ಚಿರತೆಯೊಂದು ಬಾವಲಿಯನ್ನು ಕಚ್ಚಿಕೊಂಡು ಹೋಗುತ್ತಿರುವ ದೃಶ್ಯ ತುಮಕೂರಿನ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಕಂಡುಬಂದಿದೆ. ದೃಶ್ಯವು ಚಿರತೆಗಳ ಅಧ್ಯಯನಕ್ಕಾಗಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಿರತೆಗಳು ಬೇಟೆಯಾಡಿ ಬದುಕುವ ಪ್ರಾಣಿಗಳು. ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಬಾವಲಿಯನ್ನು ಬೇಟೆಯಾಡಿದೆ. ಇಂತಹ, ಅಪರೂಪದ ದೃಶ್ಯವೊಂದು ಇದೇ ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ʼಇಂಡಿಯನ್ ಫ್ಲೈಯಿಂಗ್ ಫಾಕ್ಸ್’ ಅಥವಾ ಹಾಲಕ್ಕಿ ಎಂದು ಕರೆಯಲಾಗುವ ಈ ದೂಡ್ಡ ಬಾವಲಿಗಳು 1.5ಕೆಜಿಯಷ್ಟು ತೂಕವಿರುತ್ತವೆ. ರೆಕ್ಕೆಗಳನ್ನು ಹರಡಿದರೆ ಐದು ಅಡಿಗಳಷ್ಟು ಹರಡುತ್ತವೆ.
ಕಡವೆ, ಸಾರಂಗ, ಕಾಡು ಹಂದಿ, ಕುರಿ , ಮೇಕೆ, ನಾಯಿ, ಮೊಲ, ಮುಳ್ಳುಹಂದಿ, ಹೆಗ್ಗಣ, ಉಡ, ಮೀನಿನಂತಹ ಪ್ರಾಣಿಗಳು ಚಿರತೆಯ ಆಹಾರ ಪದ್ಧತಿಯಲ್ಲಿರುವುದು ದಾಖಲಾಗಿದೆ. ಆದರೆ, ಬಾವಲಿ ಬೇಟೆಯಾಡಿರುವ ಅಪರೂಪದ ಸಂಗತಿ, ಬಹುಶಃ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಹೇಳುತ್ತಾರೆ.
ಹೊಳೆಮತ್ತಿ ನೇಚರ್ ಫೌಂಡೇಶನ್ ಹಾಗೂ ನೇಚ ಕನ್ಸರ್ವೇಶನ್ ಫೌಂಡೇಶನ್ ನ ಸಂಜಯ್ ಗುಬ್ಬಿ ಮತ್ತು ತಂಡ ಅಳವಡಿಸಿದ್ದ ಕ್ಯಾಮೆರಾದಲ್ಲಿ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಈ ಚಿತ್ರ ಸರೆಯಾಗಿದೆ.