ಧರ್ಮಸ್ಥಳ ಸಂಘದಲ್ಲಿ ಸಾಲ ಮನ್ನಾಗೆ ಆಗ್ರಹಿಸಿ ಬಹಿರಂಗ ಪತ್ರ

Date:

ಈ ವರ್ಷ ರಾಜ್ಯದಲ್ಲಿ ಮುಂಗಾಳೆ ಮಳೆ ಸುರಿಯದೆ ಬರ ಎದುರಾಗಿದೆ. ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಧರ್ಮಸ್ಥಳ ಸಹಕಾರ ಸಂಘಗಳಲ್ಲಿ ಜನರು ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು ಅಥವಾ ಸಾಲ ಪಾವತಿ ಮುಂದೂಡಬೇಕು ಎಂದು ಒತ್ತಾಯಿಸಿ ಧರ್ಮಸ್ಥಳ ಸಂಘದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗಡೆ ಅವರಿಗೆ ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶುರಾಮ್ ಎಂ.ಎಲ್ ಬಹಿರಂಗ ಪತ್ರ ಬಡೆದಿದ್ದಾರೆ.

- Advertisement -

“ಕರ್ನಾಟಕದಲ್ಲಿ ಎಲ್ಲಿಯೂ ಕಾಲ ಕಾಲಕ್ಕೆ ಸಮರ್ಥವಾಗಿ ಮಳೆಯಾಗದೇ, ಬರ ಕಾಣಿಸಿಕೊಳ್ಳ ತೊಡಗಿದೆ. ಗ್ರಾಮೀಣ ಜನರ ದಿನನಿತ್ಯದ ಬದುಕು ಹೈರಾಣವಾಗುತ್ತಿದ್ದು, ಗ್ರಾಮಮಟ್ಟದಲ್ಲಿ ಉಳಿದು ಬದುಕುವುದೇ ಕಷ್ಟವಾಗಿದೆ. ಮೇವು ನೀರಿಗೆ, ಪರದಾಡುವಂತಹಾಗಿದೆ. ತಾವು ಕಷ್ಟ ಸುಖಗಳನ್ನು ಆಲೈಸಿ, ಜನರ ದುಃಖ ದುಮ್ಮಾನ ಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡುವ ರಾಜ್ಯಸಭಾ ಸದಸ್ಯರಾಗಿರುತ್ತೀರಿ. ಈಗ ಎದುರಾಗಿರುವ ಬರದ ಸಂದರ್ಭದಲ್ಲಿ ಧರ್ಮಸ್ಥಳದ ಸಹಕಾರ ಸಂಘಗಳಿಂದ ಪಡೆದ ಸಾಲರೂಪದ ಹಣವನ್ನು, ಎಷ್ಟು ಕುಟುಂಬಗಳು ಕಂತುಗಳನ್ನು ಕಟ್ಟಲಾಗದೇ ನರಳುವಂಥಾಗಿದೆ. ಹಾಗಾಗಿ, ಈ ವರ್ಷ ಸಾಲವನ್ನು ಗ್ರಾಮ ಮಟ್ಟದಲ್ಲಿ ಮನ್ನಾ ಮಾಡಲು ವಿನಂತಿಸುತ್ತೇನೆ” ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

“ಸಾಲದ ಮರುಪಾವತಿಯ ಆಗಲೇಬೇಕು ಎಂದರೆ, ಈ ವರ್ಷದ ಬದಲು ಮುಂದಿನ ವರ್ಷ ಮುಂದೂಡಬೇಕೆಂದು ವಿನಂತಿಸುತ್ತೇನೆ. ಅದು ಸಾಧ್ಯವಿಲ್ಲವೆಂದರೆ, ಬಡ್ಡಿ ಆದರೂ ಮನ್ನಾ ಮಾಡಲು ನಿಮ್ಮ ಧರ್ಮಸ್ಥಳದ ಸಹಕಾರ ಸಂಘಗಳ ಬಗ್ಗೆ ವಿನಂತಿಸುತ್ತೇನೆ. ಈ ಬಾರಿ ಮಳೆಯಾಗದೆ ಬಹಳಷ್ಟು ಜನ ನೊಂದಿದ್ದಾರೆ. ದಯಮಾಡಿ ತೊಂದರೆಗೊಳಗಾದ ಗ್ರಾಮೀಣ ಜನರ ಸಮಸ್ಯೆಗಳನ್ನು ಧರ್ಮಾಧಿಕಾರಿಗಳಾದ ತಾವು ‌ಬಗೆಹರಿಸಬೇಕೆಂದು ಕೋರಿಕೊಳ್ಳುತ್ತೇನೆ. ಧರ್ಮಾಧಿಕಾರಿಗಳ ಮುಂದೆ ಮತ್ತೊಮ್ಮೆ ಕಳಕಳಿಯ ಪ್ರಾರ್ಥನೆ. ಬಡ್ಡಿ ಮತ್ತು ಸಾಲವನ್ನು ಮನ್ನಾ ಮಾಡಿ, ಈ ವರ್ಷದ ಮಟ್ಟಕ್ಕೆ ಆದರ್ಶವನ್ನು ಮೆರೆಯಬೇಕೆಂದು ಮನವಿ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮಾಜಿ ಗ್ರಾ. ಪಂ ಸದಸ್ಯನ ಬರ್ಬರ ಹತ್ಯೆ

ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರನ್ನು ಬರ್ಬರವಾಗಿ ಹತ್ಯೆ...

ಹಾವೇರಿ‌ | ಬಾಲಕರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ

ಚುನಾವಣಾ ಸಂಬಂಧಿತ ಕಾರ್ಯಗಳ ಪರಿಶೀಲನೆಯ ಜೊತೆಗೆ, ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ...

ಗದಗ | ಮಾನವ ದಿನಗಳ ಸೃಜನೆ ಮಾಡದಿದ್ದರೇ ಶಿಸ್ತು ಕ್ರಮ : ಜಿಪಂ ಸಿಇಓ ಮುಕುಲ್ ಜೈನ್

ರೋಣ ತಾಲೂಕಿನಲ್ಲಿ ಮಾನವ ದಿನಗಳ ಸೃಜನೆ ತುಂಬಾ ಕಡಿಮೆ ಇದೆ. ಮಾನವ...

ಮಹಿಷಮಂಡಲದ ಇತಿಹಾಸಕ್ಕೆ ಮರುಜೀವ: ಮೈಸೂರಿನಲ್ಲಿ ಮಹಿಷಮಂಡಲೋತ್ಸವ-2026

ರಾಜ್ಯದ ಪ್ರಗತಿಪರ ಚಿಂತಕರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ದಲಿತ ಸಂಘಟನೆಗಳು,...