ಶಿವಮೊಗ್ಗ | ಸೊರಬದಲ್ಲಿ ದಾರುಣ ಘಟನೆ ; ಲಾರಿ ಹರಿದು ಬಾಲಕ ಸಾವು

Date:

ಸೊರಬ ತಾಲೂಕಿನಲ್ಲಿ ರಸ್ತೆ ದಾಟುವಾಗ ಲಾರಿಯೊಂದು ಬಾಲಕನ ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ.ಶಿರಸಿಯ ಅತಾವುಲ್ಲಾ ಖಾನ್ ಹಾಗೂ ಫರೀನಾ ಬೇಗಂ ಅವರ ಪುತ್ರ ಮುಹಮ್ಮದ್ ಆಹಿಲ್‌ ಖಾನ್ (3) ಮೃತ ಬಾಲಕ.

- Advertisement -

ಅಂಗನವಾಡಿಯಲ್ಲಿದ್ದ ಬಾಲಕ ಅಜ್ಜಿಯನ್ನು ಕಂಡು ರಸ್ತೆ ದಾಟುತ್ತಿರುವ ವೇಳೆ ಘಟನೆ ಸಂಭವಿಸಿದೆ. ಲಾರಿ ಚಾಲಕನ ಅಜಾಗರೂಕತೆ ಮತ್ತು ಅತಿವೇಗವೇ ಬಾಲಕನ ಸಾವಿಗೆ ಕಾರಣ ಎಂದು ಮೃತ ಬಾಲಕನ ಅಜ್ಜಿ ನಸೀಮಾ ಬಾನು ನೀಡಿದ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಬಾಲಕನ ತಾಯಿ ಫರೀನಾ ಬೇಗಂ ಹೆರಿಗೆಗೆಂದು ತವರಿಗೆ ಬಂದಿದ್ದರು. ಘಟನಾ ಸ್ಥಳದಲ್ಲಿ ಮೃತ ಬಾಲಕನ ಸಂಬಂಧಿಗಳು ಹಾಗೂ ಊರ ಗ್ರಾಮಸ್ಥರ ರೋಧನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮಸ್ಥರು ಸ್ಥಳಕ್ಕೆ ಜಮಾಯಿಸಿ ಆಕ್ರಂದನ ವ್ಯಕ್ತಪಡಿಸಿದರು. ಮತ್ತೊಂದೆಡೆ ಮೃತ ಬಾಲಕ ತಂದೆ ಉದ್ಯೋಗ ನಿಮಿತ್ತ ದುಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸುದ್ದಿಗಾರರೊಂದಿಗೆ ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ಬಿ. ಈಶ್ವರಪ್ಪ ಮಾತನಾಡಿ, ಗ್ರಾಮದಲ್ಲಿ ರಸ್ತೆ ಅಗಲೀಕರಣವಾಗುತ್ತಿದೆ. ಅಂಗನವಾಡಿ ಕೇಂದ್ರವು ರಸ್ತೆಯ ಪಕ್ಕದಲ್ಲಿರುವುದೇ ಘಟನೆಗೆ ಕಾರಣ ಎಂದಿದ್ದಾರೆ. ಅದನ್ನು ಸ್ಥಳಾಂತರ ಮಾಡಬೇಕು ಎಂದರು.

ನೂತನ ಅಂಗನವಾಡಿ ಕಟ್ಟಡವನ್ನು ಗ್ರಾಮದ ಒಳ ಭಾಗದಲ್ಲಿ ನಿರ್ಮಿಸಲು ನಿವೇಶನ ನೀಡಲಾಗುವುದು. ಜೊತೆಗೆ, ಟಿಪ್ಪರ್, ಕ್ಯಾಂಟರ್ ಸೇರಿದಂತೆ ಇತರೆ ಲಾರಿಗಳು ಗ್ರಾಮಗಳ ಪರಿಮಿತಿಯಲ್ಲಿ ವೇಗಮಿತಿಯಿಲ್ಲದೇ ವಾಹನ ಚಲಾಯಿಸುತ್ತಾರೆ. ಅವರ ಮೇಲೆ ಸಂಬಂಧ ಇಲಾಖೆಯವರು ಸೂಕ್ತ‌ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಕ್ರಮ ಜಂಬಿಟ್ಟಿಗೆ ಸಾಗಿಸುತ್ತಿದ್ದ ಲಾರಿಗಳ ಮೇಲೆ ತಹಶೀಲ್ದಾರ್ ದಾಳಿ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್​​ ಪೇಟೆ, ಆನಂದಪುರ ಮಾರ್ಗವಾಗಿ ಅಕ್ರಮವಾಗಿ...

ಶಿವಮೊಗ್ಗ | ತಂದೆ-ತಾಯಿ ಬದುಕಿರುವಾಗಲೇ ಗೌರವಿಸಿ, ಪ್ರೀತಿಸಿ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ, ತಂದೆ-ತಾಯಿಗಳು ಬದುಕಿರುವಾಗಲೇ ಮಕ್ಕಳಾದ ನಾವು ಅವರನ್ನು ಸದಾ ಗೌರವದಿಂದ ಕಾಣಬೇಕು....

ಭದ್ರಾವತಿ | ಜುಗಾರಿ ಅಡ್ಡೆ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನ ಮೇಲೆ ಹಲ್ಲೆ!

ಭದ್ರಾವತಿ ಅಕ್ರಮ ಇಸ್ಪೀಟು, ತೂರಾ ಬಿಲ್ಲೆ ಜುಗಾರಿ ಅಡ್ಡೆ ಮಾಹಿತಿ ನೀಡಿದಕ್ಕೆ...

ಶಿಕಾರಿಪುರದಿಂದಲೇ ರಾಜಕೀಯ ‘ಶಿಕಾರಿ’ ಆರಂಭ: ಸಚಿವ ಮಧು ಬಂಗಾರಪ್ಪ

ಶಿಕಾರಿಪುರದಿಂದ ರಾಜಕೀಯ ‘ಶಿಕಾರಿ’ ಇಂದಿನಿಂದಲೇ ಆರಂಭವಾಗಿದೆ. ಶಿಕಾರಿಯಾಡುವ ಜವಾಬ್ದಾರಿಯನ್ನು ಇಲ್ಲಿನ ಜನತೆ...