ಶಿವಮೊಗ್ಗ | ಮಹಾನಗರ ಪಾಲಿಕೆ, ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ; ಸ್ಥಳೀಯರ ಆಕ್ರೋಶ

Date:

ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆ ಎದುರಿನ ಜಾಗದಲ್ಲಿ ಮೆಸ್ಕಾಂ(ಕೆಇಬಿ)ನವರು, ಲೈನ್‌ಗೆ ಅಡ್ಡ ಬಂದಿರುವ ಮರಗಳ ರೆಂಬೆ-ಕೊಂಬೆ ಹಾಗೂ ಎಲೆಗಳನ್ನು ನಿನ್ನೆ ಬೆಳಿಗ್ಗೆ ಕತ್ತಿರಿಸಿದ್ದರು. ಆದರೆ ರಸ್ತೆಯ ಫುಟ್‌ಪಾತ್‌ಗಳು ಸೇರಿದಂತೆ ಎಲೆಂದರಲ್ಲಿ ಬಿದ್ದಿರುವ ಮರಗಳ ತ್ಯಾಜ್ಯವನ್ನು ವಿಲೇವಾರಿ ಮಾಡದೆ ಹಾಗೆಯೇ ಬಿಟ್ಟು ಹೋಗಿದ್ದಾರೆ.

- Advertisement -

ಇಲ್ಲಿ ಸುತ್ತಮುತ್ತಲಿನಲ್ಲಿ ನಗರದ ಪ್ರತಿಷ್ಠಿತ ಆಸ್ಪತ್ರೆಗಳು, ಮೆಡಿಕಲ್ ಶಾಪ್‌ಗಳು, ಹೋಟೆಲ್‌ಗಳು ಇರುವುದರಿಂದ ಸಾರ್ವಜನಿಕ ಸಂಚಾರ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರು ಹಾಗೂ ರೋಗಿಗಳಿಗೆ ಅನಾನುಕೂಲವಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

“ಆಸ್ಪತ್ರೆಯಿಂದ ಮೆಡಿಕಲ್‌ಗೆ ಓಡಾಡಲು ಹಿಂಸೆ ಎನಿಸುತ್ತಿದೆ. ಅವಸರದಲ್ಲಿ ಬರುತ್ತಿರುವಾಗ ಕಡ್ಡಿಗಳು ಕಾಲಿಗೆ ತಾಕಿ ನಾವೇ ಬಿದ್ದು ಆಸ್ಪತ್ರೆ ಸೇರುತ್ತೇನೋ ಎನ್ನುವ ಆತಂಕ ಎದುರಾಗಿದೆ. ಮೆಸ್ಕಾಂನವರು ಮರದ ರೆಂಬೆಕೊಂಬೆಗಳನ್ನು ಕಡಿದು ಎಲ್ಲೆಂದರಲ್ಲಿ ಬಿಸಾಕಿರುವುದನ್ನು ತೆರವುಗೊಳಿಸಬೇಕು” ಎಂದು ಸಾರ್ವಜನಿಕರು ಈ ದಿನ.ಕಾಮ್‌ಗೆ ಮಾಹಿತಿ ನೀಡಿದರು.

ವಿಯಯಕ್ಕೆ ಸಂಬಂಧಿಸಿದಂತೆ ಈ‌ ದಿನ.ಕಾಮ್ ಮೆಸ್ಕಾಂ ಇಂಜಿನಿಯರ್ ನಂದೀಶ್ ಎಇಯವರನ್ನು ಸಂಪರ್ಕಿಸಿದಾಗ ಮಾತನಾಡಿ, “ಮಹಾನಗರ ಪಾಲಿಕೆಗೆ ತಿಳಿಸಿ, ಸ್ವಚ್ಛತೆ ಮಾಡಿ ಸರಿಪಡಿಸಿಕೊಡಲು ಹೇಳುತ್ತೇನೆ” ಎಂದರು.

ನಂತರ ಪ್ರಭುರಾಜ್ ಮಹಾನಗರ ಪಾಲಿಕೆ ಅರೋಗ್ಯಧಿಕಾರಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಗರದಲ್ಲಿ ಪದೇ ಪದೆ ಈ ರೀತಿ ಘಟನೆಗಳು ಆಗುತ್ತಿರುತ್ತವೆ, ನಮ್ಮ ಗಮನಕ್ಕೆ ತರುವುದಿಲ್ಲ. ಮರಗಳ ಎಲೆ, ರೆಂಬೆ ಕೊಂಬೆ ಕಡಿಯುವ ಮುನ್ನ ಹಾಗೆಯೇ ಅಧಿಕೃತವಾಗಿ ನಮಗೆ ಯಾವುದೇ ಆದೇಶ ಇಲ್ಲ. ಮೆಸ್ಕಾಂನಿಂದ ಜೊತೆಗೆ Man Power ಹಾಗೂ ವಾಹನದ ವ್ಯವಸ್ಥೆ ಮೆಸ್ಕಾಂ ಬಳಿ ಇಲ್ಲ. ಹಾಗಾಗಿ ಮೌಖಿಕವಾಗಿ ನಮಗೆ ತಿಳಿಸುತ್ತಾರೆ” ಎಂದು ಹೇಳಿದರು.

1001648420

“ನಮಗೆ ಕೂಡ ತಕ್ಷಣ ವ್ಯವಸ್ಥೆ ಮಾಡಿಕೊಡಲು ತೊಂದರೆ ಉಂಟಾಗುತ್ತೆ ಯಾಕಂದ್ರೆ ನಮ್ಮ ಮಹಾನಗರ ಪಾಲಿಕೆಯವರು ಮತ್ತು ವಾಹನ ಬೇರೆ ಬೇರೆ ಕೆಲಸದ ನಿಮಿತ್ತ ತೆರಳಿರುತ್ತವೆ. ಹಾಗಾಗಿ ನಮ್ಮ ಗಮನಕ್ಕೆ ಮಾಹಿತಿ ಬಂದಿದೆ. ಈಗ ಸ್ವಚ್ಛತೆ ಮಾಡಲು ವ್ಯವಸ್ಥೆ ಮಾಡಿಸುತ್ತೇನೆ” ಎಂದು ತಿಳಿಸಿದ್ದಾರೆ.

ನಗರದಲ್ಲಿ ಎಲ್ಲ ಕಡೆ ಮೆಸ್ಕಾಂನವರು ಈ ರೀತಿಯ ಅವ್ಯವಸ್ಥೆ ಮಾಡುತ್ತಾರೆ ಎಂಬುದು ವ್ಯಾಪಾರಸ್ಥರು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

“ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ Underground ಎಲೆಕ್ಟ್ರಿಕಲ್ ಲೈಲ್‌ಗಳನ್ನು ತರಲಾಗಿತ್ತು. ಆದರೆ ಅದರಿಂದ ಸಾಕಷ್ಟು ಸಮಸ್ಯೆಗಳು ಉಂಟಾದ ಕಾರಣ ಈಗ ಕೈಬಿಡಲಾಗಿದೆ ಎಂಬುದು ಮಾಹಿತಿಯಾಗಿದೆ. ಹಾಗಾಗಿ ನಗರದ ಹಲವು ಕಡೆ ಎಲೆಕ್ಟ್ರಿಕಲ್ ಲೈನ್ ಕಂಬಗಳು ಇರುವ ಕಾರಣ ಈ ರೀತಿ ಮರಗಳ ಕೊಂಬೆ ಎಲೆಗಳನ್ನು ಕತ್ತರಿಸುತ್ತಿರುತ್ತಾರೆ. ಆದರೆ ಮೆಸ್ಕಾಂ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ಕ್ರಮ ಜರುಗುಸಿಬೇಕು” ಎಂಬುದು ನಗರದ ಪ್ರಜ್ಞಾವಂತ ನಾಗರಿಕರ ಒತ್ತಾಯ.

1001648422

ಈ ರೀತಿ ದಿನಗಟ್ಟಲೆ ಸ್ವಚ್ಛತೆ ಮಾಡದಿರುವುದು, ಮಳೆ ಬರುತ್ತಿರುವ ಕಾರಣ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಹಾಗೆಯೇ ಇದರ ಮೇಲೆ ಕೆಲವರು ಉಗಿಯುವುದು ಹಾಗೂ ಪ್ರಾಣಿಗಳ ಮಲ ಮೂತ್ರದಿಂದ ಸಾಂಕ್ರಾಮಿಕ ರೋಗಕ್ಕೆ ಆಹ್ವಾನವಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

1001648547

ಮೆಸ್ಕಾಂ ಅವರು ಮರದ ಎಲೆ, ರೆಂಬೆ-ಕೊಂಬೆಗಳನ್ನು ಕಡಿದು, ತಮಗೆ ಇದುಕ್ಕೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುವುದು ನಾಗರಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನಗರದಲ್ಲಿ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಮೆಸ್ಕಾಂ ಅಧಿಕಾರಿಗಳು ಜವಾಬ್ದಾರಿಯಿಂದ ನಿರ್ವಹಣೆ ಮಾಡಬೇಕಿದೆ. ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಮಹಾನಗರ ಪಾಲಿಕೆ ಸ್ವಚ್ಛತೆ ಮಾಡಬೇಕಾಗಿದೆ. ಮೆಸ್ಕಾಂ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕಾರ್ಯ ನಿರ್ವಹಿಸಬೇಕು ಎಂಬುದು ನಾಗರಿಕರ ಅಗ್ರಹವಾಗಿದೆ.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದಿಂದ ಅರ್ಥಪೂರ್ಣ ಗಾಂಧಿ ಜಯಂತಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.)...

ಉಡುಪಿ | ಸಮುದಾಯದ ಅಭಿವೃದ್ಧಿಗೆ ಉದ್ಯಮಿಗಳ ಒಗ್ಗಟ್ಟು ಅಗತ್ಯ: ಮುಮ್ತಾಜ್ ಮನ್ಸೂರಿ

ನಮ್ಮ ಸಮುದಾಯದ ದುರ್ಬಲ ವರ್ಗಗಳನ್ನು ಮೇಲಕ್ಕೆತ್ತಲು ಎಲ್ಲರೂ ಬೆಂಬಲ ಮತ್ತು ಸಹಕಾರದೊಂದಿಗೆ...

ರಾಯಚೂರು | ಎಸ್‌ಐಆರ್ ವಿರೋಧಿಸಿ ಪ್ರತಿಭಟನೆ: ಜ್ಞಾನೇಶ ಕುಮಾರ ರಾಜೀನಾಮೆಗೆ ನಾಗರಿಕ ವೇದಿಕೆ ಆಗ್ರಹ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ...