ಮೈಸೂರು | ಫೆ.22ರಂದು ಟಿ ಪಿ ಕೈಲಾಸಂರ ‘ಹುತ್ತದಲ್ಲಿ ಹುತ್ತ’ ಹಾಸ್ಯ ನಾಟಕ

Date:

ಅಂತರಂಗ ತಂಡವು ಮೈಸೂರಿನ ನಿರಂತರ ಫೌಂಡೇಶನ್ ಸಹಕಾರದಲ್ಲಿ ಟಿ.ಪಿ. ಕೈಲಾಸಂರ ‘ಹುತ್ತದಲ್ಲಿ ಹುತ್ತ’ ಹಾಸ್ಯ ನಾಟಕದ 64ನೇ ಪ್ರದರ್ಶನವನ್ನು ದಿನಾಂಕ-22-02-2026ನೇ ಭಾನುವಾರ, ಸಂಜೆ 7-15ಕ್ಕೆ ಕಿರು ರಂಗಮಂದಿರ, ಕಲಾಮಂದಿರ ಆವರಣ, ಮೈಸೂರಿನಲ್ಲಿ ಪ್ರದರ್ಶಿಸಲಿದೆ.

- Advertisement -

ಕೈಲಾಸಂರ ಹುತ್ತದಲ್ಲಿ ಹುತ್ತ ನಾಟಕದ 64ನೇ ಪ್ರದರ್ಶನವಾಗಿದ್ದು, ಅಂತರಂಗ ತಂಡ 46 ವರ್ಷಗಳಿಂದ ರಂಗಕ್ರಿಯೆಯನ್ನು ನಡೆಸಿಕೊಂಡು ಬಂದಿದೆ. ಅಂತರಂಗ ತಂಡವು ಕೈಲಾಸಂರ ‘ಹುತ್ತದಲ್ಲಿ ಹುತ್ತ’ ಹಾಸ್ಯ ನಾಟಕವನ್ನು ಈಗಾಗಲೇ ಯಶಸ್ವಿಯಾಗಿ ಪ್ರದರ್ಶಿಸಿದೆ. ಕೈಲಾಸಂ ಒಬ್ಬ ಅಪ್ರತಿಮ ನಾಟಕಕಾರ. ಇಂದಿಗೂ ಅವರ ನಾಟಕಗಳು ಪ್ರಸ್ತುತವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ರಂಗಭೂಮಿಯಲ್ಲಿ ಚಿರಸ್ಥಾಯಿಯಾಗಿರುವ ಹೆಸರು ಟಿ.ಪಿ. ಕೈಲಾಸಂ ರಚಿಸಿರುವ ವಿಭಿನ್ನ ಹಾಸ್ಯ ನಾಟಕ ‘ಹುತ್ತದಲ್ಲಿ ಹುತ್ತ’ ಹಲವಾರು ರಂಗಪ್ರದರ್ಶನ ಕಂಡಿದೆ. ಈ ನಾಟಕದ ಮೂಲ ನಿರ್ದೇಶನ ಡಾ. ಬಿ.ವಿ. ರಾಜಾರಾಂ. ಪರಿಷ್ಕೃತ ನಿರ್ದೆಶನ ಅರ್ಚನಾ ಶ್ಯಾಮ್. ಈ ನಾಟಕದಲ್ಲಿ ಪ್ರತಿಯೊಂದು ಸಂಭಾಷಣೆಯಲ್ಲೂ ಹಾಸ್ಯದ ಜೊತೆಗೆ ಗಂಭೀರ ಚಿಂತನೆಯೂ ಇದೆ.

ಈಗಾಗಲೇ ಹಲವಾರು ಪ್ರದರ್ಶನ ಕಂಡಿರುವ ನಾಟಕ ಇದೇ ಫೆಬ್ರವರಿ.22ರಂದು ಕಿರುರಂಗಮಂದಿರ, ಮೈಸೂರಿನಲ್ಲಿ ಪ್ರದರ್ಶನವಾಗಲಿದ್ದು, ಅತಿ ಹೆಚ್ಚಾಗಿ ರಂಗಾಸಕ್ತರು ಆಗಮಿಸಿ, ಪ್ರೋತ್ಸಾಹಿಸಬೇಕಾಗಿ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕುಶಾಲನಗರ | ‘ಪತ್ರಕರ್ತರ ನಡೆ ಹಾಡಿಯ ಕಡೆ’

ಆನ್‌ಲೈನ್ ಬುಕ್ಕಿಂಗ್-ಬುಕ್ ಮೈ ಶೋ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- ಅಂತರಂಗ ಶ್ಯಾಮ್-98809 14509, ಅಂತರಂಗ ಮುರುಳಿಧರ್-99869 11321.

ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು | ಪಾದಯಾತ್ರೆಗೂ ಸ್ಪಂದಿಸದ ಜಿಲ್ಲಾಡಳಿತ: ಆದಿವಾಸಿಗಳ ಹಕ್ಕುಗಳನ್ನು ಕೊಲ್ಲುತ್ತಿದೆಯೇ?

ಪತ್ರಿಕಾಗೋಷ್ಠಿಯಲ್ಲಿ ವಿ. ರಂಗನಾಥರಾವ್, ನಿರಂತರ ಶ್ರೀನಿವಾಸ್ ಪಾಲಹಳ್ಳಿ, ಅಂತರಂಗ ಶ್ಯಾಮ್, ಎಚ್.ವಿ. ನಟರಾಜ್, ವಿ. ನಂಜುಂಡ ರಾವ್ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಅಧಿಕಾರಿಗಳ ವಿರುದ್ಧ ದಾಖಲೆಗಳಿದ್ದರೆ ಕಾನೂನು ಹೋರಾಟ ನಡೆಸಲಿ ಮುಖಂಡರ ಅಗ್ರಹ

ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ಯಾವುದೇ...

ರಂಗಭೂಮಿ ಅಭಿನಯ ಕಲಿಸುವುದಷ್ಟೇ ಅಲ್ಲ, ಬದುಕನ್ನೂ ಕಲಿಸುವ ಶಾಲೆ: ಶ್ರೀನಿವಾಸ ಪಾಲಹಳ್ಳಿ

ರಂಗಭೂಮಿ ಕೇವಲ ಅಭಿನಯ ಕಲಿಸುವ ವೇದಿಕೆಯಲ್ಲ. ಅದು ಬದುಕನ್ನು ಅರ್ಥಮಾಡಿಕೊಳ್ಳುವ, ಮಾನವೀಯ...

SIR ಅಕ್ರಮ ಆರೋಪ: ಎಸ್‌ಐಟಿ ತನಿಖೆಗೆ ಎಸ್‌ಡಿಪಿಐ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ...

ಕಲಬುರಗಿ | ಬೈಕ್‌ಗೆ ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಡಿಕ್ಕಿ: ತಂದೆ, ಮಗಳು ಸ್ಥಳದಲ್ಲೇ ಸಾವು!

ಬೈಕ್‌ಗೆ ಸಿಮೆಂಟ್ ಮಿಕ್ಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ತಂದೆ, ಮಗಳು...