ಬುದ್ಧ-ಬಸವ-ಅಂಬೇಡ್ಕರ್‌ ಹೆಸರಿನಲ್ಲಿ ಪ್ರಮಾಣ ವಚನವೆಂಬ ಅದ್ಬುತ

Date:

ಬುದ್ಧ, ಬಸವ ಮತ್ತು ಅಂಬೇಡ್ಕರ್‌ ಅವರ ಚಿಂತನೆಗಳು ತುಳಿತಕ್ಕೊಳಗಾದವರ, ದೌರ್ಜನ್ಯಕ್ಕೆ ಒಳ್ಳಗಾದವರೆಲ್ಲರ ಜೀವನಕ್ಕೆ ಸ್ಪೂರ್ತಿಯಾಗಬಲ್ಲ, ಮಾನವ ಕುಲವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೈ ಹಿಡಿದು ಸಾಗಿಸಬಲ್ಲ ಅಭೂತಪೂರ್ವ ಸಿದ್ಧಾಂತಗಳೆ ಆಗಿವೆ. ಇಂತಹ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳುವುದಲ್ಲದೆ ತಮ್ಮ ರಾಜಕಾರಣದ ಜೀವನದಲ್ಲಿ ಗಟ್ಟಿಯಾಗಿ ಉಳಿಸಿಕೊಂಡು ಬೆಳೆಸುತ್ತಿರುವ ಅಪರೂಪದ ರಾಜಕಾರಣಿ ಸಚಿವರಾಗಿ ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವಿಕರಿಸಿದ ಸತೀಶ ಜಾರಕಿಹೋಳಿ.

ಅಕ್ಷರಶಃ ಬುದ್ಧ, ಬಸವ ಮತ್ತು ಅಂಬೇಡ್ಕರ್‌ ಸಿದ್ಧಾಂತಕ್ಕೆ ಬದ್ಧರಾಗಿರುವ ಇವರು ಬಸವಣ್ಣ ಅವರ ವಚನದಂತೆ ಮೂಢನಂಬಿಕೆಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುತ್ತಿರುವರು. ರಾಹುಕಾಲ, ಯಮಗಂಡ ಕಾಲ, ಒಳ್ಳೆಯ ಸಮಯ ಮತ್ತು ದಿನ ಯಾವುದೆಂದು ಜ್ಯೋತಿಷಿಗಳ ಹಿಂದೆ ಬಿದ್ದು ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ರಾಜಕಾರಣಿಗಳ ನಡುವೆ ಸತೀಶ ಜಾರಕಿಹೊಳಿಯವರು. “ದಿನ ಶ್ರೇಷ್ಠವೆಂದು ಮಾಡುವ ಪಂಚ ಮಹಾಪಾತಕರ ಮುಖವ ನೋಡಲಾಗದು” ಎಂದು ಶರಣರು ಹೇಳಿದಂತೆ ಒಳ್ಳೆಯ ಮತ್ತು ಕೆಟ್ಟ ಸಮಯವೆಂಬ ಮೌಢ್ಯಕ್ಕೆ ಜೋತು ಬೀಳದೆಯೇ, ಸೂರ್ಯ ಗ್ರಹಣದ ಸಮಯದಲ್ಲಿಯೇ ನಾಮಪತ್ರ ಸಲ್ಲಿಸಿ ತಮ್ಮ ಸಿದ್ಧಾಂತಕ್ಕೆ ಬದ್ಧರಾಗಿ ಉಳಿದವರು.

ಚುನಾವಣೆಯಲ್ಲಿ ಬಹುಮತಗಳಿಂದ ಜಯಗಳಿಸುವ ಮೂಲಕ ಒಳ್ಳೆಯ ಮತ್ತು ಕೆಟ್ಟ ಸಮಯ ಎಂಬುವದಿಲ್ಲ ಎಂಬುದನ್ನು ಸಾಬಿತು ಪಡಿಸುವಲ್ಲಿ ಯಶಸ್ವಿಯಾದ ರಾಜಕಾರಣಿ. ಅಷ್ಟೆ ಅಲ್ಲದೆ ಪ್ರತಿ ವರ್ಷ ಇವರು ನಾಗರ ಪಂಚಮಿಯಂದು, “ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡೊಡೆ ಕೊಲ್ಲೆಂಬರಯ್ಯಾ” ಎಂದು ಡಾಂಭಿಕ ಭಕ್ತಿಯನ್ನು ವಿರೋಧಿಸದ ಬಸವಣ್ಣವರ ಹಾಗೆ ನಾಗರ ಪಂಚಮಿಯಂದು ಮಣ್ಣಿನ ನಾಗರಕ್ಕೆ ಹಾಲೆರದು ಹಾಲು ವ್ಯರ್ಥಮಾಡದಿರಿ, ಆ ಹಾಲನ್ನು ಬಡವರಿಗೆ ನೀಡಿ ಬಸವ ಪಂಚಮಿ ಆಚರಿಸುವ ಕಾರ್ಯವನ್ನು ಮಾನವ ಬಂಧುತ್ವ ವೇಧಿಕೆಯ ಮೂಲಕ ರಾಜ್ಯಾದಾದ್ಯಂತ ಆಚರಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪ್ರತಿ ವರ್ಷ ಸ್ಮಶಾನದಲ್ಲಿ ಕಾರ್ಯಕ್ರಮಗಳನ್ನು ಮಾಡಿ ಮೂಢ ನಂಬಿಕೆಗಳ ವಿರುದ್ಧ ಜಾಗೃತಿಗೊಳಿಸುವದಲ್ಲದೆ ಗ್ರಹಣದ ಸಮಯಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ಯಶಸ್ವಿಯಾಗಿರುವ ಸಚಿವ ಸತೀಶ್ ಜಾರಕಿಹೊಳಿ. ಇಂತಹ ಅನೇಕ ವಿಷಯಗಳಿಂದ ಮನುವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಟಿಕೆಗಳಿಗೊಳ್ಳಗಾದರೂ ಎಂದು ಕೂಡ ತಮ್ಮ ಸಿದ್ಧಾಂತವನ್ನು ಬಿಟ್ಟುಕೊಡದೆ ಬುದ್ಧ, ಬಸವ, ಅಂಬೇಡ್ಕರರ ಸಿದ್ಧಾಂತಗಳೊಂದಿಗೆ ಗಟ್ಟಿಯಾಗಿ ನಿಂತಿರುವವರು.

ರಾಜಕಾರಣದಲ್ಲೂ ಈ ಸಿದ್ಧಾಂತಗಳೊಂದಿಗೆ ಹೋರಾಡುತ್ತಿರುವ ಇವರು ಈ ಹಿಂದಿನ 2013ರ ಅವದಿಯ ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ಜಾರಕಿಹೊಳಿ ಅವರಿಗೆ ಅಬಕಾರಿ ಖಾತೆಯ ಸಚಿವರನ್ನಾಗಿ ಮಾಡಿದಾಗ ಅದನ್ನು ವಿರೋಧಿಸಿ ಇಂತಹ ಖಾತೆಯಿಂದ ಜನರಿಗೆ ನಾನು ಏನು ಉಪಕಾರ ಮಾಡಲು ಸಾಧ್ಯವಿಲ್ಲ ಎಂದು ರಾಜೀನಾಮೆ ನೀಡಿದ ಇವರು ಇಂದಿನ ರಾಜಕಾರಣಕ್ಕೆ ಒಂದೊಳ್ಳೆಯ ಸಂದೇಶ ನೀಡಿ ಬೇಷ್ ಎನ್ನಿಸಿಕೊಂಡರು.

ಒಟ್ಟಿನಲ್ಲಿ ಕೋಮುವಾದ ಹಾಗೂ ದ್ವೇಷ ರಾಜಕಾರಣದ ಮಧ್ಯೆ ಸಾಮರಸ್ಯ ಮತ್ತು ಪ್ರೀತಿ ಮೂಡಿಸಿ ಮೌಢ್ಯಾಚಾರಣೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸತೀಶ್‌ ಜಾರಕಿಹೊಳಿಂಯಂತಹ ರಾಜಕಾರಣಿಗಳು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅವಶ್ಯವಾಗಿ ಬೇಕಾಗಿದ್ದಾರೆ.

– ಸುನಿಲ ಹಂಪನ್ನವರ
ಬೆಳಗಾವಿ ಜಿಲ್ಲೆ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಮೂಢನಂಬಿಕೆಯನ್ನು ವಿರೋಧಿಸಿ ಎಲ್ಲಾ ಒಳ್ಳೆಯದು ಆಗುತ್ತದೆ. ಎಂಬ ಆತ್ಮವಿಶ್ವಾಸದಿಂದ ಕೆಲಸ ಮಾಡುತ್ತಾ ಬೆಳೆದ ವಿಶಿಷ್ಟ ರಾಜಕಾರಣಿ.

  2. ಈ ಚಿಂತನೆಗಳನ್ನು ‌ಪಾಲಿಸಿ ಮುಂದುವರೆಸಲು‌‌ ಇಂತಹ ರಾಜಕಾರಣಿಗಳ ಅವಶ್ಯಕತೆ ಇದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ಜೋಡಿ ಕೊಲೆ | ವಿವಾಹೇತರ ಸಂಬಂಧವೇ ಕೊಲೆಗೆ ಕಾರಣ?

ಬೆಂಗಳೂರಿನ ಸಾರಕ್ಕಿ ಪಾರ್ಕ್‌ನಲ್ಲಿ ನಡೆದಿದ್ದ ಜೋಡಿ ಕೊಲೆಗೆ ಸಂಬಂಧ ಕೆಲವು ಮಾಹಿತಿಗಳು...

ಮೋದಿ ವೈಫಲ್ಯ-6 | ಎಲ್ಲಿವೆ ಸಂಸದರ ಆದರ್ಶ ಗ್ರಾಮಗಳು; ಮೋದಿ ದತ್ತು ಪಡೆದ ಹಳ್ಳಿಗಳು?

ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ಏನೆಲ್ಲಾ ಸೌಲಭ್ಯಗಳಿದ್ದವೂ ಆ ಯಾವುದೇ ಸೌಕರ್ಯಗಳೂ...

ಚಿಕ್ಕಬಳ್ಳಾಪುರ | ಏಪ್ರಿಲ್‌ 20ರಂದು ಪ್ರಧಾನಿ ಮೋದಿ ಆಗಮನ

ಏಪ್ರಿಲ್‌ 20ರ ಶನಿವಾರ 3 ಗಂಟೆಗೆ ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿ ಬಳಿ...