ಪೊಲೀಸರು ಮಾಡುತ್ತಿದ್ದಾರೆ ಎಂದು ಗಂಬೀರ ಆರೋಪ ಮಾಡಿದರು.
ನಗರದ ಕುಲಸುಂಬಿ ಕಾಲೋನಿ, ಏಕ ಮಿನಾರ್,ಆಶಾಪುರ ರಸ್ತೆ, ನವೋದಯ ಕಾಲೇಜಿನ ಹಿಂಬದಿಯಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ. ಖಾಸಭಾವಿಬಳಿ ಕೇಂದ್ರವನ್ನಾಗಿಸಿಕೊಂಡು ಗಾಂಜಾ ಸಾಗಾಣೆ, ಮಾರಾಟ ನಡೆಯುತ್ತಿದೆ. ಪೊಲೀಸರಿಗೆ ಯಾರು ಮಾಡುತ್ತಿದ್ದಾರೆ ಎಂದು ಗೊತ್ತಿದ್ದರೂ ರಕ್ಷಣೆ ಮಾಡುತ್ತಿದ್ದಾರೆ. ರಾಜಕಾರಣಿಗಳು ಅಪರಾಧಿಗಳೊಂದಿಗೆ ಫ್ಲೆಕ್ಸ್ ಹಾಕಿಕೊಂಡು ಮೆರೆಯುತ್ತಿದ್ದಾರೆ. ನಗರ ಶಾಸಕ ಇಂದಿಗೂ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳುವ ಸೌರ್ಜನ್ಯವೂ ತೋರಿಲ್ಲ. ಕಾಂಗ್ರೆಸ್ ಮುಖಂಡ ರವಿ ಬೋಸರಾಜವರು ಅಕ್ರಮ ಮರಳು ಸಾಗಾಣೆ ಮಾಡುವರೂ ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜಕಾರಣಿಗಳು ಅಕ್ರಮ ಚಟುವಟಿಕೆಗಳ ರಕ್ಷಣೆ ಮಾಡುತ್ತಿರುವದು ನಾಚಿಕೆಗೇಡಿನ ಸಂಗತಿಯಾಗಿದೆ. ಕಾರಣ ಯುವಜನದು ಎಚ್ಚತ್ತುಕೊಂಡು ವ್ಯಸನ ಮುಕ್ತ ನಗರನ್ನಾಗಿಸುವ ಹೋರಾಟ ನಡೆಸು ಶೀಘ್ರದಲ್ಲಿ ಎಲ್ಲ ಸಂಘ ಸಂಸ್ಥೆಗಳ ಸಭೆ ನಡೆಸಿ ಹೋರಾಟ ರೂಪಿಸಲಾಗುತ್ತದೆ ಎಂದರು. ಸರ್ಕಾರವೇ ಅಕ್ರಮ ಚಟುವಟಿಕೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ. ಗೃಹ ಸಚಿವರೇ ನಾಲಾಯಕ್ ಆಗಿದ್ದು ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ, ಹಲ್ಲೆ, ಕೊಲೆ, ಅತ್ಯಾಚಾರ ನಡೆದರೂ ಭೇಟಿ ನೀಡುವ ಕೆಲಸ ಮಾಡಿಲ್ಲ ಎಂದು ಟೀಕಿಸಿದರು. ಎಸ್‌ಪಿಯವರು ಗಾಂಜಾ ನಿಯಂತ್ರಣಕ್ಕೆ ಕೇಸ್ ಮಾಡಿರುವದಾಗಿ ಹೇಳುತ್ತಾರೆ. ಆರೋಪಿಗಳೆಲ್ಲರೂ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ.ಎಸ್‌ಪಿ ವೈಫಲ್ಯದಿಂದಲೇ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಪತಿ ಗಾಣಧಾಳ ಮಾತನಾಡಿ, ನಗರದಲ್ಲಿ ಗಾಂಜಾ, ಅಫೀಮು ಸೇವೆ ಹೆಚ್ಚಳವಾಗುತ್ತಿದ್ದರೂ ಪೊಲೀಸ್ ಇಲಾಖೆ ನಿಯಂತ್ರಿಸುತ್ತಿಲ್ಲ. ಸಣ್ಣ ಸಣ್ಣ ಯುವಕರು ದುಶ್ಚಟಗಳಿಗೆ ಬಲಿಯಾಗಿ ಹಲ್ಲೆ, ಕೊಲೆ ಮಾಡುವ ಸ್ಥಿತಿ ಗೆ ಬಂದು ನಿಂತಿರುವದು ಕಳವಳಕಾರಿ. ಹಾಡು ಹಗಲೆ ಬಾಪುರು ನರಸಿಂಹ ಎಂಬ ಯುವಕ ಅಂಗಡಿ ಕಸ ಬಳಿಯುತ್ತಿದ್ದಾಗೆ ಮಚ್ಚಿನಿಂದ ಯುವಕ ಕೊಲೆ ಮಾಡಿದ್ದಾನೆ.ಬಡವರು, ಅಸಹಾಯಕರ ಮೇಲೆ ದೌರ್ಜನ್ಯ, ಗುಂಡಾಗಿರಿ ಪ್ರದರ್ಶಿಸುತ್ತಿರುವದು ಹೆಚ್ಚಳವಾಗುತ್ತಿದೆ. ಸಮಾಜ ಎಲ್ಲರೂ ಘಟನೆ ಖಂಡಿಸಿ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದರು.
ಈ ಸುದ್ದಿ ಓದಿದ್ದೀರಾ?
ಈ ಸಂದರ್ಬದಲ್ಲಿ ಜೆಡಿಎಸ್ ಮುಖಂಡರುಗಳಾದ ಸಣ್ಣ ನರಸಿಂಹನಾಯಕ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ನರಸಪ್ಪ ಆಶಾಪುರು, ನರಸಿಂಹಲು ಕಟ್ಟಿಮನಿ, ರಾಜುಸಂಗಟಿ, ಎಚ್.ಕೆ.ರವಿಕಮಾರ ಇದ್ದರು





