ಶಿವಮೊಗ್ಗ | ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕುವೆಂಪು ವಿವಿ ಅತಿಥಿ ಉಪನ್ಯಾಸಕರಿಂದ ಧರಣಿ

Date:

ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರುಗಳು ಪ್ರತಿಭಟನಾ ಧರಣಿ ನಡೆಸಿದರು.

- Advertisement -

ವಿವಿಯ ಕುವೆಂಪು ಶತಮಾನೋತ್ಸವ ಭವನದ ಮುಂದೆ ಸೇರಿದ್ದ ಅತಿಥಿ ಉಪನ್ಯಾಸಕರು, ಕುವೆಂಪು ವಿವಿಯು ಈ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ, ಅತಿಥಿ ಉಪನ್ಯಾಸಕರ ವೇತನವನ್ನು ಸಿಂಡಿಕೇಟ್ ಸಭೆಯ ನಿರ್ಣಯದಂತೆ ಗರಿಷ್ಠ 45,000ರೂ ಗಳನ್ನು ನಿಗದಿ ಮಾಡಿ ನೀಡಿದ್ದರು. ಆದರೆ, ಹಠಾತ್ತನೇ ಈ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಸಿಂಡಿಕೇಟ್ ಸಭೆಯ ಗಮನಕ್ಕೆ ತರದೆ, ಸರ್ಕಾರದ ಆದೇಶದ ಪ್ರಕಾರ ನಮ್ಮ ವೇತನವನ್ನು ಕಡಿತಗೊಳಿಸಿರುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ಸರ್ಕಾರವು ಪರಿಷ್ಕೃತ ಅತಿಥಿ ಉಪನ್ಯಾಸಕರ ವೇತನವನ್ನು ಜಾರಿಗೆ ತಂದಿದ್ದು, ಅದನ್ನು ಯಥಾವತ್ತಾಗಿ ನಿಗದಿಪಡಿಸಲು ವಿಳಂಬ ಧೋರಣೆಯನ್ನು ತೋರಿಸುತ್ತಿದೆ. ಆದ್ದರಿಂದ ಸರ್ಕಾರದ ಆದೇಶದ ಪ್ರಕಾರ ವೇತನವನ್ನು ಮತ್ತು ವಿಮಾ ಯೋಜನೆ, ಹಿಡಿಗಂಟು ಯೋಜನೆ, ಆಸ್ಪತ್ರೆ ಸವಲತ್ತು ಮುಂತಾದವುಗಳನ್ನು ಜನವರಿ 2024ರಿಂದಲೇ ಅನ್ವಯವಾಗುವಂತೆ, ತಕ್ಷಣ ಜಾರಿ ಮಾಡಿ ಬಾಕಿ ವೇತನವನ್ನು ಈ ಕೂಡಲೇ ಪಾವತಿಸುವಂತೆ ಆಗ್ರಹಿಸಿದರು.

ವಿಶ್ವವಿದ್ಯಾನಿಲಯದಲ್ಲಿ ಸತತವಾಗಿ 15-20 ವರ್ಷಗಳಿಂದ ಹಲವು ಮಂದಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ವಿಶ್ವವಿದ್ಯಾನಿಲಯದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಆದರೆ ನಮ್ಮ ಈ ಸೇವೆಯ ಅನುಭವವು ಯಾವ ಸಂಸ್ಥೆಯಲ್ಲಿಯೂ ಕೂಡ ಪರಿಗಣನೆಗೆ ತೆಗೆದುಕೊಳ್ಳದಿರುವುದು ವಿಷಾದನೀಯ ಎಂದು ಆಕ್ರೋಶ ಹೊರಹಾಕಿದರು.

ಕುವೆಂಪು 4

ಈಗಾಗಲೇ ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕರಿಗೆ, 11 ತಿಂಗಳ ವೇತನ ನೀಡಲು ಸಿಂಡಿಕೇಟ್ ಸಭೆಯು ನಿರ್ಣಯ ಮಾಡಿತ್ತು. ಇದುವರೆಗೂ ಅದರ ಬಗ್ಗೆ ಯಾವುದೇ ಆದೇಶ ನೀಡದೆ ವಿಳಂಬ ನೀತಿಯನ್ನು ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಶೈಕ್ಷಣಿಕ ವರ್ಷದಲ್ಲಿ ದಿಢೀರನೆ ಮೇ ತಿಂಗಳ ಸಂಬಳವನ್ನು ಕಡಿತ ಮಾಡಲು ಹೊರಟಿರುವುದು ಬಹಳ ಶೋಚನೀಯ ಸಂಗತಿ. ವಿಶ್ವವಿದ್ಯಾನಿಲಯದ ಅಧಿಕಾರಿಗಳು ಈ ಕೂಡಲೇ ಇದರ ಬಗ್ಗೆ ಕ್ರಮ ಕೈಗೊಂಡು ಸತತವಾಗಿ ವೇತನವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಉಪನ್ಯಾಸಕರಿಗೆ ಸೇವಾ ಭದ್ರತೆ ಇಲ್ಲದಂತಾಗಿರುವುದು ಶೋಚನೀಯ ಸಂಗತಿಯಾಗಿದೆ. ಹಾಗಾಗಿ ಸೇವಾ ಭದ್ರತೆಯ ಈತ ದೃಷ್ಟಿಯಿಂದ ಹಿಂದಿನ ವರ್ಷದಲ್ಲಿ ಕಾರ್ಯ ನಿರ್ವಹಿಸಿದ ಯುಜಿಸಿ ನಿಯಮದಂತೆ ಅರ್ಹತೆಯನ್ನು ಹೊಂದಿರುವ ಎಲ್ಲ ಅತಿಥಿ ಉಪನ್ಯಾಸಕರನ್ನು ಮುಂದಿನ ಶೈಕ್ಷಣಿಕ ಸಾಲಿಗೂ ಯಾವುದೇ ಸಂದರ್ಶ ವಿಲ್ಲದೆ ಮುಂದುವರೆಸಿ ಸೇವಾ ಭದ್ರತೆಯನ್ನು ಒದಗಿಸಬೇಕು ಹಾಗೂ ಯುಜಿಸಿ ನಿಯಮದ ಅರ್ಹತೆ ಹೊಂದಿಲ್ಲದ ಮತ್ತು ಖಾಲಿ ಸ್ಥಾನಗಳಿಗೆ ಮಾತ್ರ ಸಂದರ್ಶನವನ್ನು ನಡೆಸಿ ಶೈಕ್ಷಣಿಕ ವರ್ಷದ ಮೊದಲ ದಿನದಿಂದಲೇ ಕೆಲಸಕ್ಕೆ ವರದಿ ಮಾಡಿಕೊಳ್ಳುವಂತೆ ಆಯ್ಕೆ ಮಾಡಿಕೊಳ್ಳಬೇಕೆಂದು ಅತಿಥಿ ಉಪನ್ಯಾಸಕರು ಆಗ್ರಹಿಸಿದರು.

ವಿಶ್ವವಿದ್ಯಾನಿಲಯದ ಮಾನವ ಸಂಪನ್ಮೂಲ ವಿಭಾಗದಿಂದ, ಆಗುತ್ತಿರುವ ತಪ್ಪು ಗ್ರಹಿಕೆಗಳು ಮತ್ತು ವೇತನದ ಬಿಲ್ಲುಗಳ ಪ್ರಕ್ರಿಯೆ ಮಾಡಲು ತೋರುತ್ತಿರುವ ವಿಳಂಬ ನೀತಿಯನ್ನು ತಡೆಗಟ್ಟಿ, ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಹಾಗೂ ವೇತನ ಬಿಲ್ಲು ನೀಡಿದ ಐದು ದಿನದೊಳಗೆ ವೇತನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕುವೆಂಪು ವಿವಿ ಅತಿಥಿ ಉಪನ್ಯಾಸಕರು ಧರಣಿ ನಡೆಸುವ ಮೂಲಕ ಆಗ್ರಹಿಸಿದರು.

ಅತಿಥಿ ಉಪನ್ಯಾಸಕರ ಬೇಡಿಕೆಗಳು

  1. ಸರ್ಕಾರ ಜಾರಿಗೊಳಿಸಿರುವ ಅತಿಥಿ ಉಪನ್ಯಾಸಕರ ಸವಲತ್ತುಗಳನ್ನು ಮತ್ತು ವೇತನವನ್ನು ಕೂಡಲೇ ಜಾರಿಗೊಳಿಸುವುದು ಮತ್ತು ಜನವರಿ 2024 ರಿಂದಲೇ ಅನ್ವಯವಾಗುವಂತೆ ಬಾಕಿ ವೇತನವನ್ನು (arrears) ಪಾವತಿಸುವುದು.
  2. ಪ್ರತಿ ಶೈಕ್ಷಣಿಕ ವರ್ಷದ ಸಂದರ್ಶನವನ್ನು ರದ್ದುಗೊಳಿಸಿ ಮುಂದಿನ ಶೈಕ್ಷಣಿಕ ವರ್ಷಕ್ಕೂ ಅದೇ ಅತಿಥಿ ಉಪನ್ಯಾಸಕರನ್ನು ಮುಂದುವರೆಸಿ ಸೇವಾ ಭದ್ರತೆಯನ್ನು ಒದಗಿಸುವುದು.
  3. 11 ತಿಂಗಳ ವೇತನ ಜಾರಿಗೊಳಿಸುವುದು ಮತ್ತು ಸತತವಾಗಿ ವೇತನವನ್ನು ಪ್ರತಿ ತಿಂಗಳು ಐದನೇ ತಾರೀಕಿನ ಒಳಗೆ ನೀಡುವುದು.
  4. ಮಾನವ ಸಂಪನ್ಮೂಲ ವಿಭಾಗದಿಂದ ನಡೆಯುತ್ತಿರುವ ತಪ್ಪು ಗ್ರಹಿಕೆಗಳು ಮತ್ತು ವಿಳಂಬವನ್ನು ತಡೆಗಟ್ಟುವುದು.
  5. ಅತಿಥಿ ಉಪನ್ಯಾಸಕರ ಪದನಾಮವನ್ನು, ಸಹಾಯಕ ಬೋಧಕರಾಗಿ ಬದಲಾವಣೆ ಮಾಡಿ. ಕುಲಸಚಿವರು (ಆಡಳಿತ) ಸೇವಾ ಅನುಭವದ ಪ್ರಮಾಣ ಪತ್ರವನ್ನು ನೀಡುವುದು.
  6. ಅತಿಥಿ ಉಪನ್ಯಾಸಕರನ್ನು ಗೌರವಯುತವಾಗಿ ನಡೆಸಿಕೊಂಡು, ವಿಶ್ವವಿದ್ಯಾನಿಲಯದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ (ಮೌಲ್ಯಮಾಪನ, ಸ್ಮಾಡ್ ಡ್ಯೂಟಿ ಮುಂತಾದವು) ಬಳಸಿಕೊಳ್ಳುವುದು.
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಟ್ಕಳ | ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಮಿನಿ ಬಸ್ ಕಳವು

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಮಿನಿ...

ಯಲ್ಲಾಪುರ | ಉಡ ಬೇಟೆ ಆರೋಪ: ತಂದೆ-ಮಗ ಬಂಧನ

ಅಕ್ರಮವಾಗಿ ವನ್ಯಪ್ರಾಣಿಗಳನ್ನು ಬೇಟೆಯಾಡಿ, ಅದರ ಮಾಂಸವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ...

ಉಡುಪಿ | ಡಾ.ಮೆಹೆವಿಶ್ ಮುಶೀರ್ ಶೇಖ್‌ಗೆ ಪಿಎಚ್‌ಡಿ ಪದವಿ

ಡಾ. ಮಮತಾ ಬಾಲಚಂದ್ರ ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ. ನರೇಂದ್ರ ವಿ.ಜಿ....