ಸಿಂಧನೂರು ತಾಲ್ಲೂಕು ಸಾಲಗುಂದ ಗ್ರಾಮದ ಭಾರತ್ ಗ್ಯಾಸ್ ಏಜೆನ್ಸಿ ಬಳಿ ಶುಕ್ರವಾರ ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗಾಗಿ ನೂರಕ್ಕೂ ಹೆಚ್ಚು ಗ್ರಾಹಕರು ಕಾದು ಕುಳಿತು ಹತಾಶೆಗೊಂಡರು.
ಸಾಲಗುಂದ ಭಾರತ್ ಗ್ಯಾಸ್ ಏಜೆನ್ಸಿ ಮುಂಭಾಗ ನಿನ್ನೆ ಮಧ್ಯಾಹ್ನಯಿಂದಲ್ಲೇ ಗ್ರಾಹಕರು ಕಾದು ಕುಳಿತರು. ಗ್ಯಾಸ್ ಸಿಲಿಂಡರ್ ನೀಡುತ್ತಿಲ್ಲ. ಬುಕ್ಕಿಂಗ್ ಮಾಡಿ ಎರಡು ತಿಂಗಳಾದರು ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲ. ಅಲ್ಲದೇ ಒಟಿಪಿ ಕೊಟ್ಟಿದ್ದರು ಸಿಲಿಂಡರ್ ಕೊಡುತ್ತಿಲ್ಲ. ಇಂದು, ನಾಳೆ ಎಂದು ಹೇಳುತ್ತಾರೆಯೇ ಹೊರತು, ಗ್ಯಾಸ್ ಸಿಲಿಂಡರ್ ನೀಡುವಲ್ಲಿ ವಿಫಲವಾಗಿದ್ದಾರೆ ಎಂದು ಏಜೆನ್ಸಿಗಳ ವಿರುದ್ಧ ಗ್ರಾಹಕರು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೋಣ ದಾಳಿ; ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ಆರ್‌ಡಿಎ ಆಯುಕ್ತ ಈರಣ್ಣ ಬಿರಾದಾರರಿಗೆ ಗಾಯ
ಗ್ರಾಮದ ನಿವಾಸಿ ಮಾತನಾಡಿ, ನಿನ್ನೆಯಿಂದ ಗ್ಯಾಸ್ ಸಿಲಿಂಡರ್ ಗಾಗಿ ನಿಂತರೂ ಇಲ್ಲಿಯವರೆಗೂ ಸಿಕ್ಕಿಲ್ಲ, ಎರಡು ದಿನ ಕಳೆಯಲು ಬಂದರು ಸಾಲಾಗಿ ನಿಲ್ಲುವುದಾಗಿದೆ. ಒಂದು ಲೋಡ್ ಬರುತ್ತೆ ಮತ್ತೆ ಅದು ಖಾಲಿಯಾದಾಗ ಮತ್ತೆ ಕಾಯುವ ಪರಿಸ್ಥಿತಿಯಿದೆ. ಹಲವು ದಿನಗಳಿಂದ ಇದೆ ರೀತಿ ಸಮಸ್ಯೆ ಉಂಟಾಗುತ್ತಿದ್ದು ಇದನ್ನು ಬಗೆಹರಿಸುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.





