ಕೊಪ್ಪಳ | ಹಣವಾಳ ಗ್ರಾಮದ ಕೆರೆ ಪುನಶ್ಚೇತನ : 125 ದಿನ ಕೂಲಿ ನಿರ್ವಹಿಸುವಂತೆ ಸಲಹೆ

Date:

ಪ್ರತಿಯೊಂದು ಕುಟುಂಬವೂ ಕೆರೆ ಪುನಶ್ಚೇತನ ಕಾಮಗಾರಿ ಮತ್ತು ಇತ್ಯಾದಿ ವೈಯಕ್ತಿಕ ಕಾಮಗಾರಿಗಳಲ್ಲಿ ಒಟ್ಟು 125 ದಿನಗಳ ಕೂಲಿ ಕೆಲಸ ನಿರ್ವಹಿಸುವಂತೆ ಕೊಪ್ಪಳ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ತಿಳಿಸಿದರು.

- Advertisement -

ಹಲಗೇರಿ ಗ್ರಾಮ ಪಂಚಾಯತಿಯಿಂದ ವಿಕಸಿತ ಭಾರತ ಜೀ ರಾಮ್ ಜೀ ಯೋಜನೆಯಡಿ ಹಣವಾಳ ಗ್ರಾಮದ ಕೆರೆ ಪುನಶ್ಚೇತನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕೂಲಿಕಾರರನ್ನುದ್ದೇಶಿಸಿ ಮಾತನಾಡಿ, “ಪ್ರತಿಯೊಬ್ಬರು ರೂ. 382 ಕೂಲಿ ಬರುವಂತೆ ಕೂಲಿ ಕೆಲಸ ನಿರ್ವಹಿಸಬೇಕು. ವಿಬಿಜೀರಾಮ್ ಜೀ ಯೋಜನೆಯಡಿ ಪ್ರಸ್ತುತ ಪ್ರತಿ ದಿನಕ್ಕೆ ಕೂಲಿ ರೂ. 382 ಹಣ ಪಾವತಿಸಲಾಗುತ್ತದೆ. ನಿಮಗೆ ನೀಡಿರುವ ಅಳತೆಗನುಗುಣವಾಗಿ ಕೆಲಸ ನಿರ್ವಹಿಸಬೇಕು” ಎಂದು ಹೇಳಿದರು.

ಕೂಲಿಕಾರರೊಂದಿಗೆ ಸಂವಾದ: ಕೆರೆ ಪುನಶ್ಚೇತನ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರೊಂದಿಗೆ ತಾಲೂಕು ಪಂಚಾಯತಿ ಇಒ ಸಂವಾದ ನಡೆಸಿ ಮಹಿಳೆಯರು ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಕೆಲಸಕ್ಕೆ ಹಾಜರಾಗುವಂತೆ ತಿಳಿಸಿದರು. ನಂತರ ಕಾಮಗಾರಿಯಲ್ಲಿ ಕೆಲಸಕ್ಕೆ ಹಾಜರಾಗಿರುವ ಕುರಿತು ಎನ್.ಎಂ.ಎಂ.ಎಸ್ ಹಾಜರಾತಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಹಾಯಕ ರಫೀಕ ಬಿಎಪ್‌ಟಿ ಮಲ್ಲಯ್ಯ, ಡಿಇಒ ಮಾಲತೇಶ, ಗ್ರಾಮ ಕಾಯಕ ಮಿತ್ರ ವಿಜಯಲಕ್ಷ್ಮೀ, ಕಾಯಕ ಬಂಧು ರುದ್ರಪ್ಪ ಕರ್ಕಿಹಳ್ಳಿ, ಗವಿಸಿದ್ದಪ್ಪ, 179 ಕೂಲಿಕಾರರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು |ರಾಜ್ಯದಲ್ಲಿ ಪ್ರಸ್ತುತ 9,೦೦೦ಕ್ಕೂ ಹೆಚ್ಚು ಪೋಕ್ಸೋ ಪ್ರಕರಣ

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಹಿರಿಯ ನ್ಯಾ....

ಉತ್ತರ ಕನ್ನಡ | ನಾಳೆ ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ‘ಪ್ರಜಾಸೇವೆ ಆಂದೋಲನ’ ಸಭೆ

ಉತ್ತರ ಕನ್ನಡ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಸೆಪ್ಟೆಂಬರ್.26ರಂದು ಬೆಳಿಗ್ಗೆ 10.30ಕ್ಕೆ...

ಉಡುಪಿ | ಶಿಕ್ಷಣ, ಹೋರಾಟ, ಸಂಘಟನೆ ಸಮಾಜದ ಪ್ರಗತಿಗೆ ಮುಖ್ಯ: ಸಚಿವ ಶಿವರಾಜ ತಂಗಡಗಿ

ಮೊಗವೀರ ಸಮಾಜ ಶ್ರಮಜೀವಿಗಳ ಸಮಾಜ ವಾಗಿದ್ದು, ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ...