ಮೈಸೂರು | ಸಂಶೋಧನಾ ವಿಷಯವನ್ನು ಕೇವಲ ಆರಿಸಿಕೊಳ್ಳದೆ ರೂಪಿಸಿಕೊಳ್ಳಬೇಕು-ಪ್ರೊ. ರಹಮತ್ ತರೀಕೆರೆ

Date:

ಸಂಶೋಧಕರು ಸಂಶೋಧನಾ ವಿಷಯವನ್ನು ಕೇವಲ ಆಯ್ಕೆ ಮಾಡಿಕೊಳ್ಳದೆ, ಆಕರಗಳ ಅಧ್ಯಯನ ಮತ್ತು ವಿಶ್ಲೇಷಣೆಯ ಮೂಲಕ ಅದನ್ನು ರೂಪಿಸಿಕೊಳ್ಳಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ರಹಮತ್ ತರೀಕೆರೆ ಹೇಳಿದರು.

- Advertisement -

ಮಾನಸಗಂಗೋತ್ರಿಯ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದಲ್ಲಿ ಆ.12ರಂದು ಆಯೋಜಿಸಿದ್ದ ‘ಸಂಶೋಧನೆಯ ಮಹತ್ವ’ ಕುರಿತ ವಿಶೇಷ ಉಪನ್ಯಾಸ ಹಾಗೂ ಸಂಶೋಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಮಾನವನ ಹುಟ್ಟಿನಿಂದಲೇ ಸಂಶೋಧನೆಯ ಗುಣ ಜಾಗೃತವಾಗಿರುತ್ತದೆ. ಮಾನವ ನಾಗರಿಕತೆಯ ಉನ್ನತಿ ಹಾಗೂ ವಿಕಸನವು ಆತನ ಸಂಶೋಧನಾ ಗುಣದಿಂದಲೇ ಸಾಧ್ಯವಾಗಿದೆ. ಸಮಾಜದ ಉನ್ನತಿ ಮತ್ತು ಪರಿವರ್ತನೆಗೆ ಅಗತ್ಯವಾದ ಸಂಶೋಧನೆಗಳು ನಡೆಯಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.

ಸಂಶೋಧನೆ ಎಂಬುದು ದೃಷ್ಟಿಕೋನಬದ್ಧ ಸಾಪೇಕ್ಷ ಸತ್ಯವನ್ನು ಅತ್ಯಂತ ಜಾಗರೂಕತೆಯಿಂದ ಹಾಗೂ ಕ್ರಮಬದ್ಧವಾಗಿ ಹುಡುಕುವ ಬೌದ್ಧಿಕ ಕ್ರಿಯೆಯಾಗಿದೆ. ಸಂಶೋಧನೆಯು ಆಕರಗಳ ಸಂಗ್ರಹ, ಆಕರಗಳ ವಿಶ್ಲೇಷಣೆ, ವ್ಯಾಖ್ಯಾನ ಮತ್ತು ಪ್ರಮೇಯ ನಿರ್ಮಾಣ ಎಂಬ ನಾಲ್ಕು ಪ್ರಮುಖ ಆಯಾಮಗಳನ್ನು ಒಳಗೊಂಡಿದೆ ಎಂದರು.

ಆಕರಗಳೆಂಬ ಮೊಸರನ್ನು ಬೌದ್ಧಿಕವಾಗಿ ಮಥಿಸುವ ಕ್ರಿಯೆಯೇ ವಿಶ್ಲೇಷಣೆ. ಈ ಪ್ರಕ್ರಿಯೆಯಿಂದ ದೊರೆಯುವ ಬೆಣ್ಣೆ ಮತ್ತು ತುಪ್ಪದಂತಿರುವ ವ್ಯಾಖ್ಯಾನ ಹಾಗೂ ಪ್ರಮೇಯಗಳೇ ಸಂಶೋಧನೆಯ ಜೀವಾಳ ಎಂದು ಅವರು ರೂಪಕದ ಮೂಲಕ ವಿವರಿಸಿದರು.

ಸಂಶೋಧನಾ ವಿಷಯವು ಕೇವಲ ಮಾಹಿತಿ ಪ್ರಧಾನವಾಗಿರದೆ ಪರಿಕಲ್ಪನಾತ್ಮಕವಾಗಿರಬೇಕು. ಆಗ ಮಾತ್ರ ವಿಷಯವು ಅಗತ್ಯವಾದ ವಿಶ್ಲೇಷಣೆ ಮತ್ತು ವ್ಯಾಖ್ಯಾನಗಳಿಗೆ ತೆರೆದುಕೊಳ್ಳುತ್ತದೆ. ಆದ್ದರಿಂದ ಸಂಶೋಧಕರು ತಮ್ಮ ವಿಷಯವನ್ನು ಕೇವಲ ಆರಿಸಿಕೊಳ್ಳದೆ, ಅದನ್ನು ರೂಪಿಸಿಕೊಳ್ಳಬೇಕು. ಆಕರಗಳ ಆಧಾರದ ಮೇಲೆಯೇ ಸೂಕ್ತ ತಾತ್ವಿಕ ಚೌಕಟ್ಟನ್ನು ರೂಪಿಸಿಕೊಂಡಾಗ ಸಂಶೋಧನಾ ಸಮಸ್ಯೆಯೊಂದಿಗೆ ಸಾವಯವ ಸಂಬಂಧವನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ. ಹಳೆಯ ಮಾದರಿಗಳನ್ನು ಮುರಿದು ಹೊಸದಾಗಿ ಕಟ್ಟುವ ಗುಣವು ಉತ್ತಮ ಸಂಶೋಧನೆಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಕೇಂದ್ರದ ನಿರ್ದೇಶಕ ಪ್ರೊ. ಎಸ್. ನರೇಂದ್ರಕುಮಾರ್, ಸಂಶೋಧನಾರ್ಥಿಗಳು ತಮ್ಮ ಸಂಶೋಧನೆಯ ಮಹತ್ವವನ್ನು ಅರಿತುಕೊಳ್ಳುವುದು ಅತ್ಯಂತ ಅಗತ್ಯ. ಮಾನವನ ಪ್ರಗತಿಯಲ್ಲಿಯೂ ಸಂಶೋಧನೆಯ ಪಾತ್ರ ಮಹತ್ವದ್ದಾಗಿದೆ. ಪ್ರಸ್ತುತ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಸಂಶೋಧನೆಯಲ್ಲಿನ ನವ ಆಯಾಮಗಳನ್ನು ಹೊಸ ತಲೆಮಾರಿನ ಸಂಶೋಧಕರಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಈ ವಿಶೇಷ ಸುದ್ದಿ ಓದಿದ್ದೀರಾ? ಹಳೇ ಮೈಸೂರು: ದಲಿತ ಅಸ್ಮಿತೆಯ ತವರು; ಮತದಲ್ಲಿ ಶಕ್ತಿ, ಅಧಿಕಾರದಲ್ಲಿ ಹಿನ್ನಡೆ ಏಕೆ?

ಉಪನ್ಯಾಸದಲ್ಲಿ ಕೇಂದ್ರದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಜೆ. ಸೋಮಶೇಖರ್, ಡಾ. ಗೋಪಾಲ್, ಡಾ. ನಿಂಗಯ್ಯ, ಡಾ. ಕಲಾವತಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಶೋಷಿತ ಸಮುದಾಯಗಳ ಪ್ರಗತಿಗೆ ಶಿಕ್ಷಣ, ಸಂಘಟನೆ, ಹೋರಾಟ ಅಗತ್ಯ: ಪರಶುರಾಮ್ ನೀಲನಾಯಕ

ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯಗಳು ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಲು ಶಿಕ್ಷಣ, ಸಂಘಟನೆ...