ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನೂತನ ಅಧ್ಯಕ್ಷರಾಗಿ ಎಮ್.ಎ. ಮೌಲಾ ಆಯ್ಕೆ

Date:

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಮೌಲಾ ಉಡುಪಿ ಆಯ್ಕೆಯಾಗಿದ್ದಾರೆ. ಇಂದು ಉಡುಪಿಯ ಯು.ಬಿ.ಎಂ.ಸಿ. ಸಭಾಂಗಣದಲ್ಲಿ ನಡೆದ 2025-26 ನೇ ಸಾಲಿನ ಮಹಾಸಭೆಯಲ್ಲಿ ಅವರನ್ನು ಮುಂದಿನ 2 ವರ್ಷಗಳ ಅವಧಿಗೆ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

- Advertisement -

‌ಎಂ.ಎ. ಮೌಲಾ ಅವರು ಉಡುಪಿಯ ಖ್ಯಾತ ಉದ್ಯಮಿಯಾಗಿದ್ದು ವಿವಿಧ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಮುದಾಯಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಹಿಂದೆ 2 ಬಾರಿ ಅವರು ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಒಂದು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾಗಿ ಕೇಂದ್ರೀಯ ಮಟ್ಟದಲ್ಲಿ ಯಾಸೀನ್ ಮಲ್ಪೆ, ಇದ್ರೀಸ್ ಹೂಡೆ, ಇಕ್ಬಾಲ್ ಕಟಪಾಡಿ, ರಫೀಕ್ ಗಂಗೊಳ್ಳಿ ಮತ್ತು ಮೌಲಾನಾ ಝಮೀರ್ ಅಹ್ಮದ್ ರಶಾದಿ ಕಂಡ್ಲೂರು ಆಯ್ಕೆಯಾದರು. ವಿವಿಧ ಸಂಘಟನೆಗಳ ಪ್ರತಿನಿಧಿಗಳಾಗಿ ತೌಫೀಕ್ ಅಬ್ದುಲ್ಲಾ ನಾವುಂದ, ಡಾ. ಅಬ್ದುಲ್ ಅಝೀಝ್ ಮಣಿಪಾಲ್, ಅಬ್ದುರ್ರಹ್ಮಾನ್ ಕನ್ನಂಗಾರ್ ಮತ್ತು ಖಾಲಿದ್ ಮಣಿಪುರ ನೇಮಿಸಲ್ಪಟ್ಟರು.

ಉಡುಪಿ ತಾಲೂಕಿನಿಂದ ಜಿಲ್ಲಾ ಸಮಿತಿ ಸದಸ್ಯರಾಗಿ ಅಬ್ದುಲ್ ಅಝೀಝ್ ಉದ್ಯಾವರ, ಯಾಸೀನ್ ಬೆಂಗ್ರೆ, ಸೈಯದ್ ಫರೀದ್, ಇಕ್ಬಾಲ್ ಮನ್ನಾ, ಶಬ್ಬೀರ್ ಮಲ್ಪೆ, ಇರ್ಷಾದ್ ನೇಜಾರ್, ವಿ. ಎಸ್. ಉಮರ್ ಮತ್ತು ಆದಿಲ್ ಹೂಡೆ ಆಯ್ಕೆಯಾದರು.

ಕುಂದಾಪುರ ತಾಲೂಕಿನಿಂದ ರಿಯಾಝ್ ಕೋಡಿ, ದಸ್ತಗೀರ್ ಕಂಡ್ಲೂರು, ಶಾಬಾನ್ ಹಂಗ್ಳೂರ್, ಮುಷ್ತಾಕ್ ಹೆನ್ನಾಬೈಲು ಮತ್ತು ಹನೀಫ್ ಗುಲ್ವಾಡಿ, ಕಾಪು ತಾಲೂಕಿನಿಂದ ಶಭಿ ಅಹ್ಮದ್ ಖಾಝಿ, ನಸೀರ್ ಅಹ್ಮದ್ ಶರ್ಫುದ್ದೀನ್, ಅನ್ವರ್ ಅಲಿ, ಮುಹಮ್ಮದ್ ಆಝಮ್ ಶೇಖ್ ಮತ್ತು ಮುಹಮ್ಮದ್ ಇಕ್ಬಾಲ್, ಕಾರ್ಕಳ ತಾಲೂಕಿನಿಂದ ಮುಹಮ್ಮದ್ ಗೌಸ್, ಅಶ್ಫಾಕ್ ಅಹ್ಮದ್, ನಾಸಿರ್ ಶೇಖ್, ಮುಹಮ್ಮದ್ ಶರೀಫ್ ಬಂಗ್ಲೆಗುಡ್ಡೆ ಮತ್ತು ಮುಹಮ್ಮದ್ ಶರೀಫ್ ರೆಂಜಾಳ, ಬ್ರಹ್ಮಾವರದಿಂದ ತಾಜುದ್ದೀನ್ ಇಬ್ರಾಹಿಮ್, ಇಬ್ರಾಹಿಮ್ ಕೋಟ, ಆಸಿಫ್ ಬೈಕಾಡಿ, ಅಸ್ಲಮ್ ಹೈಕಾಡಿ ಮತ್ತು ಹಾರೂನ್ ರಶೀದ್ ಸಾಸ್ತಾನ ಹಾಗೂ ಬೈಂದೂರು ತಾಲೂಕಿನಿಂದ ಶಮ್ಸ್ ತಬ್ರೇಝ್, ಶೇಖ್ ಫಯಾಝ್ ಅಲಿ, ಅಮೀನ್ ಗೋಳಿಹೊಳೆ, ಅಫ್ತಾಬ್ ಕಿರಿ ಮಂಜೇಶ್ವರ ಮತ್ತು ತುಫೈಲ್ ಶಹಾಬುದ್ದೀನ್ ಆಯ್ಕೆಯಾದರು

ತದನಂತರ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಇಸ್ಮಾಯಿಲ್ ಹುಸೇನ್ ಕಟಪಾಡಿ, ಮುಸ್ತಫಾ ಸ ಅದಿ ಮೂಳೂರು , ಟಿ. ಎಮ್. ಜಫ್ರುಲ್ಲಾ ಹೂಡೆ, ಖತೀಬ್ ರಶೀದ್ ಮಲ್ಪೆ, ಬುವಾಜಿ ಮುಹ್ಸಿನ್ ಬೈಂದೂರು, ಶೇಖ್ ಅಬ್ದುಲ್ಲತೀಫ್ ಮದನಿ,
ರೈಹಾನ್ ತ್ರಾಸಿ, ಅಬೂ ಮುಹಮ್ಮದ್ ಮುಜಾವರ್ ಕುಂದಾಪುರ, ಪೀರು ಸಾಹೇಬ್ ಆದಿ ಉಡುಪಿ ಮತ್ತು ಬಿ. ಮುಹ್ಯುದ್ದೀನ್ ಕಟ್ಪಾಡಿ ಅವರನ್ನು ಜಿಲ್ಲಾ ಸಮಿತಿ ಸದಸ್ಯರಾಗಿ ಸಹಕರಣ ಮಾಡಿಕೊಳ್ಳಲಾಯಿತು.

ಭಟ್ಕಳದ ಮಜ್ಲಿಸೆ ಇಸ್ಲಾಹ್ ವ ತಂಝೀಮ್ ಇದರ ಪ್ರಧಾನ ಕಾರ್ಯದರ್ಶಿ ಮೌಲಾನಾ ಅಬ್ದುರ್ರಕೀಬ್ ನದ್ವಿ, ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಒಕ್ಕೂಟದ ಉಪಾಧ್ಯಕ್ಷರಾದ ಮೌಲಾನಾ ಝಮೀರ್ ಅಹ್ಮದ್ ರಶಾದಿ ಅವರ ಕುರ್ಆನ್ ಪಠನದೊಂದಿಗೆ ಮಹಾಸಭೆಯು ಆರಂಭಗೊಂಡಿತು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇದ್ರೀಸ್ ಹೂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ದ್ವೈವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸಯ್ಯದ್ ಫರೀದ್ ದ್ವೈವಾರ್ಷಿಕ ಲೆಕ್ಕಪತ್ರಗಳನ್ನು ಮಹಾಸಭೆಯ ಮುಂದಿಟ್ಟರು. ಅಧ್ಯಕ್ಷರಾದ ಮುಹಮ್ಮದ್ ಯಾಸೀನ್ ಮಲ್ಪೆ ಅಧ್ಯಕ್ಷೀಯ ಮಾತುಗಳನ್ನಾಡಿದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...