ಶಿವಮೊಗ್ಗ | ಕರವೇ ಸ್ವಾಭಿಮಾನಿ ಬಣದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Date:

ಶಿವಮೊಗ್ಗ, ವಾಣಿಜ್ಯ ಮಳಿಗೆಯ ನಾಮಫಲಕ ಜಾಹೀರಾತು ಫಲಕ ಶಾಲೆ ಮತ್ತು ಶಾಲಾ ವಾಹನಗಳಲ್ಲಿನಾ ನಾಮಫಲಕ ಆಹಾರ ಸರಬರಾಜುಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಒತ್ತಾಯಿಸಿ ಇಂದು ಕರವೇ ಸ್ವಾಭಿಮಾನಿ ಬಣ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.

- Advertisement -

ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಕನ್ನಡ ನಾಡು ಭಾಷೆ ಎಂದು ಭಾಷಣದಲ್ಲಿ ಮಾತ್ರ ಬೊಗಳೆ ಬಿಡುವ ರಾಜಕಾರಣಿಗಳು ಮತ್ತು ಅದಕ್ಕೆ ತಕ್ಕಂತೆ ವರ್ತಿಸುವ ಅಧಿಕಾರಿಗಳು ಎಲ್ಲಿಯೂ ಕನ್ನಡವನ್ನು ಬಳಸುವಂತೆ ಒತ್ತಾಯ ಪಡಿಸುವುದಾಗಲಿ, ಕಾನೂನನ್ನು ಪಾಲಿಸುವುದಾಗಲಿ ಯಾವುದನ್ನು ಮಾಡದೆ ಕನ್ನಡ ಉಳಿವಿಗಾಗಿ ಪತ್ರಗಳಲ್ಲಿ ಸುತ್ತೋಲೆಗಳಲ್ಲಿ ಮಾತ್ರ ಕಾಣುವುದು ವಿಪರ್ಯಾಸದ ಸಂಗತಿಯಾಗಿದೆ ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ಕನ್ನಡ ಉಳಿವಿಗಾಗಿ ಹೋರಾಟ ಮಾಡುವ ನಾಯಕರ ಮಕ್ಕಳೇ ಆಂಗ್ಲ ಶಾಲೆಗೆ ಸೇರಿಸುವುದು ತಮ್ಮ ವ್ಯವಹಾರಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಆಸ್ಪತ್ರೆಗಳಲ್ಲಿ ತಾವುಗಳೇ ಕನ್ನಡ ಬಳಕೆಯನ್ನು ಮಾಡದೆ ಕನ್ನಡ ನಾಡಿಗೆ ಕನ್ನಡದ ಜನತೆಗೆ ದ್ರೋಹ ಎಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರ್ಕಾರ ಈಗಾಗಲೇ ಕನ್ನಡ ಉಳಿವಿಗಾಗಿ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದೆ ಅವುಗಳೆಲ್ಲವೂ ಕಾಗದಗಳಲ್ಲೇ ಉಳಿದುಹೋಗಿದೆ, ಕಾನೂನಿನ ಪ್ರಕಾರ ಯಾವುದೇ ಅಂಗಡಿ ಮುಂಗಟ್ಟುಗಳ ಮುಂದೆ ಶೇಕಡ 60%ರಷ್ಟು ಕನ್ನಡ ಭಾಷೆ ಹಾಗೂ ಶೇಕಡ 40%ರಷ್ಟು ಅನ್ಯ ಭಾಷೆ ಬಳಸುವಂತೆ ಆದೇಶವಿದ್ದರೂ, ಸಹ ಇದನ್ನು ಅನುಷ್ಠಾನ ತರಲು ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದು ಅವರ ಭಾಷಾ ಪ್ರೀತಿ ಏನೆಂದು ಇಲ್ಲಿಯ ಗೊತ್ತಾಗುತ್ತದೆ.

ಸಾಮಾನ್ಯವಾಗಿ ನಗರಗಳಲ್ಲಿ ಎಲ್ಲಿ ನೋಡಿದರೂ ಯಾವ ಜಾಹಿರಾತು ಫಲಕಗಳಲ್ಲಿಯೂ ಅಂಗಡಿ ಮುಂಗಟ್ಟುಗಳ ಮುಂದೆ ಪ್ರದರ್ಶನ ಮಾಡಿದ ನಾಮ ಪಲಕಗಳಲ್ಲಿ ಹಾಗೆಯೇ ಶಾಲೆಗೆ ಓಡಾಡುವ ವಾಹನಗಳಲ್ಲಾಗಲಿ, ಆಹಾರ ಪೂರೈಕೆಯ ಕಂಪನಿಗಳ ಹೆಸರು, ಸಮವಸ್ತ್ರಗಳಲ್ಲಾಗಲಿ ಕನ್ನಡ ಇಲ್ಲದೆ ಇಂಗ್ಲಿಷ್ ಭಾಷೆ ರಾರಾಜಿಸುತ್ತಿರುವುದು ಖಂಡನೀಯ ಎಂದರು.

ಇವೆಲ್ಲವು ಅಧಿಕಾರಿಗಳಿಗೆ ಗೊತ್ತಿದ್ದರೂ ಕಂಡರೂ ಕಾಣದ ಹಾಗೆ ವರ್ತನೆ ಮಾಡುತ್ತಿರುವುದು ಕನ್ನಡ ನಾಡು ನುಡಿ ಭಾಷೆಗೆ ಮಾಡುವ ದ್ರೋಹವಾಗಿರುತ್ತದೆ ಎಂದಿದ್ದಾರೆ.

ಹಾಗಾಗಿ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜಾಹಿರಾತು ಫಲಕದಲ್ಲಿ ಪ್ರತಿಷ್ಠಿತ ಶಾಲೆಗಳ ಗೋಡೆ ಬರಹದಲ್ಲಾಗಲಿ ಶಾಲೆಗೆ ಓಡಾಡುವ ವಾಹನಗಳ ಫಲಕದಲ್ಲಾಗಲಿ, ಮನೆಮನೆಗೆ ಆಹಾರ ಪೂರೈಕೆ ಮಾಡುವ ಕಂಪನಿಗಳಲ್ಲಾಗಲಿ ಈ ಕೂಡಲೇ ಕನ್ನಡ ಬಳಕೆಯನ್ನು ಬಳಸುವಂತೆ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.

ಒಂದು ಪಕ್ಷದಲ್ಲಿ ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಸಂಘಟನೆಯು ಕಟ್ಟಾಳುಗಳ ಮುಂದಾಳತ್ವದಲ್ಲಿ ಕನ್ನಡ ಬಳಸದ ಜಾಹೀರಾತು ಬಳಕೆಗಳಿಗೆ ಮಸಿ ಬಳೆಯುವುದು ಹಾಗೂ ಕನ್ನಡ ಬಳಸದೆ ಓಡಾಡುವ ಶಾಲಾ ವಾಹನಗಳ ವಾಹನಗಳ ಅಡ್ಡ ಹಾಕುವುದು ಅಂತಹ ಶಾಲೆಯ ವಿರುದ್ಧ ಮುತ್ತಿಗೆ ಹಾಕಲಾಗುವುದು ಎಂದು ಸಂಘಟನೆ ಎಚ್ಚರಿಸುತ್ತದೆ.

ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್ಎಸ್ ಜಿಲ್ಲಾ ಖಜಾಂಚಿ ಗಣೇಶ್ ಜಿಲ್ಲಾ ಉಪಾಧ್ಯಕ್ಷರಾದ ವಿಜಯಕುಮಾರ್ ಜಿಲ್ಲಾ ಕಾರ್ಯದರ್ಶಿ ರಾಮು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಾಧಿಕ್ ನಗರಾಧ್ಯಕ್ಷ ಜೀವನ್ ಯುವ ಅಧ್ಯಕ್ಷ ಸಂತೋಷ್ ಮಹಿಳಾ ಘಟಕದ ಅಧ್ಯಕ್ಷ ಕವಿತಾ ಉಪಾಧ್ಯಕ್ಷರಾದ ಪದ್ಮ ಮಾಲತಿ ಪ್ರಧಾನ ಕಾರ್ಯದರ್ಶಿ ಆರ್ಥಿಕ ತಿವಾರಿ ಸಂಘಟನಾ ಕಾರ್ಯದರ್ಶಿ ಜ್ಯೋತಿ ನಾಗರಾಜ್ ಪ್ರದೀಪ್ ನೂರಲ್ಲಕಾನ್ ಪ್ರಚಾರ ಸಮಿತಿ ಅಧ್ಯಕ್ಷರಾದ ಮಾಲತೇಶ್ ಮುಂತಾದ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಂಡವಾರ ಬಳಿ ಭೂಕಂಪ; ಸ್ಥಳೀಯರು ಆತಂಕಪಡುವ ಅಗತ್ಯವಿಲ್ಲ: KSNDMC ಅಧಿಕಾರಿಗಳು

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ 3.5 ತೀವ್ರತೆಯ ಭೂಕಂಪ ಉಂಟಾಗಿರುವುದಾಗಿ ಕರ್ನಾಟಕ...

ಯಾದಗಿರಿ | ಬರದ ಹೊಡೆತಕ್ಕೆ ಬೆಳೆ ನಷ್ಟ, ಸಾಲದ ಹೊರೆ; ರೈತ ಆತ್ಮಹತ್ಯೆ

ಮಳೆ ಕೈಕೊಟ್ಟು ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಹಿನ್ನೆಲೆಯಲ್ಲಿ ಸಾಲದ ಹೊರೆ...

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ದಾರಿದೀಪ ಅವ್ಯವಸ್ಥೆ: ಜಿಲ್ಲಾಧಿಕಾರಿಗೆ ಕಾಂಗ್ರೆಸ್ ಮನವಿ

ಉಡುಪಿ ನಗರಸಭೆ ವ್ಯಾಪ್ತಿಯ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಹದಗೆಟ್ಟಿರುವ ದಾರಿದೀಪ...

ಕಲಬುರಗಿ | ಹಸುಗೂಸನ್ನು ಕಸದ ರಾಶಿಗೆ ಎಸೆದು ಪರಾರಿ; ತಾಯಿ, ಅಜ್ಜಿ ಪೊಲೀಸರ ವಶಕ್ಕೆ

ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಒಂದು ದಿನದ ಹಸುಗೂಸನ್ನು ಕಸದ...