ಗುಬ್ಬಿ | ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಆಮಿಷ; ₹6.50 ಲಕ್ಷ ವಂಚನೆ ಆರೋಪ

Date:

ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕನ ಕುಟುಂಬದಿಂದ ಸುಮಾರು ₹6.50 ಲಕ್ಷ ಹಣ ಪಡೆದು ವಂಚಿಸಿರುವ ಆರೋಪದ ಮೇಲೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ತಾಲೂಕಿನ ಕಸಬಾ ಹೋಬಳಿಯ ಗೊಲ್ಲಹಳ್ಳಿ ಗ್ರಾಮದ ಹರೀಶ್ ಎಂಬುವವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ವಿಶೇಷ ಚೇತನರಾಗಿರುವ ಹರೀಶ್ ಅವರು ಜೀವನಾಧಾರಕ್ಕಾಗಿ ನಿಟ್ಟೂರಿನಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಅವರ ಹೋಟೆಲ್‌ಗೆ ಆಗಾಗ್ಗೆ ಊಟಕ್ಕೆ ಬರುತ್ತಿದ್ದ ತುರುವೇಕೆರೆ ತಾಲೂಕಿನ ಸೊಳೆಕೆರೆ ಗ್ರಾಮದ ನವೀನ ಎಂಬಾತನ ಪರಿಚಯವಾಗಿತ್ತು ಎನ್ನಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ನಮ್ಮ ಜೀವನ ಪ್ರೇಮ, ಸ್ನೇಹ, ಸೌಂದರ್ಯ ಹರಡುವ ಹೂವಿನಂತಿರಲಿ:...

ಶ್ರೀರಂಗಪಟ್ಟಣ ಪುರಸಭೆ ಚಾಮನ್ ಬಯಲನ್ನು ʼಹೂವಿನ ಗ್ರಾಮʼ ಎಂದು ಘೋಷಿಸಿ, ಅಲ್ಲಿ ಗುಲಾಬಿ ಎಣ್ಣೆ ತಯಾರಿಕಾ ಘಟಕ, ಪ್ರವಾಸಿ ತಾಣ ಮಾಡಬೇಕು. ಟಿಪ್ಪು ಕಾಲದ ಚಾಮನ್ ಎಂಬ ಹೆಸರನ್ನು ಉಳಿಸಬೇಕು. ಗುಲಾಬಿ ಕೇವಲ ಒಂದು...

ಜರ್ಮನಿಯಲ್ಲಿ ತೀವ್ರಗಾಮಿಗಳ ಅಬ್ಬರ: ದಿಕ್ಕುತಪ್ಪಿದ ಮಧ್ಯಮಾರ್ಗ, ಮರುಜೀವ ಪಡೆಯುತ್ತಿದೆಯೇ...

ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಈ ಮಟ್ಟದ ಏರಿಕೆ ಕೇವಲ ರಾಜಕೀಯ ಪೈಪೋಟಿಯಲ್ಲ, ಬದಲಾಗಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜರ್ಮನಿ ಮತ್ತು ಬಲಪಂಥ ಎಂದಾಕ್ಷಣ ಇಡೀ ವಿಶ್ವಕ್ಕೆ ಅಡಾಲ್ಫ್ ಹಿಟ್ಲರ್ ಮತ್ತು ಆತನ ನಾಜಿ...

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ನವೀನ ತಾನು ಸರ್ಕಾರಿ ಉದ್ಯೋಗದಲ್ಲಿರುವುದಾಗಿ ನಂಬಿಸಿ, ಹರೀಶ್ ಅವರ ಮಗ ಶಶಾಂಕ್‌ಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ಈ ನಂಬಿಕೆಯಿಂದ ಹಂತ ಹಂತವಾಗಿ ಸುಮಾರು ₹6.50 ಲಕ್ಷ ಹಣವನ್ನು ನೀಡಿದ್ದಾಗಿ ಹರೀಶ್ ದೂರಿನಲ್ಲಿ ತಿಳಿಸಿದ್ದಾರೆ.

ಹಣ ಪಡೆದ ಬಳಿಕ ನವೀನ ಉದ್ಯೋಗ ಕೊಡಿಸದೆ ನಾಪತ್ತೆಯಾಗಿದ್ದಾನೆ. ಹಣದ ಭದ್ರತೆಗಾಗಿ ನೀಡಿದ್ದ ಬ್ಯಾಂಕ್ ಚೆಕ್‌ನ್ನು ಜಮೆ ಮಾಡಲು ಮುಂದಾದಾಗ ಖಾತೆಯಲ್ಲಿ ಹಣವಿಲ್ಲದಿರುವುದು ತಿಳಿದುಬಂದಿದೆ. ಈ ಬಗ್ಗೆ ಆರೋಪಿಯನ್ನು ಸಂಪರ್ಕಿಸಿದಾಗ ಬೆದರಿಕೆ ಹಾಕಿದ್ದಾನೆ ಎಂದು ಹರೀಶ್ ಆರೋಪಿಸಿದ್ದಾರೆ.

ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಶೀಘ್ರ ಬಂಧಿಸಿ ವಂಚನೆಗೊಳಗಾದ ಹಣವನ್ನು ವಾಪಸ್ ಕೊಡಿಸಿ ನ್ಯಾಯ ಒದಗಿಸಬೇಕು ಎಂದು ಹರೀಶ್ ಪೊಲೀಸರನ್ನು ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ಆಲೋಚನೆ, ಆವಿಷ್ಕಾರದ ಮನೋಭಾವ ಬೆಳೆಸಿಕೊಳ್ಳಲಿ : ಡಾ.ಜಿ. ಪರಮೇಶ್ವರ

 ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಿರಂತರ...

ಗುಬ್ಬಿ | ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ರದ್ದತಿಗೆ ರೈತಸಂಘ ಒತ್ತಾಯ

 ಹೇಮಾವತಿ ನದಿ ತುಮಕೂರು ಜಿಲ್ಲೆಯ ರೈತರ ಬದುಕಿನ ಆಧಾರವಾಗಿದ್ದು, ಅದರ ನೀರನ್ನು...

ಮಧುಗಿರಿ | ಪರಂಪರೆ ಮತ್ತು ಐತಿಹಾಸಿಕ ಮಹತ್ವ ಅರಿಯುವುದು ಯುವಜನರ ಜವಾಬ್ದಾರಿ : ಡಾ. ಎಸ್.ವಿ. ವೆಂಕಟೇಶಯ್ಯ

ಐತಿಹಾಸಿಕ ಪರಂಪರೆ ನಮ್ಮ ಗತಕಾಲದ ಸಾಧನೆ, ಸಂಸ್ಕೃತಿ ಮತ್ತು ಅನನ್ಯತೆಯನ್ನು ಪ್ರತಿಬಿಂಬಿಸುವ...

ನವೆಂಬರ್ ಅಂತ್ಯದೊಳಗೆ ತುಮಕೂರಿಗೆ ಎತ್ತಿನಹೊಳೆ ನೀರು : ಸಚಿವ ಎನ್. ಚಲುವರಾಯಸ್ವಾಮಿ

ಬರುವ ನವೆಂಬರ್ ಅಂತ್ಯದೊಳಗೆ ತುಮಕೂರಿಗೆ ಎತ್ತಿನಹೊಳೆ ಯೋಜನೆಯ ನೀರು ಹರಿಸಲಾಗುವುದು ಎಂದು...