ಪಿರಿಯಾಪಟ್ಟಣ | ವಚನ ಸಾಹಿತ್ಯ ಕನ್ನಡದ ಅಮೂಲ್ಯ ಧನ; ಫ.ಗು. ಹಳಕಟ್ಟಿ ಅವರ ಸೇವೆ ಅಪರೂಪದ ಸಾಧನೆ: ಮೋಕ್ಷಪತಿ ಸ್ವಾಮೀಜಿ

Date:

ಗೆದ್ದಲು ಹಿಡಿದು ಹಾಳಾಗಿದ್ದ ತಾಳೆಗರಿಗಳು ಹಾಗೂ ಮನೆಮನೆಗಳಲ್ಲಿ ಚದುರಿಹೋಗಿದ್ದ ವಚನಗಳನ್ನು ಸಂಗ್ರಹಿಸಿ, ಅಸಾಧ್ಯವೆನಿಸಿದ ಕಾರ್ಯವನ್ನು ಸಾಧಿಸಿದ ಮಹನೀಯರು ವಚನ ಪಿತಾಮಹ ಫ.ಗು. ಹಳಕಟ್ಟಿ ಎಂದು ರಾವಂದೂರು ಮುರುಘಾ ರಾಜೇಂದ್ರ ಮಠದ ಮೋಕ್ಷಪತಿ ಸ್ವಾಮೀಜಿ ಹೇಳಿದರು.

- Advertisement -

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ಹೊರವಲಯದಲ್ಲಿರುವ ಅನಿಕೇತನ ಪಿಯು ಕಾಲೇಜಿನ ಆದಿಕವಿ ಪಂಪ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ವಚನ ಪಿತಾಮಹ ಫ.ಗು. ಹಳಕಟ್ಟಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ವಚನ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ದೊರೆತ ಅಮೂಲ್ಯ ಕೊಡುಗೆಯಾಗಿದ್ದು, ಅದು ಮನುಕುಲದ ನಿಜವಾದ ಸಂವಿಧಾನದಂತಿದೆ ಎಂದು ಅವರು ಹೇಳಿದರು. ಬಸವಣ್ಣನವರ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ವಚನವೇ ಬದುಕಿಗೆ ಮಾರ್ಗದರ್ಶಕವಾಗಿದ್ದು, ಅದರ ಸಪ್ತಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಮನುಷ್ಯರಾಗಲು ಸಾಧ್ಯ ಎಂದು ಪ್ರತಿಪಾದಿಸಿದರು. ವಚನಕಾರರ ಆದರ್ಶಗಳನ್ನು ಅಳವಡಿಸಿಕೊಂಡು ಅವರಂತೆ ಬದುಕುವ ಸಂಕಲ್ಪವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮೈಸೂರು ಮಹಾಜನ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಪ್ರಕಾಶ್ ಜಿ.ಎಸ್. ಹಳ್ಳಿ ಮಾತನಾಡಿ, ವಚನಕಾರರು ಅಚ್ಚ ಕನ್ನಡದ ಬೇಸಾಯಗಾರರಾಗಿದ್ದು, ಓಲೆಗರಿಗಳಲ್ಲಿ ಹಾಗೂ ಜನರ ಬಾಯಿಮಾತಿನಲ್ಲಿ ಉಳಿದಿದ್ದ ವಚನಗಳನ್ನು ಸಂಗ್ರಹಿಸಿ ಗ್ರಂಥ ರೂಪದಲ್ಲಿ ಉಳಿಸಿದ ಕೀರ್ತಿ ಫ.ಗು. ಹಳಕಟ್ಟಿಯವರದು ಎಂದರು. ಅವರು ಸೈಕಲ್‌ನಲ್ಲಿ ಮನೆಮನೆಗೆ ತೆರಳಿ ತಾಳೆಗರಿಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಟ್ಟರು ಎಂದು ಹೇಳಿದರು.

ವಚನಗಳ ಪ್ರಕಟಣೆಗೆ ಮಾಡಿದ ಸಾಲವನ್ನು ತೀರಿಸಲು ಫ.ಗು. ಹಳಕಟ್ಟಿ ತಮ್ಮ ಮನೆಯನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಯಿತು. ನಂತರ ದಾವಣಗೆರೆಯ ತರಳಬಾಳು ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸನ್ಮಾನಿಸಿ ಚಿನ್ನವನ್ನು ನೀಡಿ, ಅದನ್ನು ಮಾರಾಟ ಮಾಡಿ ಸಾಲ ತೀರಿಸುವಂತೆ ಸಲಹೆ ನೀಡಿದ್ದರು. ಇಂತಹ ಮಹನೀಯರ ಸೇವೆಯಿಂದಲೇ ವಚನ ಸಾಹಿತ್ಯ ಉಳಿದುಕೊಂಡಿದ್ದು, ಅವರು ಇರದಿದ್ದರೆ ಅದು ಕೇವಲ ಜನಪದ ಕಥೆಯಾಗಿ ಉಳಿದು ಹೋಗುತ್ತಿತ್ತು ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಬಿ.ಜೆ. ಜಗದೀಶ್ ಮಾತನಾಡಿ, ಸಾಮಾಜಿಕ ಹಾಗೂ ವೈಚಾರಿಕ ಚಿಂತನೆಗಳಿಂದ ವಿಶ್ವ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವುದು ವಚನ ಸಾಹಿತ್ಯ. ಈ ಅಮೂಲ್ಯ ಸಂಪತ್ತನ್ನು ಕನ್ನಡಿಗರಿಗೆ ಪರಿಚಯಿಸಿದ ಕೀರ್ತಿ ಫ.ಗು. ಹಳಕಟ್ಟಿಯವರದು ಎಂದರು. ಅವರ ಸಾಧನೆಯನ್ನು ಮೆಚ್ಚಿದ ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯ ಅವರು ಹಳಕಟ್ಟಿಯವರನ್ನು ‘ವಚನ ಗುಮ್ಮಟ’ ಎಂದು ಕರೆದಿರುವುದನ್ನು ಸ್ಮರಿಸಿದರು.

ಲೇಖಕ ಇ. ಸುಲೇಮಾನ್ ಮಾತನಾಡಿ, ಯಜ್ಞ-ಯಾಗ ಸೇರಿದಂತೆ ವೈದಿಕ ಆಚರಣೆಗಳ ವಿರುದ್ಧ ನಡೆದ ಸಾಮಾಜಿಕ ಚಳವಳಿಯೇ ವಚನ ಸಾಹಿತ್ಯ. ಇದು ಅಮೂಲ್ಯವಾದ ಚಿನ್ನದ ಗಣಿಯಂತಿದ್ದು, ಆ ಗಣಿಯನ್ನು ಹೊರತೆಗೆದು ಸಮಾಜಕ್ಕೆ ನೀಡಿದವರು ಫ.ಗು. ಹಳಕಟ್ಟಿ ಎಂದು ಹೇಳಿದರು.

ಚಿಂತಕ ಆರ್.ಎಸ್. ದೊಡ್ಡಣ್ಣ ಮಾತನಾಡಿ, ಸಮಾಜದಲ್ಲಿದ್ದ ಅಸಮಾನತೆ ಮತ್ತು ಕಲುಷಿತ ವಾತಾವರಣವನ್ನು ದೂರ ಮಾಡಿ ಸಮಸಮಾಜ ನಿರ್ಮಾಣವೇ ಬಸವಾದಿ ಶರಣರ ಪ್ರಮುಖ ಆಶಯವಾಗಿತ್ತು. ವಚನ ಸಾಹಿತ್ಯವು ಸಾಮಾಜಿಕ ಪರಿವರ್ತನೆಯ ಮಹತ್ವದ ಸಾಧನವಾಗಿದೆ ಎಂದು ಹೇಳಿದರು.

ಈ ಸುದ್ಧಿ ಓದಿದ್ದೀರಾ?ಕೊಡಗಿನಲ್ಲಿ ಮಳೆ; ಕಳೆದ ವರ್ಷಕ್ಕೆ ಹೋಲಿಸಿದರೆ ಸಾಕಷ್ಟು ಕೊರತೆ

ಕಾರ್ಯಕ್ರಮದಲ್ಲಿ ರಂಗಕರ್ಮಿ ಭರಮಣ್ಣ ಬೆಟಗೇರಿ, ಶ್ರಾವ್ಯ, ಕಾರ್ಯದರ್ಶಿ ಡಾ. ಜೆ. ಸೋಮಣ್ಣ, ಪ್ರಾಂಶುಪಾಲ ಅಭಿಜಿತ್, ಉಪನ್ಯಾಸಕರಾದ ಬಸವರಾಜು, ರಜನಿ, ಅರ್ಪಿತಾ, ಸುಧಾ, ಆರ್. ಸಿಂಚನ, ಶರೀಫ್ ಹಾಗೂ ಕನ್ನಡ ಸಾಹಿತ್ಯ ಸಂಘದ ವಿದ್ಯಾರ್ಥಿಗಳಾದ ಅರ್ಚನಾ, ಐಶ್ವರ್ಯ, ಪ್ರಕೃತಿ, ಹರ್ಷಿತಾ ಸೇರಿದಂತೆ ಹಲವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ಹುದ್ದೆಯಿಂದ ವಜಾಗೊಳಿಸಿ: ಬಸವರಾಜ ಎಸ್ ಆಗ್ರಹ

"ಪ್ರಜಾಪ್ರಭುತ್ವ ಭಾರತದಲ್ಲಿ ಜನರ ಅತ್ಯಂತ ಪವಿತ್ರವಾದದ್ದು. ಮತದಾನದ ಹಕ್ಕನ್ನೇ ಕಸಿದುಕೊಳ್ಳುತ್ತಿರುವ ಚುನಾವಣಾ...

ಚಿಕ್ಕಮಗಳೂರು | ಭೂಮಿಯ ರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಸ್ವಚ್ಛ; ಸಿ.ಟಿ ರವಿ 

ಚಿಕ್ಕಮಗಳೂರು ನಗರ ಘಟಕದ ವತಿಯಿಂದ ಬಾಳೇಹಳ್ಳಿಯ ಶ್ರೀ ಸಿದ್ದೇಶ್ವರ ಮತ್ತು ಶ್ರೀ...

ಅ.17ರಿಂದ ಮೂರು ದಿನಗಳ ಕಾಲ ಅದ್ದೂರಿ ಚಾಮರಾಜನಗರ ದಸರಾ

ಚಾಮರಾಜನಗರದಲ್ಲಿ ಅಕ್ಟೋಬರ್ 17, 18 ಮತ್ತು 19ರಂದು ಮೂರು ದಿನಗಳ ಕಾಲ...

ಧಾರವಾಡ | ಪಶ್ಚಿಮ ಪದವೀಧರರ ಕ್ಷೇತ್ರ ಕಣದಲ್ಲಿ 14 ಅಭ್ಯರ್ಥಿಗಳು; ಅ.23ರಂದು ಮತದಾನ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಅಕ್ಟೋಬರ್ 23ರಂದು...