ಕೋಮು ಸೌಹಾರ್ದದಿಂದ ಕೋಮುದ್ವೇಷಕ್ಕೆ ಬದಲಾಗುತ್ತಿದೆಯೇ ಮಂಡ್ಯ?

Date:

ಹೋಯ್ಸಳ, ವಿಜಯನಗರ ಸಾಮ್ರಾಜ್ಯಗಳ ಐತಿಹಾಸಿಕ ಪರಂಪರೆಯ ಹಿರಿಮೆ, ಪ್ರಾಚೀನ ದೇವಾಲಯಗಳ ತಾಣ, ಸಕ್ಕರೆ ನಾಡು ಎಂಬ ಬಿರುದು, ಸುಗ್ಗಿ ಹಬ್ಬದ ಬೀಡು ಹೆಗ್ಗಳಿಕೆ, ಕೃಷಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಕೋಮು ಸೌಹಾರ್ದತೆಯ ಪರಂಪರೆ ಹೊಂದಿರುವ ಜಿಲ್ಲೆ ಮಂಡ್ಯ. ಆದರೆ, ಕಳೆದೆರಡು ವರ್ಷಗಳಲ್ಲಿ ಮಂಡ್ಯ ತನ್ನ ಸಾಂಸ್ಕೃತಿಕ ಹಿರಿಮೆಗಿಂತ, ಕೋಮುದ್ವೇಷ, ಗಲಾಟೆ, ಗಲಭೆಗಳಿಂದಲೇ ಹೆಚ್ಚು ಸದ್ದು ಮಾಡಿದೆ. ಸುದ್ದಿಯಾಗಿದೆ. ಹಿಂದುತ್ವ ಕೋಮುವಾದಿಗಳು ಮಂಡ್ಯದ ಶ್ರೀಮಂತಿಕೆಯನ್ನು ಅಳಿಸಿ, ದ್ವೇಷದ ವಿಷವಿಕ್ಕಿದ್ದಾರೆ. ಪರಿಣಾಮ, ಕರಾವಳಿ ಜಿಲ್ಲೆಗಳನ್ನೂ ಮೀರಿ, ಮಂಡ್ಯ ಕೋಮು ಸಂಘರ್ಷಗಳ ಕೇಂದ್ರವಾಗಿ ಬದಲಾಗಿದೆ. 2025ರಲ್ಲಿ ರಾಜ್ಯದಲ್ಲಿ ದಾಖಲಾಗಿರುವ ಒಟ್ಟು 70 ಕೋಮು ಸಂಘರ್ಷ ಪ್ರಕರಣಗಳಲ್ಲಿ 34 ಪ್ರಕರಣಗಳು ಮಂಡ್ಯ ಜಿಲ್ಲೆಯಲ್ಲಿಯೇ ದಾಖಲಾಗಿವೆ. ಮಂಡ್ಯ ಈಗ, ತನ್ನ ಕೋಮು ಸೌಹಾರ್ದ ಪರಂಪರೆಯನ್ನು ಕಳೆದುಕೊಳ್ಳುತ್ತಿದೆ.

- Advertisement -

ಇತ್ತೀಚಿಗೆ, ವಿಧಾನ ಪರಿಷತ್ ಅಧಿವೇಶನದಲ್ಲಿ ಎಂಎಲ್ಸಿ ಮಧು ಜಿ. ಮಾದೇಗೌಡ ಅವರು ಕೇಳಿದ ಪ್ರಶ್ನೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಉತ್ತರ ನೀಡಿದ್ದಾರೆ. ಅವರ ಉತ್ತರದಲ್ಲಿ ನೀಡಿದ ಅಂಕಿಅಂಶಗಳು ಮಂಡ್ಯದ ಕೋಮು ಸೌಹಾರ್ದತೆ ನಶಿಸುತ್ತಿದೆ ಎಂಬುದನ್ನು ಒತ್ತಿ ಹೇಳುತ್ತಿವೆ. ಮಂಡ್ಯ ಕೋಮುವಾದಿಗಳ ಪಡಸಾಲೆಯಾಗಿ ಬದಲಾಗುತ್ತಿವೆ ಎಂಬುದನ್ನು ಎತ್ತಿ ತೋರಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಸಚಿವ ಪರಮೇಶ್ವರ್ ನೀಡಿದ ಅಂಕಿಅಂಶಗಳ ಪ್ರಕಾರ, ಗಣೇಶ ಚತುರ್ಥಿಯ ಸಮಯದಲ್ಲಿನ ಗಲಾಟೆಗಳು ಸೇರಿದಂತೆ ರಾಜ್ಯಾದ್ಯಂತ ದಾಖಲಾದ ಒಟ್ಟು 70 ಕೋಮು ಸಂಘರ್ಷದ ಪ್ರಕರಣಗಳಲ್ಲಿ, 34 ಪ್ರಕರಣಗಳು ಅಂದರೆ, 48.57% ಪ್ರಕರಣಗಳು ಮಂಡ್ಯ ಜಿಲ್ಲೆಯೊಂದರಲ್ಲೇ ವರದಿಯಾಗಿವೆ.

ಸಂಪ್ರದಾಯಬದ್ಧವಾಗಿ ಕೃಷಿ ಪ್ರಧಾನ ಪ್ರದೇಶವಾಗಿರುವ ಮಂಡ್ಯ, ವಿವಿಧ ಧರ್ಮಗಳ ಜನರು ಕೃಷಿಯಲ್ಲಿ ಜೊತೆಯಾಗಿ ಕೆಲಸ ಮಾಡುವ ಮೂಲಕ ಶಾಂತಿಯುತ ಸಹಬಾಳ್ವೆಗೆ ಹೆಸರಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗಗಳಿಗೆ ಕೋಮು ರಾಜಕೀಯದ ಪ್ರವೇಶವು ಸಾಮಾಜಿಕ ಮತ್ತು ಧಾರ್ಮಿಕ ಧ್ರುವೀಕರಣಕ್ಕೆ ಕಾರಣವಾಗಿವೆ. ಗುಂಪುಗಳ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.

ಶ್ರೀರಂಗಪಟ್ಟಣದಲ್ಲಿ ಹಿಂದು ಸಂಘಟನೆಗಳು ನಿರಂತರವಾಗಿ ಆಯೋಜಿಸುವ ವಾರ್ಷಿಕ ಸಂಕೀರ್ತನಾ ಯಾತ್ರೆಯು ಸಂಘರ್ಷದ ಕೇಂದ್ರಬಿಂದುವಾಗುತ್ತಿದೆ. ಜೊತೆಗೆ, 2024ರ ಜನವರಿ 22ರಂದು ಕೆರಗೋಡು ಗ್ರಾಮದಲ್ಲಿ ಹಿಂದುತ್ವ ಕೋಮುವಾದಿ ಕಾರ್ಯಕರ್ತರು ಗ್ರಾಮ ಪಂಚಾಯತಿ ಮುಂದಿನ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಿದ್ದು, ಕೋಮು ಅಶಾಂತಿಯು ಜಿಲ್ಲೆಯಾದ್ಯಂತ ಹರಡುವಂತೆ ಮಾಡಿತ್ತು.

ಅಲ್ಲದೆ, ಅದೇ ವರ್ಷ, ನಾಗಮಂಗಲ ತಾಲೂಕಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಕೋಮು ಸಂಘರ್ಷ, 2025ರಲ್ಲಿ ಮದ್ದೂರು ತಾಲೂಕಿನ ಗಣೇಶ ಮೂರ್ತಿ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟ ಮತ್ತು ಹಿಂಸಾಚಾರದ ಘಟನೆಗಳು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿವೆ. ಈ ಘಟನೆಗಳು ಜಿಲ್ಲೆಯಾದ್ಯಂತ ಉದ್ವಿಗ್ನತೆಯನ್ನು ಹೆಚ್ಚಿಸಿದೆ. 2024ರಲ್ಲಿ ನಾಗಮಂಗಲದಲ್ಲಿ ಒಟ್ಟು 24 ಪ್ರಕರಣಗಳು ದಾಖಲಾಗಿದ್ದರೆ, 2025ರಲ್ಲಿ ಮದ್ದೂರು ಪೊಲೀಸರು 10 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋಮು ಘಟನೆಗಳಿಗೆ ಪ್ರತಿಕ್ರಿಯೆಯಾಗಿ ಸಂಘರ್ಷಗಳನ್ನು ತಡೆಯಲು ‘ವಿಶೇಷ ಕಾರ್ಯಪಡೆ’ಅನ್ನು ರಚಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ರಾಜ್ಯ ಮಟ್ಟದ ವಿಸ್ತೃತ ಕಾರ್ಯಕ್ರಮದ ಭಾಗವಾಗಿ, 2025ರ ಮೇ 28ರಿಂದ ಮಂಡ್ಯದಲ್ಲಿ ವಿಶೇಷ ಕಾರ್ಯಪಡೆ ಕಾರ್ಯನಿರ್ವಹಿಸುತ್ತಿದೆ.

ನಾಗಮಂಗಲ ಪಟ್ಟಣದ ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಡಿವೈಎಸ್ಪಿ ಡಾ. ಸುಮಿತ್ ಎ.ಆರ್., ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್, ಪಿಎಸ್ಐ ರವಿ ಬಿ.ಜೆ. ಮತ್ತು ಹೆಡ್ ಕಾನ್ಸ್ಟೇಬಲ್ ಎಂ. ರಮೇಶ್ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಜಂಟಿ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ.

ಅದೇ ರೀತಿ, 2025 ಸೆಪ್ಟೆಂಬರ್ 8ರಂದು ನಡೆದ ಗಣೇಶ ಮೆರವಣಿಗೆಯನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿದಕ್ಕಾಗಿ ಮದ್ದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧವೂ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ.

ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಸಂದೇಶ್‌ಖಾಲಿ, ಆರ್.ಜಿ ಕರ್ ಘಟನೆಗಳಿಗೆ ಮರುಜೀವ ತುಂಬಲು BJP ಕುತಂತ್ರ!

ರಾಜ್ಯ ಮಟ್ಟದಲ್ಲಿ ವಿಶೇಷ ಕಾರ್ಯಪಡೆಗಳ ಪ್ರಧಾನ ಕಚೇರಿಯನ್ನು ಮಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಆದಾಗ್ಯೂ, ರಾಜ್ಯಾದ್ಯಂತ ನಡೆಯುತ್ತಿರುವ ಕೋಮು ಸಂಘರ್ಷಗಳನ್ನು ಮಟ್ಟ ಹಾಕಲು 2025ರ ಜೂನ್ನಿಂದ ಈಚೆಗೆ ಉಡುಪಿ, ಶಿವಮೊಗ್ಗ ಹಾಗೂ ಮಂಡ್ಯದಲ್ಲಿಯೂ ಕಚೇರಿಗಳನ್ನು ತೆರೆಯಲಾಗಿದೆ. ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ (DIG) ಶ್ರೇಣಿಯ ಅಧಿಕಾರಿಗಳು ಈ ಕಾರ್ಯಪಡೆಗಳನ್ನು ಮುನ್ನಡೆಸುತ್ತಿದ್ದಾರೆ.

ಈ ಕಾರ್ಯಪಡೆಗಳು ದ್ವೇಷ ಭಾಷಣ ಮತ್ತು ಪ್ರಚೋದನಾಕಾರಿ ವಿಷಯಗಳನ್ನು ಹಂಚುವುದರನ್ನು ತಡೆಯಲು ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ಹಾಗೂ ಇತರ ಗುಪ್ತಚರ ಮಾಹಿತಿಯನ್ನು ಮೇಲ್ವಿಚಾರಣೆ ಮಾಡುತ್ತವೆ. ಸಂಭವನೀಯ ಕೋಮು ಅಶಾಂತಿಯನ್ನು ತಡೆಯಲು ಶ್ರಮಿಸುತ್ತವೆ. ಕೋಮು ಹಿಂಸಾಚಾರದ ಘಟನೆಗಳ ವಿರುದ್ಧ ತ್ವರಿತ ಮತ್ತು ಆದ್ಯತೆಯಲ್ಲಿ ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತಿದ್ದಾರೆ.

ಗಮನಾರ್ಹವಾಗಿ, 2024 ಮತ್ತು 2025ರಲ್ಲಿ ಮಂಡ್ಯ ಜಿಲ್ಲೆಗಳಲ್ಲಿ ಕೋಮು ಸಂಘರ್ಷಗಳು ಹೆಚ್ಚಾಗಿ ವರದಿಯಾಗಿವೆ. ಆದರೆ, 2026ರಲ್ಲಿ ಅಂದರೆ, ಕಳೆದ 3 ತಿಂಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕೋಮು ಘರ್ಷಣೆಯ ಘಟನೆಗಳಾಗಲೀ ಅಥವಾ ಪ್ರಕರಣಗಳಾಗಲೀ ವರದಿಯಾಗಿಲ್ಲ. ಆದರೆ, ಸದ್ಯ ಉಪ ಚುನಾವಣೆ ನಡೆಯುತ್ತಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಈ ವರ್ಷ 4 ಕೋಮು ಸಂಘರ್ಷದ ಪ್ರಕರಣಗಳು ದಾಖಲಾಗಿವೆ. ಮುಖ್ಯ ವಿಚಾರವೆಂದರೆ, ಇದೇ ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಂದೇ ಒಂದು ಕೋಮು ಸಂಘರ್ಷದ ಪ್ರಕರಣಗಳು ವರದಿಯಾಗಿರಲಿಲ್ಲ. ಉಪ ಚುನಾವಣೆ ನಡೆಯಲಿರುವ ಈ ವರ್ಷವೇ ಕೇವಲ ಮೂರು ತಿಂಗಳಿನಲ್ಲಿಯೇ 4 ಘರ್ಷಣೆಗಳು ನಡೆದಿರುವುದು ಬಿಜೆಪಿಯ ರಾಜಕೀಯ ಕುತಂತ್ರದ ಭಾಗವೆಂಬಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...