ಚಿಂತಾಮಣಿ : ನಗರದ 25ನೇ ವಾರ್ಡ್ ಕೆಜಿಎನ್ ಬಡಾವಣೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಗಾಯಗೊಂಡಿದ್ದ ಲಕ್ಷ್ಮೀದೇವಮ್ಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬೆಂಕಿ ಪ್ರಕರಣಕ್ಕೆ ಪುತ್ರನ ಪ್ರೇಮವೇ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ. ಮೃತಳ ಗಂಡ ರಾಧಾಕೃಷ್ಣಪ್ಪ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು,ನಮ್ಮ ಪುತ್ರ ಪುರುಷೋತ್ತಮ್ 10 ತಿಂಗಳ ಹಿಂದೆ ಕೋಲಾರ ತಾಲೂಕಿನ ಮೂಡಲಚಿಂತಹಳ್ಳಿ ಯುವತಿಯನ್ನು ಪ್ರೀತಿಸಿ ಕರೆದುಕೊಂಡು ಹೋಗಿದ್ದ.ಈ ವಿಚಾರವಾಗಿ ರಾಜಿ ಮಾಡಿ ಯುವತಿಯನ್ನು ಪಾಲಕರ ಜತೆಯಲ್ಲಿ ಕಳುಹಿಸಿದ್ದೆವು. ಆದರೆ ಇಬ್ಬರು ಪರಾರಿಯಾಗಿದ್ದು,ಈ ವಿಚಾರವಾಗಿ ಯುವತಿ ಅಣ್ಣಂದಿರು ಆಗಾಗ ಮನೆಯ ಬಳಿ ಬಂದು ಗಲಾಟೆ ಮಾಡುತ್ತಿದ್ದರು.
ಮಾರ್ಚ್.20ರಂದು ರಾತ್ರಿ 10ಕ್ಕೆ ಬಂದು ಗಲಾಟೆ ಮಾಡಿ, ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು. ಪುನಃ ರಾತ್ರಿ 11ಕ್ಕೆ ನನ್ನ ಹೆಂಡತಿಯ ಬಟ್ಟೆಗಳಿಗೆ ಬೆಂಕಿ ತಗುಲಿ ಕಿರುಚಾಡುತ್ತಿದ್ದಳು.ಹೊರಗೆ ಬಂದಾಗ ನಮ್ಮ ಮನೆಯ ಬಳಿಯಿಂದ ಇಬ್ಬರು ಹೋಗುತ್ತಿದ್ದು,ಯಾರು ಎಂದು ಗುರುತು ಸಿಕ್ಕಿಲ್ಲ.ಯುವತಿಯ ಅಣ್ಣಂದಿರ ಮೇಲೆ ಅನುಮಾನವಿದೆ ಎಂದು ಲಕ್ಷ್ಮೀದೇವಮ್ಮ ಪತಿ ರಾಧಾಕೃಷ್ಣಪ್ಪ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡ ನಗರಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಮಾಹಿತಿ ಇದೆ. ಬಂಧನ ಮತ್ತು ವಿಚಾರಣೆಯ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ಬಹಿರಂಗಗೊಳಿಸಿಲ್ಲ.
ಇದನ್ನು ಓದಿದ್ದೀರಾ..? ಅರಹಳ್ಳಿ ಸೊಸೈಟಿ ಚುನಾವಣೆ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಪ್ರಚಾರಕ್ಕೆ ಚಾಲ
ಅಸಲಿಗೆ ಈ ಕೊಲೆಗೆ ಕಾರಣವಾಗಿದ್ದು ಮಗನ ಮೂರನೇ ಮದುವೆ! ಲಕ್ಷ್ಮಿದೇವಮ್ಮ ಅವರ ಮಗ ಪುರುಷೋತ್ತಮ್,ಮೂಡಚಿಂತಲಹಳ್ಳಿ ಗ್ರಾಮದ ಶ್ರಾವಣಿ ಎಂಬ ಯುವತಿಯನ್ನು ಮೂರನೇ ಮದುವೆಯಾಗಿದ್ದ.ಕಳೆದ ಆರು ತಿಂಗಳ ಹಿಂದೆ ಈ ದಂಪತಿ ಮನೆಯಿಂದ ನಾಪತ್ತೆಯಾಗಿದ್ದರು.ಮಗ ಮತ್ತು ಸೊಸೆಯ ಸುಳಿವು ಸಿಗದೆ ಕಂಗಾಲಾಗಿದ್ದ ಶ್ರಾವಣಿಯ ಅಣ್ಣಂದಿರಾದ ನವೀನ್ ಮತ್ತು ವಿನೋದ್,ಲಕ್ಷ್ಮಿದೇವಮ್ಮ ಅವರ ಮನೆಗೆ ಬಂದು ಗಲಾಟೆ ನಡೆಸಿ ಪೆಟ್ರೋಲ್ ಎರಚಿದ್ದಾರೆ ಎನ್ನಲಾಗಿದೆ.




