ರಾಯಚೂರು | ಯುರೋಪಿನ ಫ್ಯಾಸಿಸಂಗಿಂತ ಭಾರತದ ಫ್ಯಾಸಿಸಂ ವಿಭಿನ್ನ: ಪಿಜೆ ಜೇಮ್ಸ್

Date:

ಯುರೋಪಿನ ಫ್ಯಾಸಿಸಂಗಿಂತ ಭಾರತದ ಫ್ಯಾಸಿಸಂ ವಿಭಿನ್ನ ಸ್ವರೂಪ ಹೊಂದಿದ್ದು, ಮುಸ್ಲಿಂ ವಿರೋಧಿ ನೀತಿ ಹಾಗೂ ಜಾತಿವಾದ (ಮನುಸ್ಮೃತಿ)ದ ಆಧಾರದ ಮೇಲೆ ನಿಂತಿದೆ. ಹಿಟ್ಲರನ ಯಹೂದಿ ವಿರೋಧಿ ನೀತಿಯ ಮಾದರಿಯಲ್ಲೇ, ಆರ್‌ಎಸ್‌ಎಸ್‌ ಗೋಲ್ವಾಲ್ಕರ್ ಅವರ ಕಾಲದಿಂದಲೂ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಪಿಜೆ ಜೇಮ್ಸ್ ಹೇಳಿದರು.

- Advertisement -

ಅವರಿಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸಿಪಿಐ(ಎಂಎಲ್) ರೆಡ್‌ಸ್ಟಾರ್ 13ನೇ ಮಹಾ ಅಧಿವೇಶನ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಆರ್‌ಎಸ್‌ಎಸ್‌ನ ರಾಜಕೀಯ ಮುಖವಾಡವಾಗಿ ಬಿಜೆಪಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಸಂಸತ್ತನ್ನು ಕೇವಲ ಪ್ರದರ್ಶನ ವಸ್ತುವನ್ನಾಗಿಸಲಾಗಿದೆ. ದೇಶದ ಪ್ರಮುಖ ನೀತಿ ಹಾಗೂ ನಿರ್ಧಾರಗಳನ್ನು ಕಾರ್ಪೊರೇಟ್ ಕಚೇರಿಗಳು ಮತ್ತು ನಾಗ್ಪುರದ ಕೇಂದ್ರ ಕಚೇರಿಯಿಂದ ನಿಯಂತ್ರಿಸಲಾಗುತ್ತಿದೆ ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ...

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ. ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ...

ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಕಾರಣಕ್ಕೆ ಭಾರತೀಯ ಸರಕುಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸುವ ಮಸೂದೆಯನ್ನು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಂಡಿಸಲಾಗಿದ್ದರೂ, ಮೋದಿ ಸರ್ಕಾರ ಅಮೆರಿಕವನ್ನು ಪ್ರಶ್ನಿಸಲು ಹಿಂಜರಿಯುತ್ತಿದೆ ಎಂದು ಪಿಜೆ ಜೇಮ್ಸ್ ಟೀಕಿಸಿದರು.

ಇತ್ತೀಚಿನ ಬ್ರಿಕ್ಸ್ ಶೃಂಗಸಭೆಯಲ್ಲಿಯೂ ಪ್ಯಾಲೆಸ್ಟೀನ್ ಹಾಗೂ ಇರಾನ್ ಮೇಲಿನ ಯುದ್ಧದ ವಿಚಾರದಲ್ಲಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಕಠಿಣ ನಿರ್ಣಯ ಕೈಗೊಳ್ಳಲು ಭಾರತ ಸರ್ಕಾರ ಮುಂದಾಗಲಿಲ್ಲ. ಅಲ್ಲದೆ, ಅಮೆರಿಕನ್ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡುವ (ಡಿ-ಡಾಲರೈಸೇಶನ್) ಪ್ರಕ್ರಿಯೆಗೂ ಸರ್ಕಾರ ಬದ್ಧತೆ ತೋರಲಿಲ್ಲ ಎಂದು ಅವರು ಆರೋಪಿಸಿದರು.

ಫ್ಯಾಸಿಸ್ಟ್ ಸರ್ಕಾರದ ಕಠಿಣ ವೀಸಾ ನೀತಿಗಳು ಹಾಗೂ ತೊಂದರೆಗಳೊಂದಿಗೆ ವಿದೇಶಗಳಿಂದ ಆಗಮಿಸಬೇಕಿದ್ದ ಹಲವು ಅಂತಾರಾಷ್ಟ್ರೀಯ ಪ್ರತಿನಿಧಿಗಳಿಗೆ ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದರು. ಅದಾನಿ ಮತ್ತು ಅಂಬಾನಿಯಂತಹ ಬಂಡವಾಳಶಾಹಿಗಳು ಜಾಗತಿಕ ಬಹುರಾಷ್ಟ್ರೀಯ ಕಂಪನಿಗಳ ಕಿರಿಯ ಪಾಲುದಾರರಾಗಿದ್ದಾರೆಯೇ ಹೊರತು, ಭಾರತದಲ್ಲಿ ಸ್ವತಂತ್ರ ತಂತ್ರಜ್ಞಾನ ನಿಯಂತ್ರಣವಿಲ್ಲ. ‘ವಿಶ್ವಗುರು’ ಎಂದು ಹೇಳಿಕೊಳ್ಳುತ್ತಿದ್ದರೂ, ಕೃತಕ ಬುದ್ಧಿಮತ್ತೆ (ಎಐ) ಹಾಗೂ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಈ ಯುಗದಲ್ಲಿ ಭಾರತವು ಚೀನಾ ಅಥವಾ ಅಮೆರಿಕದ ಆಪ್ ಮೇಲೆಯೇ ಅವಲಂಬಿತವಾಗಿದೆ. ತಂತ್ರಜ್ಞಾನದಲ್ಲಿ ಭಾರತವು ಚೀನಾಕ್ಕಿಂತ ಸಾಕಷ್ಟು ಹಿಂದುಳಿದಿದೆ ಎಂದರು.

ಕಮ್ಯುನಿಸ್ಟ್ ಚಳವಳಿಯ ಇತಿಹಾಸವನ್ನು ಅವಲೋಕಿಸಿದ ಅವರು, ಭಾರತದ ಸಾಂಪ್ರದಾಯಿಕ ಕಮ್ಯುನಿಸ್ಟರು ಜಾತಿ ಸಮಸ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಂಡರು. ಭಾರತದಲ್ಲಿ ಯುರೋಪಿಯನ್ ಮಾದರಿಯ ವರ್ಗ ವಿಶ್ಲೇಷಣೆ ಅನ್ವಯಿಸುವುದಿಲ್ಲ. ಇಲ್ಲಿ ಜಾತಿ ಮತ್ತು ವರ್ಗ ಒಂದಕ್ಕೊಂದು ಬೆಸೆದುಕೊಂಡಿವೆ. ಶ್ರಮ, ಅಧಿಕಾರ ಮತ್ತು ಸಂಪತ್ತಿನ ಶೋಷಣೆಯು ಜಾತಿಯೊಂದಿಗೆ ನೇರ ಸಂಬಂಧ ಹೊಂದಿದೆ. ಆದ್ದರಿಂದ ಜಾತಿ ವಿನಾಶದ ಹೋರಾಟವು ವರ್ಗ ಸಂಘರ್ಷದ ಅವಿಭಾಜ್ಯ ಅಂಗವಾಗಿದೆ ಎಂದು ಪ್ರತಿಪಾದಿಸಿದರು.

ರಾಯಚೂರಿನಲ್ಲಿ ಇತಿಹಾಸದಲ್ಲೇ ಕಾಣದಂತಹ ತೀವ್ರ ತಾಪಮಾನ ಹಾಗೂ ಜಾಗತಿಕ ಹವಾಮಾನ ಬಿಕ್ಕಟ್ಟಿಗೆ ಕಾರ್ಪೊರೇಟ್ ಬಂಡವಾಳಶಾಹಿಯೇ ನೇರ ಕಾರಣ. ಕಾರ್ಲ್ ಮಾರ್ಕ್ಸ್ ಹೇಳಿದಂತೆ, ಬಂಡವಾಳಶಾಹಿಯು ಮಾನವ ಅಸ್ತಿತ್ವದ ಮೂಲಗಳಾದ ‘ಶ್ರಮ’ ಮತ್ತು ‘ಪ್ರಕೃತಿ’ ಎರಡನ್ನೂ ನಾಶಮಾಡುತ್ತಿದೆ. ನೇಪಾಳದಲ್ಲಿ ಹಿಮಪರ್ವತಗಳು ಕರಗುತ್ತಿರುವುದು, ಓಝೋನ್ ಸವಕಳಿ ಎಲ್ಲವೂ ಬಂಡವಾಳಶಾಹಿ ಲೂಟಿಯ ಪರಿಣಾಮ. ಹೀಗಾಗಿ ಪ್ರಕೃತಿ ಮತ್ತು ಬಂಡವಾಳದ ನಡುವಿನ ಸಂಘರ್ಷವನ್ನು ಪಕ್ಷದ ಮುಖ್ಯ ಕಾರ್ಯಸೂಚಿಯನ್ನಾಗಿ ಸೇರಿಸಿಕೊಳ್ಳಲಾಗಿದೆ ಎಂದರು.

ಜಗತ್ತಿನಾದ್ಯಂತ ಯುವಜನರು, ಮಹಿಳೆಯರು ಮತ್ತು ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೂ, ಅದನ್ನು ವ್ಯವಸ್ಥಿತ ರಾಜಕೀಯ ಪರ್ಯಾಯವನ್ನಾಗಿ ಮುನ್ನಡೆಸಲು ಪ್ರಬಲ ಕಮ್ಯುನಿಸ್ಟ್ ಚಳವಳಿಯ ಕೊರತೆಯಿದೆ. ಈ ಮಹಾಧಿವೇಶನದ ಮುಂದಿನ ದಿನಗಳಲ್ಲಿ ಪಕ್ಷದ ರಾಜಕೀಯ ಪ್ರಸ್ತಾವನೆಗಳು, ಕಾರ್ಯಕ್ರಮಗಳು ಹಾಗೂ ಭವಿಷ್ಯದ ಹೋರಾಟದ ನೀತಿ-ನಿಯಮಗಳ ಕುರಿತು ಪ್ರತಿನಿಧಿಗಳ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ ಅಂತಿಮಗೊಳಿಸಲಾಗುವುದು ಎಂದರು.

ಈ ಸುದ್ದಿ ಓದಿದ್ದೀರಾ? ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ: ಲೆಕ್ಕಾಚಾರವೇನು?

ವೇದಿಕೆಯಲ್ಲಿ ಎಂಸಿಪಿಐ(ಯು) ಪ್ರಧಾನ ಕಾರ್ಯದರ್ಶಿ ಅಶೋಕ ಓಂಕಾರ,ತಮಿಳುನಾಡಿನ ಕಮ್ಯುನಿಷ್ಟ ಪಾರ್ಟಿ ಬಾಲನ್, ಸೆಂಟರ್ ಫಾರ್ ಸೋಷಿಯಲ್ ಆಕ್ಟಿವಿಷ್ಟ ಸುಮಿತ ಘೋಷ, ಕೇರಳದ ಎಂ.ಕೆ.ದಾಸನ್, ತಮಿಳುನಾಡಿನ ಮನೋಹರನ್, ಆಂದ್ರಪ್ರದೇಶದ ಹರಿಪ್ರಸಾದ, ತೆಲಂಗಾಣದ ಮಹ್ಮದ ಬಾಷಾ, ಛತ್ತೀಸಗಡ ಸೌರಾ ರಾಜ್ಯ, ಮಧ್ಯಪ್ರದೇಶದ ಫಹಿಂ, ಪಶ್ಚಿಮ ಬಂಗಾಳದ ಕನ್ಹಯ್ಯ, ದೆಹಲಿ ವಿಜಯ, ಪಂಜಾಬನ ಲಾಭ್‌ಸಿಂಗ್ ಸಾಗರೋತ್ತರ ಸಮಿತಿಪ್ರದುಶಕುಮಾರ, ಟಿಯುಸಿಐ ರಾಷ್ಟಿçÃಯ ಅಧ್ಯಕ್ಷ ಸಾಬಿ ಜೋಸೆಫ್ , ಕರ್ನಾಟಕ ಎಐಕೆಕೆಎಸ್‌ನ ರುದ್ರಯ್ಯ, ದೆಹಲಿಯ ಎಐಆರ್‌ಎಸ್‌ಓನ ಅಂಜನ ಆಜಾದ್, ಛತ್ತೀಸಗಡನ ತುಹಿನ್, ಜಾತಿ ನಿರ್ಮೂಲನಾ ಚಳುವಳಿಯ ಇನಿಯಾವನ್, ಆದಿವಾಸಿ ಭಾರತ ಮಹಾಸಭಾದ ಉರ್ಮಿಳಾ, ಎಫ್‌ಇಪಿಎಡಿನ ಜಯರಾಜ್‌ನ, ಆರ್.ಮಾನಸಯ್ಯ ಇದ್ದರು. ಎಂ.ಡಿ.ಇಕ್ಬಾಲ್ ಸ್ವಾಗತಿಸಿದರು. ಎಂ.ಡಿ.ಅಮೀರ ಅಲಿ ವಂದಿಸಿದರು. ವಿವಿಧ ರಾಜ್ಯಗಳಿಂದ ಆಗಮಿಸಿದ ಪ್ರತಿನಿಧಿಗಳು ಭಾಗಿಯಾದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಲ್ಪೆ ಬಂದರಿನ ಸರ್ವಾಂಗೀಣ ಅಭಿವೃದ್ಧಿಗೆ ಮೊದಲ ಆದ್ಯತೆ : ಸಚಿವ ಬಸವಂತಪ್ಪ

ಸರ್ವಋತು ಮಲ್ಪೆ ಮೀನುಗಾರಿಕಾ ಬಂದರಿನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಆಧುನೀಕರಣಕ್ಕೆ ಮೊದಲ...

ಕರಾವಳಿಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಜನಪ್ರತಿನಿಧಿಗಳಿಂದ ಮಾಹಿತಿ ಸಂಗ್ರಹ : ಸಚಿವ ಬಸವಂತಪ್ಪ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರಿಕಲ್ಪನೆಯಂತೆ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ...

ಬಾಗಲಕೋಟೆ | ಕೆಲಸ ಮಾಡದೇ ಸಂಬಳ; ಶಾಸಕ ಮೇಟಿ ಸೊಸೆ ವೈದ್ಯಾಧಿಕಾರಿ ಹುದ್ದೆಯಿಂದ ವಜಾ

ಸರ್ಕಾರಿ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದ ಬಾಗಲಕೋಟೆ ಕಾಂಗ್ರೆಸ್ ಶಾಸಕ ಉಮೇಶ್...

ಸೆ.18ಕ್ಕೆ ಗಣಪತಿ ಶೋಭಾಯಾತ್ರೆ: ಶಾಂತವಾಗಿರುವ ಟಿ ನರಸೀಪುರದಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸುವ ಕುತಂತ್ರ?

ಟಿ ನರಸೀಪುರದಲ್ಲಿ ಸೆ.18ರಂದು ಗಣಪತಿ ಶೋಭಾಯಾತ್ರೆ ನಡೆಯಲಿದ್ದು, ಮಸೀದಿ ಬಳಿ ಮೆರವಣಿಗೆ...