ಸರೀಸೃಪ ನಿರ್ವಹಣೆ ಹೆಸರಿನಲ್ಲಿ ಅನಧಿಕೃತ ಹಾವು ಹಿಡಿಯುವ ತರಬೇತಿ ಶಿಬಿರ; ಕಾನೂನು ಕ್ರಮಕ್ಕೆ ಆಗ್ರಹ

Date:

ಮೈಸೂರಿನಲ್ಲಿ ಮೇ‌ 23 ಮತ್ತು 24 ರಂದು Kalinga Centre for Rainforest Ecology ಮತ್ತು ಕಾಳಿಂಗ ಫೌಂಡೇಶನ್ ಸಂಸ್ಥೆಗಳು ‘ಸರೀಸೃಪ ನಿರ್ವಹಣೆ ಕುರಿತು ವೈಜ್ಞಾನಿಕ ತರಬೇತಿ’ (STORM) ಹೆಸರಿನಲ್ಲಿ ಹಾವು ಹಿಡಿಯುವ ತರಬೇಕಿ ನೀಡಲು ಅನಧಿಕೃತ ಶಿಬಿರವನ್ನು ಆಯೋಜಿಸಿವೆ. ಈ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಉರಗ ರಕ್ಷಣೆಯ ವಿಷಯದಲ್ಲಿ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಸಬೀನಾ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಮತ್ತು ಅರಣ್ಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

- Advertisement -

ಪತ್ರದಲ್ಲಿ; “ಕಾಳಿಂಗ ಫೌಂಡೇಶನ್ ಮತ್ತು ಕಾಳಿಂಗ ಕೇಂದ್ರಗಳು ಮೈಸೂರಿನ ಜೆಪಿ ನಗರದಲ್ಲಿರುವ ‘ದಿ ರೇಡ್ ಲೋಟಸ್ ಪ್ರೀಮಿಯಂ’ ಎಂಬ ಜಾಗದಲ್ಲಿ ಅನಧಿಕೃತ ಶಿಬಿರ ಆಯೋಜಿಸಿವೆ. ಹಾವು ಹಿಡಿಯುವ ತರಬೇತಿ ನೀಡುತ್ತಿವೆ. ಹಾವುಗಳು ವಿಶಿಷ್ಟ ಜೀವಿಗಳಾಗಿದ್ದು, ಅವುಗಳನ್ನು ನಾವು ವಿಶೇಷ ಮುತುವರ್ಜಿ ವಹಿಸಿ ಸಂರಕ್ಷಣೆ ಮಾಡಬೇಕು. ಹಾವು ಸೇರಿದಂತೆ, ಎಲ್ಲ ವನ್ಯಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ ಇದೆ. ಹೀಗಿರುವಾಗ ಖಾಸಗಿ ವ್ಯಕ್ತಿಗಳು ಮತ್ತು ಖಾಸಗಿ ಸಂಸ್ಥೆಗಳು ಹಾವು ಹಿಡಿಯಲು ತರಬೇತಿ ಕೊಡುತ್ತೇವೆ ಎನ್ನುವುದು ಆಶ್ಚರ್ಯ ಮತ್ತು ಆತಂಕ ಹುಟ್ಟುಹಾಕಿದೆ. ಅರಣ್ಯ ಇಲಾಖೆ ಇರುವಾಗ ಸಾರ್ವಜನಿಕರು ಏಕೆ ಹಾವು ಹಿಡಿಯಬೇಕು” ಎಂದು ಪ್ರಶ್ನಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

 “ಈ ಶಿಬಿರದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಂದ 9,027 ರೂ. ಶುಲ್ಕ ಪಡೆಯಲಾಗುತ್ತಿದೆ. ಇದು ಮೇಲ್ನೋಟಕ್ಕೆ ವನ್ಯಜೀವಿಗಳ ಸಂರಕ್ಷಣೆ ಹೆಸರಿನಲ್ಲಿ ಮಾಡುತ್ತಿರುವ ವಾಣಿಜ್ಯಿಕ ಚಟುವಟಿಕೆಯಾಗಿದೆ‌. STORM ಕಾರ್ಯಾಗಾರದ ಪ್ರೊಮೋಷನ್ ವಿಡಿಯೋಗಳಲ್ಲಿ Live Snake Rescue, Herping ಹೆಸರಿನಲ್ಲಿ ಹಾವುಗಳಿಗೆ ಹಿಂಸೆ ಮಾಡುವುದು ಕಂಡುಬಂದಿದೆ. ಶಿಕ್ಷಣ, ಜಾಗೃತಿಯ ಹೆಸರಿನಲ್ಲಿ ಜೀವಂತ ಹಾವುಗಳನ್ನು ಹಿಡಿದುಕೊಂಡು ಪ್ರದರ್ಶನ ಮಾಡುತ್ತಿರುವುದು ತೀವ್ರ ಖಂಡನೀಯ. ಸೋಷಿಯಲ್ ಮೀಡಿಯಾ ಲೈಕ್ಸ್, ಶೇರ್‌ಗಳಿಗಾಗಿ ಹಾಗೂ ಹಣ ಗಳಿಕೆಗಾಗಿ ವನ್ಯಜೀವಿ, ಪರಿಸರ ಕಾಯ್ದೆ, ಕಾನೂನುಗಳನ್ನು ಗಾಳಿಗೆ ತೂರಿ ವನ್ಯಜೀವಿಗಳನ್ನು ತಮಗಿಷ್ಟ ಬಂದಂತೆ ಬಳಸಿಕೊಳ್ಳುವುದು ಖೇದಕರ” ಎಂದು ಸಬೀನಾ ಆಕ್ರೋಶ ವ್ಯಕ್ತಪಸಿದ್ದಾರೆ.

“ಖಾಸಗಿ ವ್ಯಕ್ತಿಗಳು ಮತ್ತು ಖಾಸಗಿ ಸಂಸ್ಥೆಗಳು ಅನಧಿಕೃತವಾಗಿ ಹಾವು ರಕ್ಷಣೆಯ ತರಬೇತಿ ಕೊಟ್ಟು, ಪ್ರಮಾಣ ಪತ್ರ ಕೊಟ್ಟು ಹಾವು ಹಿಡಿಯಲು ತೊಡಗಿಸಿಕೊಳ್ಳಿ ಎಂದು ಪ್ರೋತ್ಸಾಹಿಸುವುದು ಆತಂಕಕಾರಿ. 2 ದಿನಗಳಲ್ಲಿ, ಅವಸರದಲ್ಲಿ ತರಬೇತಿ ಪಡೆದುಕೊಳ್ಳುವವರು ಹಾವು ಹಿಡಿಯಲು ಹೋಗಿ ಪ್ರಾಣಾಪಾಯಕ್ಕೆ ತುತ್ತಾದರೆ ಜವಾಬ್ದಾರಿ ಯಾರದ್ದು? ಅರಣ್ಯ ಇಲಾಖೆಯಿಂದ ಸೂಕ್ತ ಅನುಮತಿ ಇಲ್ಲದೆ ಅನಧಿಕೃತವಾಗಿ ನಡೆಯುತ್ತಿರುವ STORM ಶಿಬಿರವನ್ನು ತಡೆಯಬೇಕು. ವಿಡಿಯೋಗಳ ಆಧಾರದ ಮೇಲೆ ಪಿ. ಗೌರಿಶಂಕರ್, ಸ್ನೇಕ್ ಶ್ಯಾಮ್, ಪ್ರಿಯಾಂಕಾ ಸ್ವಾಮಿ ಅವರುಗಳ ಮೇಲೆ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಸಬೀನಾ ಒತ್ತಾಯಿಸಿದ್ದಾರೆ.

“ಅರಣ್ಯ ಇಲಾಖೆ ಉರಗ ರಕ್ಷಣೆಯ ತರಬೇತಿಯನ್ನು ತನ್ನ ಸಿಬ್ಬಂದಿಗಳು ಮತ್ತು ಆಸಕ್ತ ಉರಗ ರಕ್ಷಕರಿಗೆ ಕಾಲಕಾಲಕ್ಕೆ ಕೊಡದೇ ಇರುವುದರಿಂದ, ಪ್ರಮಾಣ ಪತ್ರ ನೀಡದೇ ಇರುವುದರಿಂದ, ಇಂತಹ ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ತಮಗಿಷ್ಟ ಬಂದಂತೆ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ದುರುಪಯೋಗ ಪಡಿಸಿಕೊಂಡಿದ್ದಾರೆ. ಹಾಗಾಗಿ, ಶೀಘ್ರವಾಗಿ ಅರಣ್ಯ ಇಲಾಖೆಯು ತನ್ನ ಸಿಬ್ಬಂದಿಗಳಿಗೆ ಉರಗ ರಕ್ಷಣೆಯ ತರಬೇತಿ ಕೊಡಿಸಬೇಕು. ಹಾವು ರಕ್ಷಣೆಯ ಸಂದರ್ಭದಲ್ಲಿ ಕಡ್ಡಾಯವಾಗಿ Standard Operating Procedure ಅನುಷ್ಠಾನಕ್ಕೆ ತರಬೇಕು. ಎಲ್ಲ ಹಾವು ರಕ್ಷಣೆಯನ್ನು ಅರಣ್ಯ ಇಲಾಖೆಯ ಸಮಕ್ಷಮದಲ್ಲಿಯೇ ಮಾಡಬೇಕು. ಅನಗತ್ಯವಾಗಿ ಹಾವು ಹಿಡಿದು ಫೋಟೋ , ವಿಡಿಯೋ, ರೀಲ್ಸ್ ಮಾಡುವುದು, ಸ್ಟಂಟ್ ಮಾಡುವುದು; ವನ್ಯಜೀವಿಗಳನ್ನು ಬಳಸಿಕೊಂಡು ವೈಯಕ್ತಿಕ ಖ್ಯಾತಿ, ಪ್ರಚಾರಕ್ಕೆ ಮುಂದಾಗುವವರ ಮೇಲೆ ಪ್ರಕರಣ ದಾಖಲಿಸಬೇಕು” ಎಂದು ಸಬೀನಾ ಆಗ್ರಹಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೋವಿ ಸಮುದಾಯದ ಅರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಲು ಮುತುವರ್ಜಿ ವಹಿಸಿ : ರಾಮಪ್ಪ ಎಂ

ಭೋವಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ...

ರಾಯಚೂರು | ಭೀಕರ ಬರ: ₹11 ಕೋಟಿ ಬಿಡುಗಡೆ: ಸಚಿವ ಅಜಯ್ ಸಿಂಗ್

ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ಇದ್ದು, ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ...

ಉತ್ತರ ಕನ್ನಡ | ಪಶ್ಚಿಮ ಪದವೀಧರ ಕ್ಷೇತ್ರ: ನಾಮಪತ್ರ ಹಿಂಪಡೆಯಲು ಅಕ್ಟೋಬರ್ 9 ಕೊನೆಯ ದಿನ

ಉತ್ತರ ಕನ್ನಡ: ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರದ ವಿಧಾನ ಪರಿಷತ್...

ರಾಯಚೂರು | ಲಿಂಗಸುಗೂರು ಡಿವೈಎಸ್ಪಿಯಾಗಿ ಸುಲೇಮಾನ್ ತಹಶೀಲ್ದಾರ್ ವರ್ಗಾವಣೆ

ಲಿಂಗಸುಗೂರ ಪೊಲೀಸ್ ಉಪವಿಭಾಗಕ್ಕೆ ನೂತನ ಡಿವೈಎಸ್ಪಿಯಾಗಿ ಸುಲೇಮಾನ್ ತಹಶೀಲ್ದಾರ್ ಅವರನ್ನು ವರ್ಗಾವಣೆ...