ಕೊಪ್ಪಳ | ಮುಸ್ಲಿಮರನ್ನೇ ಟಾರ್ಗೆಟ್ ಮಾಡಿ ಎಸ್‌ಐಆರ್ ಮಾಡಲಾಗುತ್ತಿದೆ : ಚಿಂತಕ ಶಿವಸುಂದರ್

Date:

ಜಗತ್ತಿನಲ್ಲಿ ನಡೆಯುವ ಯುದ್ಧಗಳಿಗೆ ಕದನ ವಿರಾಮ ಎಂಬುದು ಇರುತ್ತದೆ. ಆದರೆ, ಮೋದಿ ಸರ್ಕಾರ ಆರಂಭಿಸಿರುವ ಯುದ್ಧಕ್ಕೆ ಯಾವುದೇ ಕದನ ವಿರಾಮವಿಲ್ಲ. ಸರ್ಕಾರ ದೇಶದ ಜನರ ಮೇಲೆ ನಿರಂತರವಾಗಿ ಒಂದರ ಮೇಲೊಂದರಂತೆ ಯುದ್ಧ ಮಾಡುತ್ತಲೇ ಬಂದಿದೆ ಎಂದು ನಾಡಿನ ಹಿರಿಯ ಚಿಂತಕ ಶಿವಸುಂದರ್ ಹೇಳಿದರು.

- Advertisement -

ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಮೇ ಸಾಹಿತ್ಯ ಮೇಳ ಮತ್ತು ಸಮಾನ ಮನಸ್ಕರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಎಸ್‌ಐಆರ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ದೇಶದಲ್ಲಿ ಇಂದು ನಡೆಯುತ್ತಿರುವ ಆಘಾತಕಾರಿ ಬೆಳವಣಿಗೆಗಳ ಕುರಿತು ಚರ್ಚೆಯಾಗಬೇಕು. ಸಂವಿಧಾನದ ಮೂಲ ಆಶಯಗನ್ನು ಬುಡಮೇಲು ಮಾಡುವಂತಹ ಶಕ್ತಿಗಳ ವಿರುದ್ಧ ಗಟ್ಟಿ ಧ್ವನಿಯೆತ್ತುವ ಅಗತ್ಯವಿದೆ. ಮತಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ತಮ್ಮ ರಾಜಕೀಯ ಅಜೆಂಡಗಳನ್ನು ಜಾರಿಗೊಳಿಸುತ್ತಿರುವ ರಾಜಕೀಯ ಪಕ್ಷಗಳ ನಡೆಗಳ ವಿರುದ್ಧ ನಾವು ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

“ದೇಶದಲ್ಲಿ ಇಂದು ಯಾರು ಮತ ಹಾಕಬೇಕು, ಯಾರಿಗೆ ಮತ ಹಾಕುವ ಅಧಿಕಾರ ಇಲ್ಲ ಎಂಬುದನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಇದು ಹೊಸ ಮತದಾರರನ್ನು ಸೇರಿಸುವ ಮತ್ತು ಮೃತರನ್ನು ಮತ ಪಟ್ಟಿಯಿಂದ ಕೈ ಬಿಡುವ ನಿರಂತರವಾದ ಪ್ರಕ್ರಿಯೆ. ಆದರೆ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಪೌರತ್ವ ಪರೀಕ್ಷೆ ಮಾಡುವುದಕ್ಕೆ ನಮ್ಮ ವಿರೋಧವಿದೆ” ಎಂದು ತಿಳಿಸಿದರು.

“ವಿದೇಶಿಗರನ್ನು ಹುಡುಕುವ ನೆಪದಲ್ಲಿ ದೇಶದ ಮೂಲ ನಿವಾಸಿಗಳನ್ನು ಚುನಾವಣೆಯಿಂದ ದೂರ ಇಡುವ ಸಂಚು ಇದಾಗಿದೆ. ಆಸ್ತಿ ಅಂತಸ್ತು ಇಲ್ಲದ ಈ ದೇಶದ ದಲಿತರು, ಮುಸಲ್ಮಾನರ ಹಾಗೂ ಹಿಂದುಳಿದ ವರ್ಗಗಳ ಪ್ರಮುಖವಾಗಿ ದೇಶದ ಮಹಿಳೆಯರ ಮತದಾನದ ಹಕ್ಕುಗಳನ್ನು ಕಿತ್ತುಕೊಳ್ಳುವ ಸುವ್ಯವಸ್ಥಿತ ಯೋಜನೆಯಿದು. ಈ ದೇಶದ ಮೊದಲ ಚುನಾವಣೆ ನಡೆದ ಸಂದರ್ಭದಲ್ಲಿ ಸ್ಥಿತಿವಂತರಿಗೆ ಮಾತ್ರ ಮತದಾನ ಮಾಡುವ ಹಕ್ಕಿತ್ತು. ಆದರೆ ಅಂಬೇಡ್ಕರ್ ಅವರ ಪರಿಶ್ರಮದಿಂದ ದೇಶದಲ್ಲಿ ಎಲ್ಲ ನಾಗರಿಕರಿಗೆ ಮತ ಚಲಾಯಿಸುವ ಹಕ್ಕನ್ನು ನೀಡಲಾಯಿತು. ತದನಂತರ ನಡೆದ ಚುನಾವಣೆಗಲು ಸಾರ್ವತಿಕ ರೂಪ ಪಡೆಯುವುದರ ಜೊತೆಗೆ ಒಂದು, ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ ಎಂಬ ಪ್ರಜಾಪ್ರಭುತ್ವದ ಮೂಲಭೂತ ತತ್ವ ಪಾಲನೆಯಾಯಿತು” ಎಂದು ಹೇಳಿದರು.

ಎಸ್‌ಐಆರ್ ನೇರವಾಗಿ ನಮ್ಮ ಪೌರತ್ವದ ಮೇಲೆ ಪರಿಣಾಮ ಬೀರುತ್ತದೆ. ನಾವು ಪೌರತ್ವವನ್ನು ಕಳೆದುಕೊಂಡರೆ ದೇಶದ ಸಂವಿಧಾನ ನಮ್ಮ ರಕ್ಷಣೆಗೆ ಬರುವುದಿಲ್ಲ. ಆಗ ನಾವು ಎರಡನೇ ದರ್ಜೆಯ ನಾಗರಿಕರಾಗುತ್ತೇವೆ. ಸ್ವಾತಂತ್ರ್ಯವೆಂದರೆ ಎಲ್ಲ ಬಗೆಯ ಗುಲಾಮಗಿರಿಯಿಂದ ಹೊರಬರುವುದು. ಕೇಂದ್ರ ಸರ್ಕಾರದ ಎಸ್‌ಐಆರ್ ಎಂದರೆ ಕೇವಲ ಮತದಾರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಮಾತ್ರವಲ್ಲದೆ, ಇದು ಈ ದೇಶದ ನಾಗರಿಕರ ಪರಿಶೀಲನೆಯಾಗಿದೆ. ಎಸ್‌ಐಆರ್ ರದ್ದಾಗಬೇಕು, ಒಂದು ವೇಳೆ ಎಸ್‌ಐಆರ್‌ ಜಾರಿಯಾದರೆ ನಮ್ಮ ಬದುಕನ್ನು ರದ್ದು ಮಾಡುತ್ತದೆ. ಆದ್ದರಿಂದ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು” ಎಂದು ಶಿವಸುಂದರ್ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಕುಂವೀ “ನಮ್ಮ ದೇಶದ ಆಕ್ಸಿಜನ್ ಅಲ್ಪಸಂಖ್ಯಾತರು, ಇಂಡಿಯಾ ಗೇಟ್‌ನಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಹೆಸರನ್ನು ನೋಡಿದರೆ ಅದರಲ್ಲಿ ಅರ್ಧಕ್ಕೂ ಹೆಚ್ಚು ಹೆಸರುಗಳು ಮುಸ್ಲಿಮರದ್ದೆ, ಸತ್ಯಾಂಶ ಹೀಗಿದ್ದಾಗ ಮೋದಿಯಿಂದ ಮಾಡಲಿಕ್ಕೆ ಸಾಧ್ಯವಿಲ್ಲ” ಎಂದು ಹೇಳಿದರು.

ಇದನ್ನೂ ಓದಿ> ಕೊಪ್ಪಳ | ವೆಂಕಟೇಶ ಕುರುಬರ ಕೊಲೆ ಪ್ರಕರಣ: ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ನಮ್ಮ ಒಗಟ್ಟನ್ನು ಒಡೆಯಲು ಸಾಧ್ಯವಿಲ್ಲ. ಇವೆಲ್ಲ ದುಃಸ್ವಪ್ನಗಳಂತೆ ಬಂದು ಹೋಗುತ್ತವೆ. ಅಲ್ಪಸಂಖ್ಯಾತರು ಧೃತಿಗೆಡಬಾರದು. ಯಾರು ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯಲು ಸಾಧ್ಯವಿಲ್ಲ. ಪರಸ್ಪರ ಸಹಕಾರದಿಂದ ಮಾತ್ರ ದೇಶ ಸಧೃಡವಾಗಿರಲು ಸಾಧ್ಯ. ಒಂದು ಅಂಗ ತೆಗೆದರೆ ದೇಹದ ಸ್ಥಿತಿ ಹದಗೆಡುತ್ತದೊ ಹಾಗೆಯೇ ಒಂದು ಸಮುದಾಯವನ್ನು ಹೊರಗಿಟ್ಟರೆ ದೇಶದ ಸ್ಥಿತಿ ಕೆಡುತ್ತದೆ. ಯಾರಿಂದಲೂ ಭಾರತ ದೇಶದ ಐಕ್ಯತೆ ಮತ್ತು ಭಾವೈಕ್ಯತೆ ಕೆಡಿಸಲು ಸಾಧ್ಯವಿಲ್ಲ ಏಕೆಂದರೆ ಈ ದೇಶ ಸಣ್ಣ ದೇಶವಲ್ಲ, ಈ ದೇಶದ ಅಡಿಪಾಯ ಭದ್ರವಾಗಿದೆ” ಎಂದು ಅಭಿಪ್ರಾಯಿಸಿದರು.

ಈ ಸಂದರ್ಭದಲ್ಲಿ ಟಿ.ರತ್ನಾಕರ್, ಶುಕ್ರಜ್ ತಲಕೇರಿ, ಸಾವಿತ್ರಿ ಮುಜುದಾರ್, ಸಲೀಮ್ ಪಲ್ಟಾನ್, ಶರಣು ಶೆಟ್ಟರ್, ಜ್ಯೋತಿ ಗೊಂಡಬಾಳ, ಚನ್ನಬಸಪ್ಪ ಅಪ್ಪಣ್ಣವರ, ಶೈಲಜಾ ಹಿರೇಮಠ್, ಡಬ್ಲ್ಯುಪಿಐ ಮಹಿಳಾ ಘಟಕ ರಾಜ್ಯ ಅಧ್ಯಕ್ಷೆ ಸಭಿಹಾ ಪಟೇಲ್ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಆಗ್ರಹ: ಅ.15ರಿಂದ ಜಂತರ ಮಂಥರ್‌ನಲ್ಲಿ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಘನತೆಗೆ ಧಕ್ಕೆ ಉಂಟುಮಾಡಿ, ಅಕ್ರಮ ಚಟುವಟಿಕೆಗಳಿಗೆ ಕಾರಣರಾಗಿದ್ದಾರೆ...

ರಾಯಚೂರು | ಪೊತ್ನಾಳ ಗ್ರಂಥಾಲಯದಲ್ಲಿ ಮೂಲಸೌಕರ್ಯ ಕೊರತೆ: ಓದಲು ಬರುವ ವಿದ್ಯಾರ್ಥಿಗಳಿಗೆ ಪರದಾಟ

ಮಾನ್ವಿ ತಾಲ್ಲೂಕಿನ ಪೊತ್ನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಯ ಮೈದಾನದಲ್ಲಿರುವ...

Bhalki Ground Report | ಮುಸ್ಲಿಮರ ಮತ ಹಕ್ಕಿಗೆ ಕನ್ನ: ಬಗೆದಷ್ಟು ಬಯಲಾಗ್ತಿದೆ ‘ಫಾರ್ಮ್-7’ರ ಸಂಚು?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಈಶ್ವರ ಬಿ.ಖಂಡ್ರೆ ಅವರು ಪ್ರತಿನಿಧಿಸುವ...

ಕಲಬುರಗಿ | ಪ್ರೀತಿಸಿದ ಯುವತಿಯನ್ನೇ ಮದುವೆಯಾಗಲು ಪಟ್ಟು: ಟವರ್ ಏರಿದ ಯುವಕ!

ತಾನು ಪ್ರೀತಿಸಿದ ಯುವತಿಯನ್ನೇ ಮದುವೆಯಾಗಬೇಕು ಎಂದು ಪಟ್ಟು ಹಿಡಿದ ಯುವಕನೊಬ್ಬ, ಮದುವೆಗೆ...