ಗುಬ್ಬಿ | ಬಿಡದಿ ಟೌನ್ ಶಿಪ್ ನಲ್ಲಿ ಕಾಂಗ್ರೆಸ್ ಪಾಲುದಾರಿಕೆ : ಎಂ.ಟಿ.ಕೃಷ್ಣಪ್ಪ

Date:

ಬಿಡದಿ ಟೌನ್ ಶಿಪ್ ನಿರ್ಮಾಣದಲ್ಲಿ ಕಾಂಗ್ರೆಸ್ ಬಂಡವಾಳ ಹಾಕಿಕೊಂಡು ಪಾಲುದಾರಿಕೆ ಪಡೆದಿರುವಂತೆ ಕಾಣುತ್ತಿದೆ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಛೇಡಿಸಿದರು.

- Advertisement -

ಗುಬ್ಬಿ ತಾಲೂಕಿನ  ಸಿ.ಎಸ್.ಪುರ ಗ್ರಾಮದಲ್ಲಿ ಜಲ ಜೀವನ್ ಮಿಶನ್ ಯೋಜನೆಯ 1.35 ಕೋಟಿ ರೂಗಳ ಮನೆಮನೆಗೆ ನಳ ಸಂಪರ್ಕ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಬಿಡದಿ ಟೌನ್ ಶಿಪ್ ನಿರ್ಮಾಣ ಯೋಜನೆಗೆ ಕುಮಾರಸ್ವಾಮಿ ಆಲೋಚನೆ ಮಾಡಿದ್ದರು. ಆದರೆ ಅಲ್ಲಿನ ರೈತರ ಒತ್ತಡಕ್ಕೆ ಮಣಿದು ಯೋಜನೆ ಕೈಬಿಟ್ಟಿದ್ದರು. ಆದರೆ ಈಗ ಕಾಂಗ್ರೆಸ್ ರೈತರ ಬೀದಿ ಪಾಲು ಮಾಡಿಯಾದರೂ ಯೋಜನೆಗೆ ಚಾಲನೆ ನೀಡಿದ್ದಾರೆ. ಇಲ್ಲೇ ತಿಳಿಯುತ್ತೆ ಕಾಂಗ್ರೆಸ್ ಪಾರ್ಟನರ್ ಶಿಪ್ ಇದೆ ಎಂದು ಟೀಕಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಬಿಡದಿ ಬಳಿಯ ಟೌನ್ ಶಿಪ್ ಯೋಜನೆಯ ಭಾಗದ ರೈತರು ಕೇವಲ ಅರ್ಧ ಎಕರೆ ಜಮೀನನ್ನು ಹೊಂದಿದ್ದಾರೆ. ಹಸು ಕಟ್ಟಿಕೊಂಡು ಬದುಕು ನಡೆಸಿದ್ದಾರೆ. ಅಂತಹ ಸಣ್ಣ ರೈತರ ತಲೆ ಹೊಡೆಯುವ ಕೆಲಸ ಕಾಂಗ್ರೆಸ್ ಮಾಡಲು ಮುಂದಾಗಿದೆ ಎಂದು ಕಿಡಿಕಾರಿದ ಅವರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಬಿಡದಿ ಭಾಗದ ಯುವಕರಿಗೆ ಕೃಷಿ ಮತ್ತು ಹೈನುಗಾರಿಕೆ ಜೀವನ ಕಟ್ಟಿಕೊಂಡಿದ್ದಾರೆ. ಇಂತಹ ಯುವಕರ ಬದುಕಿನ ಜೊತೆ ಚೆಲ್ಲಾಟ ಸರಿಯಲ್ಲ. ದುಡ್ಡು ಹೊಡೆಯುವ ಸ್ಕೀಂ ಮಾಡುವ ಕೆಲಸ ಬಿಟ್ಟು ರೈತಪರ ಕೆಲಸ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿ ಮಾತನಾಡಿ ಜೆಜೆಎಂ ಯೋಜನೆ ಎಲ್ಲಾ ಗ್ರಾಮಕ್ಕೂ ವಿಸ್ತರಿಸಲಾಗಿದೆ ಎಂದರು. 

ಅಡ್ಡ ಮತದಾನ ಎಂಬುದು ನಂಬಿಸಿ ಕುತ್ತಿಗೆ ಕುಯ್ಯುವ ಕೆಲಸವಾಗಿದೆ. ಪಕ್ಷ ನಂಬಿ ಶಾಸಕರಾಗಿ ಪಕ್ಷಕ್ಕೆ ನಿಯತ್ತು ಇರಬೇಕು. ಜೆಡಿಎಸ್ ಅಭ್ಯರ್ಥಿ ಹಾಕುವ ವಿಚಾರದಲ್ಲಿ ಕುಮಾರಸ್ವಾಮಿ ಅವರು ಸಭೆ ನಡೆಸಿ ಎಲ್ಲಾ ಶಾಸಕರ ಸಮ್ಮತಿ ನಂತರವೇ ಅಭ್ಯರ್ಥಿ ನಿಲ್ಲಿಸಿದ್ದರು. ಕ್ರಾಸ್ ಮತ ನಾಲ್ಕು ಮಂದಿ ಎನ್ನಲಾಗುತ್ತಿದೆ. ಇದು ನಂಬಿಕೆ ದ್ರೋಹ ಎಂದ ಅವರು ಹೇಮಾವತಿ ನೀರು ಹಂಚಿಕೆಗಿಂತ ಹೆಚ್ಚು ಅಂದರೆ 7.5 ಟಿಎಂಸಿ ಕುಣಿಗಲ್ ತಾಲ್ಲೂಕಿಗೆ ಹರಿದಿದೆ. ಈಗಾಗಲೇ ಮಾಗಡಿಗೂ ನೀರು 0.65 ಎಂಸಿಟಿಎಫ್ ಹರಿದಿದೆ. ಪೈಪ್ ಲೈನ್ ಮಾಡುತ್ತಿರುವ ಕಾರಣ ಮಾತ್ರ ಮುಚ್ಚಿಟ್ಟು ಕೆಲಸ ಮಾಡಲು ಮುಂದಾಗುತ್ತಾರೆ. ಯಾವುದೇ ಕಾರಣಕ್ಕೂ ಹೇಮಾವತಿ ನೀರು ಮುಖ್ಯ ನಾಲೆಯಲ್ಲಿ ಹರಿಯಬೇಕು. ಪೈಪ್ ಲೈನ್ ಕಾಮಗಾರಿ ಮಾಡಲು ಬಿಡುವುದಿಲ್ಲ. ಜಿಲ್ಲೆಯ 24 ಲಕ್ಷ ರೈತರ ಬದುಕಿನ ಪ್ರಶ್ನೆ ಈ ನೀರಿನ ಮೇಲಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ನವೀನ್ ಕುಮಾರ್, ಗ್ರಾಪಂ ಮಾಜಿ ಸದಸ್ಯರಾದ ಈಶ್ವರ್ ಗೌಡ, ಮಹಾಲಕ್ಷ್ಮಮ್ಮ, ಮುಖಂಡರಾದ ಲಕ್ಷ್ಮೀನಾರಾಯಣ್ (ಅಣ್ಣಿ), ಚನ್ನಿಗಪ್ಪ, ದೇವರಾಜ್, ರಮೇಶ್, ಗುತ್ತಿಗೆದಾರ ನಾಗರಾಜು ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುರುವೇಕೆರೆ | ಪರಂಪರೆ ಪೂರ್ವಜರ ಉಡುಗೊರೆಯಲ್ಲ, ಮುಂದಿನ ಪೀಳಿಗೆಗೆ ನೀಡುವ ಸಾಲ : ಡಾ. ಮಹೇಶ್ ಕುಮಾರ್

ಪರಂಪರೆ ಎಂಬುದು ಪೂರ್ವಜರಿಂದ ಪಡೆದ ಉಡುಗೊರೆಯಲ್ಲ; ಮುಂದಿನ ಪೀಳಿಗೆಗೆ ಉಳಿಸಿ ನೀಡಲು...

ಮಧುಗಿರಿ | ಸ್ವಾವಲಂಬನೆ, ಆತ್ಮವಿಶ್ವಾಸದೊಂದಿಗೆ ಪದವಿ ಪಡೆಯಿರಿ: ಡಾ. ಎಂ. ಗೋವಿಂದರಾಯ

ಪದವಿ ಶಿಕ್ಷಣವು ಕೇವಲ ಅಂಕಗಳನ್ನು ಗಳಿಸುವುದಕ್ಕೆ ಸೀಮಿತವಾಗಿರದೆ, ಸ್ವಾವಲಂಬನೆ, ವೃತ್ತಿಪರತೆ ಹಾಗೂ...

ತಿಪಟೂರು | ಬೋಧಕ ವರ್ಗದ ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಿ: ಡಾ. ಶಶಿಕುಮಾರ್

 ಕಾಲೇಜಿನ ಗ್ರಂಥಾಲಯದಲ್ಲಿರುವ ಸುಮಾರು 50 ಸಾವಿರ ಪುಸ್ತಕಗಳ ಜ್ಞಾನ ಸಂಪನ್ಮೂಲ ಹಾಗೂ...

ತುಮಕೂರು | ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ಆಲೋಚನೆ, ಆವಿಷ್ಕಾರದ ಮನೋಭಾವ ಬೆಳೆಸಿಕೊಳ್ಳಲಿ : ಡಾ.ಜಿ. ಪರಮೇಶ್ವರ

 ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಿರಂತರ...