ಚಿಂತಾಮಣಿ | ಆರ್‌ಟಿಒ(ಸಾರಿಗೆ ಇಲಾಖೆ)ಅಧಿಕಾರಿಗಳ ಬೆಂಬಲದೊಂದಿಗೆ ರಾಜ್ಯದಲ್ಲಿ ಬೋಗಸ್ ವಾಹನ ನೋಂದಣಿ ಹಾಗೂ ನಕಲಿ ಚಾಲನಾ ಪರವಾನಗಿ ನೀಡುವ ಬಹುದೊಡ್ಡ ಜಾಲ ಸಕ್ರಿಯವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಸೈಯದ್ ಮಾಲಿಕ್ ಪಾಷಾ ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ನೋಂದಣಿಯಾಗದೆ ಬಾಕಿ ಉಳಿದಿದ್ದ BS-3 ಮತ್ತು BS-4 ವಾಹನಗಳಿಗೆ ಅಕ್ರಮವಾಗಿ ದ್ವಿಚಕ್ರ ವಾಹನಗಳ ಸಂಖ್ಯೆಗಳನ್ನು ಬಳಸಿ ನೋಂದಣಿ ಮಾಡಿ, ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ.ಇಂತಹ ಬೋಗಸ್ ವಾಹನಗಳಿಗೆ ಆಕ್ಸಿಡೆಂಟ್ ಸಂಭವಿಸಿದರೆ ಇನ್ಶೂರೆನ್ಸ್ ಕಂಪನಿಗಳು ಯಾವುದೇ ಪರಿಹಾರ ನೀಡುವುದಿಲ್ಲ, ದರಿಂದ ಅಮಾಯಕ ಸಾರ್ವಜನಿಕರಿಗೆ ಮೋಸವಾಗುತ್ತಿದೆ ಎಂದು ಹೇಳಿದರು.
ಕೇರಳ ಮೂಲದ ವ್ಯಕ್ತಿಗಳು ಸ್ಥಳಕ್ಕೆ ಬರದೇ, ಬಯೋಮೆಟ್ರಿಕ್ ಅಥವಾ ಡ್ರೈವಿಂಗ್ ಟೆಸ್ಟ್ ನೀಡದೇ ಇಂದಿರಾನಗರ, ಚನ್ನಪಟ್ಟಣ ಹಾಗೂ ತುಮಕೂರು ಆರ್‌ಟಿಒ ಕಚೇರಿಗಳಲ್ಲಿ ನೇರವಾಗಿ ಡಿಎಲ್ ಪಡೆಯುತ್ತಿದ್ದಾರೆ.ಕೇರಳದಲ್ಲಿ ಬಯೋಮೆಟ್ರಿಕ್ ಪರಿಶೀಲನೆ ವೇಳೆ ಈ ಅಕ್ರಮ ಬಯಲಿಗೆ ಬಂದಿದ್ದು, ಅಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಇದನ್ನು ಓದಿದ್ದೀರಾ..?ಜಿಲ್ಲಾ ಕಾಂಗ್ರೆಸ್‌ನಿಂದ ಅ.5ಕ್ಕೆ ಬೃಹತ್ ಪ್ರತಿಭಟನಾ ಮೆರವಣಿಗೆ: ಜಿಲ್ಲಾಧ್ಯಕ್ಷ ಮ್ಯಾಕಲ ನಾರಾಯಣಸ್ವಾಮಿ
ಸಾರಿಗೆ ಆಯುಕ್ತರಿಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಅಫಿಡವಿಟ್ ಸಹಿತ ದಾಖಲೆಗಳನ್ನು ನೀಡಿ ದೂರು ಸಲ್ಲಿಸಿದ್ದರೂ,ಅಧಿಕಾರಿಗಳ ವಿರುದ್ಧ ಇದುವರೆಗೆ ಯಾವುದೇ ಸೂಕ್ತ ತನಿಖೆ ಅಥವಾ ಕ್ರಮ ಕೈಗೊಂಡಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
This video cannot be played in your browser. Open the video directly





