ವರ್ಣರಂಜಿತ ಹಾರ್ಮುಜ್ ಪರ್ವತದ ಕಥನ ಗೊತ್ತೇ?

Date:

ಹಾರ್ಮುಜ್ ರಚನೆಯು ಗ್ರಹಗಳ ರಸಾಯನಶಾಸ್ತ್ರ ಮತ್ತು ಭೂವೈಜ್ಞಾನಿಕ ವಿಕಾಸದ ಒಂದು ಮಾಸ್ಟರ್‌ಪೀಸ್ ಆಗಿ ನಿಂತಿದೆ. ಆದರೆ, ಹಾರ್ಮುಜ್ ಜಲಸಂಧಿಯಲ್ಲಿ ಮುಂದುವರಿಯುತ್ತಿರುವ ಉದ್ವಿಗ್ನತೆಯು ಈ ಪ್ರದೇಶದ ಪ್ರವಾಸೋದ್ಯಮದ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ.

ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಯುದ್ಧವು ಮೂರನೇ ವಾರಕ್ಕೆ ಕಾಲಿಟ್ಟಿದೆ. ಇರಾನ್ ತನ್ನ ನಿಯಂತ್ರಣದಲ್ಲಿರುವ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರವನ್ನು ನಿರ್ಬಂಧಿಸಿದೆ. ಪರಿಣಾಮ, ಜಾಗತಿಕ ಆರ್ಥಿಕತೆ ಅಸ್ತವ್ಯಸ್ತಗೊಂಡಿದೆ. ಜಗತ್ತಿನ ಅರ್ಧಕ್ಕೂ ಹೆಚ್ಚು ರಾಷ್ಟ್ರಗಳು ಇಂಧನ ಬಿಕ್ಕಟ್ಟಿಗೆ ಸಿಲುಕಿವೆ. ಇಡೀ ಜಗತ್ತಿನ ಎಲ್ಲ ಕಣ್ಣುಗಳು ‘ಹಾರ್ಮುಜ್ ಜಲಸಂಧಿ’ಯ ಮೇಲೆ ನೆಟ್ಟಿವೆ.

- Advertisement -

ಇದು ಸದ್ಯಕ್ಕೆ ಎಲ್ಲರಿಗೂ ಗೊತ್ತಿರುವ ಮತ್ತು ಗಮನಿಸುತ್ತಿರುವ ಸಂಗತಿ. ಆದರೆ, ಜಗತ್ತಿನ ಹಲವು ಕಣ್ಣುಗಳಿಗೆ ಕಾಣದ, ಗಮನಕ್ಕೆ ಬಾರದ ಸಂಗತಿಯೊಂದಿದೆ. ಅದೇ, ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಕಡಿಮೆ ಗಮನ ಸೆಳೆದಿರುವ ಆದರೆ, ಭೌಗೋಳಿಕವಾಗಿ ಹೆಚ್ಚು ಆಸಕ್ತಿದಾಯಕವೂ, ವರ್ಣರಂಜಿತವೂ ಆಗಿರುವ ಹಾರ್ಮುಜ್ ಪರ್ವತ ಶ್ರೇಣಿಗಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ನೂರು ಡಿ ಕೆ ಶಿವಕುಮಾರ್‌ ಹೆಗ್ಗಡೆಯವರೊಂದಿಗಿದ್ದಾರೆ- ಹಳೆಯ ಹೇಳಿಕೆಗೆ...

ಅಕ್ರಮ ಶವ ಹೂತ ಪ್ರಕರಣದ ಎಸ್‌ಐಟಿ ತನಿಖೆ ನಡೆಯುತ್ತಿದ್ದಾಗ "ಇದು ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ" ಎಂದು ಸದನದಲ್ಲಿ ವಿಪಕ್ಷಗಳು ಗದ್ದಲ ಮಾಡುತ್ತಿದ್ದಾಗ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು "ಧರ್ಮಸ್ಥಳದ ವಿರುದ್ಧ ಯಾರೆಲ್ಲ...

ಹೌದು, ಇರಾನ್ ಭಾಗವೇ ಆಗಿರುವ ಹಾರ್ಮುಜ್ ದ್ವೀಪದಲ್ಲಿ ಈ ಪರ್ವತ ಶ್ರೇಣಿಗಳಿವೆ. ಇವು, ಬಣ್ಣ ಹಚ್ಚಿದಂತೆ ಕಾಣುವ ಈ ಅದ್ಭುತ ರಚನೆಗಳು, ಉಪ್ಪಿನ ಗುಹೆಗಳು ಹಾಗೂ ಕೇಸರಿ ಬಣ್ಣದ ತೀರಗಳನ್ನು ಹೊಂದಿದೆ. ಈ ಪ್ರದೇಶದಲ್ಲಿ ಈಗ ‘ಭೂ-ಪ್ರವಾಸೋದ್ಯಮ’ ವೇಗವಾಗಿ ಬೆಳೆಯುತ್ತಿದೆ.

1021765 selat hormuz di senja hari

ಈ ಪರ್ವತಗಳ ವಿಶೇಷವೇನು ಗೊತ್ತೇ? ಸಾಮಾನ್ಯ ಪರ್ವತ ಶ್ರೇಣಿಗಳು ಭೂಖಂಡಗಳ ಪಲ್ಲಟದಿಂದ ಉಂಟಾಗುತ್ತವೆ. ಆದರೆ, ಹಾರ್ಮುಜ್ ಶ್ರೇಣಿಯ ಪರ್ವತಗಳು ಉಪ್ಪು ಮತ್ತು ಖನಿಜಗಳಿಂದ ಸೃಷ್ಟಿಯಾದ ಬೃಹತ್ ನಿಕ್ಷೇಪಗಳಾಗಿವೆ.

ಇವುಗಳ ರಚನೆಯ ಪ್ರಕ್ರಿಯೆಯು ಸುಮಾರು 50-60 ಕೋಟಿ ವರ್ಷಗಳ ಹಿಂದೆ, ‘ಲೇಟ್ ಪ್ರಿಕೇಂಬ್ರಿಯನ್’ನಿಂದ ‘ಅರ್ಲಿ ಕ್ಯಾಂಬ್ರಿಯನ್’ ಅವಧಿಯಲ್ಲಿ ಪ್ರಾರಂಭವಾಗಿತ್ತು. ಆ ಸಮಯದಲ್ಲಿ, ಖನಿಜಯುಕ್ತ ಆಳವಿಲ್ಲದ ಸಮುದ್ರಗಳು ಈ ಪ್ರದೇಶವನ್ನು ಪದೇ ಪದೇ ಆವರಿಸುತ್ತಿದ್ದವು. ಸಾವಿರಾರು ವರ್ಷಗಳ ನಿರಂತರ ಪ್ರಕ್ರಿಯೆಯಲ್ಲಿ ಇಲ್ಲಿನ ನೀರು, ಆವಿಯಾದಂತೆಲ್ಲ ದಪ್ಪನೆಯ ಉಪ್ಪಿನ ಪದರಗಳು ಅಲ್ಲಿಯೇ ಉಳಿದುಕೊಂಡವು. ಕಾಲಕ್ರಮೇಣ, ಈ ಉಪ್ಪಿನ ಪದರಗಳ ಮೇಲೆ ಭಾರೀ ಪ್ರಮಾಣದ ಸಮುದ್ರದ ಹೂಳು ಮತ್ತು ಜ್ವಾಲಾಮುಖಿ ಬಂಡೆಗಳ ಪದರಗಳು ಮುಚ್ಚಿಕೊಂಡವು. ಬಳಿಕ, ಈ ಉಪ್ಪಿನ ನಿಕ್ಷೇಪಗಳು ಪರ್ವತಗಳಾಗಿ ಮಾರ್ಪಟ್ಟವು.

ಈ ಮಾರ್ಪಡುವಿಕೆಗೆ ಮೂರು ವಿಭಿನ್ನ ಭೂವೈಜ್ಞಾನಿಕ ಪ್ರಕ್ರಿಯೆಗಳು ಕಾರಣವೆಂದು ಭೂ ವಿಜ್ಞಾನಿಗಳು ಹೇಳುತ್ತಾರೆ.

  1. ಭೂಫಲಕಗಳ ಚಲನೆ: ಕೋಟ್ಯಂತರ ವರ್ಷಗಳ ಹಿಂದೆ, ಅರೇಬಿಯನ್ ಮತ್ತು ಯುರೇಷಿಯನ್ ಭೂಭಾಗಗಳು ಪರಸ್ಪರ ಡಿಕ್ಕಿ ಹೊಡೆದಾಗ ಭೂಮಿಯ ಪದರದ ಮೇಲೆ ಒತ್ತಡ ಉಂಟಾಗಿ ಬಿರುಕುಗಳು ಮೂಡಿದವು. ಈ ಬಿರುಕುಗಳು ‘ಎಲಿವೇಟರ್’ಗಳಂತೆ ಕೆಲಸ ಮಾಡಿ, ತಳದಲ್ಲಿದ್ದ ಹೆಚ್ಚಿನ ಒತ್ತಡದ ಉಪ್ಪಿನ ನಿಕ್ಷೇಪಗಳನ್ನು ಮೇಲ್ಮೈಗೆ ತಳ್ಳಿದವು.
  2. ಉಪ್ಪಿನ ಹರಿವು: ಕಡಿಮೆ ಸ್ನಿಗ್ಧತೆ ಮತ್ತು ಹೆಚ್ಚಿನ ತೇಲುವಿಕೆ ಹೊಂದಿರುವ ಈ ಉಪ್ಪಿನ ನಿಕ್ಷೇಪಗಳು ಮೇಲ್ಮೈ ಕಡೆಗೆ ಹರಿಯುವಾಗ ಪೇಸ್ಟ್ ರೀತಿಯ ರೂಪ ಪಡೆದುಕೊಂಡವು. ಭೂವಿಜ್ಞಾನದಲ್ಲಿ ಇದನ್ನು ‘ಹ್ಯಾಲೋಕಿನೆಸಿಸ್’ ಎಂದು ಕರೆಯಲಾಗುತ್ತದೆ. ಅಂತಿಮವಾಗಿ, ಈ ಹ್ಯಾಲೋಕಿನೆಸಿಸ್‌ಗಳು ಭೂಮಿಯ ಪದರವನ್ನು ಭೇದಿಸಿಕೊಂಡು ಬೃಹತ್ ಗುಮ್ಮಟಗಳಾಗಿ ಮತ್ತು ‘ಹಾರ್ಮುಜ್ ದ್ವೀಪ’ದಂತಹ ಪರ್ವತಮಯ ದ್ವೀಪಗಳಾಗಿ ರೂಪುಗೊಂಡವು.
  3. ರಾಸಾಯನಿಕ ಹವಾಮಾನ ವೈಪರೀತ್ಯ: ಈ ಉಪ್ಪಿನ ಗುಡ್ಡಗಳು ಮೇಲೆ ಬರುವಾಗ ಜ್ವಾಲಾಮುಖಿ ಬಂಡೆಗಳು, ಜೇಡಿಮಣ್ಣು ಹಾಗೂ ಲೋಹಯುಕ್ತ ಖನಿಜಗಳ ಮಿಶ್ರಣವನ್ನೂ ಮೇಲೆ ತಂದವು. ಈ ಮಿಶ್ರಣವು ನೀರು, ಆಮ್ಲಜನಕ ಹಾಗೂ ಸೂರ್ಯನ ಬೆಳಕಿಗೆ ನಿರಂತರವಾಗಿ ಒಡ್ಡಿಕೊಂಡಾಗ ರಾಸಾಯನಿಕ ಪ್ರಕ್ರಿಯೆ ನಡೆದು ಬಣ್ಣಗಳು ಬದಲಾದವು.

ಇದರಿಂದಲೇ ಈ ರಚನೆಗಳಿಗೆ ‘ಕ್ಯಾಲಿಡೋಸ್ಕೋಪಿಕ್’ ಬಣ್ಣಗಳು ಬಂದಿವೆ. ಈ ರಚನೆಗಳಲ್ಲಿದ್ದ ಕಬ್ಬಿಣದ ಆಕ್ಸೈಡ್ ತುಕ್ಕು ಹಿಡಿದು, ಮಂಗಳ ಗ್ರಹದ ಮೇಲ್ಮೈನಲ್ಲಿರುವ ಹಿಮಟೈಟ್ ಕೆಂಪು ಬಣ್ಣದಂತೆ ಗಾಢ ಕೆಂಪು ಬಣ್ಣಕ್ಕೆ ತಿರುಗಿದವು. ಅಂತೆಯೇ, ಲಿಮೋನೈಟ್ ಖನಿಜವು ಹಳದಿ ಬಣ್ಣವನ್ನು ನೀಡಿದರೆ, ತಾಮ್ರದ ಸಂಯುಕ್ತಗಳು ಉತ್ಕರ್ಷಣಕ್ಕೊಳಗಾಗಿಎದ್ದುಕಾಣುವ ಹಸಿರು ಬಣ್ಣಕ್ಕೆ ತಿರುಗಿದವು. ಇವೆಲ್ಲವೂ ಬಿಳಿ ಬಣ್ಣದ ಉಪ್ಪಿನ ನಿಕ್ಷೇಪಗಳೊಂದಿಗೆ ಸೇರಿ ಅದ್ಭುತ ವೈವಿಧ್ಯಮಯ ನೋಟವನ್ನು ನೀಡುತ್ತಿವೆ. ಕಣ್ಮನ ಸೆಳೆಯುತ್ತಿವೆ.

Hormuz Island

ಚಿತ್ರಗಳಲ್ಲಿ ತೋರಿಸಿರುವಂತೆ, ಹಾರ್ಮುಜ್ ರಚನೆಯಲ್ಲಿ ಎಪ್ಪತ್ತಕ್ಕೂ ಹೆಚ್ಚು ವಿಭಿನ್ನ ಖನಿಜಗಳ ಸಾಂದ್ರತೆಯಿದೆ. ಪ್ರತಿಯೊಂದೂ ತನ್ನದೇ ಆದ ಬಣ್ಣವನ್ನು ಹೊಂದಿದೆ. ಇದು ಪ್ರಪಂಚದ ಇತರ ಪರ್ವತ ಶ್ರೇಣಿಗಳಿಗಿಂತ ಭಿನ್ನವಾದ ಭೂಪ್ರದೇಶವಾಗಿದೆ. ಸಾಮಾನ್ಯವಾಗಿ ಭೂಮಿಯ ಆಳದಲ್ಲಿ ಮರೆಯಾಗಿರುವ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಇದು ಒಂದು ಪ್ರಯೋಗಾಲಯದಂತೆ ಕೆಲಸ ಮಾಡುತ್ತಿದೆ.

ಇರಾನ್ ತಟದಲ್ಲಿರುವ ಪರ್ಷಿಯನ್ ಕೊಲ್ಲಿಯ ಈ ವಿದ್ಯಮಾನವು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಹಾರ್ಮುಜ್ ರಚನೆಗಳು ವಿಶಾಲವಾದ ‘ಪ್ಯಾಲಿಯೋಜಿಯೋಗ್ರಾಫಿಕ್’ ವ್ಯವಸ್ಥೆಯ ಭಾಗವಾಗಿವೆ. ಇಂತಹ ಉಪ್ಪಿನ ಕಣಿವೆಗಳು ಪಾಕಿಸ್ತಾನದ ‘ಸಾಲ್ಟ್ ರೇಂಜ್’ ಮೂಲಕ ಹಾದು ಭಾರತದ ವಾಯುವ್ಯ ಭಾಗದ ರಾಜಸ್ಥಾನವೂ ಸೇರಿದಂತೆ ಹಲವು ಭಾಗಗಳವರೆಗೂ ವಿಸ್ತರಿಸಿವೆ.

ಇಂದು, ಹಾರ್ಮುಜ್ ರಚನೆಯು ಗ್ರಹಗಳ ರಸಾಯನಶಾಸ್ತ್ರ ಮತ್ತು ಭೂವೈಜ್ಞಾನಿಕ ವಿಕಾಸದ ಒಂದು ಮಾಸ್ಟರ್‌ಪೀಸ್ ಆಗಿ ನಿಂತಿದೆ. ಆದರೆ, ಹಾರ್ಮುಜ್ ಜಲಸಂಧಿಯಲ್ಲಿ ಮುಂದುವರಿಯುತ್ತಿರುವ ಉದ್ವಿಗ್ನತೆಯು ಈ ಪ್ರದೇಶದ ಪ್ರವಾಸೋದ್ಯಮದ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಬರದ ಬೇಗೆಯಲ್ಲೂ ಕೈ ಹಿಡಿದ ಮೆಕ್ಕೆಜೋಳ; ರೈತ ಚಂ.ಸು ಪಾಟೀಲ್ ಸಾವಯವ ಸಾಧನೆ

"ಯಾವುದೇ ರಸಗೊಬ್ಬರಗಳನ್ನು ಬಳಸದೇ, ಕೀಟನಾಶಕಗಳನ್ನು ಸಿಂಪಡಿಸದೆಯೇ ಸಹಜ ಸಮೃದ್ಧ ಬೆಳೆ ಬೆಳೆಯುವುದು...

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ ‘ಮಹಾಭಿಯೋಗ’ ನಡೆದಿದೆಯೇ?

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು ಪ್ರದೇಶದ ರೈತರ ಭವಿಷ್ಯವೇನು?

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ...