ಗುಬ್ಬಿ | ಸರ್ವ ರೋಗಕ್ಕೂ ಸಿರಿಧಾನ್ಯವೇ ಮದ್ದು : ಆಹಾರತಜ್ಞ ಡಾ.ಖಾದರ್

Date:

 ಆರೋಗ್ಯಪೂರ್ಣ ಸಿರಿ ಧಾನ್ಯಗಳು ಶತಮಾನಗಳ ಹಿಂದೆ ಬೆಳೆದು ತಿಂದ ನಮ್ಮ ಹಿರಿಯರ ಆರೋಗ್ಯ ಪ್ರಸ್ತುತ ಆಹಾರ ಪದ್ಧತಿಯಲ್ಲಿ ಕಾಣುತ್ತಿಲ್ಲ. ಕೊರ್ಲೆ, ಸಾಮೆ, ನವಣೆ, ಉದಲು, ಆರ್ಕಾ, ಸಜ್ಜೆ ಸೇರಿದಂತೆ ಹಲವು ಸಿರಿಧಾನ್ಯಗಳನ್ನು ಸೇವಿಸುವುದರಿಂದ ಸರ್ವ ರೋಗಕ್ಕೂ ಮದ್ದು ಸಿಗುತ್ತಿತ್ತು ಎಂದು ಆಹಾರತಜ್ಞ ಡಾ.ಖಾದರ್ ಅಭಿಪ್ರಾಯಪಟ್ಟರು.

- Advertisement -

ಗುಬ್ಬಿ  ತಾಲ್ಲೂಕಿನ ಹೇರೂರು ಗ್ರಾಮದ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ಧಿ ಸಂಶೋಧನಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ನೈಸರ್ಗಿಕ ಆಹಾರ ಪದ್ದತಿಯ ಕುರಿತು ಜಾಗೃತಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು‌ ಅಕ್ಕಿ ಗೋಧಿ ಆರೋಗ್ಯಕ್ಕೆ ಉಪಯುಕ್ತವಲ್ಲ ಎಂಬ ಅರಿವು ಈಗ ಮೂಡುತ್ತಿದೆ. ಸಿರಿಧಾನ್ಯಗಳ ಬಗ್ಗೆ ದೇಶದ ಪ್ರಧಾನಿಗಳು ಈಚೆಗೆ ಮಾತನಾಡಲು ಆರಂಭಿಸಿದ್ದಾರೆ. ಆದರೆ ಅಕ್ಕಿ ಗೋಧಿ ಬೆಳೆಗೆ ಶೇ.4 ರಷ್ಟು ಸಬ್ಸಿಡಿ ನೀಡಿದ್ದು, ಸಿರಿಧಾನ್ಯಗಳಿಗೆ ಜಿಎಸ್ಟಿ ತೆರಿಗೆ ಹಾಕಿರುವುದು ದೊಡ್ಡ ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಹರಿ ಚಂದನ ಎಂಬ ಮೂಲ ಹೆಸರಿನ ಶ್ರೀಗಂಧ ಬೆಳೆಯನ್ನು ವಾಣಿಜ್ಯಕರವಾಗಿ ಬೆಳಯದೆ, ಪ್ರತಿಯೊಬ್ಬರು ಒಂದೂಂದು ಶ್ರೀಗಂಧ ಗಿಡವನ್ನು ಬೆಳೆದು ಅವರಿಂದ ದೊರೆಯುವ ಆರೋಗ್ಯಕರ ವಾತಾವರಣ ಗಮನಿಸಬಹುದಾಗಿದೆ. ಶ್ರೀಗಂಧ ಲೇಪನ ಸೇವಿಸುವುದರಿಂದ ಮನುಷ್ಯನಿಗೆ ಹರಡುವ ಕಾಯಿಲೆಗಳನ್ನು ತಡೆಗಟ್ಟಬಹುದು. ಜನರು ತಮ್ಮ ವ್ಯವಸಾಯದಲ್ಲಿ ರಾಸಾಯನಿಕಗಳನ್ನು ಬಳಸುವುದರಿಂದ ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದಾರೆ. ಹಾಗೂ ನಮ್ಮ ಆಹಾರ ಪದ್ಧತಿಯಿಂದಾಗಿ ಐವಿಎಫ್ ಕೇಂದ್ರಗಳು ಹೆಚ್ಚಾಗುತ್ತಿವೆ.

ಅರಳಿಮರ, ಸೀಬೆ ಎಲೆ, ಪಾರಿಜಾತ ಎಲೆಗಳಿಂದ ಕಷಾಯ ಮಾಡಿ ಸೇವಿಸುವುದರಿಂದ ರಕ್ತ ಕ್ಯಾನ್ಸರ್ ವಾಸಿ ಮಾಡಿಕೊಳ್ಳಬಹುದು ಎಂದರು.

ಹಿಂದೆ ಅಕ್ಕಿ ಗೋಧಿ ಬೆಳೆಯುವ ಸಂಖ್ಯೆ ಶೇ.2 ರಷ್ಟು ಇತ್ತು. ಉಳಿದ 98 ಸಿರಿಧಾನ್ಯಗಳು ಬೆಳೆಯಲಾಗುತ್ತಿತ್ತು. ಆದರೆ ಅಕ್ಕಿ ಗೋಧಿ ಹೊರತಾದ ಎಲ್ಲಾ ದವಸ ಧಾನ್ಯ, ಕಾಳು ಸರ್ವನಾಶ ಮಾಡಿದ್ದೇವೆ. ಪ್ರಸ್ತುತ ಆಹಾರ ಪದ್ಧತಿಯಿಂದ ಅನಾರೋಗ್ಯ ಜೊತೆಗೆ ಮುಂದಿನ 105 ವರ್ಷಗಳ ನಂತರ ಮಕ್ಕಳ ಜನನ ಅಂಶ ಕ್ಷೀಣಿಸಲಿದೆ. ಈ ಆಘಾತಕಾರಿ ಸಂಶೋಧನೆ ಈಗಾಗಲೇ ನಡೆದಿದೆ. ರಾಸಾಯನಿಕ ಮುಕ್ತ ದವಸ ಧಾನ್ಯ, ತರಕಾರಿ ಬೆಳೆಯುವವರ ಸಂಖ್ಯೆ ಹೆಚ್ಚಿಸಿಕೊಳ್ಳಬೇಕು. ನಾರಿನಾಂಶ ಇರುವ ಆಹಾರಗಳನ್ನು ಸೇವಿಸಬೇಕು ಆಗ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಪ್ರತಿಯೊಬ್ಬರು ನೈಸರ್ಗಿಕ ಕೃಷಿಯಲ್ಲಿ ತೊಡಗಿದರೆ ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ‌ ಎಂದರು.

ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ಧಿ ಸಂಶೋಧನಾ ಸಂಸ್ಥೆಯ ರಾಜ್ಯಾಧ್ಯಕ್ಷ ರಘುರಾವ್ ಮಾತನಾಡಿ ಕೃಷಿ ಪ್ರಧಾನ ದೇಶದಲ್ಲಿ ಸಾವಯವ ಬೇಸಾಯ ಮಾಡುತ್ತಿಲ್ಲ. ಉತ್ತಮ ಬೆಲೆ ಇರುವ ಶ್ರೀಗಂಧ ಬೆಳೆ ಮಾಡಲು ಉತ್ತೇಜನ ಸಿಗಬೇಕು. ರಾಸಾಯನಿಕ ಬಳಕೆ ರೈತರಲ್ಲಿ ಆತಂಕ ತಂದಿದೆ. ಜೊತೆಗೆ ಅನಿವಾರ್ಯ ಸೃಷ್ಟಿಯಾಗಿದೆ. ನೈಸರ್ಗಿಕ ಆಹಾರ ಪದ್ಧತಿ ಅಳವಡಿಕೆ ಬಗ್ಗೆ ತಿಳಿಯಬೇಕಿದೆ. ರಾಸಾಯನಿಕ ಜ್ಯೂಸ್ ಕುಡಿಯುವ ಜನ ರೈತರ ಎಳನೀರು ಕುಡಿಯಲು ಯೋಚನೆ ಮಾಡುತ್ತಾರೆ. ಮುಂದಿನ ಪೀಳಿಗೆ ಉಳಿಸಲು ನೈಸರ್ಗಿಕ ಕೃಷಿ, ಪ್ಲಾಸ್ಟಿಕ್ ಮುಕ್ತ ಸಮಾಜ ಹಾಗೂ ಸಿರಿಧಾನ್ಯ ಮಹತ್ವ ಟೀಕಿಸಬೇಕಿದೆ ಎಂದರು.

ಕ್ಯಾನರ್ ಪೀಡಿತನಾಗಿ ವೈದ್ಯರ ಬಳಿಯಲ್ಲಿ ಪರೀಕ್ಷಿಸಿದಾಗ ಇನ್ನೆರೆಡು ತಿಂಗಳ ಆಯಸ್ಸು ಹೇಳಿದ್ದರು. ಆದರೆ ಆಹಾರತಜ್ಞ ಡಾ.ಖಾದರ್ ಅವರ ಮಾರ್ಗದರ್ಶನದಂತೆ ಸಿರಿಧಾನ್ಯ ಬಳಕೆ ಆರಂಭಿಸಿ ನಾಲ್ಕು ವರ್ಷದಿಂದ ಕ್ಯಾನ್ಸರ್ ರೋಗದಿಂದ ಹೋರಾಟ ನಡೆಸಿ ಆರೋಗ್ಯ ಸುಧಾರಣೆ ಆಗುತ್ತಿದ್ದೇನೆ. ಸಿರಿ ಧಾನ್ಯಗಳ ಮಹತ್ವಕ್ಕೆ ನಾನೇ ಖುದ್ದು ಉದಾಹರಣೆ ಎಂದು ನೈಸರ್ಗಿಕ ಕೃಷಿಕ ಅಮ್ಮನಘಟ್ಟ ಶಂಕರಪ್ಪ ತಿಳಿಸಿದರು

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಾಲಿಂಗಯ್ಯ, ಚೇಳೂರು ವೆಂಕಟೇಶ್, ಅಮ್ಮನಘಟ್ಟ ಮಹೇಶ್, ವೈದ್ಯ ಅರುಣ್, ಮೃತ್ಯುಂಜಯಪ್ಪ, ಪುಟ್ಟಕಾಮಣ್ಣ, ಮಂಜಣ್ಣ, ಬಿ.ವಿ.ರಾಜೀವ್ ಸೇರಿದಂತೆ ರೈತರು, ಸಾರ್ವಜನಿಕರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಎಸ್‌ಐಆರ್‌ ಹೆಸರಿನಲ್ಲಿ ಮತದಾರರ ಹಕ್ಕು ಕಸಿಯುವ ಆರೋಪ: ಸೆ.28ಕ್ಕೆ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಬಡವರು, ದಲಿತರು,...

ತುಮಕೂರು | ಎಸ್‌ಐಆರ್ ರದ್ದುಪಡಿಸಿ, ಜ್ಞಾನೇಶ್ ಕುಮಾರ್‌ರನ್ನು ಪದಚ್ಯುತಿಗೊಳಿಸಿ : ಪ್ರಕಾಶ್ ರಾಜ್

ಜನರನ್ನು ಗೊಂದಲಕ್ಕೆ ಸಿಲುಕಿಸಿ ಅರ್ಹರ ಮತಹಕ್ಕು ಕಸಿಯುವ ಸಾಧ್ಯತೆ ಇರುವ ಎಸ್‌ಐಆರ್‌...

ಮಧುಗಿರಿಯಲ್ಲಿ ಲೋಕಾಯುಕ್ತ ಬೇಟೆ : ₹30 ಸಾವಿರ ಲಂಚ ಪಡೆಯುವಾಗ ಆರ್‌ಐ ಬಂಧನ

 ಪೌತಿ ಖಾತೆ ಮಾಡಿಕೊಡಲು ರೈತನಿಂದ ₹1 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದ...

ತುಮಕೂರು | ಪಿಟಿಸಿಎಲ್ ಕಾಯ್ದೆ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷರಾಗಿ ಶೆಟ್ಟಿಹಳ್ಳಿ ಮಹೇಶ್ ಅವಿರೋಧ ಆಯ್ಕೆ

ಪಿಟಿಸಿಎಲ್ ಕಾಯ್ದೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟ...