ಮೈಸೂರು | ಪ್ರೊ. ಬಿ. ಕೃಷ್ಣಪ್ಪ ದಮನಿತರ ನಾಯಕ : ಪ್ರೊ. ಸಿದ್ದೇಗೌಡ

Date:

ಮೈಸೂರು ಜಿಲ್ಲೆ, ಹುಣಸೂರು ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಪ್ರೊ. ಕೃಷ್ಣಪ್ಪ ರವರ ಜಯಂತಿ ಕಾರ್ಯಕ್ರಮದಲ್ಲಿ ಪ್ರೊ. ಸಿದ್ದೇಗೌಡ ಮಾತನಾಡಿ ‘ ಪ್ರೊ. ಬಿ. ಕೃಷ್ಣಪ್ಪ ದಮನಿತರ ನಾಯಕ ‘ ಎಂದರು.

- Advertisement -

” 70 ರ ದಶಕದಲ್ಲಿ ದಸಂಸವನ್ನ ಸ್ಥಾಪನೆ ಮಾಡಿದ್ದು ಪ್ರೊ. ಕೃಷ್ಣಪ್ಪ. ದಲಿತರ ಮೇಲೆ ನಡೆಯುತ್ತಿದ್ದ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳನ್ನು ಕಣ್ಣಾರೆ ಕಂಡು ಸಮುದಾಯಗಳ ಹಕ್ಕು ಬಾದ್ಯತೆಗಳ ಬಗ್ಗೆ ಹೋರಾಟ ಮಾಡಲು ದಲಿತ ಚಳುವಳಿಯನ್ನು ಪ್ರಾರಂಭಿಸಿದರು. ರಾಜ್ಯದುದ್ದಗಲಕ್ಕೂ ಸಂಚಾರ ಮಾಡಿ ಶೋಷಣೆಗೊಳಗಾಗುತ್ತಿದ್ದ ದಲಿತರಲ್ಲಿ ಒಂದು ರೀತಿಯ ಭರವಸೆಯನ್ನು ಮೂಡಿಸಿ ಹೋರಾಟದ ಮನೋಭಾವನೆಯ ಕಿಚ್ಚನ್ನು ಹಚ್ಚಿದರು. “

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಡಾ. ಬಿ.ಆರ್.‌ ಅಂಬೇಡ್ಕರ್‌ ರವರ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದ್ದ ಇವರು ಸರ್ಕಾರಿ ಕೆಲಸದಲ್ಲಿದ್ದುಕೊಂಡು ಬರುವ ಅರ್ಧ ಸಂಬಳವನ್ನು ದಲಿತರ ಕಷ್ಟ, ದುಃಖ, ದುಮ್ಮಾನಗಳಿಗೆ ಬಳಸುತ್ತಿದ್ದರು. ಕೃಷ್ಣರಾಜ ನಗರದ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ನಾನು ಅವರ ಶಿಷ್ಯನಾಗಿದ್ದೆ. ನನಗೆ ಇದು ಹೆಮ್ಮೆಯ ವಿಷಯ. ಅವರಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳುವ ಸದಾವಕಾಶ ಲಭಿಸಿದ್ದು ನನ್ನ ಜೀವಿತಾವಧಿಯಲ್ಲಿ ಎಂದಿಗೂ ಮರೆಯಲಾರದ ಅನುಭವ.

ವಿದ್ಯಾರ್ಥಿ ದೆಸೆಯಲ್ಲಿ ಪ್ರಭಾವಿತನಾಗಿ ಸಾಮಾಜಿಕ ಜೀವನದ ಕಡೆಗೆ ಗಮನ ಹರಿಸಲು, ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲು ಕಾರಣರಾದರು. ಕಾಲೇಜಿನಲ್ಲಿ ಉಪನ್ಯಾಸ ನೀಡಲು ನಿಂತರೆ ಇಡೀ ತರಗತಿಯೇ ನಿಶ್ಯಬ್ದವಾಗುತ್ತಿತ್ತು. ನಮಗರಿವಿಲ್ಲದಂತೆ ಅಪಾರವಾದ ಗೌರವ ಹೆಚ್ಚುತ್ತಿತ್ತು. ಶಿಸ್ತಿನ ಸಿಪಾಯಿಯಾಗಿದ್ದ ಕೃಷ್ಣಪ್ಪನವರು ನೊಂದವರ ಕಂಡರೆ ಮರುಗುತ್ತಿದ್ದರು. ಶೋಷಿತ ಸಮುದಾಯದ ಮೇಲಾಗುತಿದ್ದ ದೌರ್ಜನ್ಯ ಬಾಧಿಸುತಿತ್ತು.

ಆದರ್ಶ ವ್ಯಕ್ತಿಯಾಗಿದ್ದ ಕೃಷ್ಣಪ್ಪನವರಿಗೆ ಯಾವುದೇ ಜಾತಿ, ಧರ್ಮ, ಭಾಷೆಯ ಬೇಧವಿರಲಿಲ್ಲ. ಬಡವರು, ನೊಂದವರ ಕಂಡರೆ ಮರುಗುವ ತಾಯಿ ಹೃದಯವಿತ್ತು. ದಲಿತ ಸಮುದಾಯದವರಾಗಿ ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವದವರಾಗಿದ್ದರು. ಇಂತಹ ಮೇರು ವ್ಯಕ್ತಿ ನಮ್ಮ ನಡುವೆ ನಮ್ಮ ಊರಿನಲ್ಲಿ ಇದ್ದರು ಎಂದರೆ ಅದಕ್ಕಿಂತ ಹೆಮ್ಮೆಯ ವಿಚಾರ ಮತ್ತೊಂದಿರಲು ಸಾಧ್ಯವಿಲ್ಲ. ಅವರ ಒಡನಾಟ ಮೆಲಕು ಹಾಕುವ ಸಂದರ್ಭ ಒದಗಿಸಿಕೊಟ್ಟ ದಸಂಸ ಆಯೋಜಕರಿಗೆ ಆಭಾರಿ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೊಸೂರು ಕುಮಾರ್‌ ಮಾತನಾಡಿ ” ಪ್ರೊ. ಬಿ. ಕೃಷ್ಣಪ್ಪ ನವರು ದಲಿತ ಚಳುವಳಿಯನ್ನು ಪ್ರಾರಂಭಿಸಿದವರು. ಹಾಗೆಯೇ, ಪ್ರೊ. ನಂಜುಂಡಸ್ವಾಮಿಯವರು ರೈತ ಚಳುವಳಿಯನ್ನು ಪ್ರಾರಂಭಿಸಿದವರು. ಈ ಇಬ್ಬರು ನಾಯಕರು ರಾಜ್ಯ ಕಂಡ ಮಹಾನ್‌ ನಾಯಕರಾಗಿದ್ದಾರೆ. ಇವರುಗಳು ಹಾಕಿಕೊಟ್ಟ ಹೋರಾಟದ ಹಾದಿಯಲ್ಲಿ ಲಕ್ಷಾಂತರ ದಲಿತ ಮತ್ತು ರೈತ ಕಾರ್ಯಕರ್ತರು, ನಾಯಕರು ಇಂದಿಗೂ ಹೋರಾಟ ಮಾಡುತ್ತಿದ್ದಾರೆ. ಶೋಷಿತ ಸಮಾಜದ ಧ್ವನಿಯಾಗಿ ದಸಂಸ ಸಂಘಟನೆಯನ್ನು ಹುಟ್ಟು ಹಾಕಿ ಹೋರಾಟದ ಹಾದಿಯಲ್ಲಿ ಸಾಗಿದವರು. ಇಂತಹ ಮಹನೀಯರ ಹಾದಿಯಲ್ಲಿ ಎಲ್ಲರೂ ಸಾಗಬೇಕಾಗಿದೆ ” ಎಂದು ಆಶಿಸಿದರು.

ದಸಂಸ ಮುಖಂಡ ನಿಂಗರಾಜ್‌ ಮಲ್ಲಾಡಿ ಮಾತನಾಡಿ ‘ ಪ್ರೊ. ಬಿ. ಕೃಷ್ಣಪ್ಪ ನವರು ತಮ್ಮ ಹೋರಾಟದ ದಿನಗಳಲ್ಲಿ ದಲಿತರ ಮನೆಯಲ್ಲಿ ಹೋರಾಟದ ಹಣತೆಯನ್ನು ಹಚ್ಚಿದ್ದೇನೆ, ಅದು ಆರದಂತೆ ಕಾಪಾಡಿಕೊಳ್ಳಿ ‘ ಎಂದು ಹೇಳುತ್ತಿದ್ದರು. ಅವರ ಆಶಯದಂತೆ ನಡೆದುಕೊಳ್ಳುವುದು ನಮ್ಮೆಲ್ಲರ ಭಾಧ್ಯತೆಯಾಗಿದೆ ಎಂದರು.

ಈ ವಿಶೇಷ ವರದಿ ಓದಿದ್ದೀರಾ?ಮೈಸೂರು | 1886 ರಲ್ಲಿ ಬ್ರಿಟಿಷರೇ ನಿರ್ಮಿಸಿದ ಕನ್ನಡ ಶಾಲೆಯಲ್ಲೀಗ 600 ಕ್ಕೂ ಅಧಿಕ ಮಕ್ಕಳ ಕಲಿಕೆ

ಕಾರ್ಯಕ್ರಮದಲ್ಲಿ ಡೀಡ್‌ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್‌, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ನಾಗಣ್ಣ ದೇವಾಡಿಗ, ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ಬಲ್ಲೇನಹಳ್ಳಿ ಕೆಂಪರಾಜು, ಅಲೆಮಾರಿ ಸಂಘದ ಶೇಖರ, ಮಲ್ಲಿಕ್‌ ಪಾಷ, ಬಿಳಿಗೆರೆ ಸಣ್ಣಯ್ಯ, ಕಲ್ಕುಣಿಕೆ ಪಾರ್ವತಿ, ಅಲೆಮಾರಿ ಸಂಘದ ಶಿವು, ಮಲ್ಲಿಗೆ, ಶಿವಮ್ಮ, ದಾಸಪ್ಪ. ಶೋಭಮ್ಮ ಸೇರಿದಂತೆ ಹಲವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ಉಡುಪಿ | ಯುವಜನರೇ, ನಿರಂತರ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಿ: ಪ್ರಕಾಶ್ ಶೆಟ್ಟಿ

ಯುವಜನರು ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದರೆ...