ರಾಯಚೂರು | ಸಿಡಿಲು ಬಡಿದು ಮೃತಪಟ್ಟ ರೈತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ವಿತರಣೆ

Date:

ತಾಲ್ಲೂಕಿನ ಹರನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ರೈತ ಪ್ರಭಣ್ಣ ಅವರ ಕುಟುಂಬಕ್ಕೆ ಶಾಸಕ ಬಸನಗೌಡ ದದ್ದಲ್ ಅವರು ₹5 ಲಕ್ಷ ಪರಿಹಾರ ವಿತರಿಸಿದರು.

- Advertisement -

ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತ ಕುಟುಂಬದ ಸದಸ್ಯರ ಮೇಲೆ ಅನಿರೀಕ್ಷಿತವಾಗಿ ಸುರಿದ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ಪ್ರಭಣ್ಣ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಪಿರಿಯಾಪಟ್ಟಣದ ಮಣ್ಣಿನಿಂದ ಕನ್ನಡ ಜ್ಞಾನಲೋಕದ...

ಕೆಲವರು ಹುಟ್ಟಿದ ಊರಿನ ಹೆಸರನ್ನು ತಮ್ಮೊಂದಿಗೆ ಹೊತ್ತುಕೊಂಡು ಬದುಕುತ್ತಾರೆ. ಇನ್ನು ಕೆಲವರು ತಾವು ಹುಟ್ಟಿದ ನೆಲದ ಹೆಸರನ್ನೇ ತಮ್ಮ ಸಾಧನೆಯ ಮೂಲಕ ನಾಡಿನಾದ್ಯಂತ ಪರಿಚಯಿಸುತ್ತಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಹುಟ್ಟಿ,...

ಹಂತಕ ಗೋಡ್ಸೆಯ ಹೇಳಿಕೆಯೇ ಇತಿಹಾಸವಲ್ಲ; ಸ್ವಾತಂತ್ರ್ಯ ಹೋರಾಟಗಾರರ ಚಾರಿತ್ರ್ಯಹರಣಕ್ಕೆ...

ಅಡ್ಡಂಡ ಕಾರ್ಯಪ್ಪನವರ ‘ಗಾಂಧಿ ಹತ್ಯೆಯ ಸತ್ಯ’ ಪುಸ್ತಕ ಮತ್ತು ನಾಟಕವನ್ನು ನಿಷೇಧಿಸಬೇಕೆಂಬ ಆಗ್ರಹಕ್ಕೆ ಬಲವಾದ ಐತಿಹಾಸಿಕ ಕಾರಣಗಳಿವೆ. ಮನಶಾಸ್ತ್ರದ ದೃಷ್ಟಿಯಿಂದಲೂ ಹಂತಕನ ಸಮರ್ಥನೆಗೆ ಎಚ್ಚರಿಕೆ ಅಗತ್ಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯೆಗೆ ಸಂಬಂಧಿಸಿದಂತೆ ಅಡ್ಡಂಡ...

ಕಲ್ಯಾಣ ಯೋಜನೆಗಳಿಗೆ ‘ಆಧಾರ್’ ಬದಲು ‘ಎಪಿಕ್’: ಬಡಜನರ ಹೊಟ್ಟೆಯ...

ರಾಜಕೀಯ ಮತ್ತು ಸಾಮಾಜಿಕ ವಿಶ್ಲೇಷಕರು ಎಚ್ಚರಿಸುವಂತೆ, ಕಳೆದ ಒಂದು ದಶಕದ ಡಿಜಿಟಲ್ ಪರಿಶೀಲನಾ ವ್ಯವಸ್ಥೆಯ ಇತಿಹಾಸವನ್ನು ನೋಡಿದರೆ, ಹೊಸ ತಂತ್ರಜ್ಞಾನಗಳು ಬಂದಾಗಲೆಲ್ಲ ಅತ್ಯಂತ ದುರ್ಬಲ ವರ್ಗದವರನ್ನು ವ್ಯವಸ್ಥೆಯಿಂದ ಹೊರಗಿಡುತ್ತಲೇ ಬರಲಾಗಿದೆ. ಆಧಾರ್ ಜೋಡಣೆ...

ಶಾಸಕ ಬಸನಗೌಡ ದದ್ದಲ್ ಅವರು ಮೃತರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಬಳಿಕ ಸರ್ಕಾರದಿಂದ ಮಂಜೂರಾದ ₹5 ಲಕ್ಷ ಪರಿಹಾರದ ಮೊತ್ತವನ್ನು ಕುಟುಂಬದವರಿಗೆ ವಿತರಿಸಿದರು. ಗಾಯಗೊಂಡ ನಾಲ್ವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ, ಅವರ ಕುಟುಂಬದವರಿಗೂ ಧೈರ್ಯ ತುಂಬಿದರು.

Advertisements

ಕೃಷಿಯನ್ನೇ ನಂಬಿ ಬದುಕುತ್ತಿರುವ ಕುಟುಂಬಕ್ಕೆ ಪ್ರಕೃತಿ ವಿಕೋಪದಿಂದ ಉಂಟಾಗಿರುವ ನಷ್ಟ ತುಂಬಲಾರದದ್ದು. ಸಂಕಷ್ಟದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯ. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಹಾಗೂ ಕುಟುಂಬಕ್ಕೆ ಸೂಕ್ತ ನೆರವು ದೊರೆಯುವಂತೆ ಗಮನಹರಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ವಸತಿ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಗೆ ಜಾತಿನಿಂದನೆ ಆರೋಪ: ಸಮಗ್ರ ತನಿಖೆಗೆ ಎಸ್ಎಫ್ಐ ಆಗ್ರಹ

ತಹಶೀಲ್ದಾ‌ರ್ ಭೀಮರಾವ್, ಗಿಲ್ಲೇಸೂಗೂರು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ನಾಗೇಂದ್ರ ಮಟಮಾರಿ, ಸೋಮಶೇಖ‌ರ್ ಪಾಟೀಲ, ಮಲ್ಲಿಕಾರ್ಜುನ ಗೌಡ, ಜನಾರ್ದನ ಗೌಡ, ಸಂಗಮೇಶ ಭಂಡಾರಿ, ಷಣ್ಮುಖಪ್ಪ, ಮೌನೇಶ ನಾಯಕ, ಅಯ್ಯನಗೌಡ, ರಮೇಶ ರೊಸ್ಸಿ, ಆರ್‌ಐ ಹನುಮಂತಪ್ಪ, ಪಿಡಿಒ, ಗ್ರಾಮ ಆಡಳಿತಾಧಿಕಾರಿ ಹಾಜರಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಮೃತ ವಿದ್ಯಾರ್ಥಿ ಕುಟುಂಬಕ್ಕೆ ಪರಿಹಾರ ನೀಡುವಂತೆ ದಸಂಸ ಭೀಮಮಾರ್ಗ ಆಗ್ರಹ

ನಗರದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದ ನಾಲ್ಕನೇ ಮಹಡಿಯಿಂದ ಬಿದ್ದು...

ಕಲಬುರಗಿ | ಸರ್ಕಾರಿ ಶಾಲೆಗಳನ್ನು ಖಾಸಗಿಯವರೊಂದಿಗೆ ಜೋಡಿಸುವ ಯೋಜನೆಗೆ ಎಸ್‌ಎಫ್‌ಐ ತೀವ್ರ ವಿರೋಧ

ರಾಜ್ಯದ 2 ಸಾವಿರ ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳೊಂದಿಗೆ ಜೋಡಿಸುವ ಹಾಗೂ...

ಯಾದಗಿರಿ | ದೋರನಹಳ್ಳಿ ಪಟ್ಟಣ ಪಂಚಾಯಿತಿಗೆ ಅನುದಾನ ಬಿಡುಗಡೆಗೆ ಆಗ್ರಹ: ನಮ್ಮ ಕರ್ನಾಟಕ ಸೇನೆ ಮನವಿ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ...

ಯಾದಗಿರಿ | ಗೋಡೆಗೆ ಕಾರು ಡಿಕ್ಕಿ, ನಾಲ್ವರು ಯುವಕರು ಸ್ಥಳದಲ್ಲೇ ಸಾವು!

ನಿರ್ಮಾಣ ಹಂತದ ಚೆನ್ನೈ- ಸೂರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ...