ಎಸ್ ಐಆರ್ ನಲ್ಲಿ ಗಣ್ಯರ ಮತದಾರರನ್ನು ಮತ ಪಟ್ಟಿ ಯಿಂದ ತೆಗೆದು ಕೆಲವೇ ಗಂಟೆಗಳಲ್ಲಿ ಮರು ಸೇರ್ಪಡೆ ಮಾಡಿದ್ದು ಆದರೆ ಸಾಮಾನ್ಯ ಜನರ ಮತ ತೆಗೆದು ಹಾಕಿ ಸತಾಯಿಸುವ ಮೂಲಕ ಮತದಾನದ ಹಕ್ಕನ್ನು ತಾರತಮ್ಯ ಮಾಡಿದ್ದು ಸಂವಿಧಾನ ವಿರೋಧಿಯಾಗಿದೆ ಎಂದು ಬಹುಭಾಷ ನಟ ಪ್ರಕಾಶ ರಾಜ್ ಆರೋಪ ಮಾಡಿದರು.
ನಗರದ ಕೊಠಾರಿ ಫಂಕ್ಷನ್ ಹಾಲ್ ನಲ್ಲಿ ಎಸ್ ಐ ಆರ್ ಪರಿಶೋಧ ಹಾಗೂ ಪ್ರತಿರೋದ ಪ್ರವಾಸದಲ್ಲಿ ಮಾತನಾಡಿದ ಅವರು,ದೆಹಲಿಯಲ್ಲಿ ನಡೆದ ಎಸ್ಐಆರ್ ಪ್ರಕ್ರಿಯೆಯಲ್ಲಿ ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತ, ಮಾಜಿ ಸಿ.ಎಂ ಅರವಿಂದ ಕೇಜ್ರಿವಾಲ್ ಸಿಜೆಐ ಅವರ ಕುಟುಂಬ ಸದಸ್ಯರು ಹಾಗೂ ಚುನಾವಣೆ ಆಯೋಗದ ಆಯುಕ್ತರಲ್ಲಿ ಒಬ್ಬರಾದ ಎಸ್ಎಸ್ ಸಾಂದು ಅವರ ಹೆಸರನ್ನು ತೆಗೆದು ಹಾಕಿದ್ದು ಗೊತ್ತಾಗಿದೆ ಇದು ಚುನಾವಣೆ ಕಾರ್ಯವೈಖರಿಯ ಲೋಪವಾಗಿದೆ.ಮತ ಪಟ್ಟಿ ಯಿಂದ ತೆಗೆದು ಹಾಕಿದ ಗಣ್ಯರ ಹೆಸರನ್ನು ಕೆಲವೇ ಗಂಟೆಗಳಲ್ಲಿ ಸೇರಿಸಿದ್ದಾರೆ. ಆದರೆ ಸಾಮಾನ್ಯ ಜನರ ಪಾಡೇನು ಅವರಿಗೆ ನೂರಾರು ದಾಖಲೆಗಳು,ಅಡೆತಡೆಗಳು ಎದುರಿಸುತ್ತಿದ್ದಾರೆ. ಇದು ಮತದಾನದ ಸಮಾನ ಹಕ್ಕಿನ ಸ್ಪಷ್ಟ ಉಲ್ಲಂಘನೆ ಆಗಿದೆ ಎಂದರು.
ದೇಶದಲ್ಲಿ ಮಿಲಿಟರಿ ಅಡಳಿತವಿಲ್ಲದ ಕಾರಣ ಹಕ್ಕುಉಳಿದಿದೆ: ‘ದೇಶದಲ್ಲಿ ಮಿಲಿಟರಿ ಆಡಳಿತ ಜಾರಿಗೆ ತರಲು ಸಾಧ್ಯವಾಗದಿರುವುದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ಕಾರಣ. ಹೀಗಾಗಿ ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ ಸೇರಿದಂತೆ ವಿವಿಧ ಸಂಸ್ಥೆಗಳನ್ನು ಬಳಸಿಕೊಂಡು ಮತದಾನದ ಹಕ್ಕನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ನಟ ಪ್ರಕಾಶ್ ರಾಜ್ ಆರೋಪಿಸಿದರು.
‘ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ಆಯೋಗದ ಅಧಿಕಾರಿಗಳ ಹೇಳಿಕೆಗಳಲ್ಲೇ ಕೆಲವು ಲೋಪಗಳು ಬಹಿರಂಗವಾಗಿವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಯಾರ ಮಾತು ಕೇಳುತ್ತಿದ್ದಾರೆ’ ಎಂದು ಅವರು ಪ್ರಶ್ನಿಸಿದರು.
This video cannot be played in your browser. Open the video directly
‘ಮನೆ ಬದಲಾಯಿಸಿದವರು, ಮನೆ ಇಲ್ಲದವರು ಸೇರಿದಂತೆ ಹಲವು ಕಾರಣಗಳಿಂದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸುವ ಹೆಸರಿನಲ್ಲಿ ಅರ್ಹ ಮತದಾರರ ಹಕ್ಕಿಗೆ ಧಕ್ಕೆ ಆಗಬಾರದು. ಅವಳಿ-ಜವಳಿ ಮಕ್ಕಳ ವಯಸ್ಸಿನ ಅಂತರ ಸೇರಿದಂತೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಹೆಸರುಗಳನ್ನು ಕೈಬಿಡುವುದು ಸರಿಯಲ್ಲ’ ಎಂದರು.
‘ತೃತೀಯ ಲಿಂಗಿಗಳು ಹಾಗೂ ವಲಸೆ ಕಾರ್ಮಿಕರು ಸೇರಿದಂತೆ ವಿವಿಧ ಸಮುದಾಯದ ಜನರಿಂದ ದಾಖಲೆಗಳನ್ನು ಕೇಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಮತದಾರರ ಸ್ಥಿತಿ ಏನು ಎಂಬುದನ್ನು ಪರಿಗಣಿಸಬೇಕು. ಎಲ್ಲರಿಗೂ ಸಮಾನ ಮತದಾನದ ಹಕ್ಕು ದೊರೆಯಬೇಕು’ ಎಂದು ಹೇಳಿದರು.
‘ಎಸ್‌ಐಆರ್ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಒಂದು ತಿಂಗಳಲ್ಲಿ ಕೋಟ್ಯಂತರ ಜನರ ಮತದಾರರ ಪಟ್ಟಿಯನ್ನು ಪರಿಶೀಲಿಸುವುದು ಹೇಗೆ ಸಾಧ್ಯ? ಕರ್ನಾಟಕದ 100 ಮತಗಟ್ಟೆಗಳಿಗೆ ಭೇಟಿ ನೀಡಿ, ಎಲ್ಲಿ ಯಾವ ರೀತಿಯ ಲೋಪವಾಗಿದೆ ಎಂಬುದನ್ನು ಪರಿಶೀಲಿಸಲಾಗುವುದು. ಸಂತ್ರಸ್ತ ಮತದಾರರಿಂದ ದಾಖಲೆ ಹಾಗೂ ಮಾಹಿತಿ ಸಂಗ್ರಹಿಸಿ ಸೆ.30ರಂದು ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗುವುದು. ಅ.1ರಂದು ದೆಹಲಿಯಲ್ಲಿ ಸಭೆ ನಡೆಸಿ ವಿಷಯವನ್ನು ರಾಷ್ಟ್ರಮಟ್ಟದಲ್ಲಿ ಗಮನಕ್ಕೆ ತರಲಾಗುವುದು’ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು ದಲಿತರ ಮೇಲಿನ ದೌರ್ಜನ್ಯ: ಸಿಐಡಿ ತನಿಖೆಗೆ ಒತ್ತಾಯಿಸಿ ಗೃಹ ಸಚಿವರಿಗೆ ಶಾಸಕರು, ದಲಿತ ಮುಖಂಡರ ನಿಯೋಗ ಮನವಿ
ಎಸ್‌ಐಆರ್ ವಿರೋಧಿ ಸಮಿತಿಯ ವೀರಸಂಗಯ್ಯ, ಕೆ.ಎಲ್ ಅಶೋಕ, ಎಂ.ಆರ್.ಬೇರಿ, ಮಾರೆಪ್ಪ ಹರವಿ, ಅಸಿಮುದ್ದೀನ್ ಅಖ್ತರ್, ಮತದಾರರ ಹಕ್ಕು ಕಳೆದುಕೊಂಡಿರುವ ಜಾನ್ ವೆಸ್ಲಿ, ಮಾರೆಮ್ಮ, ಹೋರಾಟಗಾರ ಬಸವರಾಜ ಕಳಸ, ಮತೀನ್ ಅನ್ಸಾರಿ ಉಪಸ್ಥಿತರಿದ್ದರು.





