ರಾಯಚೂರು | ಮೀಸಲಾತಿ ಹೆಚ್ಚಳಕ್ಕೆ ಅನುಮೋದನೆಗೆ ಆಗ್ರಹಿಸಿ ನ.6ರಂದು ಧರಣಿ: ಹನುಮಂತಪ್ಪ ಕಾಕರಗಲ್

Date:

ಪರಿಶಿಷ್ಟ ಜಾತಿ ಪಂಗಡ ಮೀಸಲಾತಿ ಹೆಚ್ಚಳ ಅನುಮೋದನೆಗಾಗಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನ.6ರಂದು ರಾಯಚೂರು ಜಿಲ್ಲಾ ಕೇಂದ್ರದ ಡಾ.ಬಿಆರ್‌ ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್‌ ಹೇಳಿದರು.

- Advertisement -

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಮೀಸಲಾತಿ ಹೆಚ್ಚಳ ಮಾಡಿದ್ದು, ಅದಕ್ಕೆ ಸಂವಿಧಾನ ಅಡಿಯಲ್ಲಿ ಕಾಯ್ದೆ ಜಾರಿಗೆ ತರದೇ ಇರುವುದರಿಂದ ಇದೀಗ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಸ ಜನರಿಗೆ ಮೀಸಲಾತಿ ವಿಚಾರದಲ್ಲಿ ಅನ್ಯಾಯ ಮಾಡಿದಂತಾಗಿದೆ ಎಂದು ದೂರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು;...

ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಚುನಾವಣೆಗೂ ಮುನ್ನ ‘ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಮತ್ತು ಯೂಗವ್’ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದೆ. ಮಹತ್ವದ ರಾಜಕೀಯ...

ಈಹಿಂದೆ ಬಿಜೆಪಿ ಸರಕಾರ ಶೇ.50ರಿಂದ 56ಕ್ಕೆ ಹೆಚ್ಚಿಸಿದ ಮೀಸಲಾತಿಯನ್ನು ಅಕ್ಟೋಬರ್‌ 12ರಂದು ಹೈಕೋರ್ಟ್‌ ಮೀಸಲಾತಿ ರದ್ದು ಮಾಡಿದ್ದು, ರಾಜ್ಯ ಸರಕಾರ ಪ್ರಶ್ನಿಸಿ ತಕ್ಷಣವೇ ಸುಪ್ರೀ ಕೋರ್ಟ್‌ ಮೊರೆ ಹೋಗಬೇಕು ಎಂದರು. ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಿ ಕಾನೂನು ತಿದ್ದುಪಡಿತರಬೇಕು.

ಗುಡಿಸಿಲು ಮುಕ್ತ ರಾಜ್ಯ ಸಂಕಲ್ಪ ಹೊಂದಿರುವ ರಾಜ್ಯ ಸರಕಾರ ಸ್ವಂತ ನಿವೇಶನ ಇಲ್ಲದವರಿಗೆ ಸರಕಾರಿ ಭೂಮಿ ಅಥವಾ ಖಾಸಗಿ ಭೂಮಿ ಗುರುತಿಸಿ ಅರ್ಹ ಫಲಾನುಭವಿಗಳಿಗೆ ಸೂರು ಕಲ್ಪಿಸಬೇಕು. ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪನವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಜೊತೆಗೆ ಜನ್ಮದಿನ ಜೂನ್‌ 9ರಂದು ರಜಾರಹಿತ ಸರಕಾರಿ ಕಾರ್ಯಕ್ರಮವಾಗಿ ಘೋಷಣೆ ಮಾಡಬೇಕು.

ಭೂ ಕಂದಾಯ ಕಾಯ್ದೆಯ ನಮೂನೆ 57ರಡಿ ಸಲ್ಲಿಸಿರುವ ಬಗರ್‌ ಹಕ್ಕುಂ ಸಾಗುವಳಿದಾರರ ಅರ್ಜಿಗಳು ಸಕ್ರಮಗೊಳಿಸಬೇಕು. ಸರಕಾರಿ ಜಾಗದಲ್ಲಿ ನೆಲಿಸಿರುವ ಕುಟುಂಬಗಳ ಜಾಗವನ್ನು 94ಸಿ ಮತ್ತು 94ಸಿಸಿ ಅಡಿ ಸಕ್ರಮಗೊಳಿಸಿ ಹಕ್ಕು ಪತ್ರಗಳು ನೀಡಬೇಕು. ಪರಿಶಿಷ್ಟ ಜಾತಿ ಪಂಗಡ ಕಲ್ಯಾಣ ಅಭಿವೃದ್ಧಿ ಯೋಜನೆಯ ಅನುದಾನ ದುರ್ಬಳಕೆ ತಡೆಯಲು ಕಾಯ್ದೆ 2013ರ ಸೆಕ್ಷನ್‌ 7ಸಿ ರದ್ದುಪಡಿಸಬೇಕು.

ಜಾತಿ ಗಲಭೆ ಮತ್ತು ಕೋಮು ಗಲಭೆಗಳಿಂದ ಪರಿಶಿಷ್ಠರು ಮೃತಪಟ್ಟರೆ ಅಂತಹ ಕುಟುಂಬಕ್ಕೆ ಪ್ರಸ್ತುತ ನೀಡುತ್ತಿರುವ 8.25 ಲಕ್ಷ ರೂ. ಬದಲಾಗಿ 25ಲಕ್ಷ ರೂ. ಪರಿಹಾರ ನೀಡಿ ಕುಟುಂಬದ ಸದಸ್ಯರಿಗೆ ಸರಕಾರಿ ಉದ್ಯೋಗ ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಗಳ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ನಿಗಮಗಳಿಂದ ಅನುಷ್ಠಾನಗೊಳಿಸುತ್ತಿರುವ ಗಂಗಾ ಕಲ್ಯಾಣ, ಭೂ ಒಡೆತನ, ಉದ್ಯೋಮ ಶೀಲತೆ ಸ್ವಾವಲಂಭಿ ಸಾರಥಿ ಯೋಜನೆಗಳಡಿ ಕಳೆದ 2023-24ರಿಂದ ಅರ್ಜಿ ಸಲ್ಲಿಸಿದ ಭಾಕಿ ಅರ್ಜಿಗಳ ಸಂಖ್ಯೆಯ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಬೇಕು.

ಕಂದಾಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರ ಸೇವೆಯನ್ನು ಕಾಯಂಗೊಳಿಸಬೇಕು. ದೇವದಾಸಿ ಹಾಗೂ ವಿಧವಾ ಮಹಿಳೆಯರಿಗೆ ನೀಡುತ್ತಿರುವ ಮಾಶಾಸನ 5ಸಾವಿರರೂ. ಹೆಚ್ಚಿಸಿ ಆದೇಶ ಹೊರಡಿಸಬೇಕು. ಪರಿಶಿಷ್ಠ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ 1989 ಅಡಿ ದಾಖಲಾಗಿರುವ ಪ್ರಕರಣಗಳ ಸಂತ್ರಸ್ತ ಕುಟುಂಬಗಳಿಗೆ ನೀಡುವ ಪರಿಹಾರ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಗೋಹತ್ಯೆ ನಿಷೇಧ 2020 ಕಾಯ್ದೆ ಸಂಪೂರ್ಣ ರದ್ದುಪಡಿಸಿ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಕೆಗಾಗಿ ಹೋರಾಟ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ರೈತರ ಜಮೀನಿನ ಬಳಿ ಮದ್ಯದಂಗಡಿ ಸ್ಥಳಾಂತರಕ್ಕೆ ವಿರೋಧ

ಇದೇ ಸಂದರ್ಭದಲ್ಲಿ ಶಿವರಾಜ ಕೋರಿ ಗಣಜಲಿ, ನಾಗರಾಜ ಬೇರಿ, ರಂಗಪ್ಪ, ಶಿವುಕುಮಾರ, ಶಿವಪ್ಪ ಚಿಂಚೋಡಿ, ಶಿವುಕುಮಾರ ಮಹ್ಮದ್‌ ರಫೀ, ಚಿದಾನಂದ, ಬಸವರಾಜ, ಯೇಸ್‌ ಮಸರಕಲ್‌, ದಾವುದ್‌, ಹುಸೇನ್‌ ಸೇರಿದಂತೆ ಇತರರು ಇದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಅಂಕಿತಾ ಭಂಡಾರಿ ಹತ್ಯೆ ಪ್ರಕರಣ: ನ್ಯಾಯಕ್ಕಾಗಿ ಮಹಿಳಾ ಸಂಘಟನೆಗಳ ಪ್ರತಿಭಟನೆ

ಉತ್ತರಾಖಂಡದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ನ್ಯಾಯ, ಪಾರದರ್ಶಕ ತನಿಖೆ ಹಾಗೂ...

ರಾಯಚೂರು | ರೈತರ ಜಮೀನಿನ ಬಳಿ ಮದ್ಯದಂಗಡಿ ಸ್ಥಳಾಂತರಕ್ಕೆ ವಿರೋಧ

ದೇವದುರ್ಗ ಪಟ್ಟಣದ ಆನಂದ ಚಿತ್ರಮಂದಿರದ ಪಕ್ಕದಲ್ಲಿರುವ ಮದ್ಯದಂಗಡಿಯನ್ನು ಸಿರವಾರ ಕ್ರಾಸ್‌ ಸಮೀಪಕ್ಕೆ...

ಉಡುಪಿ | ಕುಮ್ಕಿ, ಗೇರು ಲೀಸ್ ಭೂಮಿಗೆ ಹಕ್ಕುಪತ್ರ ನೀಡಿ; ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸಿ

ಪಶ್ಚಿಮ ಘಟ್ಟ ಹಾಗೂ ಕರಾವಳಿ ಭಾಗದ ಪರಿಸರ ಸಂರಕ್ಷಣೆ ಅತ್ಯಂತ ಅಗತ್ಯ....