ಬಟ್ಟೆ ಹರಿದು, ರಕ್ತಸ್ರಾವವಾಗುವಂತೆ ಟ್ರಂಪ್ ಅತ್ಯಾಚಾರ: ಅಮೆರಿಕ ಅಧ್ಯಕ್ಷರ ವಿರುದ್ಧ ಮಾಜಿ ‘ಮಿಸ್ ಸ್ವಿಟ್ಜರ್ಲೆಂಡ್’ ಗಂಭೀರ ಆರೋಪ

Date:

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಾಜಿ ‘ಮಿಸ್ ಸ್ವಿಟ್ಜರ್ಲೆಂಡ್’ ಬೀಟ್ರಿಸ್ ಕೆಯುಲ್ (Beatrice Keul) ಅವರು ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದಾರೆ. 1993ರಲ್ಲಿ ನ್ಯೂಯಾರ್ಕ್‌ನ ಹೋಟೆಲ್‌ವೊಂದರಲ್ಲಿ ಟ್ರಂಪ್ ತಮ್ಮ ಮೇಲೆ ‘ಕ್ರೂರವಾಗಿ’ ಅತ್ಯಾಚಾರ ಎಸಗಿದ್ದರು ಎಂದು ಅವರು ಆರೋಪಿಸಿದ್ದಾರೆ.

- Advertisement -

ಅಮೆರಿಕದ ಹೌಸ್ ಜುಡಿಷಿಯರಿ ಕಮಿಟಿಯ ಡೆಮಾಕ್ರಟಿಕ್ ಸದಸ್ಯರು ಬಿಡುಗಡೆ ಮಾಡಿರುವ ಹೊಸ ವರದಿಯಲ್ಲಿ ಈ ಆಘಾತಕಾರಿ ವಿಷಯ ಬಹಿರಂಗವಾಗಿದೆ ಎಂದು ‘ಪೀಪಲ್ ಡಾಟ್ ಕಾಮ್’ ವರದಿ ಮಾಡಿದೆ. ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ನ ಜಾಲದೊಂದಿಗೆ ಟ್ರಂಪ್ ಹೊಂದಿದ್ದರು ಎನ್ನಲಾದ ಸಂಪರ್ಕದ ಬಗ್ಗೆಯೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಶ್ವೇತಭವನವು ಈ ಎಲ್ಲಾ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಚಿಕ್ಕಮಗಳೂರು | ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಸಂತೆ ನಡೆಸಲು...

ಉದ್ಯಾನವನ ಮಾನವನ ಮಾನಸಿಕ ನೆಮ್ಮದಿ, ವಿನೋದ, ವಿಶ್ರಾಂತಿ ಹಾಗೂ ವನ್ಯಜೀವಿ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮೀಸಲಿಟ್ಟ ಒಂದು ಹಸಿರು ತಾಣ ಎಂದೇ ಹೇಳಬಹುದು. ಆಧುನಿಕ ವ್ಯವಸ್ಥೆಯಲ್ಲಿ ನಗರ ಜೀವನದ ಜಂಜಾಟದ ನಡುವೆ...

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...

ಈ ವರದಿಯು ಸೌಂದರ್ಯ ಸ್ಪರ್ಧೆಗಳ ಕರಾಳ ಮುಖವನ್ನು ಬಿಚ್ಚಿಟ್ಟಿದೆ. ಟ್ರಂಪ್, ಎಪ್ಸ್ಟೀನ್ ಮತ್ತು ಇತರರು ‘ಡೊನಾಲ್ಡ್ ಜೆ. ಟ್ರಂಪ್ ಅಮೆರಿಕನ್ ಡ್ರೀಮ್ ಪೇಜೆಂಟ್’ (ಸೌಂದರ್ಯ ಸ್ಪರ್ಧೆ) ಅನ್ನು ಯುವತಿಯರನ್ನು ಬೇಟೆಯಾಡುವ ತಾಣವಾಗಿ ಬಳಸಿಕೊಂಡಿದ್ದರು ಎಂಬ ಗಂಭೀರ ಆರೋಪ ವರದಿಯಲ್ಲಿದೆ. ಶಿಕ್ಷಣ, ವೀಸಾ, ವಿದೇಶಿ ಪ್ರಯಾಣ ಮತ್ತು ವೃತ್ತಿಜೀವನದ ಭರವಸೆಗಳನ್ನು ನೀಡಿ, 16 ರಿಂದ 22 ವರ್ಷದೊಳಗಿನ ಯುವತಿಯರನ್ನು ಶೋಷಣೆಗೆ ಒಳಪಡಿಸಲಾಗುತ್ತಿತ್ತು ಎಂದು ವರದಿ ಹೇಳಿದೆ. ಅಂದು 24 ವರ್ಷದ ಮಾಡೆಲ್ ಆಗಿದ್ದ ಬೀಟ್ರಿಸ್ ಅವರನ್ನು 1993ರ ನವೆಂಬರ್‌ನಲ್ಲಿ ನ್ಯೂಯಾರ್ಕ್ ಮತ್ತು ಅಟ್ಲಾಂಟಿಕ್ ಸಿಟಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಲು ಜಿಲ್ ಹಾರ್ತ್ ಎಂಬುವವರು ಆಹ್ವಾನಿಸಿದ್ದರು.

ವರದಿಯಲ್ಲಿ ಉಲ್ಲೇಖಿಸಿರುವ ಬೀಟ್ರಿಸ್ ಅವರ ಹೇಳಿಕೆಯ ಪ್ರಕಾರ, ಪ್ಲಾಜಾ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯ ಊಟದ ಕೂಟದಲ್ಲಿ ಅವರು ಟ್ರಂಪ್ ಅವರನ್ನು ಭೇಟಿಯಾಗಿದ್ದರು. ಆ ವೇಳೆ ಟ್ರಂಪ್, ಆಕೆಗೆ ವೀಸಾ ಕೊಡಿಸಲು ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ (NYU) ಪ್ರವೇಶ ಪಡೆಯಲು ಸಹಾಯ ಮಾಡುವ ಭರವಸೆ ನೀಡಿದ್ದರು. ಬಳಿಕ ಎಪ್ಸ್ಟೀನ್ ಕೂಡ ಇಂಥಹುದೇ ಆಮಿಷ ಒಡ್ಡಿ, ಫ್ಲೋರಿಡಾದಲ್ಲಿರುವ ಟ್ರಂಪ್ ಅವರ ‘ಮಾರ್-ಎ-ಲಾಗೋ’ ಕ್ಲಬ್‌ನ ಪಾರ್ಟಿಗೆ ಆಹ್ವಾನಿಸಿದ್ದನು.

​ನಂತರ, ಟ್ರಂಪ್ ಅವರ ಪ್ರತಿನಿಧಿಯೊಬ್ಬರು ಬೀಟ್ರಿಸ್ ಅವರನ್ನು ಹೋಟೆಲ್‌ನ ಮೇಲಿನ ಕೋಣೆಗೆ ಕರೆದೊಯ್ದರು. ಭವಿಷ್ಯಕ್ಕೆ ಸಹಾಯವಾಗಬಹುದು ಎಂದು ನಂಬಿ ಹೋದ ಬೀಟ್ರಿಸ್ ಮೇಲೆ ಕೋಣೆಯೊಳಗೆ ಟ್ರಂಪ್ ಹಿಂದಿನಿಂದ ದಾಳಿ ಮಾಡಿ, ಅತ್ಯಾಚಾರವೆಸಗಿದರು. ಈ ಕ್ರೂರ ಕೃತ್ಯದಿಂದ ಆಕೆಯ ಬಟ್ಟೆಗಳು ಹರಿದುಹೋಗಿದ್ದವು ಮತ್ತು ದೇಹದ ಹಲವೆಡೆ ರಕ್ತಸ್ರಾವವಾಗಿ, ಗಾಯಗಳಾಗಿದ್ದವು ಎಂದು ವರದಿಯಲ್ಲಿ ವಿವರಿಸಲಾಗಿದೆ. ಇದಾದ ಬಳಿಕವೂ ಆಕೆಗೆ ವೀಸಾ ಮತ್ತು ಶಿಕ್ಷಣದ ಭರವಸೆಗಳನ್ನು ಪುನರುಚ್ಚರಿಸಿದ ಟ್ರಂಪ್, ಈ ವಿಚಾರವನ್ನು ಯಾರಿಗೂ ಹೇಳದಂತೆ ಬಾಯಿಮುಚ್ಚಿಸಲು ಯತ್ನಿಸಿದರು ಹಾಗೂ “ದಿ ಶೋ ಮಸ್ಟ್ ಗೋ ಆನ್” (ಪ್ರದರ್ಶನ ಮುಂದುವರಿಯಬೇಕು) ಎಂದು ಹೇಳಿದ್ದರು ಎನ್ನಲಾಗಿದೆ.

ತೀವ್ರ ಆಘಾತ ಮತ್ತು ಭಯದ ನಡುವೆಯೇ ಬೀಟ್ರಿಸ್ ಆ ಸೌಂದರ್ಯ ಸ್ಪರ್ಧೆಯನ್ನು ಪೂರ್ಣಗೊಳಿಸಿ, ತಮ್ಮ ತಾಯ್ನಾಡು ಸ್ವಿಟ್ಜರ್ಲೆಂಡ್‌ಗೆ ಮರಳಿದರು. ನಂತರ ಹವಾಯಿಯಲ್ಲಿ ನಡೆದ ಟ್ರಂಪ್ ಪ್ರಾಯೋಜಿತ ಮತ್ತೊಂದು ಸ್ಪರ್ಧೆಯಲ್ಲಿ ಭಾಗವಹಿಸಲು ಅವರು ನಿರಾಕರಿಸಿದರು. ಕೆಲವು ತಿಂಗಳ ನಂತರ, ಟ್ರಂಪ್ ಮತ್ತೆ ಆಕೆಯನ್ನು ಸಂಪರ್ಕಿಸಿ ವೀಸಾ ಮತ್ತು ವಿಶ್ವವಿದ್ಯಾಲಯದ ಪ್ರವೇಶದ ಸಹಾಯದ ಆಫರ್ ನೀಡಿದರೂ, ಆಕೆ ಅದನ್ನು ತಿರಸ್ಕರಿಸಿದರು.

​ಡೆಮಾಕ್ರಟಿಕ್ ವರದಿಯಲ್ಲಿ 1997ರಲ್ಲಿ ಜಿಲ್ ಹಾರ್ತ್ ಅವರು ಟ್ರಂಪ್ ವಿರುದ್ಧ ಹೂಡಿದ್ದ ಲೈಂಗಿಕ ದೌರ್ಜನ್ಯದ ಮೊಕದ್ದಮೆಯನ್ನೂ ಉಲ್ಲೇಖಿಸಲಾಗಿದೆ. ಇದಲ್ಲದೆ, 1990ರ ದಶಕದಲ್ಲಿ ತಮ್ಮ ಮೇಲೂ ಟ್ರಂಪ್ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಿದ್ದ ಲೇಖಕಿ ಇ. ಜೀನ್ ಕ್ಯಾರೊಲ್ ಅವರ ಪ್ರಕರಣದ ಹಿನ್ನೆಲೆಯಲ್ಲಿ ಈ ಹೊಸ ಆರೋಪಗಳು ಮತ್ತಷ್ಟು ಗಮನ ಸೆಳೆದಿವೆ (2023ರ ಮೇ ತಿಂಗಳಲ್ಲಿ ಕ್ಯಾರೊಲ್ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಟ್ರಂಪ್ ದೋಷಿ ಎಂದು ಸಿವಿಲ್ ಜ್ಯೂರಿ ತೀರ್ಪು ನೀಡಿತ್ತು).

ಈ ಗಂಭೀರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಶ್ವೇತಭವನದ ವಕ್ತಾರೆ ಲಾರೆನ್ ಬಿಸ್, “ಈ ಯಾವುದೇ ಆರೋಪಗಳಲ್ಲಿ ಹುರುಳಿಲ್ಲ, ಇವೆಲ್ಲವೂ ಸಂಪೂರ್ಣ ಸುಳ್ಳು” ಎಂದು ಸ್ಪಷ್ಟಪಡಿಸಿದ್ದಾರೆ. “ಅಧ್ಯಕ್ಷ ಟ್ರಂಪ್ ಅವರ ಐತಿಹಾಸಿಕ ಸಾಧನೆಗಳಿಂದಾಗಿ ರಿಪಬ್ಲಿಕನ್ ಪಕ್ಷಕ್ಕೆ ಸಿಗುತ್ತಿರುವ ಬೆಂಬಲವನ್ನು ಸಹಿಸಲಾಗದೆ, ಜನರ ಗಮನವನ್ನು ಬೇರೆಡೆ ಸೆಳೆಯಲು ಡೆಮಾಕ್ರಟಿಕ್ ಪಕ್ಷದವರು ಮಾಡುತ್ತಿರುವ ಹತಾಶ ಪ್ರಯತ್ನವಿದು. ಜೆಫ್ರಿ ಎಪ್ಸ್ಟೀನ್‌ನ ಅಸಭ್ಯ ವರ್ತನೆಯಿಂದಾಗಿ ಟ್ರಂಪ್ ಆತನನ್ನು ತಮ್ಮ ಕ್ಲಬ್‌ನಿಂದ ಹೊರಹಾಕಿದ್ದರು. ಎಪ್ಸ್ಟೀನ್‌ಗೆ ಸಂಬಂಧಿಸಿದ ಯಾವುದೇ ವಿಚಾರದಲ್ಲೂ ಟ್ರಂಪ್ ಅವರ ಪಾತ್ರವಿಲ್ಲ ಎಂಬುದು ಸಾಬೀತಾಗಿದೆ” ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

​ಸದ್ಯ ಬೀಟ್ರಿಸ್ ಕೆಯುಲ್ ಅವರ ಆರೋಪಗಳಿಗೆ ಸಂಬಂಧಿಸಿದಂತೆ ಟ್ರಂಪ್ ವಿರುದ್ಧ ಯಾವುದೇ ಅಧಿಕೃತ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ವರದಿಯಲ್ಲಿ ಹೆಸರಿಸಲಾದ ವ್ಯಕ್ತಿಗಳ ಮುಂದಿನ ಪ್ರತಿಕ್ರಿಯೆಗಳು ಹಾಗೂ ಕಾನೂನು ಕ್ರಮಗಳ ಆಧಾರದ ಮೇಲೆ ಮುಂದಿನ ಬೆಳವಣಿಗೆಗಳು ನಿರ್ಧಾರವಾಗಲಿವೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಮುಳುಗಡೆ ಸಂತ್ರಸ್ತರ ನರಕ ಸದೃಶ ಬದುಕು: ಪರಿಹಾರ ಆಗ್ರಹಿಸಿ ಬೃಹತ್‌ ಪಾದಯಾತ್ರೆ

ರಸ್ತೆ ಸಂಪರ್ಕ ಕಡಿತ, ಕೊಳಚೆ ನೀರು, ಸೊಳ್ಳೆಗಳ ಕಾಟ, ವಿಷಜಂತುಗಳ ಭೀತಿ,...

ಮತದಾರರ ಪಟ್ಟಿಯ ಯಡವಟ್ಟು; ಉತ್ತರ ಪ್ರದೇಶ ಚುನಾವಣಾ ಆಯೋಗದಿಂದ ಕ್ಷಮೆಯಾಚನೆ

ಮತದಾರರ ಪಟ್ಟಿಯಲ್ಲಿ ಕಂಡುಬಂದ ವಿಚಿತ್ರ ದೋಷಗಳ ಕುರಿತು ವ್ಯಕ್ತವಾದ ಟೀಕೆಗಳಿಗೆ ಸಾಮಾಜಿಕ...

ಬೀದರ್‌ | ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ ಕಲ್ಪಿಸಿದ ಶಿಕ್ಷಕ!

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿಮಾನಯಾನದ ಅನುಭವವನ್ನು ಬಹುಮಾನವಾಗಿ...

ಗ್ಯಾನೇಶ್ ವಿರುದ್ಧ ಪ್ರತಿಭಟನೆಗೆ ದೆಹಲಿ ಪೊಲೀಸರ ಅಡ್ಡಿ; ಮೋದಿ ಮನೆ ಮುಂದೆಯೇ‌ ಧರಣಿ ಎಂದ ಕಾಂಗ್ರೆಸ್

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ದೆಹಲಿಯಲ್ಲಿ ಅಕ್ಟೋಬರ್ 30ರಂದು...