ಕೋಲಾರ | ಜಿಲ್ಲೆಯಲ್ಲಿ ಶೇ. 10 ರಷ್ಟು ಮಾತ್ರ ಅರಣ್ಯ ಶೇ 4 ಅರಣ್ಯ ಒತ್ತುವರಿ : ಸರೀನಾ ಸಿಕ್ಕಲಿಗರ್

Date:

ಜಿಲ್ಲೆಯಲ್ಲಿ ಕೇವಲ ಶೇ.10 ರಷ್ಟು ಮಾತ್ರ ಅರಣ್ಯ ಉಳಿದಿದ್ದು, ಅದರಲೂ ಸಹ ಶೇ.3 ರಿಂದ 4 ರಷ್ಟು ಅರಣ್ಯವನ್ನು ಜನರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದೂ ಡಿಸಿಎಫ್ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗರ್ ಹೇಳಿದರು.

ನಗರದ ಆರ್ ವಿ ಶಾಲೆಯ ಆಡಿಟೋರಿಯಂನಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆದ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ, ಕೋಲಾರದಲ್ಲಿ ಮಳೆ ಬರುತ್ತಿಲ್ಲ, ಒಳ್ಳೆಯ ಗಾಳಿ ಸಿಗುತ್ತಿಲ್ಲ. ಅರಣ್ಯ ರಕ್ಷಣೆ ಅರಣ್ಯ ಇಲಾಖೆಯೊಬ್ಬರ ಜವಾಬ್ದಾರಿ ಅಲ್ಲ, ಅದು ಎಲ್ಲರ ಜವಾಬ್ದಾರಿ ಎಂದರು.
ಅರಣ್ಯ ಒತ್ತುವರಿ ಅನುಮತಿ ಇಲ್ಲದೆ ಮರ ಕಡಿಯುವುದು, ಪ್ರಾಣಿಗಳ ಬೇಟೆಯಾಡುವುದು ಕಾನೂನು ಬಾಹಿರ ಎಂದು ಎಚ್ಚರಿಸಿದರು.

ಇಂದಿಗೂ ಹುಲಿ ಚರ್ಮ, ಹುಲಿ ಉಗುರು, ಖಡ್ಗಮೃಗದ ಕೊಂಬಿಗಾಗಿ ಕಳ್ಳಬೇಟೆ ನಡೆಯುತ್ತಿದೆ, ಇದನ್ನು ತಡೆಯಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ ಎಂದು ತಿಳಿಸಿದರು.

ಭೂಮಿ ಮೇಲೆ ಇರುವ ಎಲ್ಲಾ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಅವುಗಳನ್ನು ರಕ್ಷಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಮನೆಗಳಲ್ಲಿ, ಶಾಲೆಗಳಲ್ಲಿ ಗಿಡ ನೆಡಿ, ಬೇಟೆಯನ್ನು ನಿಲ್ಲಿಸಿ, ಅಮೂಲ್ಯವಾದ ನೀರು,ಮತ್ತು ವಿದ್ಯುತ್ ಅನ್ನು ಮಿತವಾಗಿ ಬಳಸಿ. ಸಣ್ಣ ಸಣ್ಣ ಕೆಲಸಗಳಿಂದ ನಿಸರ್ಗವನ್ನು ಉಳಿಸಬಹುದು ಎಂದು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ಜೇನು ನೊಣಗಳ ಸಂಖ್ಯೆ ಕಡಿಮೆ ಆಗಿದೆ, ಅವು ಸಂಪೂರ್ಣವಾಗಿ ನಾಶವಾದರೆ 4 ವರ್ಷದಲ್ಲಿ ಮಾನವನೂ ನಾಶವಾಗುತ್ತಾನೆ ಎಂಬ ಸಂಶೋಧನೆ ಇದೆ ಎಂದು ಹೇಳಿ, ಜೇನುನೊಣಗಳ ಪರಾಗಸ್ಪರ್ಶಕ್ಕೆ ಕೀಟಗಳು ಬಹಳ ಮುಖ್ಯ ಎಂದು ತಿಳಿಸಿದರು. ಫಲವತ್ತತೆ ಹೋಗಿ ನಾವು ರಸಗೊಬ್ಬರ ಬಳಸಿ ನಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದೇವೆ. ಎಲ್ಲವೂ ಒಂದಕ್ಕೊಂದು ಸಂಪರ್ಕದಲ್ಲಿದ್ದು, ಹಾಗಾಗಿ ನಾವೆಲ್ಲರೂ ಅರಣ್ಯವನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಮಾಡಿಸಿದರು.
ವನ್ಯಜೀವಿ ಸಪ್ತಾಹದ ಪ್ರಯುಕ್ತವಾಗಿ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಯ ನವೋದಯ ಶಾಲೆ, ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ಅರಣ್ಯ ಇಲಾಖೆ ಅಧಿಕಾರಿಗಳಿಂದ ವಿತರಿಸಲಾಯಿತು.

ಇದನ್ನು ಓದಿದ್ದೀರಾ..?ಆರ್‌ಟಿಒ ಕಚೇರಿಗಳಲ್ಲಿ ಬೋಗಸ್ ವಾಹನ ನೋಂದಣಿ ಮತ್ತು ಡಿಎಲ್ ಅಕ್ರಮ: ಸೈಯದ್ ಮಾಲಿಕ್ ಆರೋಪ

ಕಾರ್ಯಕ್ರಮದಲ್ಲಿ ಸಾಮಾಜಿಕ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಆನಂದ್ ಎಚ್ ಎ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾತ್ರೇಶ್ವರ ಸ್ವಾಮಿ, ವಲಯ ಅರಣ್ಯಾಧಿಕಾರಿ ರಘು ಎಂ, ಆರ್ ವಿ ಶಾಲೆ ಪ್ರಾಂಶುಪಾಲೆ ವೇದಾ ಶೇಖರ್,ಆರ್ ವಿ ಶಾಲೆ ಕಾರ್ಯದರ್ಶಿ ಸೋಮಶೇಖರ್ , ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ ಎನ್ ಪ್ರಸಾದ್, ಸಂಪನ್ಮೂಲ ವ್ಯಕ್ತಿ ಕಮಲ್ ಯಾದವ್, ಅರಣ್ಯ ಸಿಬ್ಬಂದಿ ಮತ್ತು ಶಾಲಾ ವಿದ್ಯಾರ್ಥಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಇಸ್ಪೀಟ್ ಜೂಜಾಟ: 5 ಮಂದಿ ಬಂಧನ; ₹2,040 ನಗದು ಜಪ್ತಿ

ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಐವರು ಆರೋಪಿಗಳನ್ನು ರಾಘವೇಂದ್ರ ನಗರ...

ಕೊಪ್ಪಳ | ಬರಗಾಲದಲ್ಲಿ ಸ್ಥಳೀಯರಿಗೆ ಹೆಚ್ಚಿನ ಕೆಲಸ ನೀಡಿ, ವಾರದೊಳಗೆ ಕೂಲಿ ಪಾವತಿಸಿ: ಡಿಸಿಎಂ ಪರಮೇಶ್ವರ

ತೀವ್ರ ಬರಗಾಲವಿರುವ ಕಾರಣ ವಿಬಿ ಜಿ ರಾಮ್‌ಜಿ ಯೋಜನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ...

ಕಲಬುರಗಿ | ಬೆಣ್ಣೂರ ಬಿ ಗ್ರಾಮಕ್ಕೆ ಪ್ರತ್ಯೇಕ ಬಸ್‌ ಸೌಲಭ್ಯಕ್ಕೆ ವಿದ್ಯಾರ್ಥಿಗಳ ಆಗ್ರಹ

ಕಾಳಗಿ ತಾಲೂಕಿನ ಬೆಣ್ಣೂರ ಬಿ ಗ್ರಾಮಕ್ಕೆ ಸಮರ್ಪಕ ಬಸ್‌ ಸಂಚಾರವಿಲ್ಲದೆ ಕಳೆದ...

ಯಾದಗಿರಿ | ‘ಬೆಂಕಿ ಹಚ್ಚುತ್ತೇನೆ’ ಹೇಳಿಕೆ ಶಾಸಕರ ಘನತೆಗೆ ತಕ್ಕುದಲ್ಲ: ಮಂಜುನಾಥ ಮೇತ್ರಿ

ಅಕ್ರಮ ಮರಳು ಸಾಗಾಟ ಹಾಗೂ ಓವರ್‌ಲೋಡ್ ಟಿಪ್ಪರ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸುವುದು...