ಸೌದಿ ಅರೇಬಿಯಾದ ಪ್ರಮುಖ ತೈಲ ಸಂಸ್ಥೆ ಸೌದಿ ಅರಾಮ್ಕೋ (Saudi Aramco) ಸೌಲಭ್ಯಗಳು ಹಾಗೂ ಖಾಮೀಸ್ ಮುಶಾಯತ್‌ನಲ್ಲಿರುವ ಮಿಲಿಟರಿ ವಾಯುನೆಲೆಯ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿರುವುದಾಗಿ ಯೆಮೆನ್‌ನ ಹೌತಿಗಳು ಪ್ರತಿಪಾದಿಸಿದ್ದಾರೆ.
ಸೌದಿಯ ಸೆಂಘಿ ಮತ್ತು ಪಶ್ಚಿಮ ಕರಾವಳಿ ಬಂದರು ನಗರವಾದ ಯಾನ್ಬು ಪ್ರದೇಶದಲ್ಲಿರುವ ಅರಾಮ್ಕೋ ತೈಲ ಶುದ್ಧೀಕರಣ ಕೇಂದ್ರಗಳನ್ನು ಮತ್ತು ದಕ್ಷಿಣ ಪ್ರಾಂತ್ಯದಲ್ಲಿರುವ ‘ಕಿಂಗ್ ಖಾಲಿದ್ ವಾಯುನೆಲೆ’ಯನ್ನು ಗುರಿಯಾಗಿಸಿಕೊಂಡು ಹತ್ತಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ಉಡಾಯಿಸಲಾಗಿದೆ ಎಂದು ಹೌತಿ ಮಿಲಿಟರಿ ವಕ್ತಾರ ಯಾಹ್ಯಾ ಸಾರೀ ತಿಳಿಸಿದ್ದಾರೆ.
ಇದನ್ನೂ ಓದಿ: ಯೆಮೆನ್‌ನಿಂದ ಭಾರತದವರೆಗೆ… ಹೌತಿ ದಾಳಿಯಿಂದ ತಲ್ಲಣಿಸಿದ ಜಗತ್ತು!
ಸೌದಿ ಒಕ್ಕೂಟ ಪಡೆಗಳು ಯೆಮೆನ್ ಮೇಲೆ ನಡೆಸುತ್ತಿರುವ ಸರಣಿ ವಾಯುದಾಳಿಗಳಿಗೆ ಪ್ರತಿಯಾಗಿ ಈ ದಾಳಿ ನಡೆಸಿರುವುದಾಗಿ ಅವರು ಹೇಳಿದ್ದಾರೆ.
This video cannot be played in your browser. Open the video directly
ಆದರೆ, ಈ ದಾಳಿಯಿಂದ ಆಗಿರುವ ಹಾನಿಯ ಕುರಿತು ಅಥವಾ ದಾಳಿ ನಿಜಕ್ಕೂ ನಡೆದಿದೆಯೇ ಎಂಬುದರ ಬಗ್ಗೆ ಸೌದಿ ಅರೇಬಿಯಾ ಸರ್ಕಾರವಾಗಲಿ ಅಥವಾ ಅರಾಮ್ಕೋ ಸಂಸ್ಥೆಯಾಗಲಿ ಅಧಿಕೃತವಾಗಿ ಯಾವುದೇ ದೃಢೀಕರಣ ನೀಡಿಲ್ಲ. ಸ್ವತಂತ್ರ ಮೂಲಗಳಿಂದಲೂ ಹಾನಿಯ ಪ್ರಮಾಣ ಇನ್ನೂ ದೃಢಪಟ್ಟಿಲ್ಲ.





