ಸಮಾಜತೆಯ ಹೋರಾಟಕ್ಕೆ ಮುನ್ನುಡಿ ಬರೆದವರು ಫುಲೆ ದಂಪತಿಗಳು ಜಾತಿ ವ್ಯವಸ್ಥೆ ತಾಂಡವವಾಡುತ್ತಿದ್ದ ಕಾಲದಲ್ಲಿ ಜಾತೀಯತೆಯನ್ನು ಮೆಟ್ಟಿನಿಂತು ಸರ್ವರ ಹೃದಯದಲ್ಲಿ ಅಕ್ಷರವನ್ನು ಬಿತ್ತಿದ ಕಿರ್ತಿ ಮಹಾತ್ಮ ಜ್ಯೋತಿಬಾ ಫುಲೆ ಅವರದು ಎಂದು ಉಪನ್ಯಾಸಕಿ ಡಾ. ಜಯದೇವಿ ಗಾಯಕವಾಡ ಹೇಳಿದರು.
ವಿಜಯಪುರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ಅಂಬೇಡ್ಕರ್ ಅರಿವಿನ ಹಬ್ಬ ಎರಡನೇ ಆವೃತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾತ್ಮ ಜ್ಯೋತಿಬಾ ಪುಲೆ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದನ್ನು ಓದಿದ್ದೀರಾ? ವಿಜಯಪುರ | ಏ.11ರಿಂದ ಅಂಬೇಡ್ಕರ್ ಹಬ್ಬ
ನಾಲ್ಕು ದಿನ ಅಂಬೇಡ್ಕರ್ ಹಬ್ಬ ಕಾರ್ಯಕ್ರಮದ ಪ್ರಥಮ ದಿನದಂದು ಮಹಾತ್ಮ ಜ್ಯೋತಿಬಾ ಫುಲೆ ಅವರ 199ನೇ ಜಯಂತಿ ಆಚರಣೆ ಮತ್ತು ಮಹಾತ್ಮ ಜ್ಯಾತಿಬಾ ಫುಲೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಡಾ. ಫೈರೋಜ್ ಹುಸೇನ್ ಇನಾಮದಾರ ಅವರ ಸಮ್ಮುಖದಲ್ಲಿ ಆರು ಜನ ಸಾಧಕರಾದ ಎ ಬಿ ಹೊಸಮನಿ, ಲೋಕೇಶ ಎಂ.ಬೆಂಗಳೂರು, ಲತಾ ರಾಮು ನಾಡೋಣಿ, ಸಾವಿತ್ರಿ ಮುಜುದಾರ ಕೊಪ್ಪಳ, ಡಾ. ಜಿನದತ್ತ ಹಡಗಲಿ ಧಾರವಾಡ, ಡಾ.ಖಾತುನಬಿ ಗಡೆದ ಇವರಿಗೆ ಮಹಾತ್ಮಾ ಜ್ಯೋತಿಬಾ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಡಾ. ಬಾಸಾಹೇಬ್ ಅಂಬೇಡ್ಕರ್ ಅವರು ಭೇಟಿ ಕೊಟ್ಟ ಬರಡೊಲಾ ಗ್ರಾಮದಿಂದ ಬೈಕ್ ಮೆರವಣಿಗೆಯನ್ನು ರಂಗಮಂದಿರವರಿಗೆ ಮಾಡಲಾಯಿತು. ರಕ್ತದಾನ ಶಿಬಿರದಲ್ಲಿ ಅನೇಕರು ರಕ್ತದಾನ ಮಾಡಿದರು. ಪುಸ್ತಕ ಮಳಿಗೆಗಳ ಉದ್ಘಾಟನೆಯನ್ನು ಸೋಮಲಿಂಗ ಗೆಣ್ಣೂರು ಅವರು ನೆರವೇರಿಸಿದರು. ಡಾ. ವೈ. ಎಂ. ಭಜಂತ್ರಿ ಅವರು ಅಭಿನಂದನಾ ನುಡಿಗಳನ್ನಾಡಿದರು.
ವೇದ ಅಕಾಡಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಡಾ. ಶಿವಾನಂದ ಕೆಲೂರ, ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಧ್ಯಕ್ಷರು ಅರ್ಜುನ ಗೋಳಸಂಗಿ, ದ. ವಿ. ಪ ರಾಜ್ಯಾಧ್ಯಕ್ಷರು ಶ್ರೀನಾಥ ಪೂಜಾರಿ , ದ.ವಿ.ಪ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಪ್ರಭು ಮಲ್ಲಿಕಾರ್ಜುನ್ ಮಠ, ಮೊಹ್ಮದ ರಫಿಕ್ ಟಪಾಲ್, ಡಾ. ಬಿ. ಎಂ. ಬಿರಾದಾರ, ಕುಲಸಚಿವರಾದ ಸೋಮಲಿಂಗ ಗೆಣ್ಣೂರ ಉಪಸ್ಥಿತಿಯಿದ್ದರು. ಮೋಹನ ಕಟ್ಟಿಮನಿ ನಿರೂಪಿಸಿ, ವಂದಿಸಿದರು.




