ರಾಯಚೂರು | ಮಾನಹಾನಿ ಪ್ರಕರಣ: ₹1 ಲಕ್ಷ ದಂಡ ಪಾವತಿಸಿ ಕ್ಷಮೆಯಾಚಿಸಿದ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್

Date:

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರ ವಿರುದ್ಧ ಸುಳ್ಳು ಹಾಗೂ ಮಾನಹಾನಿ ಸುದ್ದಿ ಪ್ರಕಟಿಸಿದ್ದಕ್ಕಾಗಿ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರು ನ್ಯಾಯಾಲಯದ ಆದೇಶದ ಮೇರೆಗೆ ಒಂದು ಲಕ್ಷ ರೂಪಾಯಿ ದಂಡ ಪಾವತಿಸಿ ಕ್ಷಮೆಯಾಚಿಸಿದ್ದಾರೆ.

ರಾಯಚೂರು ನಗರದಲ್ಲಿ ಡಾ. ಬಸವಪ್ರಭು ಪಾಟೀಲ್ ಬೆಟ್ಟದೂರು ಪರ ವಕೀಲ ಎಂ. ವೀರನಗೌಡ ಪೋತ್ನಾಳ್ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ, “ನ್ಯಾಯಾಲಯದ ತೀರ್ಪಿನಂತೆ ದಂಡ ಹಾಗೂ ತಪ್ಪೊಪ್ಪಿಗೆ ಪ್ರಮಾಣಪತ್ರ ನೀಡಲಾಗಿದೆ. ಇದರೊಂದಿಗೆ ಪ್ರಕರಣ ಅಂತ್ಯಗೊಂಡಿದೆ” ಎಂದು ತಿಳಿಸಿದ್ದಾರೆ.

2018ರ ಜನವರಿ 19 ಹಾಗೂ 20ರಂದು ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ರಾಯಚೂರು ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಶ್ವವಾಣಿ ದಿನಪತ್ರಿಕೆಯಲ್ಲಿ 2018ರ ಜನವರಿ 17ರಂದು “ಡಾ. ಬಸವಪ್ರಭು ಪಾಟೀಲ್ ಅವರ ಏಕಪಕ್ಷೀಯ ನಿರ್ಧಾರ, ಜಿಲ್ಲಾ ಕಸಾಪ ಸಮ್ಮೇಳನ ಕುಟುಂಬಕ್ಕೆ ಮೀಸಲಾಗಿದೆಯೇ?” ಎಂಬ ಶೀರ್ಷಿಕೆಯಡಿ ಸುಳ್ಳು ವರದಿ ಪ್ರಕಟವಾಗಿತ್ತು.

ಅದೇ ರೀತಿ 2018ರ ಮಾರ್ಚ್‌ 3ರಂದು “ಕಸಾಪ ಯಾವುದೇ ಲೆಕ್ಕಪತ್ರ ಕೊಟ್ಟಿಲ್ಲ; ಸುಲಿಗೆಗೆ ನಿಂತಿದೆ ಕನ್ನಡ ಸಾಹಿತ್ಯ ಪರಿಷತ್” ಎಂಬ ಮತ್ತೊಂದು ವರದಿ ಪ್ರಕಟಗೊಂಡಿತ್ತು. ಇದಕ್ಕೆ ಆಗಿನ ಕರವೇ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ ಜೈನ್ ಧ್ವನಿಗೂಡಿಸಿದ್ದರು.

ಮಾನಹಾನಿ ವರದಿಗೆ ಸಂಬಂಧಪಟ್ಟಂತೆ ನ್ಯಾಯಾಲಯದ ಆದೇಶದ ಮೇರೆಗೆ ವಿಶ್ವವಾಣಿ ಪತ್ರಿಕೆಯ ಸಂಪಾದಕ ದೂರುದಾರ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಅವರಿಗೆ ಒಂದು ಲಕ್ಷ ರೂ.‌ದಂಡ ಹಾಗೂ ತಪ್ಪೊಪ್ಪಿಗೆ ಪ್ರಮಾಣ ಪತ್ರ ನೀಡಿ ಪ್ರಕರಣವನ್ನು ಅಂತ್ಯಗೊಳಿಸಿದ್ದಾರೆಂದು ವಕೀಲ ಎಂ. ವೀರನಗೌಡ ಪೋತ್ನಾಳ್ ತಿಳಿಸಿದರು.

ಪ್ರಕರಣದ ವಿವರ: ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಮಾನಹಾನಿ ವರದಿಯಿಂದ ತೀವ್ರವಾಗಿ ನೊಂದಿದ್ದ ಕಸಾಪ ಅಧ್ಯಕ್ಷರಾಗಿದ್ದ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಅವರು ಮಾನಹಾನಿ ಬಗ್ಗೆ ಪ್ರಕರಣವನ್ನು ದಾಖಲಿಸುವಂತೆ ನನ್ನಲ್ಲಿ ಮನವಿ ಮಾಡಿದ ಮೇರೆಗೆ ಮಾನ್ವಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ನ್ಯಾಯಾಲಯವು ಮೊದಲನೇ ಆರೋಪಿ ಸಂಪಾದಕ ವಿಶ್ವೇಶ್ವರ ಭಟ್, ಎರಡನೇ ಆರೋಪಿ ವರದಿಗಾರ ಆನಂದಸ್ವಾಮಿ ಹಿರೇಮಠ ಹಾಗೂ ಮೂರನೇ ಆರೋಪಿ ಅಶೋಕ್ ಜೈನ್ ಇವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ನೀಡಲಾಯಿತು.

ಆನಂದಸ್ವಾಮಿ ಮತ್ತು ಅಶೋಕ್ ಜೈನ್ ಅವರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡರು. ಆದರೆ ವಿಶ್ವೇಶ್ವರ ಭಟ್ ಅವರು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನ್ಯಾಯಾಲಯವು ಅವರ ಆಸ್ತಿಯ ಮುಟ್ಟುಗೋಲಿಗೆ ಆದೇಶಿಸಿತು. ಆಗ ಹೈಕೋರ್ಟ್ ಮೆಟ್ಟಿಲೇರಿದ ವಿಶ್ವೇಶ್ವರ ಭಟ್ ಸದರಿ ಮಾನ್ವಿ ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ರದ್ದು ಪಡಿಸುವಂತೆ ಕಲಬುರಗಿಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಆದರೆ ಉಚ್ಚ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿ ಮಾನ್ವಿ ನ್ಯಾಯಾಲಯದಲ್ಲಿ ಹಾಜರಾಗಿ ಜಾಮೀನು ಪಡೆದು ನಂತರ ಕಲಬುರಗಿಯ ಉಚ್ಚ ನ್ಯಾಯಾಲಯಕ್ಕೆ ಬನ್ನಿ ಎಂದು ಆದೇಶ ನೀಡಿತ್ತು. ಆಗ ವಿಶ್ವೇಶ್ವರ ಭಟ್ ಅವರು ಬೇರೆ ದಾರಿ ಕಾಣದೇ ಮಾನ್ವಿ ನ್ಯಾಯಾಲಯಕ್ಕೆ ಬಂದು ಶರಣಾಗಿ ₹1000 ದಂಡ ಕಟ್ಟಿ ಜಾಮೀನು ಪಡೆದರು. ನಂತರ ಉಚ್ಚ ನ್ಯಾಯಾಲಯಕ್ಕೆ ವಿಶ್ವೇಶ್ವರ ಭಟ್ ಹಾಜರಾಗಿ ಈ ಪ್ರಕರಣದಿಂದ ಮುಕ್ತ ಮಾಡಿ ಎಂದು ಮನವಿ ಮಾಡಿದರು.

ʼಸುಪ್ರೀಂ ಕೋರ್ಟಿನ ಆದೇಶದನ್ವಯ ಸ್ಥಳೀಯ ವರದಿಗಾರ ಸುಳ್ಳು ಸುದ್ದಿ ಮಾಡಿದರೆ ಅದಕ್ಕೆ ಸಂಪಾದಕರು ಹೊಣೆʼ ಎಂದು ತಾಕೀತು ಮಾಡಿ ಪರಿಹಾರ ಮತ್ತು ತಪ್ಪೊಪ್ಪಿಗೆ ಪತ್ರ ನೀಡುವಂತೆ ನ್ಯಾಯಾಲಯ ಆದೇಶಿಸಿದಾಗ ವಿಶ್ವೇಶ್ವರ ಭಟ್ ಅವರು 1 ಲಕ್ಷ ರೂ. ಚೆಕ್ ಹಣವನ್ನು ಪರಿಹಾರವಾಗಿ ದೂರುದಾರ ಡಾ.ಬಸವಪ್ರಭು ಪಾಟೀಲ್ ಅವರಿಗೆ ನೀಡಿ, 2025ರ ಜುಲೈ 12ರಂದು ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಪ್ರಮಾಣ ಪತ್ರ ಸಲ್ಲಿಸಿದರು. ಇದರಿಂದಾಗಿ 7 ವರ್ಷಗಳ ಹಿಂದಿನ ಪ್ರಕರಣವು ಇದೀಗ ಮುಕ್ತಾಯವಾದೆ ಎಂದು ಹೇಳಿದರು.

- Advertisement -

ಯಾವುದೇ ವರದಿಗಾರರು ಸುದ್ದಿ ಮಾಡುವಾಗ ನೈಜತೆ ಹಾಗೂ ಸತ್ಯಾಸತ್ಯತೆ ಬಗ್ಗೆ ವರದಿ ಮಾಡಬೇಕು. ಇಲ್ಲದೇ ಹೋದಲ್ಲಿ ಇಂತಹ ಶಿಕ್ಷೆಗೆ ಗುರಿಯಾಗಬಹುದು ಎಂದು ಸಲಹೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಈ ಸುದ್ದಿ ಓದಿದ್ದೀರಾ? ರಾಯಚೂರು |ಆರೋಗ್ಯ ಕೇಂದ್ರದಲ್ಲಿ ನಿರ್ಲಕ್ಷ್ಯ – ತಾಯಿಯ ಗರ್ಭದಲ್ಲೇ ಮಗು ಸಾವು

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಮುಖಂಡರಾದ ಭೀಮನಗೌಡ ಇಟಗಿ, ದೇವೇದ್ರ ದುರ್ಗದ್, ನಾಗರಾಜ ಬಳಿಗಾರ ಹಾಗೂ ದೊಡ್ಡಬಸನಗೌಡ ಚಿಮ್ಲಾಪುರ ಇದ್ದರು

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಿಐಡಿ ತನಿಖೆಗೆ ಆಗ್ರಹ

ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕೊಲೆ, ಅತ್ಯಾಚಾರ ಹಾಗೂ ಮರಣಾಂತಿಕ...

ಯಾದಗಿರಿ | ಶೋಷಿತ ಸಮುದಾಯಗಳ ಪ್ರಗತಿಗೆ ಶಿಕ್ಷಣ, ಸಂಘಟನೆ, ಹೋರಾಟ ಅಗತ್ಯ: ಪರಶುರಾಮ್ ನೀಲನಾಯಕ

ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯಗಳು ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಲು ಶಿಕ್ಷಣ, ಸಂಘಟನೆ...