ಸಾಹಿತ್ಯ ಉತ್ಸವ | ಮಣ್ಣಿನ ವಾಸನೆ ಬರುವುದು ಜನಸಾಮಾನ್ಯರಿದ್ದಾಗ..!

Date:

“ಸಾಹಿತ್ಯ ಉತ್ಸವಗಳು ಇನ್ನೂ ಹೆಚ್ಚಾಗಿ ನಡೆಯಬೇಕು. ಮಾಡಬೇಕಾದ ಕೆಲಸಗಳು ಹೊರಬೇಕಾದ ಹೊಣೆಗಾರಿಕೆಗಳು ಹೆಚ್ಚಾಗಿವೆ. ಆದರೆ, ಫೆಸ್ಟಿವಲ್‌ನ ಸ್ವರೂಪ್ ಇನ್ನೂ ಸ್ವಲ್ಪ ಬದಲಾವಣೆ ಮಾಡಿದರೇ, ಅದು ಸೂಕ್ತ. ಈ ಕಾರ್ಯಕ್ರಮದಲ್ಲಿ ಜನಸಾಮಾನ್ಯರು ಒಳಗೊಂಡರೇ ಮಾತ್ರ ಅದಕ್ಕೆ ಮಣ್ಣಿನ ವಾಸನೆ ಬರುತ್ತದೆ” ಎಂದು ವಿಮರ್ಶಕಿ ಆಶಾದೇವಿ ಹೇಳಿದ್ದಾರೆ.

- Advertisement -

ಬೆಂಗಳೂರಿನ ಲಲಿತ ಅಶೋಕ ಹೋಟೇಲ್‌ನಲ್ಲಿ ‘ಬೆಂಗಳೂರು ಸಾಹಿತ್ಯ ಉತ್ಸವ’ ನಡೆಯುತ್ತಿದ್ದು, ಹಲವು ಜನರು ಸಾಹಿತ್ಯ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಉತ್ಸವದಲ್ಲಿ ಪಾಲ್ಗೊಂಡು ಈದಿನ.ಕಾಮ್‌ ಜತೆಗೆ ಅವರು ಮಾತನಾಡಿದರು. ಉತ್ಸವಗಳಲ್ಲಿ ಜನಸಾಮಾನ್ಯರು ಹೆಚ್ಚಾಗಿ ಭಾಗವಹಿಸಬೇಕು. ಆಗ ಮಾತ್ರವೇ ಯಾವುದೇ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಸಾಹಿತ್ಯ ಉತ್ಸವವು 5 ವೇದಿಕೆಗಳಲ್ಲಿ ನಡೆಯುತ್ತಿದೆ. ಡಿಸೆಂಬರ್ 14 ಮತ್ತು 15 ರಂದು ವಿಚಾರ ಸಂಕಿರಣ ಮತ್ತು ಸಂವಾದಗಳು ನಡೆಯಲಿದೆ. ಸಾಹಿತ್ಯ ಉತ್ಸವ ಆರಂಭವಾದ ದಿನವೇ ಹಲವು ಜನರು ತಮ್ಮ ನೆಚ್ಚಿನ ಕವಿ ಮತ್ತು ಭಾಷಣಕಾರರನ್ನು ಕಾಣಲು ಬಂದಿದ್ದಾರೆ. ಎರಡು ದಿನ ನಡೆಯುವ ಈ ಉತ್ಸವ ಬೆಳಿಗ್ಗೆ 9ರಿಂದ ಸಂಜೆ 7.30ರವರೆಗೆ ನಡೆಯಲಿದೆ. ಸಾಹಿತ್ಯದ ಜತೆಗೆ ಸಂಗೀತ, ಸಿನಿಮಾ, ಕ್ರೀಡೆ ಸೇರಿ ನಾನಾ ಕ್ಷೇತ್ರಗಳ ಪ್ರಮುಖರು ದೇಶ–ವಿದೇಶಗಳಿಂದ ಬಂದಿದ್ದಾರೆ.  

ಸಾಹಿತ್ಯ ಉತ್ಸವದಲ್ಲಿ 350ಕ್ಕೂ ಹೆಚ್ಚು ಲೇಖಕರು ಹಾಗೂ ಭಾಷಣಕಾರರು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. 5 ವೇದಿಕೆಗಳಲ್ಲಿ ನಡೆಯುತ್ತಿರುವ ಸಂವಾದದಲ್ಲಿ ಕವಿಗಳು ಮತ್ತು ಭಾಷಣಕಾರರು ಪ್ರಸ್ತುತ ವಿದ್ಯಮಾನಗಳು, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ, ಸಂಗೀತ, ಸಿನಿಮಾ, ಆಹಾರ, ಆರ್ಥಿಕತೆ, ನವೋದ್ಯಮ ಸೇರಿ ವೈವಿಧ್ಯಮಯ ವಿಷಯಗಳ ಕುರಿತು ಚರ್ಚಿಸಲಾಗುತ್ತಿದೆ. ಅಲ್ಲದೇ, ಸಂವಾದದ ಜತೆಗೆ ಈ ಕಾರ್ಯಕ್ರಮದಲ್ಲಿ ವಿವಿಧ ಭಾಷೆಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇದೆ.

ಕಾರ್ಯಕ್ರಮದಲ್ಲಿ ‘ನೊಬೆಲ್ ಪ್ರಶಸ್ತಿ’ ಪುರಸ್ಕೃತರಾದ ಅಭಿಜಿತ್ ಬ್ಯಾನರ್ಜಿ, ವೆಂಕಿ ರಾಮಕೃಷ್ಣನ್, ‘ಬುಕರ್ ಪ್ರಶಸ್ತಿ’ ಪುರಸ್ಕೃತರಾದ ಕಿರಣ್ ದೇಸಾಯಿ, ಲೇಖಕ ಉಪಮನ್ಯು ಚಟರ್ಜಿ, ಹಂಪನಾ, ಎಸ್‌.ಆರ್ ಹಿರೇಮಠ, ಗಾಯಕಿ ಹಾಗೂ ನಟಿ ಇಳಾ ಅರುಣ್, ಸಂಗೀತಗಾರ ಎಲ್ ಸುಬ್ರಮಣ್ಯಂ, ಪತ್ರಕರ್ತ ಅನುಪ್ರೀತಾ ದಾಸ್, ಬಚ್ಚಿ ಕರ್ಕಾರಿಯಾ, ರಾಜ್‌ದೀಪ್ ಸರ್ದೇಸಾಯಿ, ಲೇಖಕರಾದ ಚೇತನ್ ಭಗತ್, ವಿಕಾಸ್ ಸ್ವರೂಪ್, ರಾಮ್ ಮಾಧವ್, ರಾಮಚಂದ್ರ ಗುಹಾ, ಸುಧಾ ಮೂರ್ತಿ, ಅರುಣಾ ರಾಯ್ ಸೇರಿ ಹಲವರು ಉತ್ಸವದಲ್ಲಿ ಭಾಗವಹಿಸಿದ್ದಾರೆ. ಉತ್ಸವವು ಭಾನುವಾರವೂ ನಡೆಯಲಿದ್ದು, ಇನ್ನೂ ಹಲವರು ಭಾಗಿಯಾಗಲಿದ್ದಾರೆ.

ಸಾಹಿತ್ಯ ಉತ್ಸವ ಸಾಹಿತ್ಯಿಕ ಲೋಕದ ವೈವಿಧ್ಯವನ್ನು ಅನಾವರಣ ಮಾಡಲಿದೆ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಪ್ರಮುಖರು, ಓದುಗರು, ಪ್ರಕಾಶಕರು, ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರನ್ನು ಒಂದೆಡೆ ಸೇರಿಸಲು ಈ ಉತ್ಸವ ಸಹಕಾರಿಯಾಗಲಿದೆ ಎಂದು ಆಯೋಜಕರು ಹೇಳಿದ್ದಾರೆ.

ನಾಳೆಯೂ ಕೂಡ ಮುಂದುವರೆಯುವ ಈ ಸಾಹಿತ್ಯ ಹಬ್ಬದಲ್ಲಿ  Lit Lawns, Waterfront, The Valley, Red Couch, New Book Alert ಎಂಬ 5 ವೇದಿಕೆಗಳಲ್ಲಿ ಬಿಂಬ ಬಿಂಬನ, ನನ್ನ ಪಾಡಿಗೆ ನಾನು, ಕನ್ನಡ ಪತ್ರಿಕೋದ್ಯಮ, ನುಡಿ, ನಾಡು, ನೆನಪು, ತುಳುನಾಡು, ಇಂದಿನ ರಾಜಕೀಯ, ಕಥೆ ಹೇಳುವುದು, ನ್ಯಾಯ ಕೇಳುವುದು, Kuvempu’s ಶ್ರೀ ರಾಮಾಯಣ ದರ್ಶನಂ ಸಾಹಿತ್ಯದ ವಿಚಾರಗಳ ಮೇಲೆ ಸಂವಾದ ಚರ್ಚಾ ಕಾರ್ಯಕ್ರಮ ನಡೆಯಲಿದೆ.

ಈ ಸುದ್ದಿ ಓದಿದ್ದೀರಾ? ದೆಹಲಿ ಚಲೋ | ಪ್ರತಿಭಟನಾನಿರತ ರೈತರ ಮೇಲೆ ಜಲಫಿರಂಗಿ, ಅಶ್ರುವಾಯ ಪ್ರಯೋಗ

ಉತ್ಸವದಲ್ಲಿ ಈದಿನ.ಕಾಮ್ ಜತೆ ಮಾತನಾಡಿದ ಸಾಹಿತಿ ಹಂಪನಾ, “ಬೆಂಗಳೂರು ಸಾಹಿತ್ಯ ಉತ್ಸವ ಈ ಹಿಂದೆ ಕೊಠಡಿಯಲ್ಲೋ, ಸಭಾಂಗಣದಲ್ಲೋ ನಡಿಯುತ್ತಿತ್ತು. ಆದರೆ, ಈಗ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ವೊಂದರ ಆವರಣದಲ್ಲಿ ನಡಿಯುತ್ತಿದೆ. ಲೌಕಿಕದ ದೃಷ್ಟಿಯಿಂದ ಕನ್ನಡಕ್ಕೆ ಒಂದು ರೀತಿಯಲ್ಲಿ ಇದು ಪ್ರತಿಷ್ಠೆ ಬಂದ ಹಾಗೇ, ಸಾಹಿತ್ಯಕ್ಕೆ ಒಂದು ದೊಡ್ಡ ಮಾನ್ಯತೆ ದೊರಕಿದ ಹಾಗೇ ಎಂದು ತಿಳಿದುಕೊಳ್ಳಬಹುದು. ಸಾಹಿತ್ಯದ ಉತ್ಸವ ಅರಮನೆಯಲ್ಲಿ ನಡೆದರೇ, ಶ್ರೇಷ್ಠ ಬಯಲಿನಲ್ಲಿ ನಡೆದರೇ, ಕನಿಷ್ಟ ಎಂಬುದಿಲ್ಲ. ಈ ಬಾರಿಯ ನಡೆಯುತ್ತಿರುವ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಾಹಿತ್ಯ ಓದುಗರಿಗೆ ಇದೊಂದು ಹಬ್ಬ” ಎಂದು ಹೇಳಿದರು.  

ವಿದ್ಯಾರ್ಥಿನಿ ಶ್ರವಂತಿ ಈದಿನ.ಕಾಮ್‌ ಜತೆಗೆ ಮಾತನಾಡಿ, “ ಸಾಹಿತ್ಯ ಉತ್ಸವದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದೇನೆ. ಇದು ಹೊಸ ಅನುಭವವಾಗಿದೆ. ಕನ್ನಡ ಸಂವಾದ ಮತ್ತು ಚರ್ಚೆಗಳು ಕಡಿಮೆ ನಿರಾಸೆಯಾಯಿತು. ಇದು ಸ್ವಲ್ಪ ಮಟ್ಟಿಗೆ ಬೇಜಾರನ್ನ ತರಿಸಿತ್ತು” ಎಂದು ತಿಳಿಸಿದರು.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೂನ್ಯ ಜನವಸತಿ!

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು...

‘SIR’ ಪರಿಶೋಧ-ಪ್ರತಿರೋಧ: ಸೆ.29ರಂದು ಮೈಸೂರಿನಲ್ಲಿ ಪ್ರಕಾಶ್ ರಾಜ್ ಸಂವಾದ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision-SIR) ಪ್ರಕ್ರಿಯೆ...

ಉಡುಪಿ | ಹೆತ್ತ ತಾಯಿಯನ್ನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಮಗ

ಹೆತ್ತ ತಾಯಿಯನ್ನೇ ಮಗ ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿರುವ ಅಮಾನವೀಯ ಘಟನೆ...

ಬಳ್ಳಾರಿ | ಲಾರಿ ಪಲ್ಟಿ; ಸ್ಟೀನಿಂಗ್ ಯಂತ್ರ ಬಿದ್ದು ಯುವಕ ದುರ್ಮರಣ

ಜಿಲ್ಲೆ ಸಂಡೂರು ತಾಲ್ಲೂಕಿನ ಉಬ್ಬಳಗಂಡಿ ಗ್ರಾಮದ ಬಳಿ ಮೈನ್‌ಸ್‌ನ ಸ್ಟೀನಿಂಗ್ ಯಂತ್ರವನ್ನು...