ಶಿವಮೊಗ್ಗ | ಅಧಿಕ ಲಾಭದ ಆಮಿಷವೊಡ್ಡಿ 11 ಕೋಟಿ ವಂಚಿಸಿದ ದಂಪತಿ!

Date:

ಶಿವಮೊಗ್ಗ ನಗರದಲ್ಲಿ ಅಧಿಕ ಲಾಭದ ಆಸೆ ತೋರಿಸಿ, ವಿದೇಶಿ ಕಂಪನಿಯೊಂದಿಗೆ ಒಪ್ಪಂದವಿರುವುದಾಗಿ ಸಾರ್ವಜನಿಕರನ್ನು ನಂಬಿಸಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದಂಪತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

- Advertisement -

ಆರೋಪಿತರಾದ ದಂಪತಿಗಳು ಕಳೆದ ಒಂದು ವರ್ಷದಿಂದ ಸಾರ್ವಜನಿಕರಿಗೆ ಪರಿಚಯವಾಗಿದ್ದು, ತಾವು ಆರಂಭಿಸುವ ಬ್ಯುಸಿನೆಸ್‌ನಲ್ಲಿ ಹಣ ಹೂಡಿಕೆ ಮಾಡಿದರೆ ತಿಂಗಳಿಗೆ ಭಾರಿ ಲಾಭ ನೀಡುವುದಾಗಿ ಆಮಿಷ ಒಡ್ಡಿದ್ದರು. ವಂಚಕರು ಬೆಂಗಳೂರಿನಿಂದ ತಮ್ಮ ಕಂಪನಿಯನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸುತ್ತಿದ್ದು, ವಿದೇಶಿ ಕಂಪನಿಗಳೊಡನೆ ಒಪ್ಪಂದವಿದೆಯೆಂದು ಸುಳ್ಳು ಹೇಳಿ ಜನರ ವಿಶ್ವಾಸ ಗಳಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗೆಲ್ಲಬಹುದಾಗಿದ್ದ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಲ್ಟಿ ಹೊಡೆದದ್ದು...

ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆದ ನಾಲ್ಕು ಎಮ್ಮೆಲ್ಸಿ ಸ್ಥಾನಗಳ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಒಂದೇ ಒಂದು ಸೀಟನ್ನೂ ಪಡೆಯಲಾಗದೆ ಮುಗ್ಗರಿಸಿರುವುದು ರಾಜಕೀಯ ಪಡಸಾಲೆಯಲ್ಲಿ ನಾನಾ ನಮೂನೆಯ ವ್ಯಾಖ್ಯಾನ-ವಿಶ್ಲೇಷಣೆ ಹುಟ್ಟುಹಾಕಿದೆ....

ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ

ಹಳ್ಳಿಗಳ ಮಣ್ಣಿನ ಸೊಗಡು, ಮಹಿಳೆಯರ ಬದುಕಿನ ಅನುಭವ, ಕುಟುಂಬದ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಸೋಬಾನೆ ಪದಗಳ ಗಾಯನಕ್ಕೆ ದಶಕಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಚಾಮರಾಜನಗರದ ಹಿರಿಯ ಜಾನಪದ...

ನವೆಂಬರ್ 1 | ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ; ಭಾರತದ...

ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ ಎಂಟು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಚನೆ, ಮರುರಚನೆ ಹಾಗೂ ವಿಮೋಚನೆಯ ಇತಿಹಾಸವೂ ಇದೆ. ಭಾಷಾವಾರು ರಾಜ್ಯಗಳಿಗಾಗಿ ನಡೆದ...

ಈ ಹಿನ್ನೆಲೆ ದೂರುದಾರರು, ಅವರ ಸ್ನೇಹಿತರು ಹಾಗೂ ಪರಿಚಯಸ್ಥರು ಸೇರಿದಂತೆ ಒಟ್ಟು 38ಕ್ಕೂ ಹೆಚ್ಚು ಜನರು ಈ ವಂಚನೆಗೆ ಒಳಗಾಗಿದ್ದಾರೆ. ಕೆಲವರು ಮನೆ ಪತ್ರಗಳನ್ನು ಅಡಮಾನವಿಟ್ಟು ಮತ್ತು ನಗದು ರೂಪದಲ್ಲಿ ಹಣ ಹೂಡಿಕೆ ಮಾಡಲಾಗಿದೆ.

ಒಟ್ಟು 11 ಕೋಟಿ 46 ಲಕ್ಷ ರೂಪಾಯಿಗಳಿಗೂ ಅಧಿಕ ಹಣವನ್ನು ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಹಾಗೂ ಎಸ್‌ಬಿಐ ಸೇರಿದಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಮತ್ತು ನಗದು ರೂಪದಲ್ಲಿ ಪಡೆದುಕೊಳ್ಳಲಾಗಿದೆ. ಹಣ ಪಡೆದ ಬಳಿಕವೂ ದೂರುದಾರರಿಗೆ ಯಾವುದೇ ಲಾಭವನ್ನು ನೀಡದೆ, ಹಣವನ್ನೂ ವಾಪಸ್ ಕೊಡದೆ ವಂಚನೆ ಮಾಡಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಕಬ್ಬು ಬೆಳೆಗಾರರ ಸಭೆ ವಿವಾದ: ರೂ.25 ಲಕ್ಷ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ಶಾಸಕ ಟಿ ಪಾಟೀಲ

ಬೆಳಗಾವಿ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅಧ್ಯಕ್ಷತೆಯಲ್ಲಿ ನಡೆದ ಕಬ್ಬು ಬೆಳೆಗಾರರ...

ಬೀದರ್‌ | ಬೀದಿ ನಾಯಿಗಳ ಹಾವಳಿ: ಕ್ರಮಕ್ಕೆ ಆಗ್ರಹ

ಬೀದರ್ ನಗರದ ಮೈಲೂರಿನ ಸಿಎಂಸಿ ಕಾಲೊನಿಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ...

ಟ್ರೇಲರ್ vs ನನ್ನ ಮುಟ್ಟಲು ಸಾಧ್ಯವಿಲ್ಲ; ಸ್ಟಿಂಗ್ ಆಪರೇಷನ್‌ನಲ್ಲಿ ಎಚ್‌ಡಿಕೆ ಹೆಸರು!

ಕರ್ನಾಟಕ ರಾಜಕಾರಣವನ್ನು ತಲ್ಲಣಗೊಳಿಸಿರುವ ರಹಸ್ಯ ಸ್ಟಿಂಗ್ ಕಾರ್ಯಾಚರಣೆ ಪ್ರಕರಣದ ತನಿಖೆ ತೀವ್ರಗೊಂಡಿದೆ‌....

ಜಾಮೀನು ಸಿಕ್ಕ ಬೆನ್ನಲ್ಲೇ ಮತ್ತೆ ಇಡಿಯಿಂದ ಬಂಧನ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಜಂ ಖಾನ್

ಜಾಮೀನು ಪಡೆದ ಕೆಲವೇ ನಿಮಿಷಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಹೊಸ ಪ್ರಕರಣದಲ್ಲಿ...