ಬೀದರ್ | ಒಳಮೀಸಲಾತಿ ಕುರಿತ ಗೊಂದಲಗಳಿಗೆ ಕಿವಿ ಕೊಡಬೇಡಿ: ಪ್ರಭು ಚವ್ಹಾಣ

Date:

  • ಪರಿಶಿಷ್ಟ ಜಾತಿ ಪಟ್ಟಿಯಿಂದ ಯಾವ ಸಮುದಾಯವನ್ನು ಕೈಬಿಡುವುದಿಲ್ಲ
  • ಯಾವುದೇ ಸಮುದಾಯಗಳಿಗೂ ಅನ್ಯಾಯ ಮಾಡಲು ನಾನು ಬಿಡುವುದಿಲ್ಲ

ಸರ್ಕಾರ ನೀಡಿರುವ ಒಳ ಮೀಸಲಾತಿ ಕುರಿತಂತೆ ಕೆಲವರು ತಪ್ಪು ಮಾಹಿತಿ ಹರಡಿಸುತ್ತಾ, ಜನರಲ್ಲಿ ಗೊಂದಲ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆ ಗೊಂದಲಗಳಿಗೆ ಯಾರೂ ಕಿವಿ ಕೊಡಬೇಡಿ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದರು.

ಬೀದರ್ ಜಿಲ್ಲೆಯ ಔರಾದ್ ಪಟ್ಟಣದ‌ಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. “ಬಂಜಾರಾ, ಭೋವಿ, ಕೊರಮ, ಕೊರಚ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯಲಾಗುತ್ತದೆ ಎನ್ನುವ ಸುಳ್ಳನ್ನು ಹರಡಲಾಗುತ್ತಿದೆ. ನನ್ನ ಜೀವಿತಾವಧಿಯಲ್ಲಿ ಯಾವುದೇ ಕಾರಣಕ್ಕೂ ಯಾವೊಂದು ಸಮಾಜಗಳಿಗೂ ಅನ್ಯಾಯ ಮಾಡಲು ಬಿಡುವುದಿಲ್ಲ” ಎಂದರು.

“ದೇಶ ಸ್ವಾತಂತ್ರ್ಯವಾದ ನಂತರ ಇಲ್ಲಿಯವರೆಗೂ ಬಂಜಾರಾ ಸಮಾಜದ ಹಲವು ಕುಟುಂಬಗಳು ಸ್ವಂತ ಮನೆಗಳಿಲ್ಲದೇ ಸಾಕಷ್ಟು ತಾಪತ್ರಯ ಎದುರಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಮಾರು 51 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಮೂಲಕ ಐತಿಹಾಸಿಕ ಕೆಲಸ ಮಾಡಿದ್ದಾರೆ.‌ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಿಸಲಾಗಿದೆ” ಎಂದರು.

“ಚಿಂತಾಕಿಯ ಚಂದ್ರಮಹಾರಾಜ ಮಾತನಾಡಿ, ಬಂಜಾರಾ ಸಮಾಜದ ಕುಲಗುರು ರಾಮರಾವ ಮಹಾರಾಜರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿರುವ ಸಚಿವ ಪ್ರಭು ಚವ್ಹಾಣ ಅವರು ನಿರಂತರ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅವರು ಮಾಡಿದ ಸೇವೆ ಅನನ್ಯ” ಎಂದರು.

ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಕೆಆರ್‌ಎಸ್‌ನ 72 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

ಸಮಾವೇಶದಲ್ಲಿ ಬಿಜೆಪಿ ಔರಾದ ಮಂಡಲ‌ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ವಸಂತ ಬಿರಾದಾರ, ಸುರೇಶ ಭೋಸ್ಲೆ, ಬನ್ಸಿ ಮಹಾರಾಜ, ಪ್ರಕಾಶ ಘೂಳೆ, ಕೇರಬಾ ಪವಾರ, ರಾಜಕುಮಾರ ಪೋಕಲವಾರ, ಶಿವಾಜಿರಾವ ಪಾಟೀಲ ಮುಂಗನಾಳ, ಕೇರಬಾ ಪವಾರ, ಶರಣಪ್ಪ ಪಂಚಾಕ್ಷರಿ,‌ ಸಚಿನ್ ರಾಠೋಡ್, ಪ್ರದೀಪ ಪವಾರ, ಪ್ರತೀಕ‌ ಚವ್ಹಾಣ, ಹಣಮಂತ ಸುರನಾರ, ಖಂಡೋಬಾ ಕಂಗಟೆ, ರಾಜು ಪೋಕಲವಾರ, ಸುಜಿತ್ ರಾಠೋಡ್, ಬಾಲಾಜಿ ಠಾವರೆ, ಎಂ ಡಿ ಸಲಾವುದ್ದೀನ್ ಹಾಗೂ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ನ್ಯಾಯಾಂಗ ಬಡಾವಣೆಯಲ್ಲಿ ಬೀದಿ ಬದಿ ವ್ಯಾಪಾರಿಯ ಎಳನೀರು ಕಳ್ಳತನ

ಬಡ ವ್ಯಾಪಾರಿಯೊಬ್ಬರು ಮಾರಾಟ ಮಾಡಲು ತಂದಿರಿಸಿದ್ದ ಸುಮಾರು 800 ಎಳನೀರು ರಾತ್ರೋರಾತ್ರಿ...

ಈಗಲಾದರೂ ಚರ್ಚೆಗೆ ಬರುತ್ತದೆಯೇ ಪ್ರಾದೇಶಿಕ ಅಸಮಾನತೆ ಕೂಗು

ಕರ್ನಾಟಕ ಏಕೀಕರಣವಾಗಿ ಅರ್ಧ ಶತಮಾನ ಕಳೆದರೂ ಇಡೀ ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿಯ...

ಉತ್ತರ ಕನ್ನಡ | ಬೇಸಿಗೆಗೂ ಮುನ್ನವೇ ನೀರಿನ ಬವಣೆ; ಸಂಕಷ್ಟದಲ್ಲಿ ಗ್ರಾಮಗಳು

ಶಿರಸಿ ಮಲೆನಾಡು ಆದರೆ, ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ....

ಚಾಮರಾಜನಗರ | ಸರ್ವರ್‌ ಸಮಸ್ಯೆಯಿಂದ ವಸತಿ ಯೋಜನೆ ದಾಖಲೆ ಸಲ್ಲಿಕೆ ವಿಳಂಬ; ಕಾಲಾವಧಿ ಮುಂದೂಡುವಂತೆ ಒತ್ತಾಯ

ವಸತಿ ಯೋಜನೆಗಳ ಅಡಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ದಾಖಲೆಗಳನ್ನು ಸಲ್ಲಿಸಲು ನವೆಂಬರ್‌ 30...