ಶಿವಮೊಗ್ಗ | ಸಮಸ್ಯೆಗಳ ಆಗರವಾಗಿದೆ ತೇವರೇಚಟ್ನಳ್ಳಿ ವಾರ್ಡ್‌; ಅಳಲು ಕೇಳುವವರೇ ಇಲ್ಲ

Date:

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ತೇವರೇಚಟ್ನಳ್ಳಿಯ ಸೇತುವೆ ನಿರ್ಮಾಣವಾಗಿ ನಾಲ್ಕೇ ವರ್ಷಕ್ಕೆ ಶಿಥಿಲಗೊಂಡಿದೆ. ಸೇತುವೆಯ  ತಡೆಗೋಡೆಗಳು ಬಿರುಕು ಬಿಟ್ಟಿವೆ. ಸೇತುವೆ ಯಾವಾಗ ಕುಸಿಯಾತ್ತದೋ ಎಂಬ ಆತಂಕದಲ್ಲೇ ಸಾರ್ವಜನಿಕರು ಸೇತುವೆಯನ್ನು ಬಳಸುತ್ತಿದ್ದಾರೆ.

ಸೇತುವೆಯು ತೇವರೇಚಟ್ನಳ್ಳಿಯಿಂದ ರಾಗಿಗುಡ್ಡ, ನವುಲೇ ಹಾಗೂ ಮುತ್ತೋಡ ಗ್ರಾಮಗಳಿಗೆ ಸಂಪರ್ಕಕೊಂಡಿಯಾಗಿದೆ. ಸೇತುವೆಗೆ ತೀಕ್ಷ್ಣ ತಿರುವಿದ್ದು, ಗುಂಡಿಗಳೂ ಬಿದ್ದಿವೆ. ರಾತ್ರಿ ವೇಳೆಯಲ್ಲಿ ಸೇತುವೆಯ ರಸ್ತೆ ಸರಿಯಾಗಿ ಕಾಣಿಸುವುದೇ ಕಷ್ಟವಾಗಿದೆ. ಸೇತುವೆ ಬದಿಗಳಲ್ಲಿ ವಿದ್ಯುತ್ ದೀಪಗಳಾಗಲೀ, ಸೂಚನಾ ಫಲಕಗಳಾಗಲಿ ಹಾಕಲಾಗಿಲ್ಲ. ರಾತ್ರಿ ವೇಳೆ ಸೇತುವೆ ಮೇಲೆ ಅಪಘಾತವಾಗುವ ಭಯ ಜನರಲ್ಲಿ ಕಾಡುತ್ತಿದೆ.

ತೇವರೇಚಟ್ನಳ್ಳಿಯಲ್ಲಿರುವ ಪದವಿ ಪೂರ್ವ ಕಾಲೇಜಿಗೆ ದಿನನಿತ್ಯ ಕಾಲೇಜು ಬಸ್‌ಗಳು ಓಡಾಡುತ್ತವೆ. ಒಂದು ಬದಿಯಿಂದ 4 ಚಕ್ರದ ವಾಹನ ಸೇತುವೆ ಮೇಲೆ ಬಂದರೆ, ಮತ್ತೊಂದು ಬದಿಯಿಂದ ಬರುವ ವಾಹನಕ್ಕೆ ಜಾಗವಿರುವುದಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸೇತುವೆ ಕೆಳಗಿರುವ ನಾಲೆಯೂ ಗೆಬ್ಬೆದ್ದು ನಾರುತ್ತಿದೆ. ಶೌಚಾಲಯದ ಕೊಳಕು ನೀರು, ಕಸ ಕಡ್ಡಿ ತ್ಯಾಜ್ಯಗಳಿಂದ ತುಂಬಿ ಕೊಳಚೆ ಗುಂಡಿಯಂತಾಗಿದೆ. ಆದರೂ, ಪಾಲಿಕೆ ಅಧಿಕಾರಿಗಳು ಅದನ್ನು ಸ್ವಚ್ಛಗೊಳಿಸಲು ಮುಂದಾಗಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೇವರೇಚಟ್ನಳ್ಳಿ ವಾರ್ಡ್‌ನಲ್ಲಿನ ಚರಂಡಿ ನೀರು ನಿಂತಲ್ಲೇ ನಿಂತಿದೆ. ಚರಂಡಿಗಳು ಸ್ವಚ್ಛಗೊಳಿಸಿಲ್ಲ. ರಾಜಕಾಲುವೆಗೆ ಕಲುಷಿತ ನೀರು ಸೇರುವ ಹಾಗೆ ವ್ಯವಸ್ಥೆ ಮಾಡಿಲ್ಲ. ನಾಲೆ ಕೊಳಚೆಯಾಗಿರುವ ಕಾರಣ, ಇಲ್ಲಿನ ನಿವಾಸಿಗಳಿಗೆ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿಯಲ್ಲಿ ಎದುರಾಗಿದೆ. ಮಹಾನಗರ ಪಾಲಿಕೆ ಸದಸ್ಯರು ವಾರ್ಡ್‌ಗೆ ಬರುವುದೇ ಇಲ್ಲ. ಸಮಸ್ಯೆಗಳ ಬಗ್ಗೆ ಗಮನ ಕೊಡುತ್ತಿಲ್ಲ.  ಏನು ನೋಡುತ್ತಿಲ್ಲ, ಸರಿಪಡಿಸುತ್ತಿಲ್ಲ ಎಂದು ದೂರುತ್ತಿದ್ದಾರೆ.

ಸತತವಾಗಿ 3 ಬಾರಿ ಕಾರ್ಪೊರೇಟರ್‌ ಆಗಿರವು ಎಚ್.ಸಿ ಯೋಗೇಶ್ ಅವರು ಕೂಡ ಸಮಸ್ಯೆ ಬಗ್ಗೆ ಗಮನ ಹರಿಸಿಲ್ಲ ಎಂದು ಕಿಡಿಕಾರಿದ್ದಾರೆ.

ಈದಿನ.ಕಾಮ್‌ ಜೊತೆ ಮಾತನಾಡಿದ ಕಾರ್ಪೊರೇಟರ್ ಎಚ್.ಸಿ ಯೋಗೇಶ್ ಅವರು ವಿಷಯದ ಬಗ್ಗೆ ಮಾಹಿತಿ ಪಡೆದುಕೊಂಡು ತಿಳಿಸುತ್ತೇನೆ ಎಂದಿರುತ್ತಾರೆ.

ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಈ.ದಿನ.ಕಾಮ್ ಜೊತೆ ಮಾತನಾಡಿ, ಸೇತುವೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಕಾಲುವೆಗಳಿಗೆ ಶೌಚಾಲಯದ ನೀರು ಹಾಗೂ ಕಸ ಕಡ್ಡಿ ತ್ಯಾಜ್ಯ ಸೇರದಂತೆ ತಡೆಗಟ್ಟಲು ಒಳಚರಂಡಿ ಮತ್ತು ನೀರಾವರಿ ಇಲಾಖೆ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ” ಎಂದು ತಿಳಿಸಿದ್ದಾರೆ.

 

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಗೌರವಧನ ಹೆಚ್ಚಳಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನವನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿಯವರ ಗಮನಕ್ಕೆ ತರುವಂತೆ...

ದಾವಣಗೆರೆ | ಎರಡು ಕ್ವಿಂಟಲ್ ಬೆಳ್ಳುಳ್ಳಿ ಕದ್ದ ಕಳ್ಳರು; ರೈತ ಕಂಗಾಲು

ಈವರೆಗೆ ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಅಡಿಕೆ, ತೆಂಗಿನಕಾಯಿಗಳನ್ನು ಕುದಿಯುತ್ತಿದ್ದ ಕಳ್ಳರು, ಈಗ...

ಮೈಸೂರು | ಸ್ಥಳೀಯರ ಬೇಡಿಕೆಗೆ ಮಣಿದ ಎಂಸಿಸಿ; ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಕಾರ್ಯಾರಂಭ

ಮೈಸೂರು ನಗರದ ಹೊರವಲಯದಲ್ಲಿರುವ ಆರ್ ಆರ್ ನಗರ, ದಟ್ಟಗಳ್ಳಿ, ಬೋಗಾದಿ ಮತ್ತು...

ಬಳ್ಳಾರಿ | ರಾಜಕಾರಣಿಗಳು ಮಾತ್ರ ಗೂಂಡಾಗಳಲ್ಲ, ಅಧಿಕಾರಿಗಳೂ ಗೂಂಡಾಗಳೇ: ರವಿಕೃಷ್ಣಾ ರೆಡ್ಡಿ ಕಿಡಿ

ಬಳ್ಳಾರಿ ಜಿಲ್ಲೆಯಲ್ಲಿ ರಾಜಕಾರಣಿಗಳು ಮಾತ್ರ ಗೂಂಡಾಗಳಲ್ಲ. ಅಧಿಕಾರಿಗಳೂ ಗೂಂಡಾಗಳೇ. ಇಲ್ಲಿನ ಎಸ್‌ಪಿಗೆ...